ನಿಯಮಬಾಹಿರ ಠೇವಣಿ; ಸದನ ಸಮಿತಿ ರಚನೆಗೆ ನಿರ್ಧಾರ


Team Udayavani, Mar 14, 2020, 3:06 AM IST

Vidhana-Soudha

ವಿಧಾನ ಪರಿಷತ್‌: ನಿಯಮಬಾಹಿರವಾಗಿ ಗ್ರಾಮೀಣಾಭಿವೃದ್ಧಿ ಇಲಾಖೆಯ ಅನುದಾನವನ್ನು ಬ್ಯಾಂಕ್‌ಗಳಲ್ಲಿ ಠೇವಣಿ ಇಟ್ಟ ಪ್ರಕರಣಕ್ಕೆ ಮರುಜೀವ ಬಂದಿದ್ದು, ಪ್ರಕರಣದ ತನಿಖೆಗೆ ಸದನ ಸಮಿತಿ ರಚಿಸಲು ಸರ್ಕಾರ ನಿರ್ಧರಿಸಿದೆ.

ಮೇಲ್ಮನೆಯಲ್ಲಿ ಶುಕ್ರವಾರ ಪ್ರಶ್ನೋತ್ತರ ವೇಳೆಯಲ್ಲಿ ಆಡಳಿತ ಪಕ್ಷದ ರಘುನಾಥರಾವ್‌ ಮಲ್ಕಾಪುರೆ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ಸಚಿವ ಕೆ.ಎಸ್‌.ಈಶ್ವರಪ್ಪ, ರಾಜ್ಯ ಹಾಗೂ ಕೇಂದ್ರ ಪುರಸ್ಕೃತ ರಾಷ್ಟ್ರೀಯ ಕುಡಿಯುವ ನೀರು ಮತ್ತು ನೈರ್ಮಲ್ಯ ಕಾರ್ಯಕ್ರಮ (ಎನ್‌ಆರ್‌ಡಿಡಬ್ಲೂಪಿ)ಅಡಿ ಬಳಕೆಯಾಗದೆ ಉಳಿದಿದ್ದ ಅನುದಾನವನ್ನು ಅನಧಿಕೃತ ಖಾತೆಗಳಲ್ಲಿ ಇರಿಸಿದ್ದ ಪ್ರಕರಣದ ತನಿಖೆಗೆ ಸದನ ಸಮಿತಿ ರಚಿಸಲಾಗುವುದು ಎಂದು ಹೇಳಿದರು.

ಎನ್‌ಆರ್‌ಡಿಡಬ್ಲೂಪಿ ಯೋಜನೆಯಡಿ ಬಳಕೆಯಾಗದೆ ಉಳಿದಿದ್ದ ಅನುದಾನದ ಬಗ್ಗೆ ವರದಿ ಮಾಡಲು 2015ರಲ್ಲಿ ನೇಮಿಸಲಾಗಿದ್ದ ಎಎಫ್ಎಸ್‌ ಅಧಿಕಾರಿ ಪುನಾಟಿ ಶ್ರೀಧರ್‌ ನೇತೃತ್ವದ ಸಮಿತಿ, ಇಲಾಖೆಯ ಯಾವುದೇ ಅಧಿಕಾರಿಗಳ ಅನುಮತಿ ಪಡೆಯದೆ ಸಿಂಡಿಕೇಟ್‌ ಬ್ಯಾಂಕ್‌ನಲ್ಲಿ ಅನಧಿಕೃತವಾಗಿ 98 ಖಾತೆ ತೆರೆದು 685 ಕೋಟಿ ರೂ.ಇರಿಸುವ ಬಗ್ಗೆ ವರದಿ ನೀಡಿತ್ತು.

ಈ ವರದಿ ಆಧರಿಸಿ ಲೆಕ್ಕಪರಿಶೋಧನಾ ಮತ್ತು ಲೆಕ್ಕಪತ್ರ ಇಲಾಖೆ ಅಪರ ನಿರ್ದೇಶಕ ಎನ್‌.ಬಿ. ಶಿವರುದ್ರಪ್ಪ ನೇತೃತ್ವದಲ್ಲಿ ತನಿಖಾ ತಂಡ ರಚಿಸಲಾಗಿತ್ತು. ತನಿಖಾ ಸಮಿತಿಯ ವರದಿ ಮೇರೆಗೆ ಕೆಲ ಅಧಿಕಾರಿಗಳ ವಿರುದ್ಧ ಕ್ರಿಮಿನಲ್‌ ಪ್ರಕರಣ ದಾಖಲಿಸಿ, ಕ್ರಮ ಕೈಗೊಳ್ಳಲಾಗಿದೆ. ಪ್ರಕರಣದಲ್ಲಿ ಯಾರನ್ನೂ ಬಚಾವ್‌ ಮಾಡುವುದಿಲ್ಲ. ಅಗತ್ಯವಿದ್ದರೆ ಮತ್ತೂಂದು ತನಿಖೆ ನಡೆಸುವುದಾಗಿ ಹೇಳಿದರು.

ಇದಕ್ಕೆ ಪ್ರತಿಕ್ರಿಯಿಸಿದ ಮಲ್ಕಾಪುರೆ, ಈ ಪ್ರಕರಣದಲ್ಲಿ ನೂರಾರು ಕೋಟಿ ರೂ.ಅವ್ಯವಹಾರ ನಡೆದಿದೆ. ರಾಜ್ಯ ಸರ್ಕಾರಕ್ಕೆ ಬಡ್ಡಿಯ ರೂಪದಲ್ಲಿ ಬರಬೇಕಿದ್ದ 284 ಕೋಟಿ ನಷ್ಟವಾಗಿದೆ. ಇಲಾಖೆಯ ಅಧಿಕಾರಿಗಳು, ಬ್ಯಾಂಕ್‌ ಅಧಿಕಾರಿಗಳು ವ್ಯವಸ್ಥಿತವಾಗಿ ಬಡ್ಡಿ ಹಣವನ್ನು ಹಂಚಿಕೊಂಡಿದ್ದಾರೆ. ಆದರೆ, ಕೇವಲ ಇಬ್ಬರು ಅಧಿಕಾರಿಗಳನ್ನು ಹೊಣೆ ಮಾಡಿ ಪ್ರಕರಣವನ್ನು ಮುಚ್ಚಿ ಹಾಕಲು ಪ್ರಯತ್ನಿಸಲಾಗಿದೆ. ಹೀಗಾಗಿ, ಈ ಪ್ರಕರಣದ ಬಗ್ಗೆ ಕೂಲಂಕುಷ ಚರ್ಚೆ ಆಗಬೇಕು. ಈ ಪ್ರಕರಣದ ತನಿಖೆಗೆ ಸದನ ಸಮಿತಿ ರಚನೆಯಾಗಬೇಕು ಎಂದು ಒತ್ತಾಯಿಸಿದರು.

ಪ್ರತಿಪಕ್ಷ ನಾಯಕ ಎಸ್‌.ಆರ್‌.ಪಾಟೀಲ್‌, ಜೆಡಿಎಸ್‌ ಸದಸ್ಯ ಬಸವರಾಜ ಹೊರಟ್ಟಿ, ಬಿಜೆಪಿ ಎನ್‌.ರವಿಕುಮಾರ್‌ ಸೇರಿದಂತೆ ಇತರ ಸದಸ್ಯರು ಇದಕ್ಕೆ ಧ್ವನಿಗೂಡಿಸಿದರು. ಆಗ ಸಚಿವರು, “ಯಾರನ್ನೂ ರಕ್ಷಣೆ ಮಾಡುವ ಕೆಲಸವನ್ನು ಸರ್ಕಾರ ಮಾಡುವುದಿಲ್ಲ. ಈ ಪ್ರಕರಣದಲ್ಲಿ ಕೋಟ್ಯಂತರ ರೂ.ಲೂಟಿ ಆಗಿದೆ. ಸರ್ಕಾರದ ಅನುಮತಿ ಇಲ್ಲದೆ ಖಾತೆ ತೆರೆದಿರುವ ಪ್ರಕರಣದ ತನಿಖೆಗೆ ಸದನ ಸಮಿತಿ ರಚಿಸಲಾಗುವುದು’ ಎಂದು ಘೋಷಿಸಿದರು.

ಟಾಪ್ ನ್ಯೂಸ್

ಮನಸ್ಮಿತ ಹಾಡು ಹಬ್ಬ : ಜೂನ್‌ನಲ್ಲಿ ತೆರೆಗೆ

ಮನಸ್ಮಿತ ಹಾಡು ಹಬ್ಬ: ಜೂನ್‌ನಲ್ಲಿ ತೆರೆಗೆ

ನೀರಿನ ಸಮಸ್ಯೆ ಇದ್ದರೂ ಡೆವಲಪರ್‌ಗಾಗಿ ನೀರು ಕಾಯ್ದಿರಿಸಿದ ಸರಕಾರ

ನೀರಿನ ಸಮಸ್ಯೆ ಇದ್ದರೂ ಡೆವಲಪರ್‌ಗಾಗಿ ನೀರು ಕಾಯ್ದಿರಿಸಿದ ಸರಕಾರ

1-saadasd

ಐಪಿಎಲ್ ಕ್ವಾಲಿಫೈಯರ್ 1 ಮತ್ತು ಎಲಿಮಿನೇಟರ್ ಪಂದ್ಯಗಳಿಗೆ ಕೋಲ್ಕತಾ ಸಜ್ಜು

ಕುಷ್ಟಗಿ: 25 ವರ್ಷಗಳಿಂದ ಸೌಲಭ್ಯ ವಂಚಿತವಾಗಿದೆ 3ನೇ ವಾರ್ಡ್ ; ಮೂಲ ಸೌಕರ್ಯ ಕಲ್ಪಿಸಲು ಮನವಿ

ಕುಷ್ಟಗಿ: 25 ವರ್ಷಗಳಿಂದ ಸೌಲಭ್ಯ ವಂಚಿತವಾಗಿದೆ 3ನೇ ವಾರ್ಡ್ ; ಮೂಲ ಸೌಕರ್ಯ ಕಲ್ಪಿಸಲು ಮನವಿ

9accident

ಟ್ರ್ಯಾಕ್ಟರ್-ಬೈಕ್ ಢಿಕ್ಕಿ: ತಂದೆ ಮಗ ಸಾವು

ಹೆಜ್ಜೆ ಹೆಜ್ಜೆಗೂ ಕೇಂದ್ರ, ರಾಜ್ಯ ಸರಕಾರದಿಂದ ನಾರಾಯಣಗುರುಗಳಿಗೆ ಅವಮಾನ: ಜೆ.ಆರ್.ಲೋಬೋ

ಹೆಜ್ಜೆ ಹೆಜ್ಜೆಗೂ ಕೇಂದ್ರ, ರಾಜ್ಯ ಸರಕಾರದಿಂದ ನಾರಾಯಣ ಗುರುಗಳಿಗೆ ಅವಮಾನ: ಜೆ.ಆರ್.ಲೋಬೋ

1-f-sdfsdf

ಭಾರಿ ಮಳೆ ಆತಂಕ : ಬೆಂಗಳೂರಿನ ಜಲಾವೃತ ಪ್ರದೇಶಗಳಿಗೆ ಸಿಎಂ ಭೇಟಿಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಹೆಜ್ಜೆ ಹೆಜ್ಜೆಗೂ ಕೇಂದ್ರ, ರಾಜ್ಯ ಸರಕಾರದಿಂದ ನಾರಾಯಣಗುರುಗಳಿಗೆ ಅವಮಾನ: ಜೆ.ಆರ್.ಲೋಬೋ

ಹೆಜ್ಜೆ ಹೆಜ್ಜೆಗೂ ಕೇಂದ್ರ, ರಾಜ್ಯ ಸರಕಾರದಿಂದ ನಾರಾಯಣ ಗುರುಗಳಿಗೆ ಅವಮಾನ: ಜೆ.ಆರ್.ಲೋಬೋ

8CM

ದೇಶದಲ್ಲೇ ದಾಖಲೆ ಬರೆದ ನಾಯಕ ಬಸವರಾಜ್‌ ಹೊರಟ್ಟಿ: ಸಿಎಂ ಬಣ್ಣನೆ

7gopalayya

ಮಳೆಯಿಂದ ಹಾನಿಗೊಳಗಾದ ಕುಟುಂಬಗಳಿಗೆ ಶೀಘ್ರ ಪರಿಹಾರ: ಸಚಿವ ಕೆ.ಗೋಪಾಲಯ್ಯ

6death

ವಿಟ್ಲ: ಹೃದಯಾಘಾತದಿಂದ 9ನೇ ತರಗತಿ ವಿದ್ಯಾರ್ಥಿನಿ ಸಾವು

5DKShi

ಚುನಾವಣಾ ಆಯೋಗದ ಅಧಿಕಾರ ಕಸಿದುಕೊಂಡ ರಾಜ್ಯ ಸರ್ಕಾರ: ಡಿಕೆ ಶಿವಕುಮಾರ್

MUST WATCH

udayavani youtube

ಹೊರಟ್ಟಿ ಸೇರ್ಪಡೆಯಿಂದ ಪಕ್ಷಕ್ಕೆ ಬಲ : ಸಿಎಂ

udayavani youtube

ಹುಣಸೂರಿನಲ್ಲಿ ಭಾರೀ ಮಳೆಗೆ ಮನೆಗಳು ಜಲಾವೃತ

udayavani youtube

SSLC ನಂತ್ರ ನಿಮಗಿದೆ ಭರಪೂರ ಅವಕಾಶ !!

udayavani youtube

ಕಾರಿಂಜೇಶ್ವರ ದೇವಸ್ಥಾನದ ಬಳಿ ಬೃಹತ್ ಬಂಡೆಕಲ್ಲು ಕುಸಿತ

udayavani youtube

ವಿಧಾನಪರಿಷತ್ ಹಂಗಾಮಿ ಸಭಾಪತಿಯಾಗಿ ರಘುನಾಥ್ ಮಲ್ಕಾಪುರೆ ನೇಮಕ

ಹೊಸ ಸೇರ್ಪಡೆ

11waadi

ಸಂವಿಧಾನ ಉಳಿಯದಿದ್ದರೆ ಸೌರ್ಹಾದತೆಗೆ ಧಕ್ಕೆ: ಅಪ್ಪಗೇರೆ

ಹೊರಬಂತು “ಶುಭಮಂಗಳ” ಟೀಸರ್‌

ಹೊರಬಂತು “ಶುಭಮಂಗಳ” ಟೀಸರ್‌

jds

ಸರ್ಕಾರದಿಂದ ರೈತರ ನಿರ್ಲಕ್ಷ್ಯ: ಆಕ್ರೋಶ

ಡಾರ್ಲಿಂಗ್‌ ಕೃಷ್ಣ “ಶುಗರ್‌ ಫ್ಯಾಕ್ಟರಿ” ಚಿತ್ರೀಕರಣ ಪೂರ್ಣ

ಡಾರ್ಲಿಂಗ್‌ ಕೃಷ್ಣ “ಶುಗರ್‌ ಫ್ಯಾಕ್ಟರಿ” ಚಿತ್ರೀಕರಣ ಪೂರ್ಣ

10protest

20ರಂದು ತಾಲೂಕು ಕೇಂದ್ರಗಳಲ್ಲಿ ಪ್ರತಿಭಟನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.