ಜಿಸ್ಯಾಟ್-31 ಯಶಸ್ವಿ ಉಡಾವಣೆ


Team Udayavani, Feb 7, 2019, 1:08 AM IST

63.jpg

ಬೆಂಗಳೂರು: ಬಾಹ್ಯಕಾಶ ಕ್ಷೇತ್ರದಲ್ಲಿ ಮತ್ತೂಂದು ಮೈಲಿಗಲ್ಲು ಸಾಧಿಸಿರುವ ಭಾರತ, ಬುಧವಾರ ಅತ್ಯಾಧುನಿಕ ಸಂವಹನ ಉಪಗ್ರಹ ಜಿಸ್ಯಾಟ್-31ನ್ನು ಯಶಸ್ವಿಯಾಗಿ ಉಡಾವಣೆ ಮಾಡಿದೆ.

ಅರಬ್ಬಿ ಸಮುದ್ರ, ಬಂಗಾಳಕೊಲ್ಲಿ, ಹಿಂದು ಮಹಾಸಾಗರ ಸೇರಿದಂತೆ ಆಳ ಸಮುದ್ರದಲ್ಲಿ ಸಂಪರ್ಕ ಸಾಧಿಸಲು ಮತ್ತು ದೂರಸಂಪರ್ಕ ಸೇವೆಗಳು, ಎಟಿಎಂಗಳಿಗೆ ವಿಸ್ಯಾಟ್ ಸಂಪರ್ಕ, ಷೇರು ವಿನಿಮಯ, ಈ-ಆಡಳಿತದ ಅಪ್ಲಿಕೇಷನ್‌ಗಳು, ದೂರಸಂಪರ್ಕ ಅಪ್ಲಿಕೇಷನ್ಸ್‌ಗಳಿಗೆ ಅವಶ್ಯವಿದ್ದಾಗ ಡಾಟಾ ಸಗಟು ರೂಪದಲ್ಲಿ ವರ್ಗಾವಣೆ ಮಾಡಲು ಇದರಿಂದ ಅನುಕೂಲ ಆಗಲಿದೆ. ಯೂರೋಪ್‌ ಲಾಂಚ್ ಸರ್ವಿಸ್‌ ಪ್ರೊವೈಡರ್‌- ಏರಿಯಾನ್‌ಸ್ಪೇಸ್‌ ರಾಕೆಟ್ ಸಹಯೋಗದಲ್ಲಿ ಅತ್ಯಾಧುನಿಕ ಸಂವಹನ ಉಪಗ್ರಹ ಜಿಸ್ಯಾಟ್-31ನ್ನು ಫ್ರಾನ್ಸ್‌ನ ಕೌರೋದಲ್ಲಿರುವ ಏರಿಯಾನ್‌ ಕೇಂದ್ರದಿಂದ ಬುಧವಾರ ಮುಂಜಾನೆ 2.30ಕ್ಕೆ ಉಡಾವಣೆ ಮಾಡಲಾಯಿತು. ಏರಿಯಾನ್‌-5 ವೆಹಿಕಲ್‌ ಜತೆಗೆ ಜಿಸ್ಯಾಟ್-31 ಯಾವುದೇ ದೋಷವಿಲ್ಲದೇ 42 ನಿಮಿಷಕ್ಕೆ ತನ್ನ ಕಕ್ಷೆ ಸೇರಿದೆ. ಕಕ್ಷೆ ಸೇರಿದ ನಂತರ ಏರಿಯಾನ್‌-5 ವೆಹಿಕಲ್‌ನಿಂದ ಜಿಸ್ಯಾಟ್-31 ಬೇರ್ಪಟ್ಟು ಇಸ್ರೋ ನಿಯಂತ್ರಣಕ್ಕೆ ಬಂದಿದೆ. ಉಡಾವಣೆಯ ನಂತರ ಕೌರೋದಲ್ಲಿ ಈ ಸಂಬಂಧ ಪ್ರತಿಕ್ರಿಯೆ ನೀಡಿರುವ ಇಸ್ರೊ ಸತೀಶ್‌ ಧವನ್‌ ಬಾಹ್ಯಾಕಾಶ ಕೇಂದ್ರ ನಿರ್ದೇಶಕ ಎಸ್‌. ಪಾಂಡಿಯನ್‌, ಇದೊಂದು ಅಮೂಲ್ಯವಾದ ಸಾಧನೆ ಎಂದರು. ಜಿಸ್ಯಾಟ್-31ನ್ನು ಕಕ್ಷೆಗೆ ಸೇರಿಸಲು ಸಹಕರಿಸಿದ ಏರಿಯಾನ್‌ ಸ್ಪೇಸ್‌ಗೂ ಧನ್ಯವಾದ ಸಲ್ಲಿಸಿದರು. ಕು-ಬ್ಯಾಂಡ್‌ ಹೊಂದಿರುವ ಹೈ-ಪವರ್‌(ಶಕ್ತಿಶಾಲಿ) ಸಂವಹನ ಉಪಗ್ರಹ ಇದಾಗಿದ್ದು, ಇದರಿಂದ ಸಾಕಷ್ಟು ಉಪಯೋಗ ಮತ್ತು ಸೇವೆ ಸಿಗಲಿದೆ. ಜತೆಗೆ ಅತಿ ಶೀಘ್ರದಲ್ಲಿ ಕಾಲಾವಧಿ ಮುಗಿಯಲಿರುವ ಉಪಗ್ರಹಗಳ ಸ್ಥಾನವನ್ನು ಇದು ತುಂಬಲಿದೆ ಎಂದು ವಿವರಿಸಿದರು.

ಟಾಪ್ ನ್ಯೂಸ್

ಕಿತ್ತೂರಿನಲ್ಲಿ ಮೋಡಿ ಮಾಡಿದ ವಿಜಯಪ್ರಕಾಶ ಹಾಡು

ಕಿತ್ತೂರಿನಲ್ಲಿ ಮೋಡಿ ಮಾಡಿದ ವಿಜಯಪ್ರಕಾಶ ಹಾಡು

ಪಾಕ್‌ ಪ್ರಚಂಡ ಪ್ರದರ್ಶನ; ಭಾರತ ಪರಾಭವ

ಪಾಕ್‌ ಪ್ರಚಂಡ ಪ್ರದರ್ಶನ; ಭಾರತ ಪರಾಭವ

ಅ.29-ನ.2ರ ವರೆಗೆ ಪ್ರಧಾನಿ ವಿದೇಶ ಪ್ರವಾಸ

ಅ.29-ನ.2ರ ವರೆಗೆ ಪ್ರಧಾನಿ ವಿದೇಶ ಪ್ರವಾಸ

ಬಿಜೆಪಿ-ಜೆಡಿಎಸ್‌ಗೆ ನಾನೇ ಟಾರ್ಗೆಟ್‌: ಸಿದ್ದರಾಮಯ್ಯ

ಬಿಜೆಪಿ-ಜೆಡಿಎಸ್‌ಗೆ ನಾನೇ ಟಾರ್ಗೆಟ್‌: ಸಿದ್ದರಾಮಯ್ಯ

ಸಾಕು ನಾಯಿಗೆ ಸಸ್ಯಹಾರಿ ಊಟ ಕೊಟ್ಟರೆ ಜೈಲು!

ಸಾಕು ನಾಯಿಗೆ ಸಸ್ಯಹಾರಿ ಊಟ ಕೊಟ್ಟರೆ ಜೈಲು!

ಸಿಡಿದ ಅಸಲಂಕ; ಘರ್ಜಿಸಿದ ಶ್ರೀಲಂಕಾ

ಸಿಡಿದ ಅಸಲಂಕ; ಘರ್ಜಿಸಿದ ಶ್ರೀಲಂಕಾ

Untitled-1

ಕನ್ನಡದಲ್ಲೇ ಸಹಿ ಮಾಡುವ ಅಭ್ಯಾಸ ಬೆಳೆಸಿ ಕೊಳ್ಳೋಣ: ಸಚಿವ ಸುನಿಲ್‌ ಕುಮಾರ್‌

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Untitled-1

ಕನ್ನಡದಲ್ಲೇ ಸಹಿ ಮಾಡುವ ಅಭ್ಯಾಸ ಬೆಳೆಸಿ ಕೊಳ್ಳೋಣ: ಸಚಿವ ಸುನಿಲ್‌ ಕುಮಾರ್‌

ಸಿಎಂ ಸ್ಥಾನವನ್ನ ಸಿದ್ದರಾಮಯ್ಯ ಬೇರೆಯವರಿಗೆ ಬಿಟ್ಟುಕೊಡುತ್ತಾರಾ? ಹೆಚ್ ಡಿಕೆ ಪ್ರಶ್ನೆ

ಸಿಎಂ ಸ್ಥಾನವನ್ನ ಸಿದ್ದರಾಮಯ್ಯ ಬೇರೆಯವರಿಗೆ ಬಿಟ್ಟುಕೊಡುತ್ತಾರಾ? ಹೆಚ್ ಡಿಕೆ ಪ್ರಶ್ನೆ

ಬೊಮ್ಮಾಯಿ ಯಾವತ್ತಾದ್ರೂ ಕುರಿ ಕಾಯ್ದಿದ್ದಾರಾ? : ಸಿದ್ಧರಾಮಯ್ಯ

ಬೊಮ್ಮಾಯಿ ಯಾವತ್ತಾದ್ರೂ ಕುರಿ ಕಾಯ್ದಿದ್ದಾರಾ? : ಸಿದ್ಧರಾಮಯ್ಯ

nikhil

ನಿಖಿಲಣ್ಣ ಶಾಸಕರಾಗುವುದು ಬೇಡ, ಸುಮಲತಾ ವಿರುದ್ಧ ಗೆಲ್ಲಲೇಬೇಕು

9,136 ಕೋಟಿ 89 ಲಕ್ಷ ರೂ. ಕೃಷಿ ಸಾಲ ನೀಡಿಕೆ – ಸಚಿವ ಸೋಮಶೇಖರ್

9,136 ಕೋಟಿ 89 ಲಕ್ಷ ರೂ. ಕೃಷಿ ಸಾಲ ನೀಡಿಕೆ – ಸಚಿವ ಸೋಮಶೇಖರ್

MUST WATCH

udayavani youtube

ದಾಂಡೇಲಿ ನಗರದಲ್ಲಿ ಸಕ್ರೀಯಗೊಳ್ಳುತ್ತಿದೆ ಪೆಟ್ರೋಲ್ ಕಳ್ಳರ ಹಾವಳಿ

udayavani youtube

ಕಾಳಿ ನದಿ ದಂಡೆಯಿಂದ ಬಾಲಕನನ್ನು ಎಳೆದೊಯ್ದ ಮೊಸಳೆ : ಆತಂಕದಲ್ಲಿ ಸ್ಥಳೀಯರು

udayavani youtube

ರಸ್ತೆ ಬದಿ ಮಲಗಿದ್ದ ಗೋವು ಕಳ್ಳತನ : ಘಟನೆ ಕೃತ್ಯ ಸಿಸಿ ಕ್ಯಾಮೆರಾದಲ್ಲಿ ಬಯಲು

udayavani youtube

ಶಾರುಖ್ ಖಾನ್ ಬಿಜೆಪಿ ಸೇರಿದರೆ ಡ್ರಗ್ಸ್ ಪೌಡರ್ ಶುಗರ್ ಪೌಡರ್ ಆಗಿ ಬದಲಾಗಲಿದೆ

udayavani youtube

ಕುಮ್ಕಿ ಹಕ್ಕು ಅಂದ್ರೇನು?

ಹೊಸ ಸೇರ್ಪಡೆ

ಕಿತ್ತೂರಿನಲ್ಲಿ ಮೋಡಿ ಮಾಡಿದ ವಿಜಯಪ್ರಕಾಶ ಹಾಡು

ಕಿತ್ತೂರಿನಲ್ಲಿ ಮೋಡಿ ಮಾಡಿದ ವಿಜಯಪ್ರಕಾಶ ಹಾಡು

ಪಾಕ್‌ ಪ್ರಚಂಡ ಪ್ರದರ್ಶನ; ಭಾರತ ಪರಾಭವ

ಪಾಕ್‌ ಪ್ರಚಂಡ ಪ್ರದರ್ಶನ; ಭಾರತ ಪರಾಭವ

ಅ.29-ನ.2ರ ವರೆಗೆ ಪ್ರಧಾನಿ ವಿದೇಶ ಪ್ರವಾಸ

ಅ.29-ನ.2ರ ವರೆಗೆ ಪ್ರಧಾನಿ ವಿದೇಶ ಪ್ರವಾಸ

ಬಿಜೆಪಿ-ಜೆಡಿಎಸ್‌ಗೆ ನಾನೇ ಟಾರ್ಗೆಟ್‌: ಸಿದ್ದರಾಮಯ್ಯ

ಬಿಜೆಪಿ-ಜೆಡಿಎಸ್‌ಗೆ ನಾನೇ ಟಾರ್ಗೆಟ್‌: ಸಿದ್ದರಾಮಯ್ಯ

ಸಾಕು ನಾಯಿಗೆ ಸಸ್ಯಹಾರಿ ಊಟ ಕೊಟ್ಟರೆ ಜೈಲು!

ಸಾಕು ನಾಯಿಗೆ ಸಸ್ಯಹಾರಿ ಊಟ ಕೊಟ್ಟರೆ ಜೈಲು!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.