ದೇಶದಲ್ಲೇ ಮೊದಲ ಬಾರಿಗೆ ಜಾರಿಯ ಹೆಗ್ಗಳಿಕೆ

ಗ್ರಾ.ಪಂ. ಮಟ್ಟದಲ್ಲೇ ವಿಪತ್ತು ನಿರ್ವಹಣೆ ಯೋಜನೆ

Team Udayavani, Oct 27, 2020, 6:04 AM IST

ದೇಶದಲ್ಲೇ ಮೊದಲ ಬಾರಿಗೆ ಜಾರಿಯ ಹೆಗ್ಗಳಿಕೆ

ಬೆಂಗಳೂರು: ಗ್ರಾಮೀಣ ಭಾಗದಲ್ಲಿ ಉಂಟಾಗುವ ಪ್ರಾಕೃತಿಕ ವಿಕೋಪಗಳು ಮತ್ತು ಮಾನವ ಪ್ರೇರಿತ ವಿಪತ್ತುಗಳ ತಡೆ ಮತ್ತು ನಿರ್ವ ಹಣೆಗೆ “ಗ್ರಾಮ ಪಂಚಾಯತ್‌ ಮಟ್ಟದ ವಿಪತ್ತು ನಿರ್ವಹಣ ಯೋಜನೆ’ ಸಿದ್ಧಪಡಿಸಲಾಗಿದೆ.

ಈವರೆಗೆ ರಾಜ್ಯ ಮಟ್ಟದಲ್ಲಿದ್ದ ವಿಪತ್ತು ನಿರ್ವಹಣ ಯೋಜನೆ ಇನ್ನು ಮುಂದೆ ಗ್ರಾ.ಪಂ. ಮಟ್ಟದಲ್ಲೂ ಜಾರಿಗೆ ಬರಲಿದೆ. ಗ್ರಾಮೀಣ ಮಟ್ಟದಲ್ಲಿ ಇದನ್ನು ಜಾರಿಗೆ ತರುತ್ತಿರುವ ದೇಶದ ಮೊದಲ ರಾಜ್ಯ ಕರ್ನಾಟಕವಾಗಿದೆ.

ಪ್ರಕೃತಿ ವಿಕೋಪಗಳ ತಡೆ ಮತ್ತು ನಿರ್ವ ಹಣೆಗೆ ರಾಜ್ಯ ಮತ್ತು ಜಿಲ್ಲಾ ಮಟ್ಟದಲ್ಲಿ ಪ್ರತೀ ವರ್ಷ ಸಮಗ್ರ ನಿರ್ವಹಣ ಯೋಜನೆ ರೂಪಿಸ ಲಾಗು ತ್ತಿದ್ದು, ಈ ಬಾರಿ ಗ್ರಾ.ಪಂ. ಮಟ್ಟಕ್ಕೂ ಇಳಿಸಲಾಗಿದೆ.

“ವಿಪತ್ತು ನಿರ್ವಹಣ ಕಾಯ್ದೆ- 2005’ರಡಿ ಕಡ್ಡಾಯವಾಗಿ ರಾಜ್ಯ ಮತ್ತು ಜಿಲ್ಲಾ ಮಟ್ಟದ ಇಲಾಖಾವಾರು ವಿಪತ್ತು ನಿರ್ವಹಣ ಯೋಜನೆ ಸಿದ್ಧಪಡಿಸಬೇಕು. ಕೋವಿಡ್‌-19 ಮತ್ತಿತರ ಸಾಂಕ್ರಾಮಿಕ ಕಾಯಿಲೆ ಗಳ ನಿರ್ವಹಣೆ ಕೂಡ ಈ ವರ್ಷದ ಯೋಜನೆಯಲ್ಲಿ ಸೇರ್ಪಡೆಯಾಗಿದೆ.

ಸಾವು-ನೋವು ತಡೆಯಲು ಕ್ರಮ
ಪ್ರಕೃತಿ ವಿಕೋಪಗಳು ಸಂಭವಿಸಿದಾಗ ಗ್ರಾಮೀಣ ಪ್ರದೇಶಗಳಲ್ಲಿ ಹೆಚ್ಚಿನ ಹಾನಿ, ಸಾವು- ನೋವು ಉಂಟಾಗುವ ಸಾಧ್ಯತೆಯಿರುತ್ತದೆ. ಅದರ ನಿರ್ವಹಣೆಗೆ ಅಲ್ಪಾವಧಿ ಮತ್ತು ದೀರ್ಘಾ ವಧಿ ಯೋಜನೆ ಸಿದ್ಧಪಡಿಸಿಕೊಂಡರೆ ಹಾನಿ, ಸಾವು-ನೋವು ತಡೆಯಬಹುದು. ಹಾಗಾಗಿ ಈ ಬಾರಿಯ ರಾಜ್ಯ ಮಟ್ಟದ ವಿಪತ್ತು ನಿರ್ವಹಣ ಯೋಜನೆ ಯಲ್ಲಿ ಗ್ರಾ.ಪಂ. ಮಟ್ಟದ ವಿಪತ್ತು ನಿರ್ವಹಣ ಯೋಜನೆಗೆ ಒತ್ತು ಕೊಡಲಾಗಿದೆ ಎಂದು ಇಲಾಖೆ ಅಧಿಕಾರಿಗಳು ಹೇಳಿದ್ದಾರೆ.

ಯೋಜನೆ ಕಾರ್ಯಗತ ಹೇಗೆ?
ಪ್ರತೀ ಗ್ರಾ.ಪಂ. ವ್ಯಾಪ್ತಿಯಲ್ಲಿ ಬೇಕಾಗುವ ಮೂಲ ಸೌಕರ್ಯ, ಸಂಪನ್ಮೂಲಗಳ ಮಾಹಿತಿ ಸಂಗ್ರಹಿಸಿ ಅದಕ್ಕೆ ತಕ್ಕಂತೆ ಕ್ರಿಯಾ ಯೋಜನೆ ರೂಪಿಸಲಾಗುತ್ತದೆ. ಇದ ಕ್ಕಾಗಿ ವಿವಿಧ ಇಲಾಖೆಗಳು, ಸಂಘ-ಸಂಸ್ಥೆಗಳು, ಸ್ಥಳೀಯ ಮಟ್ಟದ ತಜ್ಞ ಮತ್ತು ಕೌಶಲಯುಕ್ತ ವ್ಯಕ್ತಿಗಳ  ನೆರವು ಪಡೆದು ಕೊಳ್ಳಲಾಗುತ್ತದೆ. ಸ್ಥಳೀಯ ಪರಿಸ್ಥಿತಿ ಆಧರಿಸಿ ಯೋಜನೆ ಜಾರಿಗೆ ಮಾರ್ಗಸೂಚಿಗಳನ್ನು ರೂಪಿಸಲಾಗುತ್ತದೆ.

ಗ್ರಾ.ಪಂ. ಮಟ್ಟದ ವಿಪತ್ತು ನಿರ್ವಹಣ ಯೋಜನೆ ಬಗ್ಗೆ ಈಗಾಗಲೇ ಪಂಚಾಯತ್‌ ಸಿಬಂದಿಗೆ ಎರಡು ಹಂತಗಳ ತರಬೇತಿ ನೀಡ ಲಾಗಿದೆ. ಜಿ.ಪಂ. ಉಪ ಕಾರ್ಯ ದರ್ಶಿ ಯವರನ್ನು ಯೋಜನೆಯ ನೋಡಲ್‌ ಅಧಿಕಾರಿ ಯನ್ನಾಗಿ ನೇಮಕ ಮಾಡಲಾಗಿದೆ. ಸದ್ಯ ಎಲ್ಲ ಪಂಚಾಯತ್‌ಗಳಲ್ಲಿ ಆಡ ಳಿ  ತಾಧಿ ಕಾರಿಗಳು  ಇರು ವುದ ರಿಂದ ಅವರು ಯೋಜನೆ ಸಿದ್ಧಪಡಿಸಿ ಕೊಳ್ಳ ಬೇಕಿದೆ.
– ಪ್ರಿಯಾಂಕಾ ಮೇರಿ ಫ್ರಾನ್ಸಿಸ್‌, ಆಯುಕ್ತರು, ಪಂಚಾಯತ್‌ರಾಜ್‌ ಆಯುಕ್ತಾಲಯ

  ರಫೀಕ್‌ ಅಹ್ಮದ್‌

ಟಾಪ್ ನ್ಯೂಸ್

ಶಿಕ್ಷಕರು, ಪದವೀಧರ ಕ್ಷೇತ್ರ: ಕೋಟ್ಯಧಿಪತಿ ಅಭ್ಯರ್ಥಿಗಳು

ಶಿಕ್ಷಕರು, ಪದವೀಧರ ಕ್ಷೇತ್ರ: ಕೋಟ್ಯಧಿಪತಿ ಅಭ್ಯರ್ಥಿಗಳು

sandalwood

ಸಿನಿ ಟ್ರಾಫಿಕ್‌ ಜೋರು; ಈ ವಾರ ತೆರೆಗೆ 9 ಚಿತ್ರಗಳು

thumb 3

ವೇಶ್ಯಾವಾಟಿಕೆಯೂ ಒಂದು ಕಾನೂನು ಬದ್ಧ ವೃತ್ತಿ  

IAS officer who vacated Delhi stadium to walk his dog transferred

ಸ್ಟೇಡಿಯಂನಲ್ಲಿ ನಾಯಿಯೊಂದಿಗೆ ವಾಕಿಂಗ್ ಮಾಡಿದ ದೆಹಲಿ ಅಧಿಕಾರಿ ಲಡಾಖ್ ಗೆ ವರ್ಗಾವಣೆ

2 ವರ್ಷಗಳಲ್ಲೇ ಪ್ರತ್ಯಕ್ಷವಾಗಲಿದ್ದಾನೆ “ರಸ್ತೆಗಳ ರಾಜ’ : ಅಂಬಾಸಿಡರ್‌ 2.0

2 ವರ್ಷಗಳಲ್ಲೇ ಪ್ರತ್ಯಕ್ಷವಾಗಲಿದ್ದಾನೆ “ರಸ್ತೆಗಳ ರಾಜ’ : ಅಂಬಾಸಿಡರ್‌ 2.0

ರಜತ್‌ ಪಾಟೀದಾರ್‌: ಆರ್‌ಸಿಬಿಯ ನ್ಯೂ ಸೂಪರ್‌ಸ್ಟಾರ್‌

ರಜತ್‌ ಪಾಟೀದಾರ್‌: ಆರ್‌ಸಿಬಿಯ ನ್ಯೂ ಸೂಪರ್‌ಸ್ಟಾರ್‌

thumb 1

ಪಠ್ಯಕ್ರಮ ವಿವಾದ: ಎಡಪಂಥೀಯರ ಆಕ್ಷೇಪಕ್ಕೆ ಹಿರಿಯ ಸಾಹಿತಿ ಎಸ್‌.ಎಲ್‌. ಭೈರಪ್ಪ ಟೀಕೆಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಶಿಕ್ಷಕರು, ಪದವೀಧರ ಕ್ಷೇತ್ರ: ಕೋಟ್ಯಧಿಪತಿ ಅಭ್ಯರ್ಥಿಗಳು

ಶಿಕ್ಷಕರು, ಪದವೀಧರ ಕ್ಷೇತ್ರ: ಕೋಟ್ಯಧಿಪತಿ ಅಭ್ಯರ್ಥಿಗಳು

thumb 1

ಪಠ್ಯಕ್ರಮ ವಿವಾದ: ಎಡಪಂಥೀಯರ ಆಕ್ಷೇಪಕ್ಕೆ ಹಿರಿಯ ಸಾಹಿತಿ ಎಸ್‌.ಎಲ್‌. ಭೈರಪ್ಪ ಟೀಕೆ

ಎಚ್‌ ಎಚ್‌.ಡಿ. ದೇವೇಗೌಡ ಭೇಟಿಯಾದ ತೆಲಂಗಾಣ ಸಿಎಂ ಕೆಸಿಆರ್‌

ಎಚ್‌.ಡಿ. ದೇವೇಗೌಡ ಭೇಟಿಯಾದ ತೆಲಂಗಾಣ ಸಿಎಂ ಕೆಸಿಆರ್‌

ಸೀಬರ್ಡ್‌ ನೌಕಾನೆಲೆಗೆ ರಾಜನಾಥ್‌ ಸಿಂಗ್‌ ಭೇಟಿ

ಸೀಬರ್ಡ್‌ ನೌಕಾನೆಲೆಗೆ ರಾಜನಾಥ್‌ ಸಿಂಗ್‌ ಭೇಟಿ

ಸಚಿವಾಲಯದ ಸಿಬ್ಬಂದಿ ಕಡ್ಡಾಯ ಹಾಜರಿಗೆ ಮುಖ್ಯ ಕಾರ್ಯದರ್ಶಿ ಸೂಚನೆ

ಸಚಿವಾಲಯದ ಸಿಬ್ಬಂದಿ ಕಡ್ಡಾಯ ಹಾಜರಿಗೆ ಮುಖ್ಯ ಕಾರ್ಯದರ್ಶಿ ಸೂಚನೆ

MUST WATCH

udayavani youtube

ಉಸಿರಾಟದ ಸಮಸ್ಯೆ: ಕೇದಾರನಾಥದಲ್ಲಿ ಮತ್ತೆ ನಾಲ್ವರು ಯಾತ್ರಾರ್ಥಿಗಳ ಸಾವು

udayavani youtube

ಮಳಲಿ ಮಸೀದಿಯ ಸರ್ವೇ ನಡೆಯಲಿ ಜನರು ಸತ್ಯ ತಿಳಿಯಲಿ : ಡಾ ಸುರೇಂದ್ರ ಕುಮಾರ್ ಜೈನ್

udayavani youtube

ಒಂದು ಲಕ್ಷದ ಎಂಟು ವಡೆಗಳಿಂದ ಅಲಂಕೃತಗೊಂಡ ಮೈಸೂರಿನ ಶ್ರೀ ಅಂಜನೇಯ ಸ್ವಾಮಿ

udayavani youtube

ಮಣಿಪಾಲ : ಡಿವೈಡರ್ ಗೆ ಬೈಕ್ ಢಿಕ್ಕಿ, ವಿದ್ಯಾರ್ಥಿ ಸಾವು… ಇನ್ನೋರ್ವ ಗಂಭೀರ

udayavani youtube

IPL ಬೆಟ್ಟಿಂಗ್ ಗಾಗಿ ಠೇವಣಿದಾರರ ಹಣವನ್ನೇ ಬಳಸಿಕೊಂಡ ಪೋಸ್ಟ್ ಮಾಸ್ಟರ್

ಹೊಸ ಸೇರ್ಪಡೆ

ಶಿಕ್ಷಕರು, ಪದವೀಧರ ಕ್ಷೇತ್ರ: ಕೋಟ್ಯಧಿಪತಿ ಅಭ್ಯರ್ಥಿಗಳು

ಶಿಕ್ಷಕರು, ಪದವೀಧರ ಕ್ಷೇತ್ರ: ಕೋಟ್ಯಧಿಪತಿ ಅಭ್ಯರ್ಥಿಗಳು

sandalwood

ಸಿನಿ ಟ್ರಾಫಿಕ್‌ ಜೋರು; ಈ ವಾರ ತೆರೆಗೆ 9 ಚಿತ್ರಗಳು

thumb 3

ವೇಶ್ಯಾವಾಟಿಕೆಯೂ ಒಂದು ಕಾನೂನು ಬದ್ಧ ವೃತ್ತಿ  

IAS officer who vacated Delhi stadium to walk his dog transferred

ಸ್ಟೇಡಿಯಂನಲ್ಲಿ ನಾಯಿಯೊಂದಿಗೆ ವಾಕಿಂಗ್ ಮಾಡಿದ ದೆಹಲಿ ಅಧಿಕಾರಿ ಲಡಾಖ್ ಗೆ ವರ್ಗಾವಣೆ

ಮಕ್ಕಳ ಕಲಿಕೆಗೆ ಕೋವಿಡ್ ಪೆಟ್ಟು

ಮಕ್ಕಳ ಕಲಿಕೆಗೆ ಕೋವಿಡ್ ಪೆಟ್ಟು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.