ಗೌರಿ ಹತ್ಯೆ ತನಿಖೆ ಮುಗಿಯಲಿ,ಬಳಿಕ ಸತ್ಯ ಗೊತ್ತಾಗುತ್ತೆ:ಪ್ರಕಾಶ್ ರೈ
Team Udayavani, Jun 18, 2018, 1:56 PM IST
ಚಿಕ್ಕಬಳ್ಳಾಪುರ: ಗೌರಿ ಹತ್ಯೆ ತನಿಖೆ ಕೊನೆ ಹಂತಕ್ಕೆ ಬಂದಿದ್ದು, ಅಂತಿಮವಾಗಿ ತನಿಖೆ ಮುಗಿದ ಬಳಿಕ ಸತ್ಯಾಂಶ ಹೊರ ಬರಲಿದೆ.ಯಾರು ಕೊಲೆ ಮಾಡಿದ್ದಾರೆ ಎಂದು ತಿಳಿಯಲಿದೆ ಅಲ್ಲಿಯವರೆಗೆ ನಾನು ಯಾರ ಮೇಲೂ ಆರೋಪ ಮಾಡುವುದಿಲ್ಲ ಎಂದು ನಟ ಪ್ರಕಾಶ್ ರೈ ಹೇಳಿದ್ದಾರೆ.
ಸೋಮವಾರ ಚಿಕ್ಕಬಳ್ಳಾಪುರದ ಗೌರಿಬಿದನೂರಿನ ಸಂಜಯ್ಯಗಾರಹಳ್ಳಿಯ ಸರ್ಕಾರಿ ಪ್ರಾಥಮಿಕ ಶಾಲೆಗೆ ಭೇಟಿ ವಿದ್ಯಾರ್ಥಿಗಳು ಮತ್ತು ಗ್ರಾಮಸ್ಥರೊಂದಿಗೆ ಮಾತುಕತೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ ಈ ಹೇಳಿಕೆ ನೀಡಿದ್ದಾರೆ.
ಇಷ್ಟು ದಿನಗಳ ಕಾಲ ಗೌರಿ ಹಂತಕರನ್ನು ಹಿಡಿದಿಲ್ಲ ಅಂತ ಹೇಳುತ್ತಾ ಇದ್ರಿ , ಈಗ ಎಸ್‌ಐಟಿ ಆರೋಪಿಗಳನ್ನು ಹಿಡಿಯುತ್ತಿದೆ. ಯಾರೂ ಯಾರ ಮೇಲೆ ಆರೋಪ ಹೊರಿಸುವುದು ಬೇಡ . ಮುಂದೆ ಸಮಾಜದಲ್ಲಿ ಇನ್ನೊಂದು ಗೌರಿಯ ಹತ್ಯೆ ಆಗದಂತೆ ನೋಡಿಕೊಳ್ಳೋಣ ಎಂದರು.
ಸರ್ಕಾರಿ ಶಾಲೆ ದತ್ತು ತೆಗೆದುಕೊಳ್ಳಲು ನಾನು ಯಾರು? ನಾನು ಸರ್ಕಾರಿ ಶಾಲೆಗಳನ್ನು ದತ್ತು ತೆಗೆದುಕೊಳ್ಳುತ್ತೇನೆ ಎನ್ನುವುದು ಮೂರ್ಖತನದ ಮಾತು. ಯಾರಪ್ಪನ ಆಸ್ತಿ ಯಾರು ದತ್ತು ತೆಗೆದುಕೊಳ್ಳುವುದು? ನಾನು ಅಳಿಲು ಸೇವೆಯಷ್ಟೇ ಮಾಡುತ್ತಿದ್ದು, ಸರ್ಕಾರಿ ಶಾಲೆಗಳ ಶಿಕ್ಷಕರು ಮತ್ತು ಸಂಘ ಸಂಸ್ಥೆಗಳ ಬೆನ್ನು ತಟ್ಟುತ್ತಿದ್ದೇನೆ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಶಿವಮೊಗ್ಗ: ಸಾವರ್ಕರ್ –ಟಿಪ್ಪು ಫೋಟೋ ವಿಚಾರ: ಗುಂಪುಗಳ ನಡುವೆ ಹೊಡೆದಾಟ,144 ಸೆಕ್ಷನ್ ಜಾರಿ
ಬಿಜೆಪಿಯ ಸಂಕುಚಿತ ಮನೋಭಾವವೇ ದೇಶ ವಿಭಜನೆಗೆ ಕಾರಣ: ಕುಮಾರಸ್ವಾಮಿ
ಹಣ ಕೊಡದ ಲಾರಿ ಚಾಲಕನನ್ನು ಬಂದೂಕಿನಿಂದ ಸುಡುತ್ತೇನೆಂದ ಅರಣ್ಯ ಇಲಾಖೆ ನೌಕರ : ವಿಡಿಯೋ ವೈರಲ್
ಒಂದು ಲಕ್ಷ ಜನ, ಒಂದು ಲಕ್ಷ ರಾಷ್ಟ್ರಧ್ವಜಗಳೊಂದಿಗೆ ಕಾಂಗ್ರೆಸ್ ಫ್ರೀಡಂ ಮಾರ್ಚ್ ಶುರು
ಕಾಂಗ್ರೆಸ್ ನವರು ಈಗಾಗಲೇ ಅಧಿಕಾರಕ್ಕೆ ಬಂದೆವೆಂಬ ಭ್ರಮೆಯಲ್ಲಿದ್ದಾರೆ: ಯಡಿಯೂರಪ್ಪ