ಶಾಸಕರನ್ನು ತಡೆಯಲು ಹೂಡಿರುವ ಷಡ್ಯಂತ್ರ
Team Udayavani, Jul 14, 2019, 3:00 AM IST
ಬೆಂಗಳೂರು: ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ವಿಶ್ವಾಸಮತ ಯಾಚನೆ ಮಾಡುವುದಾಗಿ ಹೇಳಿದ್ದಾರೆ. ಕಾಂಗ್ರೆಸ್, ಜೆಡಿಎಸ್ ಶಾಸಕರು ಪಕ್ಷ ಬಿಟ್ಟು ಹೋಗುವುದನ್ನು ತಡೆಯಲು ಮುಖ್ಯಮಂತ್ರಿಗಳು ಮಾಡಿರುವ ವ್ಯವಸ್ಥಿತ ರಾಜಕೀಯ ಷಡ್ಯಂತ್ರವಿದು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಕಿಡಿ ಕಾರಿದರು.
ನಗರದ ಡಾಲರ್ ಕಾಲೋನಿಯ ತಮ್ಮ ನಿವಾಸದ ಬಳಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಾವುದೇ ಕಾರಣಕ್ಕೂ ಮೈತ್ರಿ ಸರ್ಕಾರಕ್ಕೆ ಬಹುಮತವಿಲ್ಲ. ಹೀಗಾಗಿ, ವಿಶ್ವಾಸಮತ ಯಾಚಿಸುವುದರಲ್ಲಿ ಅರ್ಥವೇ ಇಲ್ಲ. ಸದ್ಯದ ವಾತಾವರಣ ಬಿಜೆಪಿಗೆ ಅನುಕೂಲಕರವಾಗಿದೆ. ಆದರೂ ವಿಶ್ವಾಸಮತ ಯಾಚಿಸುವ ಧೈರ್ಯವನ್ನು ಸಿಎಂ ಮಾಡಿದ್ದಾರೆ. ಅದನ್ನು ಸ್ವಾಗತಿಸುತ್ತೇನೆ. ಸರ್ಕಾರ ಕೆಲವೇ ದಿನಗಳಲ್ಲಿ ಬೀಳುವುದು ಖಚಿತ ಎಂದು ವಿಶ್ವಾಸದಿಂದ ನುಡಿದರು.
ನಾವು ನೋಡಿದ ಡಿಕೆಶಿ ಬೇರೆ: ಮಾಜಿ ಸಚಿವ ವಿ.ಸೋಮಣ್ಣ ಮಾತನಾಡಿ, ಸಚಿವ ಡಿ.ಕೆ.ಶಿವಕುಮಾರ್ ಅವರು ಒನ್ ಮ್ಯಾನ್ ಆರ್ಮಿ. ಆದರೆ, ನಾವು ನೋಡಿದ ಡಿಕೆಶಿಯೇ ಬೇರೆ. ಎರಡು- ಮೂರು ದಿನಗಳಿಂದ ನಡೆದುಕೊಳ್ಳುತ್ತಿರುವ ಡಿಕೆಶಿಯೇ ಬೇರೆ.
ತಮ್ಮ ಪಕ್ಕದಲ್ಲೇ ವಿಡಿಯೋ ಇಟ್ಕೊಂಡು ಅದನ್ನು ಕಳಿಸಬೇಕಾದವರಿಗೆಲ್ಲಾ ಕಳಿಸುತ್ತಾ ಕುಳಿತಿದ್ದಾರೆ. ಡಿ.ಕೆ.ಶಿವಕುಮಾರ್ ಯಾಕೆ ಹೀಗೆ ಮಾಡುತ್ತಿದ್ದಾರೆ ಎನ್ನುವುದು ನಮಗೆ ಗೊತ್ತು. ಮಾಹಿತಿ ಇಲ್ಲದೆ ನಾನೇನೂ ಮಾತನಾಡುವುದಿಲ್ಲ ಎಂದು ಮಾರ್ಮಿಕವಾಗಿ ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ರಾಯಚೂರು: ಲಾರಿ ಬೈಕ್ ನಡುವೆ ಢಿಕ್ಕಿ; ಬೈಕ್ ನಲ್ಲಿದ್ದ ಒಂದೇ ಕುಟುಂಬದ ಮೂವರ ಸಾವು
ರಾಯಚೂರು: ಬೊಲೆರೋ ವಾಹನ ಢಿಕ್ಕಿ; ಬೈಕ್ ಸವಾರ ಸಾವು,ಪತ್ನಿ ಗಂಭೀರ
ಅಗ್ನಿಪಥ್ ರ್ಯಾಲಿಯಲ್ಲಿ ಭಾಗವಹಿಸಿ ವಾಪಾಸಾಗುತ್ತಿದ್ದ ಯುವಕ ಬೈಕ್ ಅಪಘಾತದಲ್ಲಿ ಸಾವು
ಲಿಂಗಾಯಿತರಿಗೆ ಓಬಿಸಿ ಮೀಸಲಾತಿ ನೀಡಿ, ಇಲ್ಲದಿದ್ರೆ ಆಕ್ರೋಶ ಎದುರಿಸಿ: ಜಯಮೃತ್ಯುಂಜಯಶ್ರೀ
ಆ.19 ರಿಂದ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಎಂಬಿ ಪಾಟೀಲ್ ರಾಜ್ಯ ಪ್ರವಾಸ
MUST WATCH
ಹೊಸ ಸೇರ್ಪಡೆ
ವಿಪರೀತ ಕುಡಿತದ ಚಟ; ಕಿಡ್ನಿ ವೈಫಲ್ಯದಿಂದ ಖಿನ್ನತೆಗೊಳಗಾಗಿ ವ್ಯಕ್ತಿ ಆತ್ಮಹತ್ಯೆ
ಅಮೂಲ್ ಹಾಲಿನ ಬೆಲೆ ಪ್ರತಿ ಲೀಟರ್ಗೆ 2 ರೂ. ಏರಿಕೆ: ಆ.17 ರಿಂದ ಪರಿಷ್ಕೃತ ದರ ಜಾರಿ
ಬಾಲಕಿಯ ಮೇಲೆ ಅತ್ಯಾಚಾರ ಅಪ್ರಾಪ್ತ ಬಾಲಕ ಸೇರಿದಂತೆ ಆರು ಮಂದಿಯ ಬಂಧನ
ರಾಯಚೂರು: ಲಾರಿ ಬೈಕ್ ನಡುವೆ ಢಿಕ್ಕಿ; ಬೈಕ್ ನಲ್ಲಿದ್ದ ಒಂದೇ ಕುಟುಂಬದ ಮೂವರ ಸಾವು
ತ್ರಿವಳಿ ತಲಾಖ್ ಮತ್ತು ತಲಾಖ್-ಎ-ಹಸನ್ ಒಂದೇ ಅಲ್ಲ: ಸುಪ್ರೀಂ ಕೋರ್ಟ್