ಮೇಲ್ಮನೆಯಲ್ಲಿ ಮೂರು ವಿಧೇಯಕಗಳಿಗೆ ಅಸ್ತು

Team Udayavani, Dec 18, 2018, 6:00 AM IST

8.jpg

ವಿಧಾನಪರಿಷತ್ತು: ವಿವಿಧ ಪಕ್ಷಗಳ ಸದಸ್ಯರ ಹಲವು ಸಲಹೆ, ಎಚ್ಚರಿಕೆ ಕಿವಿ ಮಾತುಗಳೊಂದಿಗೆ ವಿಧಾನಸಭೆಯಲ್ಲಿ
ಅನುಮೋದನೆಗೊಂಡ ಮೂರು ವಿಧೇಯಕ(ತಿದ್ದುಪಡಿ)ಗಳಿಗೆ ಪರಿಷತ್‌ನಲ್ಲಿ ಧ್ವನಿ ಮತದ ಅಂಗೀಕಾರ ನೀಡಲಾಯಿತು.
ಬೆಂಗಳೂರಿನ ರೈ ತಾಂತ್ರಿಕ ವಿಶ್ವ ವಿದ್ಯಾಲಯ (ತಿದ್ದುಪಡಿ)ವಿಧೇಯ ಕವನ್ನು ಉನ್ನತ ಶಿಕ್ಷಣಸಚಿವ ಜಿ.ಟಿ.ದೇವೇಗೌಡ ಪರವಾಗಿ ಕೃಷಿ ಸಚಿವ ಶಿವಶಂಕರ ಮಂಡನೆ ಮಾಡಿ ಮಾತನಾಡಿ, ರೈ ವಿವಿಯವರು ಯುಜಿಸಿ ಅಡಿಯಲ್ಲಿ ವಿವಿ ಆರಂಭಿಸಿ ಕೃಷಿ ತಾಂತ್ರಿಕ ಪದವಿ ಬೋಧನೆ, ಐಸಿಆರ್‌ ನಿಯಮ ಉಲ್ಲಂಘಿಸಿ ಬೇಕಾಬಿಟ್ಟಿ ಪ್ರವೇಶ ಆರೋಪದ ಹಿನ್ನಲೆಯಲ್ಲಿ ಈ ತಿದ್ದುಪಡಿ ವಿಧೇಯಕ ತರಲಾಗುತ್ತಿದೆ ಎಂದರು.

ಕರ್ನಾಟಕ ಜೀವರಕ್ಷಕ ಮತ್ತು ವೈದ್ಯಕೀಯ ವೃತ್ತಿನಿರತ (ತುರ್ತು ಸನ್ನಿ ವೇಶಗಳಲ್ಲಿ ರಕ್ಷಣೆ ಮತ್ತು ನಿಯಂತ್ರಣ) ತಿದ್ದುಪಡಿ ವಿಧೇಯಕವನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಶಿವಾನಂದ ಪಾಟೀಲ ಮಂಡಿಸಿ ಮಾತನಾಡಿ, ಈಗಾಗಲೇ ಅಂಗೀಕಾರವಾಗಿರುವ ಈ ವಿಧೇಯಕಕ್ಕೆ ರಾಷ್ಟ್ರಪತಿಯವರ ಅಂಕಿತವೂ ದೊರೆತಿದೆ. ಆದರೆ, ಮೂರು ಅಂಶಗಳನ್ನು ತಿದ್ದುಪಡಿ ತರಲು ಸೂಚಿಸಿದ್ದರಿಂದ ಇದನ್ನು ಮಂಡಿಸಲಾಗುತ್ತಿದೆ ಎಂದರು. 

ಅದೇರೀತಿ ಕರ್ನಾಟಕ ಸಾರ್ವಜನಿಕ ಸಂಗ್ರಹಣೆಗಳಲ್ಲಿ ಪಾರದರ್ಶಕತೆ (ತಿದ್ದುಪಡಿ)ವಿಧೇಯಕವನ್ನು ಮುಖ್ಯಮಂತ್ರಿ ಅವರ ಪರವಾಗಿ ಕಾನೂನು ಸಚಿವ ಕೃಷ್ಣ ಬೈರೇಗೌಡ ಮಂಡಿಸಿದರು. ಸರಕಾರದ ಖರೀದಿಗಳಲ್ಲಿ ಪಾರರ್ದಶಕ ಕಾಯ್ದೆಯನ್ನು ಜಾರಿಗೊಳಿಸಲಾಗಿತ್ತಾದರೂ, ಕಾಲ ಬದಲಾದಂತೆ ಕೆಲ ಬದಲಾವಣೆಗೆ 2014-15ರಲ್ಲಿ ರಚಿಸ ಲಾಗಿದ್ದ ಸಮಿತಿ ಶಿಫಾರಸು ಅನ್ವಯ ಕೆಲ ವೊಂದು ತಿದ್ದು ಪಡಿಗಳನ್ನು ತರಲಾಗಿದೆ. ಇಂದಿನ ತಾಂತ್ರಿಕತೆಗೆ ಪೂರಕವಾಗಿ ಹಾಗೂ ಟೆಂಡರ್‌ ಪ್ರಾಧಿಕಾರದ ರಚನೆ, ಕಾರ್ಯವ್ಯಾಪ್ತಿ ಕುರಿತಾಗಿ ಮಾಹಿತಿ ನೀಡಿದರು.

ಉಗ್ರಪ್ಪ ಸದನದಲ್ಲಿಲ್ಲ 
ವಿವಿ ವಿಧೇಯಕ ಮಂಡನೆ ಸಂದರ್ಭದಲ್ಲಿ ಮಾತನಾಡಿದ ಕಾಂಗ್ರೆಸ್‌ ಸದಸ್ಯ ಎಚ್‌. ಎಂ.ರೇವಣ್ಣ, ಈ ಹಿಂದೆ ಸದನದಲ್ಲಿ
ಇದೇ ವಿಧೇಯಕ ಚರ್ಚೆಗೆ ಬಂದಾಗ ಸದಸ್ಯರಾದ ವಿ.ಎಸ್‌. ಉಗ್ರಪ್ಪ ಅವರು, ಸುದೀರ್ಘ‌ವಾಗಿ ಮಾತನಾಡಿದ್ದರು. ಆದರೆ ಅವರು ಈಗಿಲ್ಲ ಎಂದರು. ಉಪಮುಖ್ಯ ಮಂತ್ರಿ ಪರಮೇಶ್ವರ ಅವರು, ಈಗಿಲ್ಲ ಎಂದರೇನು, ಅವರು ಈ ಸದನದಲ್ಲಿ ಇಲ್ಲವೆಂದು ಹೇಳಿ ಎಂದು ಹಾಸ್ಯದ ಧಾಟಿಯಲ್ಲಿ ಹೇಳಿದರು. ಇದಕ್ಕೆ ರೇವಣ್ಣ ಅವರು ಈಗಿಲ್ಲ ಎಂದರೆ ಅವರು ಲೋಕಸಭೆಗೆ ಹೋಗಿದ್ದಾರೆ ಎಂದು ಹೇಳಿದೆ ಎಂದು ನಸುನಕ್ಕರು. ಕಾಂಗ್ರೆಸ್‌ ಸದಸ್ಯ ಸಿ.ಎಂ.ಇಬ್ರಾಹಿಂ ಮಾತನಾಡುವಾಗ, ಉಗ್ರಪ್ಪ ಅವರು ಪ್ರಧಾನಿ ಮೋದಿಯವರನ್ನು ನೋಡಲು ಹೋಗಿದ್ದಾರೆಂದು ಹೇಳಿದಾಗ ಸದನದಲ್ಲಿ ತಿಳಿ ನಗು ತೇಲಿತು.

ಟಾಪ್ ನ್ಯೂಸ್

ಎನ್‌ಐಎಯಿಂದ ಮುಂದುವರಿದ ದಾಳಿ

ಜಮ್ಮು- ಕಾಶ್ಮೀರ: ಎನ್‌ಐಎಯಿಂದ ಮುಂದುವರಿದ ದಾಳಿ

ಕೇರಳದಲ್ಲಿ ಇನ್ನೂ 2 ವಾರ ಮಳೆ;  9 ಆಣೆಕಟ್ಟಿಗೆ ರೆಡ್‌, 7 ಜಿಲ್ಲೆಗೆ ಯೆಲ್ಲೋ ಅಲರ್ಟ್‌

ಕೇರಳದಲ್ಲಿ ಇನ್ನೂ 2 ವಾರ ಮಳೆ;  9 ಆಣೆಕಟ್ಟಿಗೆ ರೆಡ್‌, 7 ಜಿಲ್ಲೆಗೆ ಯೆಲ್ಲೋ ಅಲರ್ಟ್‌

ಶೀಘ್ರ 5 ಸಾವಿರ ಶಿಕ್ಷಕರ ನೇಮಕಾತಿ: ಸಚಿವ ಬಿ.ಸಿ.ನಾಗೇಶ್‌

ಶೀಘ್ರ 5 ಸಾವಿರ ಶಿಕ್ಷಕರ ನೇಮಕಾತಿ: ಸಚಿವ ಬಿ.ಸಿ.ನಾಗೇಶ್‌

ನಟ ಆಸಿಫ್ ಶೇಖ್‌ ವರ್ಲ್ಡ್ ರೆಕಾರ್ಡ್‌

ನಟ ಆಸಿಫ್ ಶೇಖ್‌ ವರ್ಲ್ಡ್ ರೆಕಾರ್ಡ್‌

ಶೂಟಿಂಗ್‌ ವೇಳೆ ನಟನ ಗನ್‌ನಿಂದ ಫೈರಿಂಗ್‌; ಸಿನಿಮಾ ಟೋಗ್ರಾಫ‌ರ್‌ ಸಾವು

ಶೂಟಿಂಗ್‌ ವೇಳೆ ನಟನ ಗನ್‌ನಿಂದ ಫೈರಿಂಗ್‌; ಸಿನಿಮಾ ಟೋಗ್ರಾಫ‌ರ್‌ ಸಾವು

ಎರಡೂ ಡೋಸ್‌ ಲಸಿಕೆ ಪಡೆದವರಿಗಷ್ಟೇ ಹಜ್‌ ಯಾತ್ರೆಗೆ ಅನುಮತಿ

ಎರಡೂ ಡೋಸ್‌ ಲಸಿಕೆ ಪಡೆದವರಿಗಷ್ಟೇ ಹಜ್‌ ಯಾತ್ರೆಗೆ ಅನುಮತಿ

hunasuru news

ಕೋಳಿಗಳಲ್ಲಿ ಕೊಕ್ಕರೆ ರೋಗ! : ನೂರಾರು ಕೋಳಿಗಳ ಸಾವು

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಶೀಘ್ರ 5 ಸಾವಿರ ಶಿಕ್ಷಕರ ನೇಮಕಾತಿ: ಸಚಿವ ಬಿ.ಸಿ.ನಾಗೇಶ್‌

ಶೀಘ್ರ 5 ಸಾವಿರ ಶಿಕ್ಷಕರ ನೇಮಕಾತಿ: ಸಚಿವ ಬಿ.ಸಿ.ನಾಗೇಶ್‌

ಕೊವಿಡ್‌ 3ನೇ ಡೋಸ್‌ ಕೊಡುವ ಪ್ರಸ್ತಾಪ ಇಲ್ಲ : ಡಾ. ಅಶ್ವತ್ಥ್ ನಾರಾಯಣ

ಕೊವಿಡ್‌ 3ನೇ ಡೋಸ್‌ ಕೊಡುವ ಪ್ರಸ್ತಾಪ ಇಲ್ಲ : ಡಾ. ಅಶ್ವತ್ಥ್ ನಾರಾಯಣ

siddaramaiah

ಸಿದ್ದರಾಮಯ್ಯ, ನಿಮಗೂ 2 ಡೋಸ್ ಲಸಿಕೆ ಸಿಕ್ಕಿದೆಯಲ್ಲವೇ? : ಬಿಜೆಪಿ ಪ್ರಶ್ನೆ

police

ಕಾನೂನು ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ಕೇಸ್ : ಪೋಲೀಸರ ಅಮಾನತು

1-belur

ರಾಘವೇಂದ್ರ ಮತ್ತು ವಿಜಯೇಂದ್ರರ ಹಣವೆಲ್ಲವೂ ಷಡಕ್ಷರಿ ಬಳಿ : ಬೇಳೂರು ಬಾಂಬ್

MUST WATCH

udayavani youtube

ಆಟೋ ಚಾಲಕನ ನತದೃಷ್ಟ ಕಥೆಯಿದು

udayavani youtube

ನಮ್ಮ ದೇಶ ಕರ್ತವ್ಯ ಪಾಲಿಸಿದೆ : ಪ್ರಧಾನಿ ನರೇಂದ್ರ ಮೋದಿ

udayavani youtube

ಶೆಟ್ಟಿ ನೀನು ಹುಡುಗಿ ತರ ಮಾತಾಡ್ತೀಯ

udayavani youtube

POLYHOUSE ನಲ್ಲಿ ಸೌತೆಕಾಯಿ ತರಕಾರಿ ಕೃಷಿ; ಇಲ್ಲಿದೆ ಸಂಪೂರ್ಣ ಮಾಹಿತಿ…

udayavani youtube

ನೂರು ಕೋಟಿ ಡೋಸ್‌ ಲಸಿಕಾ ಗುರಿ ತಲುಪಿದ ಸಂಭ್ರಮ

ಹೊಸ ಸೇರ್ಪಡೆ

ಟಿ20 ವಿಶ್ವಕಪ್‌: ಸೂಪರ್‌-12 ಹಂತಕ್ಕೆ ನಮೀಬಿಯಾ

ಟಿ20 ವಿಶ್ವಕಪ್‌: ಸೂಪರ್‌-12 ಹಂತಕ್ಕೆ ನಮೀಬಿಯಾ

ಎನ್‌ಐಎಯಿಂದ ಮುಂದುವರಿದ ದಾಳಿ

ಜಮ್ಮು- ಕಾಶ್ಮೀರ: ಎನ್‌ಐಎಯಿಂದ ಮುಂದುವರಿದ ದಾಳಿ

ಕೇರಳದಲ್ಲಿ ಇನ್ನೂ 2 ವಾರ ಮಳೆ;  9 ಆಣೆಕಟ್ಟಿಗೆ ರೆಡ್‌, 7 ಜಿಲ್ಲೆಗೆ ಯೆಲ್ಲೋ ಅಲರ್ಟ್‌

ಕೇರಳದಲ್ಲಿ ಇನ್ನೂ 2 ವಾರ ಮಳೆ;  9 ಆಣೆಕಟ್ಟಿಗೆ ರೆಡ್‌, 7 ಜಿಲ್ಲೆಗೆ ಯೆಲ್ಲೋ ಅಲರ್ಟ್‌

ಶೀಘ್ರ 5 ಸಾವಿರ ಶಿಕ್ಷಕರ ನೇಮಕಾತಿ: ಸಚಿವ ಬಿ.ಸಿ.ನಾಗೇಶ್‌

ಶೀಘ್ರ 5 ಸಾವಿರ ಶಿಕ್ಷಕರ ನೇಮಕಾತಿ: ಸಚಿವ ಬಿ.ಸಿ.ನಾಗೇಶ್‌

ನಟ ಆಸಿಫ್ ಶೇಖ್‌ ವರ್ಲ್ಡ್ ರೆಕಾರ್ಡ್‌

ನಟ ಆಸಿಫ್ ಶೇಖ್‌ ವರ್ಲ್ಡ್ ರೆಕಾರ್ಡ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.