ಬಿತ್ತನೆ ಬೀಜ, ರಸಗೊಬ್ಬರ ಕೊರತೆ ಉಂಟಾದರೆ ಅಧಿಕಾರಿಗಳ ಮೇಲೆ ಕ್ರಮ: ಸಚಿವ


Team Udayavani, Jun 13, 2024, 9:55 PM IST

ಬಿತ್ತನೆ ಬೀಜ, ರಸಗೊಬ್ಬರ ಕೊರತೆ ಉಂಟಾದರೆ ಅಧಿಕಾರಿಗಳ ಮೇಲೆ ಕ್ರಮ: ಸಚಿವ

ಬೆಂಗಳೂರು: ರಾಜ್ಯದ ಯಾವುದೇ ಜಿಲ್ಲೆಯಲ್ಲಿ ಬಿತ್ತನೆ ಬೀಜ ಮತ್ತು ರಸಗೊಬ್ಬರ ವಿಚಾರದಲ್ಲಿ ಅನಗತ್ಯ ಗೊಂದಲ ಸೃಷ್ಟಿಯಾದರೆ, ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಕೃಷಿ ಸಚಿವ ಎನ್‌. ಚಲುವರಾಯಸ್ವಾಮಿ ಖಡಕ್‌ ಎಚ್ಚರಿಕೆ ನೀಡಿದರು.

ವಿಧಾನಸೌಧದ ಸಮಿತಿ ಕೊಠಡಿಯಲ್ಲಿ 2024-25ನೇ ಸಾಲಿನ ಬಜೆಟ್‌ನಲ್ಲಿ ಘೋಷಣೆಯಾದ ಕೃಷಿ ಇಲಾಖೆ ಹೊಸ ಯೋಜನೆಗಳ ಅನುಷ್ಠಾನ ಕುರಿತು ಪ್ರಗತಿ ಪರಿಶೀಲನೆ ನಡೆಸಿ ಅವರು ಮಾತನಾಡಿದರು.

ನಿರೀಕ್ಷೆಯಂತೆ ಮುಂಗಾರು ಮಳೆ ಎಲ್ಲೆಡೆ ಉತ್ತಮವಾಗಿ ಆಗುತ್ತಿದೆ. ಕೃಷಿ ಚಟುವಟಿಕೆ ಗರಿಗೆದರಿವೆ. ಅದಕ್ಕೆ ಪೂರಕವಾಗಿ ಸಮರ್ಪಕ ಬಿತ್ತನೆ ಬೀಜ ಮತ್ತು ಗೊಬ್ಬರ ಪೂರೈಸಲಾಗಿದೆ. ರಾಜ್ಯದ ಯಾವುದೇ ಜಿಲ್ಲೆಯಲ್ಲಿ ಕೊರತೆ ಇಲ್ಲ. ಅಧಿಕಾರಿಗಳು ರೈತರಿಗೆ ಸೂಕ್ತ ಮಾಹಿತಿ ಮತ್ತು ಮಾರ್ಗದರ್ಶನ ನೀಡಬೇಕು. ಇದೆಲ್ಲದರ ನಡುವೆಯೂ ಈ ವಿಚಾರದಲ್ಲಿ ಅನಗತ್ಯ ಗೊಂದಲ ಸೃಷ್ಟಿ ಮಾಡಿದರೆ, ಅಂತಹವರ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಕಟ್ಟುನಿಟ್ಟಾಗಿ ಹೇಳಿದರು.

ಇದಕ್ಕೂ ಮುನ್ನ ಪ್ರಸಕ್ತ ಸಾಲಿನ ಬಜೆಟ್‌ನಲ್ಲಿ ಘೋಷಿಸಿರುವ ಹೊಸ ಕೃಷಿ ಯೋಜನೆಗಳ ಅನುಷ್ಠಾನಕ್ಕೆ ಜೂ. 20ರ ಗಡುವು ನೀಡಿದ ಸಚಿವರು, ಘೋಷಣೆಯಾದ 19 ಯೋಜನೆಗಳಲ್ಲಿ 12 ಯೋಜನೆಗಳಿಗೆ ಸರ್ಕಾರಿ ಆದೇಶ ಹೊರಡಿಸಿದೆ. ಬಾಕಿ ಉಳಿದ ಏಳು ಘೋಷಣೆಗಳಿಗೆ ವಾರದ ಒಳಗೆ ಸರ್ಕಾರಿ ಆದೇಶ ಹೊರಡಿಸಿ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸತಕ್ಕದ್ದು ಎಂದು ಸೂಚಿಸಿದರು.

ಅನುದಾನಕ್ಕೆ ಕೊರತೆ ಇಲ್ಲ; ಸಚಿವ

ಸರ್ಕಾರದಲ್ಲಿ ಅನುದಾನಕ್ಕೆ ಕೊರತೆ ಇಲ್ಲ. ಕೃಷಿ ಕ್ಷೇತ್ರವನ್ನು ಸುಸ್ಥಿರ ಹಾಗೂ ಲಾಭದಾಯಕಗೊಳಿಸಲು ರೈತ ಸಮೃದ್ಧಿ ಯೋಜನೆ ರೂಪಿಸಿದ್ದು, ಇದು ಸಮರ್ಪಕವಾಗಿ ತಲುಪಬೇಕು. ಇದು ಸರ್ಕಾರದ ಆಶಯ ಕೃಷಿ, ತೋಟಗಾರಿಕೆ, ಪಶು ಸಂಗೋಪನೆ ಒಳಗೊಂಡಂತೆ ವಿವಿಧ ಇಲಾಖೆಗಳ ಯೋಜನೆಗಳ ಸಂಯೋಜನೆ ಮೂಲಕ  ಕಾರ್ಯಕ್ರಮ ಅನುಷ್ಠಾನ ಮಾಡಬೇಕು. ಅನುಷ್ಠಾನದ ವೇಳೆ ಉಂಟಾಗಬಹುದಾದ ಸಮಸ್ಯೆಗಳ ಬಗ್ಗೆ ಪೂರ್ವಾನುಲೋಕನ ಆಗಬೇಕಿದೆ. ಈ ಬಗ್ಗೆ ಚರ್ಚಿಸಿ ಅಭಿಪ್ರಾಯ ತಿಳಿಸುವಂತೆ ಅಧಿಕಾರಿಗಳಿಗೆ ಸಚಿವರು ನಿರ್ದೇಶನ ನೀಡಿದರು.

 

ಟಾಪ್ ನ್ಯೂಸ್

Rain-Alert

Rain Alert: ಕರಾವಳಿ ಜಿಲ್ಲೆಗಳಲ್ಲಿ ಇನ್ನೂ 4 ದಿನ ಭರ್ಜರಿ ಮಳೆ: ಹಳದಿ ಅಲರ್ಟ್‌ ಘೋಷಣೆ

eshwarappa

BJPಯವರು ಕರೆಯುತ್ತಿದ್ದಾರೆ, ಶುದ್ಧೀಕರಣವಾಗದೇ ಸೇರಲ್ಲ: ಈಶ್ವರಪ್ಪ

1-ree

Kerala ಮುಸ್ಲಿಂ ನಡೆಸುತ್ತಿದ್ದ ವೆಜ್ ಹೋಟೆಲ್‌ಗೆ ಹೋಗುತ್ತಿದ್ದೆ: ಸುಪ್ರೀಂ ಜಡ್ಜ್ ಭಟ್ಟಿ

Nitish-modi

Special Status: ಬಿಹಾರದ ವಿಶೇಷ ಸ್ಥಾನಮಾನದ ಬೇಡಿಕೆಗೆ ಕೇಂದ್ರ ಸರ್ಕಾರ ನಕಾರ

Cricket will make you cry..: Basit Ali’s reply to Shami

Mohammed Shami; ಕ್ರಿಕೆಟ್ ನಿಮ್ಮನ್ನು ಅಳಿಸುತ್ತದೆ..: ಶಮಿ ವಿರುದ್ದ ಬಾಸಿತ್ ಅಲಿ ಟೀಕೆ

1-suraj-revann

MLC ಸೂರಜ್ ರೇವಣ್ಣಗೆ ಷರತ್ತುಬದ್ಧ ಜಾಮೀನು ಮಂಜೂರು

arrest-25

UAE; ಪ್ರತಿಭಟನೆಗಿಳಿದ ಹಲವು ಬಾಂಗ್ಲಾದೇಶೀಯರಿಗೆ ಕಠಿನ ಶಿಕ್ಷೆ ವಿಧಿಸಿದ ಯುಎಇ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Rain-Alert

Rain Alert: ಕರಾವಳಿ ಜಿಲ್ಲೆಗಳಲ್ಲಿ ಇನ್ನೂ 4 ದಿನ ಭರ್ಜರಿ ಮಳೆ: ಹಳದಿ ಅಲರ್ಟ್‌ ಘೋಷಣೆ

1-sadsad

Escape; ಸೆರೆಸಿಕ್ಕ ಚಿರತೆ ತಪ್ಪಿಸಿಕೊಂಡಿತು!!: ಮತ್ತೆ ಬೋನಿಗೆ

eshwarappa

BJPಯವರು ಕರೆಯುತ್ತಿದ್ದಾರೆ, ಶುದ್ಧೀಕರಣವಾಗದೇ ಸೇರಲ್ಲ: ಈಶ್ವರಪ್ಪ

1-suraj-revann

MLC ಸೂರಜ್ ರೇವಣ್ಣಗೆ ಷರತ್ತುಬದ್ಧ ಜಾಮೀನು ಮಂಜೂರು

Nagendra

Valmiki Corporation scam; ಮಾಜಿ ಸಚಿವ ನಾಗೇಂದ್ರ ಗೆ 14 ದಿನಗಳ ನ್ಯಾಯಾಂಗ ಬಂಧನ

MUST WATCH

udayavani youtube

ಕರ್ಮಫಲ ಶಿಕ್ಷಣದಿಂದ ಆತ್ಮೋನ್ನತಿ

udayavani youtube

ತಪ್ತ ಮುದ್ರಾ ಧಾರಣೆ ವಿಶೇಷ ಮಹತ್ವದ್ದು, ಯಾಕೆ?

udayavani youtube

ಬಾಳೆಯಿಂದ ವಾರ್ಷಿಕ 50-60 ಲಕ್ಷ ರೂ. ಆದಾಯ

udayavani youtube

ಅಘನಾಶಿನಿ ಆರ್ಭಟ

udayavani youtube

ತಾನು ಪ್ರವಾಸಿಸಿದ ಊರಿನ ಹೆಸರುಗಳನ್ನೆಲ್ಲ ನೆನಪಿಸಿಕೊಂಡ ಡಾ. ರಾಜ್‌ಕುಮಾರ್

ಹೊಸ ಸೇರ್ಪಡೆ

Rain-Alert

Rain Alert: ಕರಾವಳಿ ಜಿಲ್ಲೆಗಳಲ್ಲಿ ಇನ್ನೂ 4 ದಿನ ಭರ್ಜರಿ ಮಳೆ: ಹಳದಿ ಅಲರ್ಟ್‌ ಘೋಷಣೆ

1-sadsad

Escape; ಸೆರೆಸಿಕ್ಕ ಚಿರತೆ ತಪ್ಪಿಸಿಕೊಂಡಿತು!!: ಮತ್ತೆ ಬೋನಿಗೆ

eshwarappa

BJPಯವರು ಕರೆಯುತ್ತಿದ್ದಾರೆ, ಶುದ್ಧೀಕರಣವಾಗದೇ ಸೇರಲ್ಲ: ಈಶ್ವರಪ್ಪ

1-ree

Kerala ಮುಸ್ಲಿಂ ನಡೆಸುತ್ತಿದ್ದ ವೆಜ್ ಹೋಟೆಲ್‌ಗೆ ಹೋಗುತ್ತಿದ್ದೆ: ಸುಪ್ರೀಂ ಜಡ್ಜ್ ಭಟ್ಟಿ

Nitish-modi

Special Status: ಬಿಹಾರದ ವಿಶೇಷ ಸ್ಥಾನಮಾನದ ಬೇಡಿಕೆಗೆ ಕೇಂದ್ರ ಸರ್ಕಾರ ನಕಾರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.