ವರ್ಷಾಂತ್ಯಕ್ಕೆ ಅನಿಲಭಾಗ್ಯ ಯೋಜನೆ ಅನುಷ್ಠಾನ

Team Udayavani, Oct 10, 2017, 10:41 AM IST

10-11.jpg

ಬೆಂಗಳೂರು: ಕೇಂದ್ರದ “ಉಜ್ವಲ’ ಯೋಜನೆಗೆ ಪರ್ಯಾಯವಾಗಿ ರಾಜ್ಯ ಸರ್ಕಾರ ಜಾರಿಗೆ ತಂದಿದ್ದ “ಮುಖ್ಯಮಂತ್ರಿ ಅನಿಲಭಾಗ್ಯ’ ಯೋಜನೆಗೆ ಅಂತೂ ಕಾಲ ಕೂಡಿ ಬಂದಿದ್ದು, ಡಿಸೆಂಬರ್‌ನಿಂದ ಈ ಯೋಜನೆ ಅನುಷ್ಠಾನಗೊಳ್ಳಲಿದೆ.

ಮುಖ್ಯಮಂತ್ರಿ ಅನಿಲಭಾಗ್ಯ ಯೋಜನೆ ಅನುಷ್ಠಾನ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ನವರ ಅಧ್ಯಕ್ಷತೆಯಲ್ಲಿ ಸೋಮವಾರ ವಿಧಾನಸೌಧದಲ್ಲಿ ನಡೆದ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ಗ್ಯಾಸ್‌ ಕಂಪನಿಗಳ ಪ್ರತಿನಿಧಿಗಳ ಸಭೆ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಆಹಾರ ಸಚಿವ ಯು.ಟಿ. ಖಾದರ್‌, ಡಿಸೆಂಬರ್‌ನಿಂದ ಯೋಜನೆ ಅನುಷ್ಠಾನಕ್ಕೆ ತರಲು ಸಭೆಯಲ್ಲಿ ತೀರ್ಮಾನಿ
ಸಲಾಯಿತು ಎಂದು ಹೇಳಿದರು.

ಮುಖ್ಯಮಂತ್ರಿ ಅನಿಲ ಭಾಗ್ಯ ಯೋಜನೆಗೆ ಈ ತಿಂಗಳಿಂದಲೇ ಆನ್‌ಲೈನ್‌ ಮೂಲಕ ಅರ್ಜಿ ಸ್ವೀಕರಿಸಲಾಗುವುದು. ಇದಕ್ಕಾಗಿ ಸಾಫ್ಟ್ವೇರ್‌ ಸಿದ್ಧಪಡಿಸಲಾಗಿದೆ. ಬಿಪಿಎಲ್‌ ಕುಟುಂಬದ ಫ‌ಲಾನುಭವಿಗಳು ತಮ್ಮ ಆಧಾರ್‌ ಸಂಖ್ಯೆಯೊಂದಿಗೆ ಗ್ರಾ.ಪಂ.ಗಳಲ್ಲಿ ಅರ್ಜಿ ಸಲ್ಲಿಸಬೇಕು. ಆ ಅರ್ಜಿಗಳನ್ನು ಗ್ಯಾಸ್‌ ಕಂಪೆನಿಗಳ ಬಳಿ ಇರುವ ಅಡುಗೆ ಅನಿಲ ಬಳಕೆದಾರರ ಮಾಹಿತಿಯೊಂದಿಗೆ ತಾಳೆ ಹಾಕಲಾಗುವುದು. ಈಗಾಗಲೇ ಗ್ಯಾಸ್‌ ಸಂಪರ್ಕ ಪಡೆದುಕೊಂಡಿದ್ದರೆ, ಅಂತಹ ಅರ್ಜಿಗಳು ತನ್ನಿಂತಾನೆ ತಿರಸ್ಕೃತವಾಗುತ್ತವೆ. ಉಳಿದ ಅರ್ಜಿಗಳ ಪರಿಶೀಲನೆಗೆ ಕಾಲಾವಕಾಶ ಬೇಕಾಗುತ್ತದೆ. ಹೀಗಾಗಿ ಡಿಸೆಂಬರ್‌ನಿಂದ ಯೋಜ ನೆಗೆ ಅನುಷ್ಠಾನಗೊಳಿಸಲಾಗುವುದು ಎಂದರು.

ಸಾಮಾನ್ಯ ರೀತಿಯಲ್ಲಿ ಗ್ಯಾಸ್‌ ಸಂಪರ್ಕ ಪಡೆದುಕೊಂಡ ಕುಟುಂಬಗಳು ಮತ್ತು ಕೇಂದ್ರದ “ಉಜ್ವಲ’ ಯೋಜನೆಯ ಫ‌ಲಾನುಭವಿಗಳಿಗೆ ಮುಖ್ಯಮಂತ್ರಿ ಅನಿಲ ಭಾಗ್ಯ ಯೋಜನೆಯ ಸೌಲಭ್ಯ ಸಿಗುವುದಿಲ್ಲ. ಎಲ್ಲರಿಗೂ ಗ್ಯಾಸ್‌ ಸಂಪರ್ಕ ಸಿಗಬೇಕು ಎಂಬ ಉದ್ದೇಶದಿಂದ ರಾಜ್ಯ ಸರ್ಕಾರ ಈ ಯೋಜನೆ ಜಾರಿಗೆ ತಂದಿದೆ. ಈ ಯೋಜನೆಯಡಿ ಪ್ರತಿ ಕುಟುಂಬಕ್ಕೆ ಗ್ಯಾಸ್‌ ಸಂಪರ್ಕ, ಸ್ಟೌ ಜತೆಗೆ ಮೊದಲ
ಎರಡು ಸಿಲಿಂಡರ್‌ ಮತ್ತು ರಿಫಿಲಿಂಗ್‌ ಉಚಿತವಾಗಿ ನೀಡಲಾಗುವುದು. ಒಂದು ಬಡ ಕುಟುಂಬಕ್ಕೆ ವರ್ಷಕ್ಕೆ 2 ಸಿಲಿಂಡರ್‌ ಬೇಕಾಗುತ್ತದೆ ಎಂದು ಸಮೀಕ್ಷೆ ಹೇಳಿದೆ.   ಅದಕ್ಕಾಗಿ 2 ಸಿಲಿಂಡರ್‌ಗಳನ್ನು ನಿಗದಿಪಡಿಸಲಾಗಿದೆ. ಯೋಜನೆ ಅನುಷ್ಠಾನದ ಬಳಿಕ, ಹೆಚ್ಚು ಸಿಲಿಂಡರ್‌ ಬೇಕು ಎಂದು ಕಂಡು ಬಂದರೆ, ಆಗ ಪರಿಶೀಲಿಸಲಾಗುವುದು. ಇದಕ್ಕಾಗಿ ಪ್ರತಿ ಕುಟುಂಬಕ್ಕೆ 4,040 ರೂ. ಸರ್ಕಾರ ಭರಿಸಲಿದೆ. ಇದಕ್ಕೆ ಒಟ್ಟು 1,100 ಕೋಟಿ ರೂ. ವೆಚ್ಚ ಆಗಲಿದೆ. 15 ರಿಂದ 20 ಲಕ್ಷ ಫ‌ಲಾನುಭವಿಗಳು ಇದರ ಪ್ರಯೋಜನ ಪಡೆದುಕೊಳ್ಳಬಹುದು ಎಂಬ ಅಂದಾಜಿದೆ.  ಹೆಚ್ಚುವರಿ ಬೇಕಾಗುವ 1 ಲಕ್ಷ ಸಿಲಿಂಡರ್‌ಗಳನ್ನು ಪೂರೈಸಲು ಗ್ಯಾಸ್‌ ಕಂಪೆನಿಗಳು ಒಪ್ಪಿಕೊಂಡಿವೆ ಎಂದು ಖಾದರ್‌ ವಿವರಿಸಿದರು.

ಕೇಂದ್ರದ ಯೋಜನೆಗೆ ಪರ್ಯಾಯ
ಕೇಂದ್ರ ಸರ್ಕಾರದ ಉಜ್ವಲ ಯೋಜನೆಗೆ ಪರ್ಯಾಯವಾಗಿ ಸೀಮೆ ಎಣ್ಣೆ ಬಳಸುವ ಗ್ಯಾಸ್‌ ಸಂಪರ್ಕ ಇಲ್ಲದ ಬಿಪಿಎಲ್‌ ಕುಟುಂಬಗಳಿಗೆ ಉಚಿತ ಅಡುಗೆ ಅನಿಲ ಸಂಪರ್ಕ ನೀಡಲು ರಾಜ್ಯ ಸರ್ಕಾರ ಪ್ರಸಕ್ತ ವರ್ಷದ ಬಜೆಟ್‌ ನಲ್ಲಿ “ಮುಖ್ಯಮಂತ್ರಿ ಅನಿಲಭಾಗ್ಯ ಯೋಜನೆ’ ಜಾರಿಗೆ ತರುವುದಾಗಿ ಘೋಷಿಸಿತ್ತು. ಜೂನ್‌ 1ರಿಂದ ಈ ಯೋಜನೆ ಅನುಷ್ಠಾನಗೊಳಿಸಲು ತೀರ್ಮಾನಿಸಲಾಗಿತ್ತು. ಆದರೆ, ಉಜ್ವಲ ಯೋಜನೆಯ ಫ‌ಲಾನುಭವಿಗಳಿಗೆ ರಾಜ್ಯ ಸರ್ಕಾರಿಂದ ಉಚಿತ ಸ್ಟೌ ಮತ್ತು ಬರ್ನರ್‌ ನೀಡುವ ಪ್ರಸ್ತಾವನೆಯನ್ನು ಕೇಂದ್ರ ಸರ್ಕಾರ ತಳ್ಳಿ ಹಾಕಿತ್ತು. ಈ ಮಧ್ಯೆ ಉಜ್ವಲ ಯೋಜನೆಯ ಫ‌ಲಾನುಭವಿಗಳ ಗುರಿ ಪೂರ್ಣಗೊಳ್ಳುವವರಿಗೆ ಹೊಸ ಗ್ಯಾಸ್‌ ಸಂಪರ್ಕ
ನೀಡದಿರಲು ಕೇಂದ್ರ ಸರ್ಕಾರ ತೀರ್ಮಾನಿಸಿದೆ ಅದಕ್ಕಾಗಿ ಅನಿಲ ಭಾಗ್ಯ ಯೋಜನೆ ವಿಳಂಬವಾಗುತ್ತಿದೆ ಎಂದು ಹೇಳಲಾಗಿತ್ತು. ಇದೀಗ, ಡಿಸೆಂಬರ್‌ನಿಂದ ಯೋಜನೆ ಜಾರಿಗೆ ತರಲು ರಾಜ್ಯ ಸರ್ಕಾರ ನಿರ್ಧರಿಸಿದೆ.

ಟಾಪ್ ನ್ಯೂಸ್

astro

ಬುಧವಾರದ ರಾಶಿ ಫಲ, ಇಲ್ಲಿವೆ ನಿಮ್ಮ ಗ್ರಹಬಲ

ನಿಯಮ ಗೌರವಿಸಿ, ಉಲ್ಲಂಘನೆ ಮಾಡಲೇಬೇಡಿ; ಚೀನಕ್ಕೆ ಕ್ವಾಡ್‌ ರಾಷ್ಟ್ರಗಳ ಕಠೊರ ಎಚ್ಚರಿಕೆ

ನಿಯಮ ಗೌರವಿಸಿ, ಉಲ್ಲಂಘನೆ ಮಾಡಲೇಬೇಡಿ; ಚೀನಕ್ಕೆ ಕ್ವಾಡ್‌ ರಾಷ್ಟ್ರಗಳ ಕಠೊರ ಎಚ್ಚರಿಕೆ

ಮಂಗಳೂರಿನಿಂದ ಬೆಂಗಳೂರಿಗೆ ಬೇಕಾಗಿದೆ ಬೆಳಗ್ಗೆ ವಿಮಾನ

ಮಂಗಳೂರಿನಿಂದ ಬೆಂಗಳೂರಿಗೆ ಬೇಕಾಗಿದೆ ಬೆಳಗ್ಗೆ ವಿಮಾನ

ಕಾಂಗ್ರೆಸ್‌ ಚುನಾವಣಾ ಸಮಿತಿಯಲ್ಲಿ ರಾಜ್ಯದ ನಾಲ್ವರ ನೇಮಕ

ಕಾಂಗ್ರೆಸ್‌ ಚುನಾವಣಾ ಸಮಿತಿಯಲ್ಲಿ ರಾಜ್ಯದ ನಾಲ್ವರ ನೇಮಕ

ಸಿಆರ್‌ಝಡ್‌ ಮರಳಿಲ್ಲದೆ ದರ ಏರಿಕೆ ಭೀತಿ ?

ಸಿಆರ್‌ಝಡ್‌ ಮರಳಿಲ್ಲದೆ ದರ ಏರಿಕೆ ಭೀತಿ ?

ಸಾಗರದಡಿ ಸಕ್ಕರೆಯ ನಿಕ್ಷೇಪ ಪತ್ತೆ! ಸಮುದ್ರದ ತಳದಲ್ಲಿ “ಸುಕ್ರೋಸ್‌’ ಮಾದರಿಯಲ್ಲಿ ಸಂಗ್ರಹ

ಸಾಗರದಡಿ ಸಕ್ಕರೆಯ ನಿಕ್ಷೇಪ ಪತ್ತೆ! ಸಮುದ್ರದ ತಳದಲ್ಲಿ “ಸುಕ್ರೋಸ್‌’ ಮಾದರಿಯಲ್ಲಿ ಸಂಗ್ರಹ

ಗೆಲುವೆಂಬ ಮರೀಚಿಕೆಯ ಬೆನ್ನು ಹತ್ತಿ….

ಗೆಲುವೆಂಬ ಮರೀಚಿಕೆಯ ಬೆನ್ನು ಹತ್ತಿ….ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಮುಗಿಯದ ಪಠ್ಯಪುಸ್ತಕ ಪರಿಷ್ಕರಣೆ ವಿವಾದ

ಮುಗಿಯದ ಪಠ್ಯಪುಸ್ತಕ ಪರಿಷ್ಕರಣೆ ವಿವಾದ

ರಾಜ್ಯದಲ್ಲಿ50 ಸಾವಿರ ಕೋಟಿ ರೂ. ಹೂಡಿಕೆ; ಇಂಧನ ಕ್ಷೇತ್ರದಲ್ಲಿ ಭರ್ಜರಿ ಒಪ್ಪಂದ

ರಾಜ್ಯದಲ್ಲಿ50 ಸಾವಿರ ಕೋಟಿ ರೂ. ಹೂಡಿಕೆ; ಇಂಧನ ಕ್ಷೇತ್ರದಲ್ಲಿ ಭರ್ಜರಿ ಒಪ್ಪಂದ

ವಿಧಾನ ಪರಿಷತ್‌ ಚುನಾವಣೆ: 3 ಪಕ್ಷಗಳಿಂದ 7 ಅಭ್ಯರ್ಥಿಗಳ ನಾಮಪತ್ರ ಸಲ್ಲಿಕೆ

ವಿಧಾನ ಪರಿಷತ್‌ ಚುನಾವಣೆ: 3 ಪಕ್ಷಗಳಿಂದ 7 ಅಭ್ಯರ್ಥಿಗಳ ನಾಮಪತ್ರ ಸಲ್ಲಿಕೆ

ಅಗ್ನಿಶಾಮಕ ಇಲಾಖೆಯಲ್ಲೂ ನೇಮಕಾತಿ ಅಕ್ರಮ:  7 ಮಂದಿ ಮೇಲೆ ಪ್ರಕರಣ ದಾಖಲು

ಅಗ್ನಿಶಾಮಕ ಇಲಾಖೆಯಲ್ಲೂ ನೇಮಕಾತಿ ಅಕ್ರಮ:  7 ಮಂದಿ ಮೇಲೆ ಪ್ರಕರಣ ದಾಖಲು

ಭಕ್ತಿ, ಮಾರುಕಟ್ಟೆಯಲ್ಲಿ ಖರೀದಿಸುವ ಸರಕಲ್ಲ: ಪೇಜಾವರ ಶ್ರೀ

ಭಕ್ತಿ, ಮಾರುಕಟ್ಟೆಯಲ್ಲಿ ಖರೀದಿಸುವ ಸರಕಲ್ಲ: ಪೇಜಾವರ ಶ್ರೀ

MUST WATCH

udayavani youtube

SSLC ಸಾಧಕರಿಗೆ ಉದಯವಾಣಿ ಸನ್ಮಾನ

udayavani youtube

ಉಡುಪಿ : ಹಲವು ಸಂಶಯಗಳನ್ನು ಹುಟ್ಟು ಹಾಕಿದ ಯುವಜೋಡಿ ಸಾವು ಪ್ರಕರಣ

udayavani youtube

ವೈದ್ಯರ ನಿರ್ಲಕ್ಷದಿಂದ ನೆಲದ ಮೇಲೆ ನರಳಾಡಿದ ಗರ್ಭಿಣಿ

udayavani youtube

ಎಸೆಸೆಲ್ಸಿ, ಪಿಯುಸಿ ನಂತರ ಅಗಾಧ ಅವಕಾಶ : “ಉದಯವಾಣಿ’ ವಿಶೇಷ ಕಾರ್ಯಕ್ರಮ

udayavani youtube

ದಾವೋಸ್ ನಲ್ಲಿ ಸಿಎಂ : ವರ್ಲ್ಡ್ ಎಕನಾಮಿಕ್ ಫೋರಮ್ ಸಮಾವೇಶದಲ್ಲಿ ಭಾಗಿ

ಹೊಸ ಸೇರ್ಪಡೆ

ಸಿದ್ದರಾಮಯ್ಯ-ಡಿಕೆಶಿ ಪ್ರತಿಷ್ಠೆ: ಹೈಕಮಾಂಡ್‌ಗೂ ತಲೆಬಿಸಿ

ಸಿದ್ದರಾಮಯ್ಯ-ಡಿಕೆಶಿ ಪ್ರತಿಷ್ಠೆ: ಹೈಕಮಾಂಡ್‌ಗೂ ತಲೆಬಿಸಿ

astro

ಬುಧವಾರದ ರಾಶಿ ಫಲ, ಇಲ್ಲಿವೆ ನಿಮ್ಮ ಗ್ರಹಬಲ

ನಿಯಮ ಗೌರವಿಸಿ, ಉಲ್ಲಂಘನೆ ಮಾಡಲೇಬೇಡಿ; ಚೀನಕ್ಕೆ ಕ್ವಾಡ್‌ ರಾಷ್ಟ್ರಗಳ ಕಠೊರ ಎಚ್ಚರಿಕೆ

ನಿಯಮ ಗೌರವಿಸಿ, ಉಲ್ಲಂಘನೆ ಮಾಡಲೇಬೇಡಿ; ಚೀನಕ್ಕೆ ಕ್ವಾಡ್‌ ರಾಷ್ಟ್ರಗಳ ಕಠೊರ ಎಚ್ಚರಿಕೆ

ಮಂಗಳೂರಿನಿಂದ ಬೆಂಗಳೂರಿಗೆ ಬೇಕಾಗಿದೆ ಬೆಳಗ್ಗೆ ವಿಮಾನ

ಮಂಗಳೂರಿನಿಂದ ಬೆಂಗಳೂರಿಗೆ ಬೇಕಾಗಿದೆ ಬೆಳಗ್ಗೆ ವಿಮಾನ

ಕಾಂಗ್ರೆಸ್‌ ಚುನಾವಣಾ ಸಮಿತಿಯಲ್ಲಿ ರಾಜ್ಯದ ನಾಲ್ವರ ನೇಮಕ

ಕಾಂಗ್ರೆಸ್‌ ಚುನಾವಣಾ ಸಮಿತಿಯಲ್ಲಿ ರಾಜ್ಯದ ನಾಲ್ವರ ನೇಮಕ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.