ಸ್ಟಾರ್‌ ಏರ್‌ನಿಂದ ಹುಬ್ಬಳ್ಳಿ-ದೆಹಲಿ ವಿಮಾನಯಾನ ಶುರು

Team Udayavani, Nov 7, 2019, 3:06 AM IST

star-air

ಹುಬ್ಬಳ್ಳಿ: ಸ್ಟಾರ್‌ ಏರ್‌ ಕಂಪನಿಯ ಹುಬ್ಬಳ್ಳಿ-ಹಿಂಡನ್‌(ದೆಹಲಿ) ನಡುವೆ ವಿಮಾನಯಾನ ಬುಧವಾರ ಆರಂಭಗೊಂಡಿತು. ಈ ವಿಮಾನ ಹುಬ್ಬಳ್ಳಿ-ಹಿಂಡನ್‌ ನಡುವೆ ವಾರದಲ್ಲಿ ಮೂರು ದಿನ ಸಂಚರಿಸಲಿದೆ.

ಸ್ಟಾರ್‌ ಏರ್‌ ಕಂಪನಿಯು ಸಂಜಯ ಘೋಡಾವತ್‌ ಸಮೂಹದ ಭಾಗವಾಗಿದ್ದು, ಸಮೂಹದ ಮುಖ್ಯಸ್ಥ ಸಂಜಯ ಘೋಡಾವತ್‌ ಬುಧವಾರ ನೂತನ ವಿಮಾನಯಾನಕ್ಕೆ ಚಾಲನೆ ನೀಡಿದರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ಹುಬ್ಬಳ್ಳಿ-ಹಿಂಡನ್‌ ವಿಮಾನ ಹುಬ್ಬಳ್ಳಿಯಿಂದ ಬುಧವಾರ, ಗುರುವಾರ ಹಾಗೂ ಶನಿವಾರ ಸಂಚರಿಸುತ್ತದೆ. ಉಡಾನ್‌ ಯೋಜನೆಯಡಿ ಈ ವಿಮಾನಯಾನ ಕೈಗೊಳ್ಳಲಾಗುತ್ತಿದ್ದು, ಹುಬ್ಬಳ್ಳಿಯಿಂದ ದೆಹಲಿಗೆ 3,999 ರೂ. ಪ್ರಯಾಣ ದರ ನಿಗದಿಪಡಿಸಲಾಗಿದೆ ಎಂದರು.

ಹುಬ್ಬಳ್ಳಿ-ಹಿಂಡನ್‌ (ದೆಹಲಿ) ವಿಮಾನ ಹುಬ್ಬಳ್ಳಿಯಿಂದ ಮಧ್ಯಾಹ್ನ 1.05ಕ್ಕೆ ಹೊರಡಲಿದ್ದು, 2 ತಾಸು 40 ನಿಮಿಷಗಳ ಅವಧಿಯಲ್ಲಿ ದೆಹಲಿಯನ್ನು ತಲುಪಲಿದೆ. ಸದ್ಯ ವಾರದಲ್ಲಿ ಮೂರು ದಿನ ಸಂಚರಿಸುವ ಈ ವಿಮಾನ ಮುಂದಿನ 2-3 ತಿಂಗಳಲ್ಲಿ ವಾರದ ಏಳು ದಿನಗಳಲ್ಲೂ ಸಂಚರಿಸಲಿದೆ. ಮುಂದಿನ ದಿನಗಳಲ್ಲಿ ಹುಬ್ಬಳ್ಳಿಯಿಂದ ಬೆಂಗಳೂರು, ತಿರುಪತಿ, ಮುಂಬೈ ಇನ್ನಿತರ ಕಡೆ ಸಂಚಾರ ಕೈಗೊಳ್ಳಲಾಗುತ್ತಿದೆ. ವಿಮಾನಗಳಲ್ಲಿ ಸದ್ಯಕ್ಕೆ ಶೇ.75ರಷ್ಟು ಸೀಟುಗಳು ಭರ್ತಿಯಾಗುತ್ತಿವೆ ಎಂದರು.

ಶೀಘ್ರ ಅಂತಾರಾಷ್ಟ್ರೀಯ ಸೇವೆ: ಸ್ಟಾರ್‌ಏರ್‌ ಕಂಪನಿ ಸದ್ಯ 50 ಆಸನಗಳ ಅತ್ಯಾಧುನಿಕ ಎರಡು ವಿಮಾನಗ ಳನ್ನು ಹೊಂದಿದೆ. 2020ರ ಜನವರಿಯೊಳಗೆ ಇನ್ನೂ 3 ಹೊಸ ವಿಮಾನ ಖರೀದಿಸಲಾಗುತ್ತಿದ್ದು, ಇನ್ನಷ್ಟು ಸ್ಥಳಗಳಿಗೆ ವಿಮಾನ ಸಂಚಾರ ಕೈಗೊಳ್ಳಲಾಗುವುದು. ಕಂಪನಿ ವಿಮಾನಗಳು ಗಂಟೆಗೆ 800 ಕಿ.ಮೀ. ಕ್ರಮಿ ಸುವ ಸಾಮರ್ಥ್ಯ ಹೊಂದಿವೆ. ಇತರೆ ಯಾವುದೇ ಏರ್‌ಬೋಯಿಂಗ್‌ ವಿಮಾನಗಳು ಈ ಸಾಮರ್ಥ್ಯ ಹೊಂದಿಲ್ಲ. ಮುಂದಿನ ದಿನಗಳಲ್ಲಿ 160 ಆಸನಗಳ ಏರ್‌ಕ್ರಾಫ್ಟ್ ಖರೀದಿ ಹಾಗೂ ಅಂತಾರಾಷ್ಟ್ರೀಯ ವಿಮಾನಯಾನ ಸೇವೆ ಆರಂಭಿಸುವ ಚಿಂತನೆಯಿದೆ.

ಈ ಸೇವೆ ಆರಂಭಿಸಬೇಕಾದರೆ ಕಂಪನಿ 20 ವಿಮಾನಗಳನ್ನು ಹೊಂದಿರಬೇಕು ಎಂಬ ನಿಯಮವಿದೆ. ಮುಂದಿನ ಎರಡು ವರ್ಷಗಳಲ್ಲಿ ಅದನ್ನು ಕೈಗೊಳ್ಳಲಾಗುವುದು ಎಂದರು. ಇದೇ ಸಂದರ್ಭದಲ್ಲಿ ಹುಬ್ಬಳ್ಳಿಯಿಂದ ಹಿಂಡನ್‌(ದೆಹಲಿ)ವಿಮಾನಕ್ಕೆ ದೆಹಲಿಗೆ ತೆರಳಲು ಟಿಕೆಟ್‌ ಕಾಯ್ದಿ ರಿಸಿದ ಮೊದಲ ಗ್ರಾಹಕರಾದ ಹುಬ್ಬಳ್ಳಿಯ ವಿಜಯ ಕುಮಾರ ಡೊಳ್ಳಿ ಹಾಗೂ ವಿಜಯಪುರ ಜಿಲ್ಲೆ ಇಂಡಿಯ ಅನಂತ ಜೈನ್‌ರನ್ನು ಸಂಜಯ ಘೋಡಾವತ್‌ ಅಭಿನಂದಿಸಿದರು. ಸ್ಟಾರ್‌ ಏರ್‌ ಕಂಪನಿ ಅಧಿಕಾರಿಗಳು ಇದ್ದರು.

ಬೆಂಗಳೂರು-ಕಲಬುರಗಿ ಸಂಚಾರಕ್ಕೆ ಮೋದಿ ಚಾಲನೆ: ಇನ್ನು 15 ದಿನಗಳಲ್ಲಿ ಬೆಂಗಳೂರು -ಕಲಬುರಗಿ ಹಾಗೂ ಕಲಬುರಗಿ-ತಿರುಪತಿ ವಿಮಾನಯಾನಕ್ಕೆ ಚಾಲನೆ ನೀಡಲಾಗುವುದು. ಈ ವಿಮಾನಯಾ ವನ್ನು ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಲಿದ್ದಾರೆ. ಮುಂದಿನ ದಿನಗಳಲ್ಲಿ ಬೆಳಗಾವಿ-ಇಂದೋರ್‌ ವಿಮಾನ ಆರಂಭಿಸಲಾಗುತ್ತಿದ್ದು, ಸ್ಲಾಟ್‌ ದೊರೆತರೆ ಹುಬ್ಬಳ್ಳಿ-ಪುಣೆ ನಡುವೆಯೂ ವಿಮಾನಯಾನ ಆರಂಭಿಸಲಾಗುವುದು ಎಂದು ಸಂಜಯ ಘೋಡಾವತ್‌ ತಿಳಿಸಿದರು.

ಟಾಪ್ ನ್ಯೂಸ್

1fwerewr

ಬಾಗಲಕೋಟೆ :ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ ಭಾರಿ ಸ್ಪೋಟಕ ವಶ

ಲಾಭಾಂಶಕ್ಕೆ ಮುಗಿಬಿದ್ದ ಹೂಡಿಕೆದಾರರು: ಮುಂಬಯಿ ಷೇರುಪೇಟೆ ಸೆನ್ಸೆಕ್ಸ್ 630 ಅಂಕ ಕುಸಿತ

ಲಾಭಾಂಶಕ್ಕೆ ಮುಗಿಬಿದ್ದ ಹೂಡಿಕೆದಾರರು: ಮುಂಬಯಿ ಷೇರುಪೇಟೆ ಸೆನ್ಸೆಕ್ಸ್ 630 ಅಂಕ ಕುಸಿತ

Kane Williamson

ಐಸಿಸಿ ವರ್ಷದ ಟೆಸ್ಟ್ ತಂಡ ಪ್ರಕಟ: 3 ಭಾರತೀಯರಿಗೆ ಸ್ಥಾನ, ವಿರಾಟ್ ಗೆ ಜಾಗವಿಲ್ಲ

BJP FLAG

ಗೋವಾ: ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ; ಪರ್ರಿಕರ್ ಪುತ್ರನಿಗಿಲ್ಲ ಟಿಕೆಟ್

bomb

ಲಾಹೋರ್ : ಬಾಂಬ್ ಸ್ಫೋಟದಲ್ಲಿ ಇಬ್ಬರ ಸಾವು, 23 ಮಂದಿಗೆ ಗಾಯ

Minister Sunil kumar

ಟಿಪ್ಪು ಆದರ್ಶ ಪ್ರತಿಪಾದಕರಿಂದ ನಾರಾಯಣ ಗುರುಗಳಿಗೆ ಅವಮಾನ: ಸಿದ್ದು ವಿರುದ್ಧ ಸುನಿಲ್ ಆಕ್ರೋಶ

cm-bomm

ನೈಟ್ ಕರ್ಫ್ಯೂ ಸಡಿಲಿಕೆ : ಇಕ್ಕಟ್ಟಿನಲ್ಲಿ ಸಿಎಂ,ಬೆಂಬಲಕ್ಕೆ ಅಶೋಕ್ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1fwerewr

ಬಾಗಲಕೋಟೆ :ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ ಭಾರಿ ಸ್ಪೋಟಕ ವಶ

ಎರಡನೇ ಡೋಸ್‌ ಲಸಿಕೆ ರಾಜ್ಯದಲ್ಲೇ ಚಿಕ್ಕಬಳ್ಳಾಪುರ ಜಿಲ್ಲೆಗೆ 2ನೇ ಸ್ಥಾನ

ಎರಡನೇ ಡೋಸ್‌ ಲಸಿಕೆ ರಾಜ್ಯದಲ್ಲೇ ಚಿಕ್ಕಬಳ್ಳಾಪುರ ಜಿಲ್ಲೆಗೆ 2ನೇ ಸ್ಥಾನ

3 ಸಾವಿರಕ್ಕೂ ಅಧಿಕ ಮಂದಿಗೆ ಮನೆಯಲ್ಲೇ ಚಿಕಿತ್ಸೆ : ‌ ಮನೆಗಳಿಗೆ ಔಷಧಿ ವಿತರಿಸಲು ಸೂಚನೆ

3 ಸಾವಿರಕ್ಕೂ ಅಧಿಕ ಮಂದಿಗೆ ಮನೆಯಲ್ಲೇ ಚಿಕಿತ್ಸೆ : ‌ ಮನೆಗಳಿಗೆ ಔಷಧಿ ವಿತರಿಸಲು ಸೂಚನೆ

ಹೊಲದಲ್ಲೇ ಬೆಲೆ ಸಿಗುವಾಗ, ಖರೀದಿ ಕೇಂದ್ರ ಏಕೆ ?

ಹೊಲದಲ್ಲೇ ಬೆಲೆ ಸಿಗುವಾಗ, ಖರೀದಿ ಕೇಂದ್ರ ಏಕೆ ?

Minister Sunil kumar

ಟಿಪ್ಪು ಆದರ್ಶ ಪ್ರತಿಪಾದಕರಿಂದ ನಾರಾಯಣ ಗುರುಗಳಿಗೆ ಅವಮಾನ: ಸಿದ್ದು ವಿರುದ್ಧ ಸುನಿಲ್ ಆಕ್ರೋಶ

MUST WATCH

udayavani youtube

ಚಿಂಚೋಳಿ ಜನರ ನಿದ್ದೆಗೆಡಿಸಿದ ಕಳ್ಳರು : ಮತ್ತೆ ಎರಡು ಅಂಗಡಿಗೆ ನುಗ್ಗಿ ಕಳ್ಳತನ

udayavani youtube

ನಲಪಾಡ್ ಹಲ್ಲೆ ವಿಚಾರ, ಸಿದ್ದು ಹಳ್ಳೇಗೌಡ ಹೇಳಿದ್ದೇನು ?

udayavani youtube

24 ಅಡಿ ಎತ್ತರದ ಸೈಕಲ್ ತಯಾರಿಸಿ ರೈಡ್ ಮಾಡಿದ ವ್ಯಕ್ತಿ

udayavani youtube

ನೆಲಕಡಲೆಯ ಕೃಷಿಯಲ್ಲಿ ಯಶಸ್ವಿ ಕಂಡ ರೈತ

udayavani youtube

ಕರ್ಫ್ಯೂ ತೆಗೆಯಿರಿ : ತಮ್ಮ ಸರಕಾರದ ವಿರುದ್ಧವೇ ಗರ್ಜಿಸಿದ ಸಿಂಹ

ಹೊಸ ಸೇರ್ಪಡೆ

1fwerewr

ಬಾಗಲಕೋಟೆ :ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ ಭಾರಿ ಸ್ಪೋಟಕ ವಶ

ಲಾಭಾಂಶಕ್ಕೆ ಮುಗಿಬಿದ್ದ ಹೂಡಿಕೆದಾರರು: ಮುಂಬಯಿ ಷೇರುಪೇಟೆ ಸೆನ್ಸೆಕ್ಸ್ 630 ಅಂಕ ಕುಸಿತ

ಲಾಭಾಂಶಕ್ಕೆ ಮುಗಿಬಿದ್ದ ಹೂಡಿಕೆದಾರರು: ಮುಂಬಯಿ ಷೇರುಪೇಟೆ ಸೆನ್ಸೆಕ್ಸ್ 630 ಅಂಕ ಕುಸಿತ

chitradurga news

ಕೋಟೆ ನಾಡಲ್ಲಿ 1427 ಸೋಂಕಿತರಿಗೆ ಮನೆ ಮದ್ದು

chikkamagalore news

ಎಮ್ಮೆದೊಡ್ಡಿ ಗೋಶಾಲೆ ಶೀಘ್ರ ಆರಂಭ

ಎರಡನೇ ಡೋಸ್‌ ಲಸಿಕೆ ರಾಜ್ಯದಲ್ಲೇ ಚಿಕ್ಕಬಳ್ಳಾಪುರ ಜಿಲ್ಲೆಗೆ 2ನೇ ಸ್ಥಾನ

ಎರಡನೇ ಡೋಸ್‌ ಲಸಿಕೆ ರಾಜ್ಯದಲ್ಲೇ ಚಿಕ್ಕಬಳ್ಳಾಪುರ ಜಿಲ್ಲೆಗೆ 2ನೇ ಸ್ಥಾನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.