Udayavni Special

ನೆರೆ ಹಾನಿ: ವಿದ್ಯಾರ್ಥಿಗಳಿಗೆ 15 ದಿನದ‌ಲ್ಲಿ ಹೊಸ ಸಮವಸ್ತ್ರ


Team Udayavani, Sep 19, 2019, 3:07 AM IST

Vidhana-Soudha

ಬೆಂಗಳೂರು: ರಾಜ್ಯದಲ್ಲಿ ನೆರೆಗೆ ತುತ್ತಾಗಿ ಪುಸ್ತಕ, ಸಮವಸ್ತ್ರ ಕಳೆದುಕೊಂಡ ಸರ್ಕಾರಿ ಶಾಲಾ ಮಕ್ಕಳಿಗೆ 15 ದಿನಗಳಲ್ಲಿ ಹೊಸ ಸಮವಸ್ತ್ರ ಸಿಗಲಿದೆ. ಸಮವಸ್ತ್ರ ಕಳೆದುಕೊಂಡವರಿಗೆ ಮತ್ತೂಮ್ಮೆ ಸಮವಸ್ತ್ರ ನೀಡಲು ಉದ್ದೇಶಿಸಿದ್ದ ಸರ್ಕಾರ, ಶಾಲಾವಾರು ಹಾನಿಗೊಳಗಾದ ಮಕ್ಕಳ ಪಟ್ಟಿಯನ್ನು ಸಮೀಕ್ಷೆ ಮೂಲಕ ಸಿದ್ಧಪಡಿಸಿದೆ.

ರಾಜ್ಯಾದ್ಯಂತ 63,227 ಮಕ್ಕಳು ಸಮವಸ್ತ್ರ ಕಳೆದುಕೊಂಡಿದ್ದು, ಈ ಎಲ್ಲಾ ಮಕ್ಕಳಿಗೆ ಪುನ: ಸಮವಸ್ತ್ರ ನೀಡಲು ಉದ್ದೇಶಿಸಿರುವ ಸರ್ಕಾರ, ಸಮವಸ್ತ್ರ ಪೂರೈಸಲು ಕರ್ನಾಟಕ ಕೈಮಗ್ಗ ಅಭಿವೃದ್ದಿ ನಿಗಮಕ್ಕೆ ಟೆಂಡರ್‌ ಪ್ರಕ್ರಿಯೆ ಇಲ್ಲದೆ ತುರ್ತು ಪೂರೈಕೆಗೆ ಸೂಚನೆ ನೀಡಿದೆ.

ರಾಜ್ಯದ ನೆರೆಗೆ ತುತ್ತಾಗಿರುವ ಜಿಲ್ಲೆಗಳಲ್ಲಿ ಚಿಕ್ಕೋಡಿ ಒಂದೇ ಜಿಲ್ಲೆಯಲ್ಲಿ ಸುಮಾರು 38,786 ಮಕ್ಕಳು ಸಮವಸ್ತ್ರಗಳನ್ನು ಕಳೆದುಕೊಂಡಿದ್ದಾರೆ. ನಂತರ ಬೆಳಗಾವಿ 14,528 , ಬಾಗಲಕೋಟೆ 2835, ಧಾರವಾಡ 2172, ಗದಗ 1960, ಕೊಡಗು 1295, ರಾಯಚೂರು 794, ಶಿವಮೊಗ್ಗ 754 ಮತ್ತು ಚಿಕ್ಕಮಗಳೂರು ಜಿಲ್ಲೆಯಲ್ಲಿ 100 ಮಕ್ಕಳ ಸಮವಸ್ತ್ರ ನೀರಲ್ಲಿ ಕೊಚ್ಚಿ ಹೋಗಿದೆ.

ಪ್ರಾಥಮಿಕ ಶಿಕ್ಷಣ ಇಲಾಖೆ ಶಾಲಾವಾರು ಸಮೀಕ್ಷೆ ನಡೆಸಿ ತಯಾರಿಸಿರುವ ಈ ಪಟ್ಟಿಯಲ್ಲಿ ಒಂದರಿಂದ ಏಳನೇ ತರಗತಿ ಮಕ್ಕಳನ್ನು ಪರಿಗಣನೆಗೆ ತೆಗೆದುಕೊಳ್ಳಲಾಗಿದೆ. ಈ ಸಮವಸ್ತ್ರ ಮುಂದಿನ 15 ದಿನಗಳಲ್ಲಿ ಮಕ್ಕಳಿಗೆ ದೊರೆಯಲಿದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತ ಕೆ.ಜಿ.ಜಗದೀಶ್‌ ತಿಳಿಸಿದರು. ನೆರೆಯಿಂದ ಹಾನಿಗೊಳಗಾದ ಮಕ್ಕಳಿಗೆ ಮರು ಸಮವಸ್ತ್ರ ಪೂರೈಕೆ ಬಗ್ಗೆ “ಉದಯವಾಣಿ’ಯೊಂದಿಗೆ ಮಾತನಾಡಿದ ಜಗದೀಶ್‌, ಮರು ಸಮವಸ್ತ್ರ ಪೂರೈಕೆಗೆ ಸರ್ಕಾರ ಶೀಘ್ರವಾಗಿ ಸ್ಪಂದನೆ ನೀಡಿದೆ.

ಯಾವುದೇ ಟೆಂಡರ್‌ ಪ್ರಕ್ರಿಯೆ ಇಲ್ಲದೆ ಕರ್ನಾಟಕ ಕೈಮಗ್ಗ ಅಭಿವೃದ್ಧಿ ನಿಗಮದ ಮೂಲಕ ಸಮವಸ್ತ್ರ ಪೂರೈಕೆ ಮಾಡುವಂತೆ ನಿರ್ದೇಶನ ನೀಡಲಾಗಿತ್ತು. ಈ ವೇಳೆ ಮೂರು ದಿನಗಳ ಗಡುವನ್ನು ಕೂಡ ನೀಡಿತ್ತು. ಆದರೆ, ಮೂರು ದಿನಗಳಲ್ಲಿ 67ಸಾವಿರಕ್ಕೂ ಅಧಿಕ ಸಮವಸ್ತ್ರ ಪೂರೈಕೆ ಕಷ್ಟವಾಗಿದ್ದು, 15ದಿನಗಳ ಗಡುವು ನೀಡಲಾಗಿದೆ. ಕರ್ನಾಟಕ ಕೈಮಗ್ಗ ಅಭಿವೃದ್ದಿ ನಿಗಮ ಕೂಡ 15ದಿನಗಳಲ್ಲಿ ಪೂರೈಕೆ ಮಾಡುವುದಾಗಿ ತಿಳಿಸಿದೆ ಎಂದರು.

ಜಿಲ್ಲಾವಾರು ವಿವರ
ಚಿಕ್ಕೋಡಿ -38,786
ಬೆಳಗಾವಿ -14,528
ಬಾಗಲಕೋಟೆ -2,835
ಧಾರವಾಡ -2,172
ಗದಗ – 1,960
ಕೊಡಗು – 1,295
ರಾಯಚೂರು -794
ಶಿವಮೊಗ್ಗ – 754
ಚಿಕ್ಕಮಗಳೂರು – 100

* ಲೋಕೇಶ್‌ ರಾಮ್‌

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

ತಂಬಾಕು ಬಳಕೆಯಿಂದ ಮಾರಣಾಂತಿಕ ಕಾಯಿಲೆ ; ಇರಲಿ ಎಚ್ಚರ

ತಂಬಾಕು ಬಳಕೆಯಿಂದ ಮಾರಣಾಂತಿಕ ಕಾಯಿಲೆ ; ಇರಲಿ ಎಚ್ಚರ

ರೂಪಾಂತರದ ವೈರಸ್‌ ಪ್ರಾಣಿಗಳಿಂದ ನಮಗೆ?; ಟೆಕ್ಸಾಸ್‌ ವಿವಿ ತಜ್ಞರಿಂದ ಹೊಸ ಸಂಶೋಧನೆ

ರೂಪಾಂತರದ ವೈರಸ್‌ ಪ್ರಾಣಿಗಳಿಂದ ನಮಗೆ?; ಟೆಕ್ಸಾಸ್‌ ವಿವಿ ತಜ್ಞರಿಂದ ಹೊಸ ಸಂಶೋಧನೆ

man-ki-baat

ಮನ್ ಕಿ ಬಾತ್ ಕಾರ್ಯಕ್ರಮದ ಮೂಲಕ ಪ್ರಧಾನಿ ಮೋದಿ ಇಂದು ರಾಷ್ಟ್ರವನ್ನುದ್ದೇಶಿಸಿ ಭಾಷಣ

ನನ್ನ ಸಂಕಲ್ಪಕ್ಕೆ ಶಕ್ತಿಯ ಮೂಲವೇ ನೀವು; ನಿಮ್ಮ ಬೆಂಬಲ, ಆಶೀರ್ವಾದ, ಪ್ರೀತಿ

ನನ್ನ ಸಂಕಲ್ಪಕ್ಕೆ ಶಕ್ತಿಯ ಮೂಲವೇ ನೀವು; ನಿಮ್ಮ ಬೆಂಬಲ, ಆಶೀರ್ವಾದ, ಪ್ರೀತಿ

ಪಿಪಿಪಿ ಮಾದರಿ ಮೂಲ ಸೌಕರ್ಯ ಯೋಜನೆ

ಪಿಪಿಪಿ ಮಾದರಿ ಮೂಲ ಸೌಕರ್ಯ ಯೋಜನೆ

ಕಡ್ಡಾಯ ಆನ್‌ಲೈನ್‌ ಬೋಧನೆಯತ್ತ ದಾಪುಗಾಲು

ಕಡ್ಡಾಯ ಆನ್‌ಲೈನ್‌ ಬೋಧನೆಯತ್ತ ದಾಪುಗಾಲು

ಸಿಇಟಿ ವಿದ್ಯಾರ್ಥಿಗಳಿಗೆ ವಾಟ್ಸ್‌ಆ್ಯಪ್‌ ಮಾಹಿತಿ

ಸಿಇಟಿ ವಿದ್ಯಾರ್ಥಿಗಳಿಗೆ ವಾಟ್ಸ್‌ಆ್ಯಪ್‌ ಮಾಹಿತಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

usiraata

ರಾಜಧಾನಿಯಲ್ಲಿ ಹೆಚ್ಚಿದ ಕೋವಿಡ್‌ 19 ಆತಂಕ

tobbaccco spirt

ಸಾರ್ವಜನಿಕ ಸ್ಥಳಗಳಲ್ಲಿ ತಂಬಾಕು ಉಗುಳುವಂತಿಲ್ಲ

sahakri patil

ಬೀಜ ಹಂಚಿಕೆಯಲ್ಲಿ ಸರ್ಕಾರಿ, ಸಹಕಾರಿ ಸಂಸ್ಥೆಗಳಿಗೆ ಆದ್ಯತೆ

gk st gazet

ತಳವಾರ, ಪರಿವಾರ ಎಸ್ಟಿಗೆ: ಗೆಜೆಟ್‌ ಅಧಿಸೂಚನೆಗೆ ಆದೇಶ

ಪಿಪಿಪಿ ಮಾದರಿ ಮೂಲ ಸೌಕರ್ಯ ಯೋಜನೆ

ಪಿಪಿಪಿ ಮಾದರಿ ಮೂಲ ಸೌಕರ್ಯ ಯೋಜನೆ

MUST WATCH

udayavani youtube

COVID-19 : ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ Homeopathy Medicine | Udayavani

udayavani youtube

Preserving the heritage -World Famous Udupi Mattugulla Documentary by Udayavani

udayavani youtube

Mattu ಗದ್ದೆಯಲ್ಲಿ ಕೃಷಿಯ ಆಟಕ್ಕಿಳಿದ Football ಆಟಗಾರ Yashodara

udayavani youtube

ಪಶುಸಂಗೋಪನೆಯಲ್ಲಿ ಯಶಸ್ವಿಯಾದ Uttam Agro Industries Poultry Farming Success Story

udayavani youtube

ಈ ಮನೆಯಲ್ಲಿದೆ ಬೀದಿನಾಯಿಗಳಿಗೆ ಪ್ರೀತಿಯ ಆಸರೆ | Udayvani

ಹೊಸ ಸೇರ್ಪಡೆ

Huballi-tdy-2

ನರೇಗಾ ಕಾಮಗಾರಿಗಳಲ್ಲಿ ಜೆಸಿಬಿ ಅಬ್ಬರ

ಮತ್ತೆ ಇಬ್ಬರು ಉಗ್ರರ ಎನ್‌ಕೌಂಟರ್‌

ಮತ್ತೆ ಇಬ್ಬರು ಉಗ್ರರ ಎನ್‌ಕೌಂಟರ್‌

ತಂಬಾಕು ಬಳಕೆಯಿಂದ ಮಾರಣಾಂತಿಕ ಕಾಯಿಲೆ ; ಇರಲಿ ಎಚ್ಚರ

ತಂಬಾಕು ಬಳಕೆಯಿಂದ ಮಾರಣಾಂತಿಕ ಕಾಯಿಲೆ ; ಇರಲಿ ಎಚ್ಚರ

ನೌಕರರ ಉದ್ಯೋಗ ಉಳಿಸಿಕೊಡುವಂತೆ ಸಿಎಂಗೆ ಪತ್ರ

ನೌಕರರ ಉದ್ಯೋಗ ಉಳಿಸಿಕೊಡುವಂತೆ ಸಿಎಂಗೆ ಪತ್ರ

ಜನ ಜಾಗೃತಿಗಾಗಿ ಉಪವಾಸ ಸತ್ಯಾಗ್ರಹ

ಜನ ಜಾಗೃತಿಗಾಗಿ ಉಪವಾಸ ಸತ್ಯಾಗ್ರಹ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.