ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಅ.30ರಿಂದ ಅಂತಾರಾಷ್ಟ್ರೀಯ ಸಮ್ಮೇಳನ

Team Udayavani, Oct 27, 2019, 3:00 AM IST

ಬೆಳ್ತಂಗಡಿ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು, ಸಹಯೋಗ ಸಂಸ್ಥೆಗಳ ಜತೆ ಸೇರಿ ಬಡತನ ನಿವಾರಣೆ ಮತ್ತು ಗ್ರಾಮೀಣಾಭಿವೃದ್ಧಿಯಲ್ಲಿ ತೊಡಗಿಕೊಂಡಿರುವ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸಂಸ್ಥೆಗಳ ಜತೆಯಲ್ಲಿ ಚರ್ಚಿಸಲು ಬೆಂಗಳೂರಿನಲ್ಲಿ ಅಂತಾರಾಷ್ಟ್ರೀಯ ಸಮ್ಮೇಳನವೊಂದನ್ನು ಆಯೋಜಿಸಿದೆ. ಈ ಸಮ್ಮೇಳನ ಅ.30ರಿಂದ ನ.2ರ ವರೆಗೆ ಬೆಂಗಳೂರಿನ ದೇವನಹಳ್ಳಿ ಕ್ಲಾರ್ಕ್ಸ್ ಎಕ್ಸಾಟಿಕಾ ರಿಸಾರ್ಟ್‌ ಆ್ಯಂಡ್‌ ಸ್ಪಾದಲ್ಲಿ ನಡೆಯಲಿದೆ.

ಸಮ್ಮೇಳನವನ್ನು ಅ.30ರಂದು ಸಂಜೆ 4.30ಕ್ಕೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಉದ್ಘಾಟಿಸಲಿದ್ದು, ಸಿಎಂ ಯಡಿಯೂರಪ್ಪ ವಸ್ತು ಪ್ರದರ್ಶನ ಮಳಿಗೆಗಳನ್ನು ಉದ್ಘಾಟಿಸಲಿದ್ದಾರೆ. ಅಮೆರಿಕದ ಚಿಕಾಗೋ ನಗರದ ಪ್ರಾಧ್ಯಾಪಕ ಡಾ.ಲ್ಯಾರಿ ರೀಡ್‌ ಅವರು ಪ್ರಧಾನ ಭಾಷಣ ಮಾಡಲಿದ್ದಾರೆ. ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಅವರು ಅಧ್ಯಕ್ಷತೆ ವಹಿಸಲಿದ್ದು, ನಬಾರ್ಡ್‌ ಸಂಸ್ಥೆ ಅಧ್ಯಕ್ಷ ಡಾ. ಹರ್ಷಕುಮಾರ್‌ ಭಾನ್ವಾಲ ಅವರು ಯೋಜನೆಯ ಸಾಧನಾ ಪುಸ್ತಕವನ್ನು ಬಿಡುಗಡೆ ಮಾಡಲಿದ್ದಾರೆ.

ಅ.31 ಮತ್ತು ನ.1ರಂದು ಏಳು ಪ್ರಮುಖ ಚರ್ಚಾಗೋಷ್ಠಿಗಳಿವೆ. ಅಲ್ಲದೆ, ರಿಸರ್ವ್‌ ಬ್ಯಾಂಕ್‌ನ ಮಾಜಿ ಗವರ್ನರ್‌ ಡಾ.ಚಕ್ರವರ್ತಿ ರಂಗರಾಜನ್‌, ಮಾಜಿ ಉಪರಾಜ್ಯಪಾಲ ಡಾ.ಎಚ್‌.ಆರ್‌.ಖಾನ್‌ ಮತ್ತು ಡಾ.ಡಿ.ವೀರೇಂದ್ರ ಹೆಗ್ಗಡೆಯವರಿಂದ ವಿಶೇಷ ಅಧಿವೇಶನ ಆಯೋಜಿಸಲಾಗಿದೆ. ನ.1ರಂದು ಸಂಜೆ 4.30ಕ್ಕೆ ನಡೆಯುವ ಸಮಾರೋಪದಲ್ಲಿ ವಿಶ್ವಸಂಸ್ಥೆಯ ಬದಲಿ ಇಂಧನ ವಿಭಾಗದ ಮಾಜಿ ಮುಖ್ಯಸ್ಥ ಡಾ.ಖ್ಯಾಂಡೆ ಯಮ್ಕುಲ್ಲಾ ಸಿಯಾರ ಲಿಯೋನ್‌ ಅವರು ಪ್ರಧಾನ ಭಾಷಣ ಮಾಡಿ, ಅಂತಾರಾಷ್ಟ್ರೀಯ ಸಂಸ್ಥೆಯನ್ನು ಉದ್ಘಾಟಿಸಲಿದ್ದಾರೆ.

ಈ ಸಮ್ಮೇಳನಕ್ಕೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಉತ್ತಮ ಪ್ರತಿಕ್ರಿಯೆ ಲಭ್ಯವಾಗಿದ್ದು, ಅಮೆರಿಕ, ಆಸ್ಟ್ರೇಲಿಯ, ಯೂರೋಪ್‌, ಆಫ್ರಿಕಾ ಮತ್ತು ಏಷ್ಯಾ ಖಂಡದ 80ಕ್ಕೂ ಹೆಚ್ಚಿನ ದೇಶದ ಪ್ರತಿನಿಧಿಗಳು ಈಗಾಗಲೇ ಹೆಸರು ನೋಂದಾಯಿಸಿಕೊಂಡಿದ್ದಾರೆ ಎಂದು ಯೋಜನೆಯ ಕಾರ್ಯ ನಿರ್ವಾಹಕ ನಿರ್ದೇಶಕ ಡಾ. ಎಲ್‌.ಎಚ್‌.ಮಂಜುನಾಥ್‌ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ

  • ಜಗಳೂರು: ಸಾರ್ವಜನಿಕ ಉದ್ಯಾನವನ ಮತ್ತು ರಸ್ತೆ ಮಧ್ಯೆ ಅನಧಿಕೃತವಾಗಿ ನಿರ್ಮಿಸಲಾಗಿದ್ದ ಧಾರ್ಮಿಕ ಶ್ರದ್ಧಾ ಕೇಂದ್ರಗಳ ತೆರವು ಕಾರ್ಯಾಚರಣೆಯನ್ನು ಭಾನುವಾರ...

  • ಕುಷ್ಟಗಿ: ಮಾರುಕಟ್ಟೆಯಲ್ಲಿ ವಿವಿಧ ಕಂಪನಿ, ಬ್ರ್ಯಾಂಡ್‌ಗಳ ಪೊರಕೆಗಳ ಅಬ್ಬರಕ್ಕೆ ಈಚಲು ಗರಿಯಿಂದ ತಯಾರಿಸಿದ ಈಚಲು, ಹುಲ್ಲಿನ ಪೊರಕೆ ಬೇಡಿಕೆ ಕ್ರಮೇಣ ಮಂಕಾಗುತ್ತಿದೆ....

  • ಶಹಾಪುರ: ಶಾಲಾ ದಿನಗಳಲ್ಲಿ ಮಕ್ಕಳಿಗೆ ಶಿಸ್ತು, ಸಂಯಮ ಹಾಗೂ ರಾಷ್ಟ್ರ ಪ್ರಜ್ಞೆ ಅರಿವು ಮಾಡಿಕೊಡುವ ಕರ್ನಾಟಕ ಪೊಲೀಸ್‌ ಇಲಾಖೆ ಯೋಜನೆಯೇ ಎಸ್‌ಪಿಸಿ ತುಂಬಾ ಉಪಯುಕ್ತವಾದದು...

  • ಕಲಬುರಗಿ: ನಮಗೆ ಪೆಟ್ಟು ಬಿದ್ದ ತಕ್ಷಣ "ಅಮ್ಮ' ಎನ್ನುತ್ತೇವೆ ಹೊರತು, "ಅಂಟಿ' ಅನ್ನಲ್ಲ. ಅಮ್ಮ ಎನ್ನುವ ಪದ ಹೃದಯದಿಂದ ಬರುವಂತದ್ದು, ಹಾಗೆ ಕನ್ನಡ ಭಾಷೆ ಕಣ- ಕಣದಲ್ಲಿ...

  • ಹನುಮಸಾಗರ: ಕೊಪ್ಪಳ ಜಿಲ್ಲೆಯ ಅತಿ ದೊಡ್ಡ ಗ್ರಾಪಂ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಹನುಮಸಾಗರ ಗ್ರಾಮದ ಪ್ರವಾಸಿ ಮಂದಿರ(ಐಬಿ) ಕುಡಿಯುವ ನೀರು ಹಾಗೂ ಸಿಬ್ಬಂದಿ...