ಕಿಮ್ಮತ್ತಿಲ್ಲದ್ದಕ್ಕೆ ಹೊರ ಬಂದೆ: ಪ್ರತಾಪ್‌ಗೌಡ

Team Udayavani, Nov 18, 2019, 3:00 AM IST

ರಾಯಚೂರು: ಕಾಂಗ್ರೆಸ್‌ನಲ್ಲಿ ಹಿರಿಯ ನಾಯಕರಿಗೆ ಯಾವುದೇ ಬೆಲೆ ಇಲ್ಲ. ಅಲ್ಲಿನ ಉಸಿರುಗಟ್ಟುವ ವಾತಾವರಣಕ್ಕೆ ಬೇಸತ್ತು ರಾಜೀನಾಮೆ ನೀಡಿದ್ದೇನೆಂದು ಮಸ್ಕಿ ಕ್ಷೇತ್ರದ ಅನರ್ಹ ಶಾಸಕ ಪ್ರತಾಪ ಗೌಡ ಪಾಟೀಲ ಹೇಳಿದರು.

ಬಿಜೆಪಿ ಜಿಲ್ಲಾ ಕಚೇರಿಗೆ ಭೇಟಿ ನೀಡಿ ಸುದ್ದಿಗಾರರೊಂದಿಗೆ ಮಾತನಾಡಿ, ಮೂರು ಬಾರಿ ಗೆದ್ದರೂ ಪಕ್ಷ ನಮ್ಮ ಹಿರಿತನ ಗುರುತಿಸಲಿಲ್ಲ. ಹಿಂದಿನ ಸರ್ಕಾರದಲ್ಲೂ ಜಿಲ್ಲೆಯಲ್ಲಿ ನಾಲ್ವರು ಕಾಂಗ್ರೆಸ್‌ ಶಾಸಕರಿದ್ದರೂ ಸಚಿವ ಸ್ಥಾನ ನೀಡಲಿಲ್ಲ. ಅಲ್ಲದೇ, ಪಕ್ಷದೊಳಗಿನ ಗುಂಪುಗಾರಿಕೆಯಿಂದ ಬೇಸತ್ತು ಪಕ್ಷ ತೊರೆಯಬೇಕಾಯಿತು ಎಂದರು.

ಮಸ್ಕಿ ಕ್ಷೇತ್ರದ ಪರಾಜಿತ ಅಭ್ಯರ್ಥಿ ಬಸನಗೌಡ ತುರ್ವಿಹಾಳ ನನ್ನ ವಿರುದ್ಧ ನ್ಯಾಯಾಲಯದಲ್ಲಿ ಸಲ್ಲಿಸಿದ ಅರ್ಜಿಯನ್ನು ಹಿಂತೆಗೆದುಕೊಳ್ಳುವಂತೆ ಪಕ್ಷದ ಮುಖಂಡರು ಒತ್ತಡ ಹೇರಿದ್ದಾರೆ. ಅಲ್ಲದೇ, ಅವರು ಕೂಡ 213 ಅಂತರಗಳಲ್ಲಿ ಸೋತ ಕಾರಣ ಬೇಸರದಲ್ಲಿದ್ದಾರೆ. ಅದಕ್ಕಾಗಿ ಅವರಿಗೆ ಕಾಡಾ ನಿಗಮ ನೀಡಿ ಪಕ್ಷದಿಂದ ನ್ಯಾಯ ಒದಗಿಸಲಾ ಗಿದೆ. ಮಸ್ಕಿಯಲ್ಲಿ ನಾನೇ ಸ್ಪ ರ್ಧಿಸುತ್ತಿದ್ದು, ಗೆಲ್ಲುವ ಸಂಪೂರ್ಣ ವಿಶ್ವಾಸವಿದೆ ಎಂದರು.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ