ನನಗೆ ಟಿಕೆಟ್ ನೀಡಿದರೆ ಸ್ಪರ್ಧೆ, ಇಲ್ಲದಿದ್ದರೆ ಇಲ್ಲ: ಅಂಬರೀಷ್
Team Udayavani, Apr 11, 2018, 2:42 PM IST
ಮಂಡ್ಯ: ರೆಬೆಲ್ ಸ್ಟಾರ್ ಅಂಬರೀಷ್ ಅವರು ಈ ಬಾರಿ ಚುನಾವಣೆಗೆ ಸ್ಪರ್ಧಿಸುತ್ತಾರೋ ಇಲ್ಲವೊ ಎನ್ನುವುದು ಇನ್ನೂ ಕುತೂಹಲವಾಗಿಯೆ ಉಳಿದಿದೆ. ಮಂಡ್ಯ ಶಾಸಕಅಂಬರೀಷ್ ಅವರ ಈ ನಡೆ ಅಭಿಮಾನಿಗಳಿಗೂ ,ಮಂಡ್ಯ ಕಾಂಗ್ರೆಸ್ ಕಾರ್ಯಕರ್ತರಿಗೂ,ಕಾಂಗ್ರೆಸ್ ಹೈಕಮಾಂಡ್‌ಗೂ ಕಗ್ಗಂಟಾಗಿ ಪರಿಣಮಿಸಿದೆ.
ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ.ವೇಣುಗೋಪಾಲ್ ಅವರು ಅಂಬರೀಷ್ ಅವರಿಗೆ ಕರೆ ಮಾಡಿ ಮಾತನಾಡಿರುವ ವಿಚಾರ ತಿಳಿದು ಬಂದಿದ್ದು, ಅಂಬರೀಷ್ ಅವರು ‘ಟಿಕೆಟ್ ನೀಟಿದರೆ ಸ್ಪರ್ಧಿಸುತ್ತೇನೆ. ಇಲ್ಲವಾದಲ್ಲಿ ಇಲ್ಲ’ ಎಂದಿದ್ದಾರೆ ಎನ್ನಲಾಗಿದ್ದು ಇದೇ ವೇಳೆ ‘ನನ್ನದು ಯಾವುದೇ ಬೇಡಿಕೆಗಳು ಇಲ್ಲ’ ಎಂದಿರುವುದಾಗಿ ವರದಿಯಾಗಿದೆ.
ಅಂಬರೀಷ್ ಅವರು ಮಂಡ್ಯದ ಉಳಿದ 4 ಕ್ಷೇತ್ರಗಳಲ್ಲಿ ತನ್ನ ಬೆಂಬಲಿಗರಿಗೆ ಟಿಕೆಟ್‌ಗಾಗಿ ಪಟ್ಟು ಹಿಡಿದಿದ್ದಾರೆ ಎನ್ನಾಲಾಗಿತ್ತು.
ಇದೀಗ ಅಂಬರೀಷ್ ಅವರಿಗೆ ಮಂಡ್ಯ ಕ್ಷೇತ್ರದ ಬಿ ಫಾರಂ ಸಿಗುವ ಎಲ್ಲಾ ಸಾಧ್ಯತೆಗಳಿವೆ.