ರಾಜ್ಯದಲ್ಲಿ 2.5 ಲಕ್ಷ ಬಾಂಗ್ಲಾದೇಶಿಗರು ವಾಸ: ಎಲ್ಲರ ಬಳಿ ಇದೆ ಭಾರತದ ಆಧಾರ್ ಕಾರ್ಡ್
ಇತರ ಗುರುತಿನ ಚೀಟಿ ಪತ್ತೆ
Team Udayavani, Jun 18, 2022, 5:45 AM IST
ಬೆಂಗಳೂರು: ರಾಜ್ಯದಲ್ಲಿ ಅಕ್ರಮ ಬಾಂಗ್ಲಾ ವಲಸಿಗರನ್ನು ಸಕ್ರಮಗೊಳಿಸುವ ಕೆಲಸ ನಡೆಯುತ್ತಿದ್ದು, ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧ ಭಾಗಗಳಲ್ಲಿ ಎರಡೂವರೆ ಲಕ್ಷಕ್ಕೂ ಅಧಿಕ ಮಂದಿ ಬಾಂಗ್ಲಾದೇಶಿಗರು ವಾಸವಾಗಿದ್ದು, ಎಲ್ಲರೂ ಆಧಾರ್ ಕಾರ್ಡ್ ಹಾಗೂ ಇತರ ಗುರುತಿನ ಚೀಟಿ ಹೊಂದಿದ್ದಾರೆ ಎನ್ನುವ ಮಾಹಿತಿ ಪತ್ತೆಯಾಗಿದೆ.
ಕೇಂದ್ರ ಮತ್ತು ರಾಜ್ಯದ ತನಿಖಾ ಸಂಸ್ಥೆಗಳ ಪ್ರಕಾರ, ಈ ಅಕ್ರಮ ವಲಸಿಗರು ಮೂಲತಃ ಬಾಂಗ್ಲಾದೇಶ ಪ್ರಜೆಗಳಾಗಿದ್ದರೂ ಅವರ ಬಳಿ ಭಾರತದ ಆಧಾರ್ ಕಾರ್ಡ್, ಚುನಾವಣ ಗುರುತಿನ ಚೀಟಿ, ಇತ್ಯಾದಿ ದಾಖಲೆಗಳು ಪತ್ತೆಯಾಗಿವೆ. ಎರಡೂವರೆ ಲಕ್ಷಕ್ಕೂ ಹೆಚ್ಚು ಅಕ್ರಮ ಬಾಂಗ್ಲಾ ವಲಸಿಗರ ಪೈಕಿ ಬೆಂಗಳೂರಿನ ಆಸು-ಪಾಸಿನಲ್ಲಿಯೇ ಎರಡು ಲಕ್ಷಕ್ಕೂ ಅಧಿಕ ಮಂದಿ ಅಕ್ರಮ ವಲಸಿಗರು ವಾಸವಾಗಿರುವುದು ಗೊತ್ತಾಗಿದೆ.
ಕೇಂದ್ರ ಮತ್ತು ರಾಜ್ಯದ ಗುಪ್ತಚರ ಇಲಾಖೆ, ಆಂತರಿಕ ಭದ್ರತಾ ವಿಭಾಗ ಮತ್ತು ಇತರೆ ತನಿಖಾ ಸಂಸ್ಥೆಗಳು ಈ ಬಗ್ಗೆ ನಿರಂತರವಾಗಿ ಮಾಹಿತಿ ಸಂಗ್ರಹಿಸುತ್ತಿದ್ದು, ಈಗಾಗಲೇ ರಾಜ್ಯದ ತನಿಖಾ ಸಂಸ್ಥೆಗಳ ಅಧಿಕಾರಿಗಳು ಈ ಬಗ್ಗೆ ವರದಿ ಸಿದ್ಧಪಡಿಸಿ ಕೇಂದ್ರಕ್ಕೆ ರವಾನಿಸಲು ಸಿದ್ಧತೆ ನಡೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಪ್ರತೀ ಠಾಣೆ ವ್ಯಾಪ್ತಿಯಲ್ಲಿ 8-10 ಸಾವಿರ ಮಂದಿ
ಬೆಂಗಳೂರು ಸಿಟಿ, ಗ್ರಾಮಾಂತರ ಮತ್ತು ಅಕ್ಕ-ಪಕ್ಕದ ಪೊಲೀಸ್ ಠಾಣೆಗಳ ವ್ಯಾಪ್ತಿಯ ಖಾಲಿ ನಿವೇಶನಗಳನ್ನು ಬಾಂಗ್ಲಾದಿಂದ ಅಕ್ರಮವಾಗಿ ಬಂದಿದ್ದವರು ಭೋಗ್ಯಕ್ಕೆ ಪಡೆದು ತಾತ್ಕಾಲಿಕ ಶೆಡ್ ನಿರ್ಮಿಸಿ ಬಾಂಗ್ಲಾದೇಶೀಯರಿಗೆ ನೀಡುತ್ತಿದ್ದಾರೆ. ಚಿಕ್ಕಮಗಳೂರು, ಕೊಡಗು, ಮಡಿಕೇರಿ ಭಾಗದ ಎಸ್ಟೇಟ್‌ಗಳಲ್ಲೂ ಬಾಂಗ್ಲಾದೇಶ ಪ್ರಜೆಗಳು ಕೂಲಿ ಕಾರ್ಮಿಕರಾಗಿ ದುಡಿಯುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.
16 ಸಾವಿರ ರೂ.ಗೆ ಬಾಂಗ್ಲಾ ಟು ಬೆಂಗಳೂರು
ಬಾಂಗ್ಲಾದೇಶದ ಗಡಿದಾಟಿಸಿ ಬೆಂಗಳೂರಿಗೆ ಕಳುಹಿಸುವ ವ್ಯಕ್ತಿಗಳು ದೇಶದ ಗಡಿಭಾಗದಲ್ಲಿ ಸಕ್ರಿಯವಾಗಿದ್ದಾರೆ. ತಲಾ 16 ಸಾವಿರ ರೂ. ನೀಡಿದರೆ ಮಧ್ಯ ವರ್ತಿಗಳು ಬಾಂಗ್ಲಾದೇಶದ ಪ್ರಜೆಗಳನ್ನು ಪಶ್ಚಿಮ ಬಂಗಾಲದ ಮೂಲಕ ಭಾರತಕ್ಕೆ ಕರೆಸಿಕೊಳ್ಳುತ್ತಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಕೆಪಿಟಿಸಿಎಲ್: ನೇಮಕಾತಿ ಪರೀಕ್ಷೆಯಲ್ಲಿ ಅಕ್ರಮಗಳು ನಡೆದಿಲ್ಲ: ಪ್ರಾಧಿಕಾರ
ಬಾಂಗ್ಲಾದೇಶಿಯರ ಆಧಾರ್ ದಾಖಲೆ ಪರಿಶೀಲನೆಗೆ ಹೈಕೋರ್ಟ್ ಅನುಮತಿ
ವಿವಾಹಿತ ಹೆಣ್ಮಕ್ಕಳು ಅಪಘಾತ ವಿಮೆ ಪರಿಹಾರಕ್ಕೆ ಅರ್ಹರು: ಹೈಕೋರ್ಟ್
ರಾಯರಿಗೆ ಶ್ರೀರಂಗಂ ದೇವಸ್ಥಾನದಿಂದ ಶೇಷವಸ್ತ್ರ: ಮೊದಲ ಬಾರಿ ತಮಿಳುನಾಡು ಸರ್ಕಾರದಿಂದ ಸೇವೆೆ
ರಾಜ್ಯದಲ್ಲಿಂದು 2032 ಮಂದಿಗೆ ಕೋವಿಡ್ ಸೋಂಕು ದೃಢ; ಐವರ ಸಾವು
MUST WATCH
ಹೊಸ ಸೇರ್ಪಡೆ
ಸಾಲ ವಸೂಲಿ ವೇಳೆ ಬೆದರಿಕೆ ಹಾಕುವಂತಿಲ್ಲ: ಆರ್ಬಿಐ
ಕೆನಡಿಯನ್ ಮಾಸ್ಟರ್’ ಟೆನಿಸ್: ಕ್ವಾರ್ಟರ್ ಫೈನಲ್ ಗೆ ನಿಕ್ ಕಿರ್ಗಿಯೋಸ್
ಯುಎಇ ಇಂಟರ್ನ್ಯಾಶನಲ್ ಕ್ರಿಕೆಟ್ ಲೀಗ್: ಮೈ ಎಮಿರೇಟ್ಸ್ ಟಿ 20 ತಂಡ ಘೋಷಣೆ
ಏಷ್ಯಾ ಕಪ್ ಕ್ರಿಕೆಟ್: ತನ್ನನ್ನು ಕೈಬಿಟ್ಟಿದ್ದನ್ನು ಧನಾತ್ಮಕವಾಗಿ ಯೋಚಿಸುವೆ: ಇಶಾನ್
ಕೆಪಿಟಿಸಿಎಲ್: ನೇಮಕಾತಿ ಪರೀಕ್ಷೆಯಲ್ಲಿ ಅಕ್ರಮಗಳು ನಡೆದಿಲ್ಲ: ಪ್ರಾಧಿಕಾರ