ಹೊನ್ನಾವರದ ಮಂಕಿ ಬಳಿ ಟ್ರಕ್ಕುಗಳ ನೇರ ಢಿಕ್ಕಿ: ಚಾಲಕ ಸಾವು
Team Udayavani, Jun 7, 2018, 5:25 PM IST
ಕಾರವಾರ : ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಮಂಕಿ ಬಳಿ ಇಂದು ಸಂಭವಿಸಿದ ಎರಡು ಟ್ರಕ್ಕುಗಳ ನಡುವಿನ ಮುಖಾಮುಖೀ ಢಿಕ್ಕಿಯಲ್ಲಿ ಒಂದು ಟ್ರಕ್ಕಿನ ಚಾಲಕ ಮೃತಪಟ್ಟು ಕ್ಲೀನರ್ ಗಂಭೀರವಾಗಿ ಗಾಯಗೊಂಡಿರುವುದಾಗಿ ವರದಯಾಗಿದೆ.
ಒಂದು ಟ್ರಕ್ ಕೇರಳದಿಂದ ಪ್ಲೆ„ ವುಡ್ ತುಂಬಿಕೊಂಡು ಹೋಗುತ್ತಿತ್ತು. ಇನ್ನೊಂದು ಟ್ರಕ್ ಮುಂಬಯಿಯಿಂದ ಮಂಗಳೂರು ಕಡೆಗೆ ಬರುತ್ತಿತ್ತು.
ಮೃತ ಪಟ್ಟ ಟ್ರಕ್ ಚಾಲಕನನ್ನು ರಾಜೇಂದ್ರ ಬಾಪು ಮೋರೆ ಎಂದು ಗುರುತಿಸಲಾಗಿದೆ. ಗಂಭೀರವಾಗಿ ಗಾಯಗೊಂಡ ಕ್ಲೀನರ್ ನಿತಿನ್ ಎಂಬಾತನು ಸಾಂಗ್ಲಿ ನಿವಾಸಿ ಎಂದು ಗೊತ್ತಾಗಿದೆ.
ಮಂಕಿ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಾಗಿದ್ದು ತನಿಖೆ ನಡೆಯುತ್ತಿದೆ.