Udayavni Special

15 ಶಾಸಕರನ್ನು ವಾಪಸ್‌ ಕರೆ ತರಲು ಎಚ್‌.ಕೆ.ಪಾಟೀಲ್‌ ಮನವಿ


Team Udayavani, Jul 20, 2019, 3:00 AM IST

005

ವಿಧಾನಸಭೆ: ಮುಂಬೈಗೆ ತೆರಳಿರುವ ಶಾಸಕರನ್ನು ಕಲಾಪಕ್ಕೆ ವಾಪಸ್‌ ಕರೆಸುವಂತೆ ಕಾಂಗ್ರೆಸ್‌ ಹಿರಿಯ ಸದಸ್ಯ ಎಚ್‌.ಕೆ. ಪಾಟೀಲ್‌ ಸದನದಲ್ಲಿ ಸ್ಪೀಕರ್‌ಗೆ ಮನವಿ ಮಾಡಿದ್ದು, ಸದನದಲ್ಲಿ ಆಡಳಿತ ಹಾಗೂ ಪ್ರತಿಪಕ್ಷಗಳ ನಾಯಕರ ಪರ-ವಿರೋಧದ ಚರ್ಚೆಗೆ ಗ್ರಾಸವಾಯಿತು.

ರಾಜ್ಯದ 15 ಶಾಸಕರು ಮುಂಬೈಗೆ ತೆರಳಿ ತಮಗೆ ರಕ್ಷಣೆ ಇಲ್ಲ ಎಂದು ಹೇಳುತ್ತಿರುವುದು ಮಾಧ್ಯಮಗಳಲ್ಲಿ ಬರುತ್ತಿದೆ. ಅಲ್ಲದೇ ಬೇರೆ ರಾಜ್ಯದಲ್ಲಿ ನಮ್ಮ ಶಾಸಕರು ಹೋಗಿ ಹೋಟೆಲ್‌ನಲ್ಲಿ ಕೂರುವುದು ನಮ್ಮ ಸದನದ ಗೌರವಕ್ಕೆ ಧಕ್ಕೆ ತಂದಂತಾಗುತ್ತದೆ. ಹೀಗಾಗಿ, ರಾಜ್ಯದ ಪೊಲೀಸ್‌ ಅಧಿಕಾರಿಗಳನ್ನೋ ಅಥವಾ ವಿಧಾನಸಭೆಯ ಹಿರಿಯ ಅಧಿಕಾರಿಗಳನ್ನೋ ಕಳುಹಿಸಿ, ಅವರಿಗೆ ರಾಜ್ಯದಲ್ಲಿ ಎಲ್ಲ ರೀತಿಯ ರಕ್ಷಣೆ ನೀಡುವ ಭರವಸೆ ನೀಡಿ ಕರೆದುಕೊಂಡು ಬರುವಂತೆ ಸೂಚಿಸುವಂತೆ ಸ್ಪೀಕರ್‌ಗೆ ಮನವಿ ಮಾಡಿದರು.

ಅವರ ಮನವಿಗೆ ಬಿಜೆಪಿಯ ಜೆ.ಸಿ.ಮಾಧುಸ್ವಾಮಿ ಆಕ್ಷೇಪ ವ್ಯಕ್ತಪಡಿಸಿ, ಎಚ್‌.ಕೆ. ಪಾಟೀಲರು ಮಾಡುತ್ತಿರುವ ಮನವಿಗೂ, ವಿಶ್ವಾಸಮತ ಯಾಚನೆಗೂ ಯಾವುದೇ ಸಂಬಂಧವಿಲ್ಲ. ಅವರು ತಮಗೆ ಸದನಕ್ಕೆ ಹಾಜರಾಗುವಂತೆ ಒತ್ತಡ ಹೇರಲಾಗುತ್ತಿದೆ ಎಂದು ಸುಪ್ರೀಂಕೊರ್ಟ್‌ಗೆ ತೆರಳಿದ್ದಾರೆ. ಸುಪ್ರೀಂಕೋರ್ಟ್‌ ಕೂಡ ಅವರಿಗೆ ಒತ್ತಡ ಹೇರದಂತೆ ಆದೇಶ ನೀಡಿದೆ. ಹೀಗಾಗಿ ಅವರು ಸ್ವ ಇಚ್ಛೆಯಿಂದ ಬರದಿದ್ದರೆ, ಅವರನ್ನು ಒತ್ತಾಯದಿಂದ ಕರೆಸುವ ಪ್ರಯತ್ನ ಮಾಡುವುದು ಸಮಂಜಸವಲ್ಲ ಎಂದು ಹೇಳಿದರು.

ಈ ಸಂದರ್ಭದಲ್ಲಿ ಮಧ್ಯ ಪ್ರವೇಶಿಸಿದ ಸಚಿವ ಡಿ.ಕೆ.ಶಿವಕುಮಾರ್‌, 15 ಶಾಸಕರು ನಮ್ಮ ಪಕ್ಷದವರು. ಅವರನ್ನು ಒತ್ತಾಯ ಪೂರ್ವಕವಾಗಿ ಅಲ್ಲಿಡಲಾಗಿದೆ. ಕಳೆದ 40 ವರ್ಷದಿಂದ ಅವರು ನಮ್ಮ ಪಕ್ಷದಲ್ಲಿದ್ದಾರೆ. ನಮ್ಮೊಂದಿಗೆ ರಾಜಕಾರಣ ಮಾಡಿದ್ದಾರೆ. ಹೀಗಾಗಿ, ಅವರನ್ನು ವಾಪಸ್‌ ಕರೆಸುವಂತೆ ಮನವಿ ಮಾಡಿದರು.

ಎರಡೂ ಕಡೆಯ ವಾದ ಆಲಿಸಿದ ಸ್ಪೀಕರ್‌, ಮುಂಬೈಗೆ ತೆರಳಿರುವ ಶಾಸಕರು ಯಾರೂ ತಮಗೆ ರಕ್ಷಣೆ ನೀಡುವಂತೆ ಪತ್ರ ಬರೆದಿಲ್ಲ ಹಾಗೂ ಶಾಸಕರ ಸಂಬಂಧಿಕರಿಂದಲೂ ದೂರು ಬಂದಿಲ್ಲ. ಹೀಗಾಗಿ, ಆ ಶಾಸಕರಿಗೆ ರಕ್ಷಣೆ ನೀಡುವ ಜವಾಬ್ದಾರಿ ನನ್ನದಲ್ಲ. ಒಂದು ವೇಳೆ ಸರ್ಕಾರಕ್ಕೆ ಯಾರಾದರೂ ದೂರು ನೀಡಿದ್ದರೆ, ಸರ್ಕಾರ ಅವರನ್ನು ವಾಪಸ್‌ ಕರೆ ತರುವ ಕೆಲಸ ಮಾಡಬಹುದು. ಯಾವುದೇ ದೂರು ಬಾರದೇ ಶಾಸಕರಿಗೆ ರಕ್ಷಣೆ ನೀಡುವ ಜವಾಬ್ದಾರಿ ನನ್ನದಲ್ಲ ಎಂದು ರೂಲಿಂಗ್‌ ನೀಡಿದರು.

ಸ್ಪೀಕರ್‌ ರೂಲಿಂಗ್‌ ನೀಡಿದ ನಂತರ ಸಚಿವ ಡಿ.ಕೆ.ಶಿವಕುಮಾರ್‌, ಮುಂಬೈಗೆ ತೆರಳಿರುವ ಶಾಸಕರು ನಮ್ಮ ಪಕ್ಷದವರು. ಅವರು ನಮ್ಮ ಸ್ನೇಹಿತರು. ನಾವು ಮನವಿ ಮಾಡುತ್ತಿದ್ದೇವೆ. ಅವರನ್ನು ವಾಪಸ್‌ ಕರೆಸಿ ಎಂದು ಮಾಡಿದ ಮನವಿಯನ್ನು ಸ್ಪೀಕರ್‌ ಪುರಸ್ಕರಿಸಲಿಲ್ಲ.

ಉದಯವಾಣಿ ಸುದ್ದಿ ಈಗ ಟೆಲಿಗ್ರಾಂನಲ್ಲೂ ಲಭ್ಯ; ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್ ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

ಮಿತವ್ಯಯಕ್ಕೆ ವಿಲೀನವೇ ಮಾರ್ಗ; ಇಲಾಖೆಗಳ ವಿಲೀನಕ್ಕೆ ತಜ್ಞರ ಸಲಹೆ

ಮಿತವ್ಯಯಕ್ಕೆ ವಿಲೀನವೇ ಮಾರ್ಗ; ಇಲಾಖೆಗಳ ವಿಲೀನಕ್ಕೆ ತಜ್ಞರ ಸಲಹೆ

ಮುಂದಿನ ವರ್ಷದ ಅಕ್ಟೋಬರ್‌ಗೆ ಲಸಿಕೆ

ಮುಂದಿನ ವರ್ಷದ ಅಕ್ಟೋಬರ್‌ಗೆ ಲಸಿಕೆ

ಸೇವೆಯೆಂಬ ಯಜ್ಞಕ್ಕೆ ಸಂದ ಫ‌ಲ

ಸೇವೆಯೆಂಬ ಯಜ್ಞಕ್ಕೆ ಸಂದ ಫ‌ಲ

“ಜಂಗಲ್‌ರಾಜ್‌ ಯುವರಾಜ’

“ಜಂಗಲ್‌ರಾಜ್‌ ಯುವರಾಜ’; ಮಹಾಘಟಬಂಧನ್‌ ಸಿಎಂ ಅಭ್ಯರ್ಥಿ ತೇಜಸ್ವಿ ವಿರುದ್ಧ ಮೋದಿ ವಾಗ್ಬಾಣ

ಕ್ರೆಡಿಟ್‌ ಕಾರ್ಡ್‌ಗಿಲ್ಲ ಚಕ್ರಬಡ್ಡಿ

ಕ್ರೆಡಿಟ್‌ ಕಾರ್ಡ್‌ಗಿಲ್ಲ ಚಕ್ರಬಡ್ಡಿ

ಗ್ರಾಮ ಪಂಚಾಯತ್ ಗಳಲ್ಲಿ ಶೀಘ್ರ ಆಧಾರ್‌ ತಿದ್ದುಪಡಿ

ಗ್ರಾಮ ಪಂಚಾಯತ್ ಗಳಲ್ಲಿ ಶೀಘ್ರ ಆಧಾರ್‌ ತಿದ್ದುಪಡಿ

ಮಾರ್ಕೆಟಿಂಗ್‌ ಯುವಕನೀಗ ಭತ್ತ ಬೆಳೆಯುವ ಕೃಷಿಕ

ಮಾರ್ಕೆಟಿಂಗ್‌ ಯುವಕನೀಗ ಭತ್ತ ಬೆಳೆಯುವ ಕೃಷಿಕ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಮಿತವ್ಯಯಕ್ಕೆ ವಿಲೀನವೇ ಮಾರ್ಗ; ಇಲಾಖೆಗಳ ವಿಲೀನಕ್ಕೆ ತಜ್ಞರ ಸಲಹೆ

ಮಿತವ್ಯಯಕ್ಕೆ ವಿಲೀನವೇ ಮಾರ್ಗ; ಇಲಾಖೆಗಳ ವಿಲೀನಕ್ಕೆ ತಜ್ಞರ ಸಲಹೆ

ಸೇವೆಯೆಂಬ ಯಜ್ಞಕ್ಕೆ ಸಂದ ಫ‌ಲ

ಸೇವೆಯೆಂಬ ಯಜ್ಞಕ್ಕೆ ಸಂದ ಫ‌ಲ

ಕೋವಿಡ್ ಓಡಿಸಲು ಸಿಎಂ ನವಸೂತ್ರ

ಕೋವಿಡ್ ಓಡಿಸಲು ಸಿಎಂ ನವಸೂತ್ರ

ಜಿಲ್ಲೆಯಲ್ಲಿ ಇಳಿಕೆ ಕಂಡ ಕೋವಿಡ್ ! 79 ಮಂದಿಗೆ ಸೋಂಕು ದೃಢ, 89 ಮಂದಿ ಗುಣಮುಖ

ಮಂಡ್ಯ ಜಿಲ್ಲೆಯಲ್ಲಿ ಇಳಿಕೆ ಕಂಡ ಕೋವಿಡ್ ! 79 ಮಂದಿಗೆ ಸೋಂಕು ದೃಢ, 89 ಮಂದಿ ಗುಣಮುಖ

ಮಂಡ್ಯ: ಮಾರಮ್ಮನ ಪ್ರಸಾದ ಸ್ವೀಕರಿಸಿದ 70ಕ್ಕೂ ಹೆಚ್ಚು ಭಕ್ತರು ಅಸ್ವಸ್ಥ

ಮಂಡ್ಯ: ಮಾರಮ್ಮನ ಪ್ರಸಾದ ಸ್ವೀಕರಿಸಿದ 70ಕ್ಕೂ ಹೆಚ್ಚು ಭಕ್ತರು ಅಸ್ವಸ್ಥ

MUST WATCH

udayavani youtube

ಭಕ್ತಿ-ಸಂಭ್ರಮದ ಮಂಗಳೂರು ದಸರಾ -2020 ಸಂಪನ್ನ

udayavani youtube

ರಸ್ತೆಯಲ್ಲಿ ಉಂಟಾದ ಕೃತಕ ನೆರೆಯಲ್ಲೇ ಈಜಾಡಿದ ಯುವಕ

udayavani youtube

ಕೊರೋನಾ: ಶೋಚನೀಯವಾದ ತಿರುಗುವ ತೊಟ್ಟಿಲು ತಿರುಗಿಸುವ ಕೈಗಳ ಕಥೆ!

udayavani youtube

Story behind Vijayadashami celebration | ವಿಜಯದಶಮಿ ಆಚರಣೆಯ ಹಿಂದಿನ ಕಥೆ | Udayavani

udayavani youtube

450 ಕ್ಕೂ ಅಧಿಕ ಬೀದಿ ಬದಿ ಶ್ವಾನಗಳಿಗೆ ನಿತ್ಯ ಆಹಾರ ನೀಡುತ್ತಾರೆ ರಜನಿ ಶೆಟ್ಟಿ!

ಹೊಸ ಸೇರ್ಪಡೆ

ಅರ್ಹ ಸಾಧಕರಿಗೆ ಗೌರವ

ಅರ್ಹ ಸಾಧಕರಿಗೆ ಗೌರವ

ಮಿತವ್ಯಯಕ್ಕೆ ವಿಲೀನವೇ ಮಾರ್ಗ; ಇಲಾಖೆಗಳ ವಿಲೀನಕ್ಕೆ ತಜ್ಞರ ಸಲಹೆ

ಮಿತವ್ಯಯಕ್ಕೆ ವಿಲೀನವೇ ಮಾರ್ಗ; ಇಲಾಖೆಗಳ ವಿಲೀನಕ್ಕೆ ತಜ್ಞರ ಸಲಹೆ

ಮುಂದಿನ ವರ್ಷದ ಅಕ್ಟೋಬರ್‌ಗೆ ಲಸಿಕೆ

ಮುಂದಿನ ವರ್ಷದ ಅಕ್ಟೋಬರ್‌ಗೆ ಲಸಿಕೆ

ಸೇವೆಯೆಂಬ ಯಜ್ಞಕ್ಕೆ ಸಂದ ಫ‌ಲ

ಸೇವೆಯೆಂಬ ಯಜ್ಞಕ್ಕೆ ಸಂದ ಫ‌ಲ

“ಜಂಗಲ್‌ರಾಜ್‌ ಯುವರಾಜ’

“ಜಂಗಲ್‌ರಾಜ್‌ ಯುವರಾಜ’; ಮಹಾಘಟಬಂಧನ್‌ ಸಿಎಂ ಅಭ್ಯರ್ಥಿ ತೇಜಸ್ವಿ ವಿರುದ್ಧ ಮೋದಿ ವಾಗ್ಬಾಣ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.