ಬಿಜೆಪಿಯವರ ಜಾತಕ ತೆಗೆದರೆ ಗೂಂಡಾ ಯಾರೆಂದು ತಿಳಿಯುತ್ತೆ


Team Udayavani, Dec 5, 2017, 8:53 AM IST

05-12.jpg

ಬೆಂಗಳೂರು: ಬಿಜೆಪಿ ನಾಯಕರ ಬಯೋ ಡೆಟಾ ತೆಗೆದರೆ ದೇಶದಲ್ಲಿ ಯಾರು ಗೂಂಡಾ ಗಳು ಎಂಬುದು ಗೊತ್ತಾಗುತ್ತದೆ ಎಂದು ಗೃಹ ಸಚಿವ ರಾಮಲಿಂಗಾರೆಡ್ಡಿ ಕಿಡಿಕಾರಿದ್ದಾರೆ.

ಕೆಪಿಸಿಸಿ ಕಚೇರಿಯಲ್ಲಿ ಸೋಮವಾರ ಪತ್ರಿಕಾಗೋಷ್ಠಿ ನಡೆಸಿ ಮಾತ ನಾಡಿದ ಅವರು, ವಿಧಾನಸಭೆ ಚುನಾವಣೆ ದೃಷ್ಠಿಯಲ್ಲಿಟ್ಟುಕೊಂಡು ಸಮಾಜದ ಶಾಂತಿ ಕದಡುವ ಕೆಲಸ ಮಾಡಲು ಬಿಜೆಪಿ ಮುಂದಾಗಿದೆ ಎಂದು ಆರೋಪಿಸಿದರು. 

ಸಿಂಹ ವಿರುದ್ಧ ವಾಗ್ಧಾಳಿ: ದಿನೇಶ್‌ ಗುಂಡೂ ರಾವ್‌ ಅವರನ್ನು ಗೂಂಡಾ ಎಂದಿರುವ ಸಂಸದ ಪ್ರತಾಪ್‌ ಸಿಂಹ ವಿರುದ್ಧ ವಾಗ್ಧಾಳಿ ನಡೆಸಿದ ಅವರು, ಬಿಜೆಪಿ ರಾಷ್ಟ್ರೀಯ  ಅಧ್ಯಕ್ಷರು ಜೈಲಿಗೇಕೆ ಹೋಗಿ ದ್ದರು? ಗುಜರಾತ್‌ನಲ್ಲಿ ಗೋಧ್ರಾ ಹತ್ಯಾಕಾಂಡ ನಡೆಸಿ 2 ಸಾವಿರ ಜನರ ಹತ್ಯೆ ನಡೆಸಿದಾಗ ಯಾರು ಮುಖ್ಯಮಂತ್ರಿಯಾಗಿದ್ದರು ಎಂದು ಪ್ರಶ್ನಿಸಿದರು. ಮೈಸೂರಿನಲ್ಲಿ ಹನುಮ ಜಯಂತಿ ಆಚರಣೆಗೆ ಪೊಲೀಸ್‌ ಇಲಾಖೆ ಅವಕಾಶ ನೀಡಿದ ರಸ್ತೆಯಲ್ಲಿ ತೆರಳದೇ ಅನಗತ್ಯವಾಗಿ ಗೊಂದಲ ಸೃಷ್ಠಿಸಲು ನಿಷೇಧಿತ ಮಾರ್ಗದಲ್ಲಿಯೇ ತೆರಳಿ, ಪೊಲೀಸರ ಮೇಲೆಯೇ ವಾಹನ ನುಗ್ಗಿಸಲು ಹೋಗಿದ್ದನ್ನು ನೋಡಿಕೊಂಡು ಪೊಲಿಸರು ಸುಮ್ಮನಿರಬೇಕೆ? ಯಡಿಯೂರಪ್ಪ ಅವರು ಪ್ರತಾಪ ಸಿಂಹರನ್ನು ಸಮರ್ಥಿಸಿ ಕೊಳ್ಳುತ್ತಿದ್ದಾರೆ. ಇಂತವರ ಕೈಗೆ ರಾಜ್ಯ ಕೊಟ್ಟರೆ ರಾಜ್ಯದ ಪರಿಸ್ಥಿತಿ ಏನಾಗಬೇಕು ಎಂದು ಪ್ರಶ್ನಿಸಿದರು. 

ಯಾತ್ರೆ ದೇವರ ಮೇಲಿನ ಭಕ್ತಿಯಲ್ಲ: ಬಿಜೆಪಿಯವರು ಹನುಮ ಜಯಂತಿ, ದತ್ತ ಜಯಂತಿ ಆಚರಣೆ ಹೆಸರಿನಲ್ಲಿ ಗಲಾಟೆ ಸೃಷ್ಠಿಸಲು ಮುಂದಾಗಿದ್ದಾರೆ. ದೇವರ ಮೇಲಿನ ಭಕ್ತಿಗೆ ಅವರು ಯಾತ್ರೆ ಮಾಡುವುದಿಲ್ಲ. ಜನರಲ್ಲಿ ಧಾರ್ಮಿಕ ಭಾವನೆ ಕೆರಳಿಸಲು ಈ ರೀತಿ ಮಾಡುತ್ತಾರೆ ಎಂದು ಹೇಳಿದರು. ಪ್ರತಾಪ್‌ ಸಿಂಹ ಬೆಂಬಲಿಗರು ಸಾಮಾಜಿಕ ಜಾಲ ತಾಣದಲ್ಲಿ ಕಿತ್ತೂರು ರಾಣಿ ಚೆನ್ನಮ್ಮ ಹಾಗೂ ಒನಕೆ ಓಬ್ಬವ ಬಗ್ಗೆ ಅವಹೇಳನಕಾರಿಯಾಗಿ ಹೇಳಿಕೆ ಹಾಕಿದ್ದು ಅವರ ವಿಕೃತ ಮನಸ್ಥಿತಿಯನ್ನು ತೋರಿಸುತ್ತದೆ ಎಂದು ಹೇಳಿದರು.

ನಮ್ಮ ತಂದೆ ಹಾಗೂ ನನ್ನ ಬಗ್ಗೆ ಅವಹೇಳಕಾರಿಯಾಗಿ ಮಾತನಾಡಿರುವ ಸಂಸದ ಪ್ರತಾಪ್‌ ಸಿಂಹ ಕೀಳು ಮಟ್ಟದ ವ್ಯಕ್ತಿ ಎಂದು ರಾಜ್ಯದ ಜನತೆಗೆ ತಿಳಿದಿದೆ. ಈ ಹಿಂದೆ ಶೋಭಾ ಕರಂದ್ಲಾಜೆ ನನ್ನ ಪತ್ನಿಯ ಬಗ್ಗೆ ಮಾತನಾಡಿದ್ದರು. ಈಗ ಪ್ರತಾಪ್‌ ಸಿಂಹ ನನ್ನ ತಂದೆಯ ಬಗ್ಗೆ ಮಾತನಾಡುತ್ತಿದ್ದಾರೆ. ಬಿಜೆಪಿಯವರ ಕೀಳು ಮಟ್ಟದ ಹೇಳಿಕೆಗಳಿಗೆ ಮಹತ್ವ ಕೊಡುವ ಅಗತ್ಯವಿಲ್ಲ.
 ●ದಿನೇಶ್‌ ಗುಂಡೂರಾವ್‌, ಕೆಪಿಸಿಸಿ ಕಾರ್ಯಾಧ್ಯಕ್ಷ 

 ಸಂಸತ್‌ ಸದಸ್ಯ ಸ್ಥಾನಕ್ಕಿಂತ ನನಗೆ ಹಿಂದೂ ಧರ್ಮ ಮುಖ್ಯ ಎಂದು ಹೇಳಿಕೆ ನೀಡಿರುವ ಪ್ರತಾಪ್‌ ಸಿಂಹ ಸಂಸದರಾಗಿ 
ಮುಂದುವರಿಯಲು ಅರ್ಹರಲ್ಲ.
 ●ಬಸವರಾಜ ರಾಯರಡ್ಡಿ, ಸಚಿವ

ಪ್ರತಾಪ್‌ ಸಿಂಹ ಇನ್ನೂ ಯುವಕ. ಅವರಿಗೆ ಸಂಯಮ ಅಗತ್ಯ. ಉಗ್ರ ಪತ್ರಿಭಟನೆ ಎಂದರೆ ಕಾನೂನು ಉಲ್ಲಂಘನೆಯಲ್ಲ. ಕಾನೂನು ಉಲ್ಲಂಘನೆ ಮಾಡಿರುವ ಹಿನ್ನೆಲೆಯಲ್ಲಿ ಪೊಲಿಸರು ಕ್ರಮ ಕೈಗೊಂಡಿದ್ದಾರೆ.
 ●ಡಾ. ಜಿ. ಪರಮೇಶ್ವರ್‌ , ಕೆಪಿಸಿಸಿ ಅಧ್ಯಕ್ಷ

ಟಾಪ್ ನ್ಯೂಸ್

ಮುಂಬಯಿ: ಬಹುಮಹಡಿ ಕಟ್ಟಡದಲ್ಲಿ ಅಗ್ನಿ ದುರಂತ; ಇಬ್ಬರು ಸಾವು, ಹಲವು ಮಂದಿ ಆಸ್ಪತ್ರೆಗೆ ದಾಖಲು

ಮುಂಬಯಿ: ಬಹುಮಹಡಿ ಕಟ್ಟಡದಲ್ಲಿ ಅಗ್ನಿ ದುರಂತ; 7 ಸಾವು, ಹಲವು ಮಂದಿ ಆಸ್ಪತ್ರೆಗೆ ದಾಖಲು

ಹೈಕಮಾಂಡ್ ಜೊತೆ ಚರ್ಚೆಯ ಬಳಿಕ ಸಂಪುಟ ಪುನಾರಚನೆ ಡೇಟ್ ಫಿಕ್ಸ್: ಕಾರಜೋಳ

ಹೈಕಮಾಂಡ್ ಜೊತೆ ಸಿಎಂ ಚರ್ಚೆಯ ಬಳಿಕ ಸಂಪುಟ ಪುನಾರಚನೆ ಡೇಟ್ ಫಿಕ್ಸ್: ಕಾರಜೋಳ

ಭಾರತ: 24ಗಂಟೆಯಲ್ಲಿ 3.37 ಲಕ್ಷ ಕೋವಿಡ್ ಪ್ರಕರಣ ಪತ್ತೆ, 10,000 ಗಡಿದಾಟಿದ ಒಮಿಕ್ರಾನ್

ಭಾರತ: 24ಗಂಟೆಯಲ್ಲಿ 3.37 ಲಕ್ಷ ಕೋವಿಡ್ ಪ್ರಕರಣ ಪತ್ತೆ, 10,000 ಗಡಿದಾಟಿದ ಒಮಿಕ್ರಾನ್

1death

ವೈದ್ಯಕೀಯ ನಿರ್ಲಕ್ಷ್ಯ ಆರೋಪ: ಆಸ್ಪತ್ರೆಯಲ್ಲಿ ತಾಯಿ, ಮಗು ಸಾವು; ಕುಟುಂಬಿಕರ ಆಕ್ರೋಶ

ಕಾರ್ಕಳ: ಕೊರಗಜ್ಜನಿಗೆ ಅವಮಾನ; ಪ್ರಕರಣ ದಾಖಲು

ಕಾರ್ಕಳ: ಕೊರಗಜ್ಜನಿಗೆ ಅವಮಾನ; ಪ್ರಕರಣ ದಾಖಲು

World Giants

ದಿಲ್ಶನ್,ತರಂಗ ಬ್ಯಾಟಿಂಗ್ ವೈಭವ: ವರ್ಲ್ಡ್ ಜೈಂಟ್ಸ್ ವಿರುದ್ಧ ಗೆದ್ದು ಬೀಗಿದ ಏಶ್ಯನ್ ಲಯನ್ಸ್

ಇಂದು ನಿಖೀಲ್‌ ಬರ್ತ್‌ಡೇ: ಸಂಕಷ್ಟದಲ್ಲಿರುವವರಿಗೆ ಸಹಾಯ ಮಾಡಿ ಎಂದ ನಟ

ಇಂದು ನಿಖೀಲ್‌ ಬರ್ತ್‌ಡೇ: ಸಂಕಷ್ಟದಲ್ಲಿರುವವರಿಗೆ ಸಹಾಯ ಮಾಡಿ ಎಂದ ನಟ



ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಹೈಕಮಾಂಡ್ ಜೊತೆ ಚರ್ಚೆಯ ಬಳಿಕ ಸಂಪುಟ ಪುನಾರಚನೆ ಡೇಟ್ ಫಿಕ್ಸ್: ಕಾರಜೋಳ

ಹೈಕಮಾಂಡ್ ಜೊತೆ ಸಿಎಂ ಚರ್ಚೆಯ ಬಳಿಕ ಸಂಪುಟ ಪುನಾರಚನೆ ಡೇಟ್ ಫಿಕ್ಸ್: ಕಾರಜೋಳ

ಜ.24ರಿಂದ ಪ್ರೌಢಶಾಲಾ ಶಿಕ್ಷಕರ ವರ್ಗಾವಣೆ ಪ್ರಕ್ರಿಯೆ

ಜ.24ರಿಂದ ಪ್ರೌಢಶಾಲಾ ಶಿಕ್ಷಕರ ವರ್ಗಾವಣೆ ಪ್ರಕ್ರಿಯೆ

ಇನ್ನು ಮೂರು ತಿಂಗಳಲ್ಲಿ ಬಿಬಿಎಂಪಿ ಚುನಾವಣೆ: ಸೋಮಣ್ಣ

ಇನ್ನು ಮೂರು ತಿಂಗಳಲ್ಲಿ ಬಿಬಿಎಂಪಿ ಚುನಾವಣೆ: ಸೋಮಣ್ಣ

ಕೇಂದ್ರದಿಂದ ರಾಜ್ಯಕ್ಕೆ 3,467 ಕೋ. ರೂ. ಜಿಎಸ್‌ಟಿ ಪರಿಹಾರ

ಕೇಂದ್ರದಿಂದ ರಾಜ್ಯಕ್ಕೆ 3,467 ಕೋ. ರೂ. ಜಿಎಸ್‌ಟಿ ಪರಿಹಾರ

ವಿದ್ಯಾರ್ಥಿಗಳಿಗೆ ಲಸಿಕೆ ವಿತರಣೆ ಶೇ.65.9ರಷ್ಟು ಗುರಿ ಸಾಧನೆ

ವಿದ್ಯಾರ್ಥಿಗಳಿಗೆ ಲಸಿಕೆ ವಿತರಣೆ ಶೇ.65.9ರಷ್ಟು ಗುರಿ ಸಾಧನೆ

MUST WATCH

udayavani youtube

‘ಯೂಸ್ ಅಂಡ್ ಥ್ರೋ’ ಕೇಜ್ರಿವಾಲ್‍ಗಿಂತ ಚೆನ್ನಾಗಿ ಯಾರೂ ಮಾಡಲಾರರು

udayavani youtube

ತ್ಯಾಜ್ಯದಿಂದ ಗೊಬ್ಬರ ಹಲವು ಲಾಭ

udayavani youtube

ವಿದ್ಯುತ್ ದರ ಏರಿಕೆ ಅನಿವಾರ್ಯ: ಇಂಧನ ಸಚಿವ ಸುನಿಲ್ ಕುಮಾರ್

udayavani youtube

ಸಿಮೆಂಟ್ ರಿಂಗ್ ಬಳಸಿ ಯಶಸ್ವಿ ದಾಳಿಂಬೆ ಕೃಷಿ

udayavani youtube

‘ಅಮರ್ ಜವಾನ್ ಜ್ಯೋತಿ’ ರಾಷ್ಟ್ರೀಯ ಯುದ್ಧ ಸ್ಮಾರಕ ಜ್ವಾಲೆಯೊಂದಿಗೆ ವಿಲೀನಗೊಳ್ಳಲಿದೆ|

ಹೊಸ ಸೇರ್ಪಡೆ

5fire

ಬೆಂಕಿ ಅವಘಡ: ಕೃಷಿಭೂಮಿ ಬೆಂಕಿಗಾಹುತಿ

ಮುಂಬಯಿ: ಬಹುಮಹಡಿ ಕಟ್ಟಡದಲ್ಲಿ ಅಗ್ನಿ ದುರಂತ; ಇಬ್ಬರು ಸಾವು, ಹಲವು ಮಂದಿ ಆಸ್ಪತ್ರೆಗೆ ದಾಖಲು

ಮುಂಬಯಿ: ಬಹುಮಹಡಿ ಕಟ್ಟಡದಲ್ಲಿ ಅಗ್ನಿ ದುರಂತ; 7 ಸಾವು, ಹಲವು ಮಂದಿ ಆಸ್ಪತ್ರೆಗೆ ದಾಖಲು

4bank

ಡಿಸಿಸಿ ಬ್ಯಾಂಕ್‌ನಿಂದ ಬಡ್ಡಿ ರಹಿತ ಸಾಲ ವಿತರಣೆ: ಹೇರೂರ

ಹೈಕಮಾಂಡ್ ಜೊತೆ ಚರ್ಚೆಯ ಬಳಿಕ ಸಂಪುಟ ಪುನಾರಚನೆ ಡೇಟ್ ಫಿಕ್ಸ್: ಕಾರಜೋಳ

ಹೈಕಮಾಂಡ್ ಜೊತೆ ಸಿಎಂ ಚರ್ಚೆಯ ಬಳಿಕ ಸಂಪುಟ ಪುನಾರಚನೆ ಡೇಟ್ ಫಿಕ್ಸ್: ಕಾರಜೋಳ

3digital

ಡಿಜಿಟಲ್‌ ಸೇವಾ ಸಿಂಧು ಕೇಂದ್ರ ಸೇವೆ ಪಡೆಯಿರಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.