ರಾಜೀನಾಮೆ ಅಗತ್ಯವಿಲ್ಲ; ಸಿಎಂ, ನೋಟಿಸ್ ಪಡೆದಿಲ್ಲ; ಡಿಕೆಶಿ

Team Udayavani, Jun 21, 2018, 2:48 PM IST

ಬೆಂಗಳೂರು: ಪ್ರಭಾವಿ ಸಚಿವ, ಕಾಂಗ್ರೆಸ್ ಮುಖಂಡ ಡಿಕೆ ಶಿವಕುಮಾರ್ ವಿರುದ್ಧ ಆದಾಯ ತೆರಿಗೆ ಇಲಾಖೆಯು ಆರ್ಥಿಕ ಅಪರಾಧಗಳ ನ್ಯಾಯಾಲಯಕ್ಕೆ ಸಲ್ಲಿಸಿರುವ ದೂರು ಹಾಗೂ ವಿಚಾರಣೆಗೆ ಖದ್ದು ಹಾಜರಾಗುವಂತೆ ನ್ಯಾಯಾಲಯವೇ ಸಚಿವರಿಗೆ ನೋಟಿಸ್ ನೀಡಿದೆ. ಮತ್ತೊಂದೆಡೆ ನಾನು ಯಾವುದೇ ನೋಟಿಸ್ ಪಡೆದಿಲ್ಲ ಎಂದು ಡಿಕೆಶಿ ಪ್ರತಿಕ್ರಿಯೆ ನೀಡಿದ್ದಾರೆ.

ಗುರುವಾರ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಹೈಕಮಾಂಡ್ ಗೆ ಯಾವುದೇ ಹಣ ಕೊಟ್ಟಿಲ್ಲ. ಆದಾಯ ತೆರಿಗೆ ಇಲಾಖೆಯವರು ದಾಖಲಿಸಿರುವ ದೂರಿನಲ್ಲಿ ಏನಿದೆ ಅಂತ ಗೊತ್ತಿಲ್ಲ ಎಂದರು.

ನನಗೆ ನೋಟಿಸ್ ಸಿಗಲಿ, ಅದನ್ನು ನನ್ನ ವಕೀಲರು ಪರಿಶೀಲಿಸುತ್ತಾರೆ, ನಂತರ ನಾನು ಆ ಬಗ್ಗೆ ಪ್ರತಿಕ್ರಿಯೆ ನೀಡುತ್ತೇನೆ ಎಂದು ಹೇಳಿದರು. ಕಾಲ, ಮುಹೂರ್ತ ಎಲ್ಲಾ ಬರಲಿ ನಾನೂ ಹೇಳುತ್ತೇನೆ ಎಂದು ಮಾರ್ಮಿಕವಾಗಿ ನುಡಿದರು.

ರಾಜೀನಾಮೆ ಅಗತ್ಯವಿಲ್ಲ; ಸಿಎಂ ಎಚ್ ಡಿಕೆ

ಆದಾಯ ತೆರಿಗೆ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿರುವ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಸಚಿವ ಡಿಕೆಶಿ ಅವರು ರಾಜೀನಾಮೆ ಕೊಡುವ ಅಗತ್ಯವಿಲ್ಲ ಎಂದು ಬ್ಯಾಟಿಂಗ್ ಬೀಸಿದ್ದು, ಡಿಕೆಶಿ ವಿರುದ್ಧ ದ್ವೇಷದ ರಾಜಕಾರಣ ಮಾಡಲಾಗುತ್ತಿದೆ ಎಂದು ಆರೋಪಿಸಿದರು.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ