ನಾನು ಯಾರ ತಂಟೆಗೂ ಹೋಗಲ್ಲ,ಬಂದ್ರೆ ಬಿಡಲ್ಲ!:ಲಕ್ಷ್ಮೀ ಹೆಬ್ಬಾಳ್ಕರ್
Team Udayavani, Sep 30, 2018, 4:36 PM IST
ದಾವಣಗೆರೆ: ನಾನು ಯಾರ ತಂಟೆಗೂ ಹೋಗುವುದಿಲ್ಲ, ನನ್ನ ತಂಟೆಗೆ ಬಂದರೆ ಬಿಡುವುದಿಲ್ಲ ಎಂದು ಕಾಂಗ್ರೆಸ್ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಗುಡುಗಿ ತಮ್ಮ ರಾಜಕೀಯ ವಿರೋಧಿಗಳಿಗೆ ಟಾಂಗ್ ನೀಡಿದ್ದಾರೆ.
ಭಾನುವಾರ ಡಾ.ಮಹಾಂತ ಸ್ವಾಮಿಗಳ ಜಯಂತಿ ಉತ್ಸವದಲ್ಲಿ ಹೇಳಿಕೆ ನೀಡಿದ್ದು, ನಾನು ಪಂಚಮಸಾಲಿ ಸಮಾಜ ಕಲಿಸಿದ ಆದರ್ಶದಿಂದ ಗೆದ್ದಿದ್ದೇನೆ. ಮರಾಠ ಪ್ರಾಬಲ್ಯ ಇರುವ ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಗೆದ್ದಿದ್ದೇನೆ. ಅಲ್ಲಿ ಕಾಂಗ್ರೆಸ್ ಗೆದ್ದ ಇತಿಹಾಸವೆ ಇರಲಿಲ್ಲ ಎಂದರು.
ಸಮಾರಂಭದಲ್ಲಿ ಪಾಲ್ಗೊಂಡ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಬಿಜೆಪಿ 30 ಕೋಟಿ ರೂ ಆಮಿಷ ನೀಡಿದ ಹೇಳಿಕೆಯನ್ನು ಮತ್ತೆ ಸಮರ್ಥಿಸಿಕೊಂಡು, ಸಮಯ ಬಂದಾಗ ಹೇಳುತ್ತೇನೆ ಎಂದು ಸವಾಲು ಹಾಕಿದ ಬಿಜೆಪಿ ನಾಯಕರಿಗೆ ತಿರುಗೇಟು ನೀಡಿದರು.
‘ಡಿಕೆಶಿ ನಿಷ್ಠಾವಂತೆ’ ಎಂದಿದ್ದ ಬಿಜೆಪಿ ಮಾಜಿ ಶಾಸಕ ಸಂಜಯ್ ಪಾಟೀಲ್‌ಗೆ ತಿರುಗೇಟು ನೀಡಿ ‘ಸಂಜಯಣ್ಣನ ಭಾಷೆ ಸಂಸ್ಕೃತಿ ಎಲ್ಲರಿಗೂ ಗೊತ್ತಿದೆ. ಅವರ ಮಾತಿಗೆ ಏನು ಉತ್ತರ ಕೊಡುವುದಿಲ್ಲ. ನನ್ನ ಕ್ಷೇತ್ರದ ಜನತೆ ಉತ್ತರ ಕೊಟ್ಟಿದ್ದಾರೆ. ಇನ್ನೂ ಉತ್ತರ ಬೇಕಾದರೆ ನಾಲ್ಕುವರೆ ವರ್ಷದ ಬಳಿಕ ನನ್ನೆದುರು ಸ್ಪರ್ಧಿಸಲಿ’ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಯುವರಾಜ್ ಸಿಂಗ್ ದಾಖಲೆ ಸರಿಗಟ್ಟಿದ ಕೈರನ್ ಪೊಲಾರ್ಡ್! ಆರು ಬಾಲ್ ಗೆ ಆರು ಸಿಕ್ಸ್ !
ನಿಮ್ಮ ಗ್ರಹಬಲ: ನಿಮ್ಮಿಂದ ಅನಾವಶ್ಯಕ ಖರ್ಚು ಮಾಡಿಸುವ ಗೆಳೆಯರು ದೊರೆತಾರು..!
ಸಿಮ್ ಹ್ಯಾಕ್ : ಮಣಿಪಾಲದವರ ನಂಬರ್ ಬಿಹಾರದವರಿಗೆ ! ದೂರವಾಣಿ ಸಂಸ್ಥೆಗೆ ಪೊಲೀಸರ ನೋಟಿಸ್
ಜಾರಕಿಹೊಳಿ ರಾಜೀನಾಮೆ: ರಾಜ್ಯ ರಾಜಕಾರಣದ ದಿಕ್ಕು ಬದಲಿಸುವ ಸಾಧ್ಯತೆ
1ರಿಂದ 5ಕ್ಕೂ ಪೂರ್ಣ ತರಗತಿ: ಅನುಮತಿ ಕೋರಿ ಸರಕಾರಕ್ಕೆ ಪತ್ರ