ವಿಶ್ವನಾಥ್ ಬಗ್ಗೆ ಮಾತಾಡಿದ್ರೆ ನನ್ನ ನಾಲಿಗೆಯೇ ಹೊಲಸಾಗುತ್ತದೆ: ರೇಣುಕಾಚಾರ್ಯ ತಿರುಗೇಟು
Team Udayavani, Jun 18, 2021, 12:39 PM IST
ಬೆಂಗಳೂರು: ರಾಜ್ಯದ ಬಿಜೆಪಿ ನಾಯಕರಾದ ಎಚ್ ವಿಶ್ವನಾಥ್ ಮತ್ತು ಎಂಪಿ ರೇಣುಕಾಚಾರ್ಯ ನಡುವಿನ ಆರೋಪ- ಪ್ರತ್ಯಾರೋಪಗಳು ಮುಂದುವರಿದಿದೆ. “ನಾನು ಪ್ಯೂರ್ ಬಿಜೆಪಿ, ರೇಣುಕಾಚಾರ್ಯ ಮಿಕ್ಸ್ ಬಿಜೆಪಿ” ಎಂಬ ಹೆಚ್ ವಿಶ್ವನಾಥ್ ಹೇಳಿಕೆ ವಿಚಾರಕ್ಕೆ ಸಿಎಂ ರಾಜಕೀಯ ಕಾರ್ಯದರ್ಶಿ ಎಂಪಿ ರೇಣುಕಾಚಾರ್ಯ ತಿರುಗೇಟು ನೀಡಿದ್ದಾರೆ.
ವಿಶ್ವನಾಥ್ ಅವರ ಆಡಿಯೋ, ವೀಡಿಯೋ ನನ್ನ ಬಳಿ ಇದೆ. ಅವರಿಗೆ ನಾಲಿಗೆ ಸಂಸ್ಕೃತಿ ಎಷ್ಟಿದೆ ಎಂದು ಗೊತ್ತಿದೆ. ಅವರು ವಯಸ್ಸಿನಲ್ಲಿ ಹಿರಿಯರು. ಆದರೂ ಅವರ ಬಾಯಲ್ಲಿ ಬರುವ ಆ ರೀತಿಯ ಶಬ್ದ ಮಾತ್ರ ಅಸಂಬದ್ಧ. ಅವರ ಆಡಿಯೋ ವೀಡಿಯೋ ಕೇಳಿದರೆ ಎಷ್ಟು ಅಸಂಬದ್ಧ ಎಂದು ಗೊತ್ತಾಗುತ್ತದೆ. ಅವರ ಬಗ್ಗೆ ಮಾತಾಡಿರದೆ ನನ್ನ ನಾಲಿಗೆಯೇ ಹೊಲಸಾಗುತ್ತದೆ ಎಂದು ರೇಣುಕಾಚಾರ್ಯ ತಿರುಗೇಟು ನೀಡಿದರು.
ಇದನ್ನೂ ಓದಿ:ಬಹುಪರಾಕ್ ಹಾಕುವ ಮನುಷ್ಯ ನಾನಲ್ಲ: ಸ್ವಪಕ್ಷದವರ ವಿರುದ್ಧ ಮತ್ತೆ ಹಳ್ಳಿಹಕ್ಕಿ ಗುಟುರು
ವಿಶ್ವನಾಥ್ ನಿನ್ನೆ ಮುಖ್ಯಮಂತ್ರಿ ಗಳ ವಿರುದ್ದವಾಗಿ ಮಾತಾಡಿರು, ಅದಕ್ಕೆ ಹಗುರವಾಗಿ ಮಾತಾಡಬೇಡಿ ಎಂದು ನಾವು ಹೇಳಿದ್ದೆವು ಎಂದರು.
ವಿಜಯೇಂದ್ರ ಮೇಲೆ ಕಿಕ್ ಬ್ಯಾಕ್ ಆರೋಪ ವಿಚಾರವಾಗಿ ಮಾತನಾಡಿದ ಅವರು, ಟೆಂಡರ್ ಪಾರದರ್ಶಕವಾಗಿದೆ. ಎಲ್ಲಾ ವಿವರವೂ ವೆಬ್ ಸೈಟ್ ನಲ್ಲಿ ಸಿಗುತ್ತದೆ. ಅವರು ಹತಾಶೆಯಿಂದ ಈ ರೀತಿ ಹೇಳಿಕೆ ನೀಡುತ್ತಿದ್ದಾರೆ ಎಂದು ಹೇಳಿದರು.
ನರ್ಸ್ ಜಯಲಕ್ಷ್ಮಿ ಕಥೆ ಬಗ್ಗೆ ಗೊತ್ತಾ ಎಂಬ ವಿಶ್ವನಾಥ್ ಹೇಳಿಕೆ ವಿಚಾರದ ಬಗ್ಗೆ ಕೇಳಿದ ಪ್ರಶ್ನೆಗೆ ರೇಣುಕಾಚಾರ್ಯ ಮಾಧ್ಯಮ ಪ್ರತಿನಿಧಿಗಳ ಮೇಲೆ ಗರಂ ಆದರು. ಅದು ವೈಯಕ್ತಿಕ ವಿಷಯ, ಆ ಬಗ್ಗೆ ಮಾತನಾಡಬೇಡಿ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಬಾಲ ಯಕ್ಷಗಾನ ಕಲಾವಿದೆ ತುಳಸಿ ಹೆಗಡೆಗೆ ಬಾಲ ಗೌರವ ಪ್ರಶಸ್ತಿ
ಬಿಜೆಪಿ ರಾಜ್ಯದಲ್ಲಿ ಉದ್ಯೋಗ ಸೃಷ್ಟಿಸುವ ಬದಲು ನಿರುದ್ಯೋಗ ಸೃಷ್ಟಿಸಿದೆ: ಸಿದ್ದು ಟೀಕೆ
ದಾವಣಗೆರೆ: ಯುಗಾದಿಗೆ ಅತ್ತೆ ಮನೆಗೆ ಬಂದು ನಾಪತ್ತೆಯಾಗಿದ್ದ ಅಳಿಯನ ಭೀಕರ ಹತ್ಯೆ
ದನದ ಕುತ್ತಿಗೆ ಕಡಿದು ತುಂಗಾ ನದಿಗೆ ಎಸೆದು ವಿಕೃತಿ ಮೆರೆದ ದುಷ್ಕರ್ಮಿಗಳು !
ವೇತನ ಹೆಚ್ಚಳ ಬೇಡಿಕೆ; ಮಾರ್ಚ್ 24ರ ಸಾರಿಗೆ ನೌಕರರ ಮುಷ್ಕರಕ್ಕೆ ಹೈಕೋರ್ಟ್ ತಡೆ
MUST WATCH
ಹೊಸ ಸೇರ್ಪಡೆ
ಬಾಲ ಯಕ್ಷಗಾನ ಕಲಾವಿದೆ ತುಳಸಿ ಹೆಗಡೆಗೆ ಬಾಲ ಗೌರವ ಪ್ರಶಸ್ತಿ
ಬಿಜೆಪಿ ರಾಜ್ಯದಲ್ಲಿ ಉದ್ಯೋಗ ಸೃಷ್ಟಿಸುವ ಬದಲು ನಿರುದ್ಯೋಗ ಸೃಷ್ಟಿಸಿದೆ: ಸಿದ್ದು ಟೀಕೆ
ಎ. 2 ರಂದು ಸಿತಾರ್-ಬಾನ್ಸುರಿ ಜುಗಲ್ ಬಂದಿ “ಬಸಂತ್ ಉತ್ಸವ್’
ಹೊಸ ವರ್ಷದ ಆರಂಭದಲ್ಲಿ ಸ್ವಚ್ಛ ಭಾರತ ಸಂಕಲ್ಪ ಮಾಡಿ: ಗೋವಾ ಸಿಎಂ ಡಾ.ಪ್ರಮೋದ್ ಸಾವಂತ್ ಕರೆ
ದಾವಣಗೆರೆ: ಯುಗಾದಿಗೆ ಅತ್ತೆ ಮನೆಗೆ ಬಂದು ನಾಪತ್ತೆಯಾಗಿದ್ದ ಅಳಿಯನ ಭೀಕರ ಹತ್ಯೆ