ಪಕ್ಷೇತರ ಸ್ಪರ್ಧೆ ನನಗೆ ಹೊಸದಲ್ಲ

Team Udayavani, Apr 3, 2019, 3:00 AM IST

ಹುಬ್ಬಳ್ಳಿ: ಧಾರವಾಡ ಲೋಕಸಭಾ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಆಯ್ಕೆ ವಿಚಾರದಲ್ಲಿ ಯಾವ ಕಾರಣಕ್ಕಾಗಿ ಪಕ್ಷ ವಿಳಂಬ ಮಾಡುತ್ತಿದೆ ಎಂಬುದು ಗೊತ್ತಾಗುತ್ತಿಲ್ಲ. ಇದರಿಂದ ಪಕ್ಷದ ಕಾರ್ಯಕರ್ತರಿಗೆ ಹಿಂಸೆಯಾಗಿದೆ. ಪಕ್ಷೇತರ ಸ್ಪರ್ಧೆ ನನಗೆ ಅಸಾಧ್ಯ ಅಂತೇನಿಲ್ಲ.

ಹಿಂದೆ ವಿಧಾನಸಭೆಗೆ ಪಕ್ಷೇತರನಾಗಿ ಗೆಲುವು ಸಾಧಿಸಿದ ಉದಾಹರಣೆಯಿದೆ ಎಂದು ಮಾಜಿ ಸಚಿವ ಹಾಗೂ ಟಿಕೆಟ್‌ ಆಕಾಂಕ್ಷಿ ವಿನಯ ಕುಲಕರ್ಣಿ ಹೇಳಿದರು. ಸುದ್ದಿಗಾರರೊಂದಿಗೆ ಮಾತನಾಡಿ, ಪಕ್ಷ ಹಾಗೂ ಪಕ್ಷದ ಮುಖಂಡರನ್ನು ನಂಬಿದ್ದೇನೆ.

ಅವರು ಯಾವ ನಿರ್ದೇಶನ ನೀಡುತ್ತಾರೋ ಅಂದರಂತೆ ನಡೆದುಕೊಳ್ಳುತ್ತೇನೆ. ನಾಮಪತ್ರ ಸಲ್ಲಿಸಲು ಎಲ್ಲಾ ಸಿದ್ಧತೆಗಳನ್ನು ಮಾಡಿಕೊಂಡಿದ್ದೇನೆ. ಸಾಕಷ್ಟು ದಾಖಲೆಗಳು ಬೇಕಾಗಿರುವ ಕಾರಣಕ್ಕೆ ಈಗಾಗಲೇ ತಯಾರಿ ಮಾಡಿಕೊಳ್ಳುತ್ತಿದ್ದೇನೆ. ಬಿ ಫಾರಂಗಾಗಿ ಕಾಯುತ್ತಿದ್ದೇನೆ ಎಂದರು.

ಟಿಕೆಟ್‌ ಘೋಷಣೆ ಇಷ್ಟೊಂದು ವಿಳಂಬ ಆಗಬಾರದಿತ್ತು. ಇದರಿಂದ ಪಕ್ಷದ ಕಾರ್ಯಕರ್ತರು ನೊಂದುಕೊಂಡಿದ್ದು, ಸಾಕಷ್ಟು ಟೀಕೆಗಳನ್ನು ಅನುಭವಿಸುವಂತಾಗಿದೆ. ಇಷ್ಟೆಲ್ಲ ಆದ ನಂತರ ಟಿಕೆಟ್‌ ಕೊಡುವುದು ಸೂಕ್ತವಲ್ಲ ಎನ್ನಿಸುತ್ತಿದೆ. ನಿತ್ಯವೂ ಪಕ್ಷದ ಕಾರ್ಯಕರ್ತರಿಗೆ ಉತ್ತರ ನೀಡಿ ಬೇಸರ ಮೂಡಿದೆ ಎಂದರು.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ