ಶಿವಮೊಗ್ಗ: ಜಿ.ಪಂ ಚುನಾವಣೆ ಒಳಗೆ ‘ಒಂದು ದೃಢ ನಿರ್ಧಾರ’ ಮಾಡುತ್ತೇನೆ: ಮಧು ಬಂಗಾರಪ್ಪ
Team Udayavani, Mar 2, 2021, 1:34 PM IST
ಶಿವಮೊಗ್ಗ: ಕಳೆದ ಒಂದೂವರೆ ವರ್ಷದಿಂದ ರಾಜಕೀಯ ಚಟುವಟಿಕೆಯಿಂದ ದೂರ ಉಳಿದಿದ್ದೆ. ಇವತ್ತು ನನ್ನ ಜನ್ಮದಿನ. ಇಂದಿನಿಂದ ಕೆಲ ಬದಲಾವಣೆಗಳನ್ನು ಮಾಡುವ ನಿರ್ಧಾರ ಮಾಡಿದ್ದೇನೆ. ಬದಲಾವಣೆ ಅನಿವಾರ್ಯವಾಗಿದ್ದು, ಈ ಸಂಬಂಧ ಚರ್ಚೆ ಮಾಡುತ್ತಿದ್ದೇನೆ. ಜಿಲ್ಲಾ ಪಂಚಾಯತ್ ಚುನಾವಣೆ ಒಳಗೆ ಒಂದು ದೃಢ ನಿರ್ಧಾರ ಮಾಡುತ್ತೇನೆ ಎಂದು ಜೆಡಿಎಸ್ ಯುವ ಮುಖಂಡ ಹಾಗೂ ಮಾಜಿ ಶಾಸಕ ಮಧು ಬಂಗಾರಪ್ಪ ಹೇಳಿಕೆ ನೀಡಿದ್ದಾರೆ.
ಶಿವಮೊಗ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಕುಮಾರಣ್ಣನ ಜೊತೆ ನಾನು ತುಂಬಾ ಚೆನ್ನಾಗಿದ್ದೇನೆ. ಬೇಗ ನಿರ್ಧಾರ ಮಾಡೋದು ಕಷ್ಟ. ಆದರೆ, ಪಕ್ಷದ ಕೆಲವು ವಿಚಾರಗಳನ್ನು ಗಮನಿಸಿದಾಗ ಬದಲಾವಣೆ ಅನಿವಾರ್ಯ ಎನ್ನಿಸುತ್ತಿದೆ ಎಂದರು.
ಇದನ್ನೂ ಓದಿ:ಕಾರ್ಮಿಕರ ಜೊತೆ ಚಹಾ ಎಲೆ ಬಿಡಿಸಿದ ಪ್ರಿಯಾಂಕಾ : ವಿಡಿಯೋ ನೋಡಿ!
ನನಗೆ ಆಂತರಿಕ ಗೊಂದಲ, ವೈಯಕ್ತಿಕ ವಿಚಾರ ಯಾವುದೂ ಇಲ್ಲ. ಆದರೆ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರನ್ನು ನಡೆಸಿಕೊಂಡ ಬಗ್ಗೆ ನೋವಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಕೋವಿಡ್ ನೆಪ ಹೇಳಿ ಎಸ್ಎಸ್ಎಲ್ ಸಿ ಪರೀಕ್ಷೆ ರದ್ಧು ಮಾಡುವ ಪ್ರಯತ್ನ ಬೇಡ: ಬಸವರಾಜ ಹೊರಟ್ಟಿ
ಮದುವೆ ಸಮಾರಂಭಗಳಲ್ಲಿ ನೂರು ಜನ ಮೀರಬಾರದು: ಸಚಿವ ಸುಧಾಕರ್
ಸಿಎಂ ಯಡಿಯೂರಪ್ಪಗೆ ಕೋವಿಡ್ ಪಾಸಿಟಿವ್: ಮಣಿಪಾಲ್ ಆಸ್ಪತ್ರೆಗೆ ಶಿಫ್ಟ್
ಈ ವಾರ ಬಿಗ್ ಬಾಸ್ ಕಾರ್ಯಕ್ರಮಕ್ಕೆ ಹಾಜರಾಗುತ್ತಿಲ್ಲ ಸುದೀಪ್ : ಕಿಚ್ಚ ಸ್ಪಷ್ಟನೆ
ಸಿಎಂ ಬಿಎಸ್ ವೈ ಆರೋಗ್ಯದಲ್ಲಿ ಮತ್ತೆ ಏರುಪೇರು! ಆಸ್ಪತ್ರೆಗೆ ದಾಖಲು