ರಾಜ್ಯದ ವಿವಿಧೆಡೆ ಸಿಡಿಲಿಗೆ ನಾಲ್ವರ ದುರ್ಮರಣ
Team Udayavani, Oct 17, 2018, 7:07 AM IST
ಬೆಂಗಳೂರು: ಕರಾವಳಿ ಸೇರಿ ರಾಜ್ಯದ ಕೆಲವೆಡೆ ಮಳೆ ಮುಂದುವರಿದಿದ್ದು, ಸಿಡಿಲಬ್ಬರದ ಮಳೆಗೆ ನಾಲ್ವರು ಬಲಿಯಾಗಿದ್ದಾರೆ. ಮಂಗಳವಾರ ಮುಂಜಾನೆ 8.30ಕ್ಕೆ ಅಂತ್ಯಗೊಂಡ 24 ತಾಸುಗಳ ಅವಧಿಯಲ್ಲಿ ಹಾವೇರಿ ಮತ್ತು ಕೊಪ್ಪಳ ಜಿಲ್ಲೆ ಕುಕನೂರಿನಲ್ಲಿ ರಾಜ್ಯದಲ್ಲಿಯೇ ಅಧಿಕ 5 ಸೆಂ.ಮೀ. ಮಳೆ ಸುರಿಯಿತು. ಬಳ್ಳಾರಿ ಜಿಲ್ಲೆ ಸಿರುಗುಪ್ಪ ತಾಲೂಕಿನ ಮೈಲಾಪುರ ಗ್ರಾಮದಲ್ಲಿ ಮಂಗಳವಾರ ಸಿಡಿಲು ಬಡಿದು ವಿರೂಪಾಕ್ಷಿಗೌಡ (40) ಎಂಬುವರು ಮೃತಪಟ್ಟಿದ್ದಾರೆ. ಗದಗ ಜಿಲ್ಲೆ ನರಗುಂದ ತಾಲೂಕಿನ ಹದಲಿ ಗ್ರಾಮದಲ್ಲಿ ಹೊಲದಲ್ಲಿ ಹತ್ತಿ ಬಿಡಿಸುತ್ತಿದ್ದಾಗ ಸಿಡಿಲು ಬಡಿದು ಯಂಕವ್ವ ಯಲ್ಲಪ್ಪ ವಿಠ್ಠಪ್ಪನವರ(43) ಮೃತಪಟ್ಟಿದ್ದಾರೆ. ಕೊಪ್ಪಳ ಜಿಲ್ಲೆ ಕುಕನೂರು ತಾಲೂಕಿನ ಬಳಗೇರಿ ಗ್ರಾಮದಲ್ಲಿ ಕುರಿ ಮೇಯಿಸುವಾಗ ಸಿಡಿಲು ಬಡಿದು ಕಳಕಪ್ಪ ಚಾಕರಿ (24) ಮೃತಪಟ್ಟಿದ್ದಾರೆ. ಯಾದಗಿರಿ ಜಿಲ್ಲೆ ಗುರುಮಠಕಲ್ ಸಮೀಪ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದಾಗ ಸಿಡಿಲು ಬಡಿದು ಕಂದೂರ ಓಣಿಯ ಚಂದ್ರಪ್ಪ (65) ಎಂಬುವರು ಮೃತಪಟ್ಟಿದ್ದಾರೆ. ಮೈಸೂರು ಜಿಲ್ಲೆ ಹುಣಸೂರು ತಾಲೂಕಿನ ಚನ್ನಸೋಗೆ ಗ್ರಾಮದಲ್ಲಿ ಸಿಡಿಲು ಬಡಿದು ಇಬ್ಬರು ಕೂಲಿ ಕಾರ್ಮಿಕರು ಗಾಯಗೊಂಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಮನೆ ಗೋಡೆ ಕುಸಿದು ಯುವಕ ಸಾವು : ಕೆಲ ದಿನದ ಹಿಂದಷ್ಟೇ ಹೆರಿಗೆಯಾಗಿದ್ದ ತಾಯಿ, ಮಗು ಪಾರು
ಗಾಳಿ ಮಳೆಯ ಅಬ್ಬರ : ಮೂಡಿಗೆರೆ, ಕಳಸ ತಾಲೂಕಿನ ಶಾಲೆಗಳಿಗೆ ರಜೆ
ಮಲೆನಾಡಿನಲ್ಲಿ ಮುಂದುವರೆದ ಮಳೆಯ ಅಬ್ಬರ : ಮನೆಯ ಮೇಲೆ ಮರ ಬಿದ್ದು ಇಬ್ಬರು ಸಾವು
ರಾಜ್ಯದಲ್ಲಿ ಹೆಚ್ಚುತ್ತಿದೆ ಹನಿಟ್ರ್ಯಾಪ್ ಹಾವಳಿ: ಉದ್ಯಮಿ,ರಾಜಕಾರಣಿಗಳೇ ಟಾರ್ಗೆಟ್
ಬುಧವಾರದ ರಾಶಿ ಫಲ… ಇಲ್ಲಿವೆ ನಿಮ್ಮ ಗ್ರಹಬಲ
MUST WATCH
ಹೊಸ ಸೇರ್ಪಡೆ
ಪಡುಬಿದ್ರಿ : ಬೆಳ್ಳಂಬೆಳಗ್ಗೆ ತೆಂಗಿನೆಣ್ಣೆ ಮಿಲ್ ನಲ್ಲಿ ಅಗ್ನಿ ಅವಘಡ : ಲಕ್ಷಾಂತರ ರೂ. ಹಾನಿ
ಮನೆ ಗೋಡೆ ಕುಸಿದು ಯುವಕ ಸಾವು : ಕೆಲ ದಿನದ ಹಿಂದಷ್ಟೇ ಹೆರಿಗೆಯಾಗಿದ್ದ ತಾಯಿ, ಮಗು ಪಾರು
ಗಾಳಿ ಮಳೆಯ ಅಬ್ಬರ : ಮೂಡಿಗೆರೆ, ಕಳಸ ತಾಲೂಕಿನ ಶಾಲೆಗಳಿಗೆ ರಜೆ
ಫಾಝಿಲ್ ಹತ್ಯೆ ಆರೋಪಿಗಳನ್ನು ನಿಯಮ ಮೀರಿ ನಡೆಸಿಕೊಂಡಿಲ್ಲ : ಆಯುಕ್ತರ ಸ್ಪಷ್ಟನೆ
ನಾವುಂದ-ಬಡಾಕೆರೆ : ಇಳಿಯದ ನೆರೆ ನೀರು