ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮಕ್ಕೆ ಹೆಚ್ಚಿನ ಅನುದಾನ ಕೊಡಿ: ಫಾರೂಕ್‌ ಆಗ್ರಹ


Team Udayavani, Sep 16, 2021, 11:00 PM IST

ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮಕ್ಕೆ ಹೆಚ್ಚಿನ ಅನುದಾನ ಕೊಡಿ: ಫಾರೂಕ್‌ ಆಗ್ರಹ

ವಿಧಾನಪರಿಷತ್ತು: ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಕ್ರಮ ಕೈಗೊಳ್ಳುವುದರ ಜೊತೆಗೆ ನಿಗಮಕ್ಕೆ ಹೆಚ್ಚಿನ ಅನುದಾನ ಒದಗಿಸುವಂತೆ ಜೆಡಿಎಸ್‌ ಸದಸ್ಯ ಬಿ.ಎಂ. ಫಾರೂಕ್‌ ಸರ್ಕಾರವನ್ನು ಒತ್ತಾಯಿಸಿದರು.

ಪ್ರಶ್ನೋತ್ತರ ಅವಧಿಯಲ್ಲಿ ಈ ವಿಷಯದ ಬಗ್ಗೆ ಪ್ರಶ್ನೆ ಕೇಳಿ ಮಾತನಾಡಿದ ಅವರು, ಮುಸ್ಲಿಮರು, ಕ್ರೈಸ್ತರು, ಜೈನರು, ಫಾರ್ಸಿಗಳು ಮತ್ತು ಬೌದ್ಧ ಧರ್ಮದ ಬಡವರ ಏಳಿಗಾಗಿ ಅಭಿವೃದ್ಧಿ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಬೇಕಾದ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ ದುಸ್ಥಿತಿಯಲ್ಲಿದೆ.
ಹುದ್ದೆಗಳೂ ಇಲ್ಲ. ಅನುದಾನವೂ ಇಲ್ಲ. ನಿಗಮದ ಈಗಿನ ಸ್ಥಿತಿ ನೋಡಿದರೆ ಸರ್ಕಾರ ನಿಗಮವನ್ನು ಮುಚ್ಚಲು ನಿರ್ಧರಿಸಿದೆಯೇ ಎಂಬ ಅನುಮಾನ ಮೂಡುತ್ತದೆ ಎಂದರು.

2016ರಿಂದ ಈ ಸಂಸ್ಥೆಗೆ ಸರ್ಕಾರ ಕೊಡುತ್ತಿರುವ ಅನುದಾನವನ್ನು ನೋಡಿದರೆ ಮತ್ತು ಇಲ್ಲಿ ತೀವ್ರವಾಗಿ ಕಡಿಮೆ ಮಾಡುತ್ತಿರುವ ಸಿಬ್ಬಂದಿ ಸಂಖ್ಯೆಯನ್ನು ಗಮನಿಸಿದರೆ ಇದು ಸ್ಪಷ್ಟವಾಗುತ್ತದೆ. ಜಿಲ್ಲಾ ಕಚೇರಿಗಳಲ್ಲೂ ಹೀಗೆಯೇ ಆಗಿದೆ. ಸಿಬ್ಬಂದಿ ಇಲ್ಲ. ಬಡವರು ಅಲ್ಲಿಗೆ ಹೋದರೆ ಕೇಳುವವರಿಲ್ಲ. ಕೆಲವು ಜಿಲ್ಲಾ ಕಚೇರಿಗಳಲ್ಲಿ ಕಸ ಗುಡಿಸಲೂ ನೌಕರರಿಲ್ಲ. ಬಡವರು ಸಾಲಕ್ಕಾಗಿ ಅರ್ಜಿ ಹಿಡಿದು ವಾರಗಟ್ಟಲೆ ಕಚೇರಿಗೆ ಸುತ್ತಾಡಬೇಕು. ಮಂಜೂರಾದ ಹುದ್ದೆಗಳು 48. ಆದರೆ, ಖಾಯಂ ಹುದ್ದೆಗಳು 3 ಮಾತ್ರ. 15 ಜನರನ್ನು ನಿಯೋಜನೆ ಮೇಲೆ ತೆಗೆದುಕೊಂಡಿದ್ದರೆ, 30 ಮಂದಿಯನ್ನು ಹೊರಗುತ್ತಿಗೆ ಆಧಾರದಲ್ಲಿ ತೆಗೆದುಕೊಂಡಿದ್ದಾರೆ.

ಇದನ್ನೂ ಓದಿ:ಅಧಿವೇಶನದ ಬಳಿಕ ಪ್ರವಾಹ ಸಂತ್ರಸ್ತರ ಪರಿಹಾರಕ್ಕೆ ಕ್ರಮ : ಸಿಎಂ ಬಸವರಾಜ ಬೊಮ್ಮಾಯಿ

2016-17 ರಲ್ಲಿ ಸರ್ಕಾರ ಈ ನಿಗಮಕ್ಕೆ 235.97 ಕೋಟಿ ರೂಪಾಯಿ ಖರ್ಚು ಮಾಡಿತ್ತು. 2017-18 ರಲ್ಲಿ ಇದನ್ನು 274 ಕೋಟಿ ರೂಪಾಯಿಗೆ ಏರಿಸಲಾಗಿತ್ತು. ಆದರೆ ಬಳಿಕ ಇದನ್ನು ಪ್ರತಿ ವರ್ಷ ಕಡಿಮೆ ಮಾಡುತ್ತಾ ಬರಲಾಗಿದೆ. 2018-19 ರಲ್ಲಿ 250 ಕೋಟಿಗೆ ಇಳಿಸಲಾಯಿತು. 2019-20 ರಲ್ಲಿ 197 ಕೋಟಿಗೆ ಇಳಿಕೆ ಮಾಡಲಾಯಿತು. 2020-21 ರಲ್ಲಿ ಸರ್ಕಾರ ಕೊಡುವ ಹಣವನ್ನು ತೀರಾ ಕಡಿಮೆ ಅಂದರೆ, ಕೇವಲ 54.72 ಕೋಟಿಗೆ ಇಳಿಸಲಾಗಿದೆ. ಇದರ ಅರ್ಥ ಏನು? ಮುಂದಿನ ವರ್ಷ ಪೂರ್ತಿ ನಿಲ್ಲಿಸಿ ಅಂಗಡಿ ಬಂದ್‌ ಮಾಡುವ ಆಲೋಚನೆ ಇದೆಯಾ ಎಂದು ಪ್ರಶ್ನಿಸಿದರು.

ನಿಗಮದಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಬೇಕು ವರ್ಷಕ್ಕೆ ಕನಿಷ್ಠ 300 ಕೋಟಿ ರೂ. ಅನುದಾನ ಒದಗಿಸಬೇಕು ಒದಗಿಸಬೇಕು ಎಂದು ಇದೇ ವೇಳೆ ಫಾರೂಕ್‌ ಆಗ್ರಹಿಸಿದರು.

ಇದಕ್ಕೆ ಉತ್ತರಿಸಿದ ಸಚಿವ ಜೆ.ಸಿ ಮಾಧುಸ್ವಾಮಿ, ಹಿಂದಿನ ಕೆಲ ವರ್ಷಗಳಲ್ಲಿ ನಿಗಮಕ್ಕೆ ನಿಗದಿಪಡಿಸಲಾಗಿದ್ದ ಅನುದಾನ ಹೆಚ್ಚಿಗೆ ಖರ್ಚಾಗಿಲ್ಲ. ಆ ಆಧಾರದಲ್ಲಿ ಅನುದಾನ ಹಂಚಿಕೆ ಮಾಡುವಾಗ ಕಡಿಮೆ ಆಗಿರಬಹುದು. 2019-20ರಲ್ಲಿ 149 ಕೋಟಿ ರೂ. ಅನುದಾನ ಮೀಸಲಿಟ್ಟಿದ್ದರೆ ಅದಕ್ಕಿಂತ ಹೆಚ್ಚಾಗಿ 197 ಕೋಟಿ ರೂ. ಖರ್ಚು ಮಾಡಲಾಗಿದೆ. ಮಂಜೂರಾದ ಹುದ್ದೆಗಳಲ್ಲಿ ಖಾಲಿ ಹುದ್ದೆಗಳನ್ನು ಹೊರಗುತ್ತಿಗೆ ಆಧಾರದಲ್ಲಿ ನೇಮಕ ಮಾಡಿಕೊಂಡು ನಿಗಮದ ಕೆಲಸಗಳನ್ನು ನಡೆಸಿಕೊಂಡು ಹೋಗಲು ಅವಕಾಶ ಮಾಡಿಕೊಡಲಾಗಿದೆ ಎಂದು ಹೇಳಿದರು.

ಟಾಪ್ ನ್ಯೂಸ್

ಪ್ರಗತಿ ಪಥದಲ್ಲಿ ದಾಪುಗಾಲಿಡುತ್ತಿದೆ ದೇಶದ ವೈಮಾನಿಕ ಕ್ಷೇತ್ರ

ಪ್ರಗತಿ ಪಥದಲ್ಲಿ ದಾಪುಗಾಲಿಡುತ್ತಿದೆ ದೇಶದ ವೈಮಾನಿಕ ಕ್ಷೇತ್ರ

ಬಾಡಿಗೆ ನಿಯಂತ್ರಿಸಿದರಷ್ಟೇ ಭತ್ತ ಕೃಷಿ ಕಾರ್ಯ ಮುಂದುವರಿಕೆ ಸಾಧ್ಯ

ಬಾಡಿಗೆ ನಿಯಂತ್ರಿಸಿದರಷ್ಟೇ ಭತ್ತ ಕೃಷಿ ಕಾರ್ಯ ಮುಂದುವರಿಕೆ ಸಾಧ್ಯ

ತಪ್ಪು ಮಾಡದಂತೆ ಬದುಕಲು ಸಾಧ್ಯವಾಗಲಿಲ್ಲ…

ತಪ್ಪು ಮಾಡದಂತೆ ಬದುಕಲು ಸಾಧ್ಯವಾಗಲಿಲ್ಲ…

ಮಂಗಳೂರು: ಪಬ್‌ ಮೇಲೆ ಸಿಸಿಬಿ ಪೊಲೀಸ್‌ ದಾಳಿ

ಮಂಗಳೂರು: ಪಬ್‌ ಮೇಲೆ ಸಿಸಿಬಿ ಪೊಲೀಸ್‌ ದಾಳಿ

Untitled-1

ಭೀಮಾ ಕೋರೆಗಾಂವ್‌ ಪ್ರಕರಣ: ವಿಚಾರಣೆಗೆ ರಶ್ಮಿ ಶುಕ್ಲಾ, ಪರಂಬೀರ್‌ ಸಿಂಗ್‌ಗೆ ಸಮನ್ಸ್‌ ಜಾರಿ

ಟಿ20 ವಿಶ್ವಕಪ್​: ವಿಂಡೀಸ್ ವಿರುದ್ಧ ಇಂಗ್ಲೆಂಡ್​ಗೆ ಜಯ

ಟಿ20 ವಿಶ್ವಕಪ್​: ವಿಂಡೀಸ್ ವಿರುದ್ಧ ಇಂಗ್ಲೆಂಡ್​ಗೆ ಜಯ

ಧೋನಿ ಅಭಿಮಾನಿ ಬಶೀರ್‌ ಚಾಚಾ ಮತ್ತೆ ಹಾಜರ್‌!

ಧೋನಿ ಅಭಿಮಾನಿ ಬಶೀರ್‌ ಚಾಚಾ ಮತ್ತೆ ಹಾಜರ್‌!

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅಕ್ರಮ ಚಟುವಟಿಕೆಗಳಿಗೆ ಕಡಿವಾಣ: ಕಮಲ್‌ ಪಂತ್‌

ಅಕ್ರಮ ಚಟುವಟಿಕೆಗಳಿಗೆ ಕಡಿವಾಣ: ಕಮಲ್‌ ಪಂತ್‌

ಕಿತ್ತೂರು ಕರ್ನಾಟಕ ನಾಮಕರಣಕ್ಕೆ ನಿರ್ಧಾರ: ಸಿಎಂ ಬೊಮ್ಮಾಯಿ‌ ಘೋಷಣೆ

ಕಿತ್ತೂರು ಕರ್ನಾಟಕ ನಾಮಕರಣಕ್ಕೆ ನಿರ್ಧಾರ: ಸಿಎಂ ಬೊಮ್ಮಾಯಿ‌ ಘೋಷಣೆ

ಭಾರತ -ಬಾಂಗ್ಲಾದೇಶ ನಡುವಿನ ಬಾಂಧವ್ಯ ಭಾವನಾತ್ಮಕ: ಹರ್ಷವರ್ಧನ್‌

ಭಾರತ -ಬಾಂಗ್ಲಾದೇಶ ನಡುವಿನ ಬಾಂಧವ್ಯ ಭಾವನಾತ್ಮಕ: ಹರ್ಷವರ್ಧನ್‌

panchamasali

ಪಂಚಮಸಾಲಿಗಳ ಒತ್ತಡಕ್ಕೆ ಸರ್ಕಾರ ಮಣಿಯಬಾರದು: ಸಿ.ಎಸ್‌ ದ್ವಾರಕಾನಾಥ್‌

cm

ಬುರುಡೆ ಬೊಮ್ಮಾಯಿ..! : ಬಿಜೆಪಿಗೆ ಸಿದ್ದರಾಮಯ್ಯ ಟ್ವೀಟಾಸ್ತ್ರದ ತಿರುಗೇಟು

MUST WATCH

udayavani youtube

ರಾಜ್ಯದ ಪಾಲಿಟೆಕ್ನಿಕ್‌ ಶಿಕ್ಷಣದಲ್ಲಿ ಆಮೂಲಾಗ್ರ ಬದಲಾವಣೆ : ಸಚಿವ ಡಾ. ಅಶ್ವತ್ಥನಾರಾಯಣ

udayavani youtube

11 ಮಂದಿ ಚಾರಣಿಗರು ಸಾವು, 17,000 ಅಡಿ ಎತ್ತರದಲ್ಲಿ ವಾಯುಪಡೆ ಕಾರ್ಯಾಚರಣೆ

udayavani youtube

ಮುಂದುವರೆದ ಒಂಟಿ ಸಲಗದ ದಾಂಧಲೆ ಕಾಂಪೌಂಡ್, ಮನೆಯ ಮೇಲ್ಚಾವಣಿ ಪುಡಿಪುಡಿ

udayavani youtube

ಕೃಷಿಕರ ಬದುಕಿಗೆ ಆಶಾಕಿರಣವಾಗಿರುವ MO4 ಭತ್ತದ ತಳಿಯನ್ನು ಯಾಕೆ ಬೆಳೆಯಬೇಕು?

udayavani youtube

ರಸ್ತೆ ಬದಿ ನಡೆದುಕೊಂಡು ಹೋಗುತ್ತಿದ್ದ ಮಹಿಳೆಗೆ ಡಿಕ್ಕಿ ಹೊಡೆದ ಕಾರು, ಮಹಿಳೆ ಸಾವು

ಹೊಸ ಸೇರ್ಪಡೆ

ಬಿಎಸ್‌ವೈ ಪ್ರಚಾರದಿಂದ ಬಿಜೆಪಿಗೆ ಆನೆ ಬಲ

ಬಿಎಸ್‌ವೈ ಪ್ರಚಾರದಿಂದ ಬಿಜೆಪಿಗೆ ಆನೆ ಬಲ

ಭತ್ತ ಖರೀದಿ ಕೇಂದ್ರ: ಪ್ರಸ್ತಾವನೆಗೆ ಡಿಸಿ ಸೂಚನೆ

ಭತ್ತ ಖರೀದಿ ಕೇಂದ್ರ: ಪ್ರಸ್ತಾವನೆಗೆ ಡಿಸಿ ಸೂಚನೆ

ಐಟಿಐಯಲ್ಲಿ 11 ಹೊಸ ಕೋರ್ಸ್‌ಗಳು ಆರಂಭ ; ಸಚಿವ ಡಾ| ಅಶ್ವತ್ಥನಾರಾಯಣ

ಐಟಿಐಯಲ್ಲಿ 11 ಹೊಸ ಕೋರ್ಸ್‌ಗಳು ಆರಂಭ ; ಸಚಿವ ಡಾ| ಅಶ್ವತ್ಥನಾರಾಯಣ

ಪ್ರಗತಿ ಪಥದಲ್ಲಿ ದಾಪುಗಾಲಿಡುತ್ತಿದೆ ದೇಶದ ವೈಮಾನಿಕ ಕ್ಷೇತ್ರ

ಪ್ರಗತಿ ಪಥದಲ್ಲಿ ದಾಪುಗಾಲಿಡುತ್ತಿದೆ ದೇಶದ ವೈಮಾನಿಕ ಕ್ಷೇತ್ರ

ಲಸಿಕೆ ಅಭಿವೃದ್ಧಿ ಹಂತಗಳ ಬಗ್ಗೆ ಮಾಹಿತಿ

ಲಸಿಕೆ ಅಭಿವೃದ್ಧಿ ಹಂತಗಳ ಬಗ್ಗೆ ಮಾಹಿತಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.