
ಮನೆ ಯಜಮಾನಿ ಯಾರು ಎಂದು ಮನೆಯವರೇ ತೀರ್ಮಾನ ಮಾಡಬೇಕು: ಡಿ.ಕೆ.ಶಿವಕುಮಾರ್
Team Udayavani, Jun 7, 2023, 1:24 PM IST

ಬೆಂಗಳೂರು: ಸರ್ಕಾರದಿಂದ ಯಾರಿಗೆ ಒಂದು ರೂಪಾಯಿ ಹಣ ಕೊಟ್ಟರೂ ಅದಕ್ಕೆ ಲೆಕ್ಕ, ಹೊಣೆಗಾರಿಕೆ ಇರಬೇಕು. ಫಲಾನುಭವಿ ಆಗುವವರು ಮತದಾರರ ಗುರುತಿನ ಚೀಟಿ, ಬ್ಯಾಂಕ್ ಖಾತೆ, ಆಧಾರ್ ಕಾರ್ಡ್ ಹೊಂದಿರಬೇಕು. ಬೇರೆಯವರ ಬ್ಯಾಂಕ್ ಖಾತೆಗೆ ಹಣ ನೀಡಲಾಗುವುದಿಲ್ಲ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿದರು.
ಸದಾಶಿವನಗರ ನಿವಾಸದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಮನೆ ಯಜಮಾನಿ ಯಾರು ಎಂದು ಮನೆಯವರೇ ತೀರ್ಮಾನ ಮಾಡಬೇಕು. ಅವರ ಮನೆ ವಿಚಾರದಲ್ಲಿ ನಾವು ಹಸ್ತಕ್ಷೇಪ ಮಾಡುವುದಿಲ್ಲ. ಮತದಾರರ ಗುರುತಿನಿ ಚೀಟಿ, ಎಪಿಎಲ್, ಬಿಪಿಎಲ್ ಕಾರ್ಡ್ ಗಳಲ್ಲಿ ಯಾವ ಮನೆಯಲ್ಲಿ ಯಾರೆಲ್ಲಾ ಇದ್ದಾರೆ ಎಂದು ಮಾಹಿತಿ ಇದೆ ಎಂದರು.
ಬಿಜೆಪಿ, ಜನತಾ ದಳದವರಿಗೆ ಈ ಯೋಜನೆ ಜಾರಿಯನ್ನು ಸಹಿಸಿಕೊಳ್ಳಲು ಆಗುತ್ತಿಲ್ಲ. ಅವರ ಅಸೂಯೆಗೆ ಮದ್ದಿಲ್ಲ. ನಮ್ಮ ಯೋಜನೆ ಬಗ್ಗೆ ಮಾತನಾಡುವವರು ಮೊದಲು ಬಿಜೆಪಿಯವರ ಉದ್ಯೋಗ ಭರವಸೆ ಬಗ್ಗೆ ಮಾತಾಡಲಿ. ಎಲ್ಲರ ಖಾತೆಗೆ 15 ಲಕ್ಷ ಹಾಕಿಸಲಿ. ಆ ಬಗ್ಗೆ ಯಾಕೆ ಯಾರೂ ಕೇಳುತ್ತಿಲ್ಲ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರತಿಭಟನೆ ಮಾಡುವವರನ್ನು ಬೇಡ ಎನ್ನಲು ಸಾಧ್ಯವೇ? ಎಂದು ಹೇಳಿದರು.
ತೆರಿಗೆ ಪಾವತಿದಾರರು ನಿಮಗೆ ಮತ ಹಾಕಿಲ್ಲವೇ ಎಂದು ಕೇಳಿದಾಗ, ‘ನಾವು ಬಡವರಿಗೆ ನೆರವು ನೀಡಲು ನಿರ್ಧರಿಸಿದ್ದೇವೆ. ತೆರಿಗೆ, ಜಿಎಸ್ಟಿ ಪಾವತಿದಾರರು ಈ ಯೋಜನೆ ಬೇಕು ಎಂದು ಕೇಳುತ್ತಿಲ್ಲ. ಅನೇಕರು ಈ ಯೋಜನೆ ಬೇಡ ಎಂದು ನಮಗೆ ಪತ್ರ ಬರೆದಿದ್ದಾರೆ. ವಿದ್ಯುತ್ ಗ್ಯಾರಂಟಿ ವಿಚಾರದಲ್ಲಿ ಬಾಡಿಗೆ ಮನೆಯವರ ಬಗ್ಗೆ ಅಧಿಕಾರಿಗಳು ಒಂದು ಆಯಾಮ ನೀಡಿದ್ದರು. ಆದರೆ ನಾವು ಆ ಬಗ್ಗೆ ಸ್ಪಷ್ಟನೆ ನೀಡಿದ್ದೇವೆ’ ಎಂದರು.
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Tourist Place: ಪ್ರವಾಸೋದ್ಯಮ ಇಲಾಖೆಯ ಪ್ರೋತ್ಸಾಹವಿಲ್ಲದೆ ಸ್ವರಗುತ್ತಿರುವ ಪ್ರವಾಸಿ ತಾಣಗಳು

Mysore ದಸರಾ ಗಜಪಡೆಯ ತೂಕ ಪರೀಕ್ಷೆ… ತೂಕ ಹೆಚ್ಚಿಸಿಕೊಂಡ ಅಭಿಮನ್ಯು, ಭೀಮ

Karnataka Politics: ಜೆಡಿಎಸ್ ಕೊನೆಯ ಹಂತ ತಲುಪಿದೆ: ದಿನೇಶ್ ಗುಂಡೂರಾವ್

Vijayapura: ಸ್ಮಾರಕ ವಿಕೃತಿಗೊಳಿಸಿದರೆ ಕಠಿಣ ಕ್ರಮ: ಜಿಲ್ಲಾಧಿಕಾರಿ ಭೂಬಾಲನ್ ಎಚ್ಚರಿಕೆ

Ramanagara: ಚುನಾವಣಾಧಿಕಾರಿಗಳ ಕಾರು ತಡೆದು ದಾಖಲೆಗಳನ್ನು ದೋಚಿದ ದುಷ್ಕರ್ಮಿಗಳು
MUST WATCH
ಹೊಸ ಸೇರ್ಪಡೆ

Goa; ಈ ಕಾರಣಕ್ಕಾಗಿ ಮಹಿಳಾ ಶಾಸಕರಿಗೆ ಸಚಿವ ಸ್ಥಾನ ನೀಡಲಾಗಿಲ್ಲ: ತಾನಾವಡೆ

Muslim ಮಹಿಳೆಯರ ಪರವಾಗಾಗಿ ಏಕೆ ನಿಲ್ಲಲಿಲ್ಲ?: ವಿಪಕ್ಷಗಳ ವಿರುದ್ಧ ಪ್ರಧಾನಿ ಕಿಡಿ

Ujjain ; ಅತ್ಯಾಚಾರಕ್ಕೊಳಗಾಗಿ ಬೀದಿಯಲ್ಲಿ ಅರೆನಗ್ನ ಸ್ಥಿತಿಯಲ್ಲಿ ನಡೆದ 12ರ ಬಾಲೆ !!

BYJU’s Lay Off: ಆತಂಕದಲ್ಲಿ ಬೈಜೂಸ್ ಉದ್ಯೋಗಿಗಳು…3,500 ನೌಕರರ ಕಡಿತಕ್ಕೆ ಸಿದ್ಧತೆ

India-Canada ಸಂಬಂಧ ಹದಗೆಡಿಸಲು ನಿಜ್ಜರ್ ಪ್ರಕರಣದಲ್ಲಿ ಪಾಕಿಸ್ಥಾನದ ISI ಸಂಚು