ನಗರಸಭೆ, ಪುರಸಭೆ, ಪ.ಪ ಅಧ್ಯಕ್ಷ- ಉಪಾಧ್ಯಕ್ಷರ ಮೀಸಲಾತಿ ರದ್ದು ಮಾಡಿದ ಹೈಕೋರ್ಟ್
Team Udayavani, Nov 19, 2020, 5:13 PM IST
ಬೆಂಗಳೂರು: ರಾಜ್ಯದ ಎಲ್ಲಾ ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿಗಳ ಅಧ್ಯಕ್ಷ, ಉಪಾಧ್ಯಕ್ಷರ ಮೀಸಲಾತಿ ನಿಗದಿಪಡಿಸಿ ಕಳೆದ ಅಕ್ಟೋಬರ್8ರಂದು ಸರ್ಕಾರ ಹೊರಡಿಸಿದ್ದ ಆದೇಶವನ್ನು ಹೈಕೋರ್ಟ್ ರದ್ದುಗೊಳಿಸಿದೆ.
ಈ ಬಗ್ಗೆ ಹೈಕೋರ್ಟ್ ನ ಏಕಸದಸ್ಯ ಪೀಠ ಇಂದು ತೀರ್ಪು ನೀಡಿದ್ದು, ಮೇಲ್ಮನವಿ ಸಲ್ಲಿಸಲು ಸರ್ಕಾರಕ್ಕೆ ಹತ್ತು ದಿನಗಳ ಅವಕಾಶ ನೀಡಿದೆ.
ಅಕ್ಟೋಬರ್ 8ರಂದು ರಾಜ್ಯ ಸರ್ಕಾರ ನಗರಸಭೆ, ಪುರಸಭೆ, ಪಟ್ಟಣ ಪಂಚಾಯತಿಯ ಅಧ್ಯಕ್ಷರು, ಉಪಾಧ್ಯಕ್ಷರ ಮೀಸಲಾತಿ ಪಟ್ಟಿಯನ್ನು ಪ್ರಕಟಿಸಿ, ಅಧಿಸೂಚನೆ ಹೊರಡಿಸಿತ್ತು. ಆದರೆ ಈ ಆದೇಶವನ್ನು ಕೋರ್ಟ್ ಇಂದು ರದ್ದು ಮಾಡಿದೆ.
ಇದನ್ನೂ ಓದಿ:ಸ್ಥಳೀಯ ಸಂಸ್ಥೆಗಳಿಗೆ ‘ಹೈ’ಶಾಕ್! ಇತ್ತೀಚೆಗೆ ಅಧ್ಯಕ್ಷ- ಉಪಾಧ್ಯಕ್ಷರಾದವರ ಮುಂದಿನ ದಾರಿಯೇನು?
ರಾಜ್ಯದ ಒಟ್ಟು 277 ಸ್ಥಳೀಯ ಸಂಸ್ಥೆಗಳ ಅಧ್ಯಕ್ಷ – ಉಪಾಧ್ಯಕ್ಷ ಚುನಾವಣೆಗೆ ಮೀಸಲಾತಿ ಅಧಿಸೂಚನೆ ಹೊರಡಿಸಲಾಗಿತ್ತು. ಅದರಂತೆ ಬಹಳಷ್ಟು ಕಡೆ ಚುನಾವಣೆ ನಡೆದು ಅಧ್ಯಕ್ಷ – ಉಪಾಧ್ಯಕ್ಷರ ಚುನಾವಣೆ ನಡೆದು ಫಲಿತಾಂಶ ಪ್ರಕಟವಾಗಿದೆ. ಆದರೆ ಈ ಆದೇಶದಿಂದ ಈ ಚುನಾವಣಾ ಫಲಿತಾಂಶಗಳು ಅಮಾನತು ಸ್ಥಿತಿಯಲ್ಲಿರುತ್ತದೆ.
ಮೇಲ್ಮನವಿಗೆ ಅವಕಾಶ: ಕೋರ್ಟ್ ಆದೇಶದ ವಿರುದ್ಧ ಮೇಲ್ಮನವಿ ಸಲ್ಲಿಸಲು ಸರ್ಕಾರ ಅವಕಾಶ ಕೋರಿದೆ. ಹೀಗಾಗಿ ಕೋರ್ಟ್ ಮೇಲ್ಮನವಿ ಸಲ್ಲಿಸಲು ಇಂದಿನಿಂದ ಹತ್ತು ದಿನಗಳ ಕಾಲ ಅವಕಾಶ ನೀಡಿದೆ. ಮೇಲ್ಮನವಿ ಸಲ್ಲಿಸಿದರೆ ಆಗ ಹೂಕೋರ್ಟ್ ನ ವಿಭಾಗೀಯ ಪೀಠ ನೀಡುವ ತೀರ್ಪು ಅಂತಿಮವಾಗಿರಲಿದೆ ಎಂದು ಕೋರ್ಟ್ ಸೂಚಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಮಂದಾರ್ತಿ ಸಮೀಪ ಕಾರಿನಲ್ಲಿ ಭಸ್ಮವಾಗಿದ್ದು ಬೆಂಗಳೂರಿನ ನವ ಜೋಡಿ!
ಪರಿಷತ್ : ಹಿಂದುಳಿದ ವರ್ಗ,ಮುಸ್ಲಿಂ ಅಥವಾ ಕ್ರೈಸ್ತರಿಗೆ ಅವಕಾಶಕ್ಕೆ ಸಿದ್ದರಾಮಯ್ಯ ಮನವಿ
ಅಲ್ಲಿ ಲವ್- ಇಲ್ಲಿ ಮದುವೆ: ತಾಳಿ ಕಟ್ಟುವ ವೇಳೆ ಮದುವೆಗೆ ‘ನೋ ‘ಎಂದು ವಧುವಿನ ಹೈಡ್ರಾಮಾ
ಹಿಂದೂ ಸಮಾಜವನ್ನು ರಕ್ಷಣೆ ಮಾಡುವ ಉದ್ದೇಶದಿಂದ ದೇಶಕ್ಕೆ ಸ್ವಾತಂತ್ರ್ಯ ಬಂದಿದೆ: ಈಶ್ವರಪ್ಪ
ಮಳೆ ಅನಾಹುತ : 8 ವಲಯಗಳ ಕಾರ್ಯಪಡೆಗೆ ಸಚಿವರುಗಳ ನೇತೃತ್ವ