ನಾಳೆ ಹುಬ್ಬಳ್ಳಿಯಲ್ಲಿ ಹೂಡಿಕೆದಾರರ ಮೇಳ


Team Udayavani, Feb 13, 2020, 3:07 AM IST

nale-hubba

ಹುಬ್ಬಳ್ಳಿ: ರಾಜ್ಯದ ದ್ವಿತೀಯ ಹಾಗೂ ತೃತೀಯ ಸ್ತರದ ನಗರಗಳಿಗೆ ಉದ್ಯಮಿಗಳನ್ನು ಆಹ್ವಾನಿಸುವ ನಿಟ್ಟಿನಲ್ಲಿ ಫೆ.14ರಂದು ನಗರದಲ್ಲಿ ನಡೆಯುವ ಹೂಡಿಕೆದಾರರ ಮೇಳದಲ್ಲಿ ಸಾವಿರಕ್ಕೂ ಹೆಚ್ಚಿನ ಉದ್ಯಮಿಗಳು ಭಾಗವಹಿಸುವ ನಿರೀಕ್ಷೆಯಿದ್ದು, ಸುಮಾರು 20ಕ್ಕೂ ಹೆಚ್ಚು ಉದ್ಯಮ ಸ್ಥಾಪನೆ ಒಡಂಬಡಿಕೆ ಆಗಲಿದೆ ಎಂದು ಬೃಹತ್‌ ಕೈಗಾರಿಕೆ ಸಚಿವ ಜಗದೀಶ ಶೆಟ್ಟರ್‌ವಿಶ್ವಾಸ ವ್ಯಕ್ತಪಡಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕರ್ನಾಟಕ ಎಂದರೆ ಬೆಂಗಳೂರು ಎನ್ನುವ ಮನಸ್ಥಿತಿ ದೂರ ಮಾಡಿ ಇತರೆ ನಗರಗಳಿಗೆ ಉದ್ದಿಮೆಗಳನ್ನು ಆಹ್ವಾನಿಸುವುದು ಪ್ರಮುಖ ಉದ್ದೇಶವಾಗಿದೆ. ಈ ನಿಟ್ಟಿನಲ್ಲಿ ಹಲವೆಡೆ ರೋಡ್‌ ಶೋ ಮಾಡಲಾಗಿದೆ. ಸುಮಾರು 6 ಸಾವಿರ ಉದ್ದಿಮೆದಾರರಿಗೆ ಆಮಂತ್ರಣ ಕಳುಹಿಸಲಾಗಿದೆ. ಮಂಗಳವಾರ ಮಧ್ಯಾಹ್ನದ ವೇಳೆಗೆ ಸುಮಾರು 650 ಉದ್ದಿಮೆದಾರರು ಪಾಲ್ಗೊಳ್ಳುವುದಾಗಿ ಖಚಿತಪಡಿಸಿದ್ದಾರೆ ಎಂದರು.

ಎಫ್‌ಎಂಸಿಜಿ ಕ್ಷೇತ್ರಕ್ಕೆ ಹೆಚ್ಚಿನ ಒತ್ತು ನೀಡಿದ್ದು, ಇದರೊಂದಿಗೆ ವಾಲ್‌, ಸೋಲಾರ್‌, ಆಟೋಮೊಬೈಲ್‌ ವಲಯದ ಉದ್ಯಮಗಳನ್ನು ಹೆಚ್ಚಿಗೆ ನಿರೀಕ್ಷಿಸಲಾಗುತ್ತಿದೆ. ಬಾಬಾ ರಾಮದೇವ ಅವರಿಗೆ ಫುಡ್‌ ಪಾರ್ಕ್‌ ಆರಂಭಿಸುವ ಕುರಿತು ಮನವಿ ಮಾಡಿದ್ದು, ಅವರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತ ವಾಗಿದೆ. ಈ ಭಾಗದಲ್ಲಿ ಪ್ರಮುಖವಾಗಿ ಬೆಳೆಯುವ ಮೆಕ್ಕೆಜೋಳ, ಮೆಣಸು, ದಾಳಿಂಬೆ, ದ್ರಾಕ್ಷಿ, ಪೇರು ಬೆಳೆಗಳ ಕುರಿತು ಪ್ರಸ್ತಾಪ ಮಾಡಲಾಗಿದೆ ಎಂದರು.

ಚೀನಾ ಮೂಲದ ಎಲೆಕ್ಟ್ರಿಕ್‌ ವಾಹನ ತಯಾರಿಸುವ ಕಂಪನಿಯೊಂದು ಈ ಭಾಗದಲ್ಲಿ ಘಟಕ ಆರಂಭಿಸಲು ಆಸಕ್ತಿ ತೋರಿದೆ. ಕೊರೊನಾ ವೈರಸ್‌ನಿಂದ ನಿಯೋಗ ಬರಲು ಸಾಧ್ಯವಾಗುತ್ತಿಲ್ಲ. ಭಾರತ ಫೋರ್ಜ್‌ ಕಂಪನಿಗೆ ಬೇಕಾದ ಅಗತ್ಯ ಭೂಮಿ ನೀಡಲು ಸರ್ಕಾರ ಸಿದ್ಧವಿತ್ತು.

ಆದರೆ ಆರ್ಥಿಕ ಹಿಂಜರಿತದಿಂದ ಹಿಂದೆ ಸರಿದಿದ್ದಾರೆ ವಿನಃ ರಾಜ್ಯ ಸರ್ಕಾರದ ಅಸಹಕಾರದಿಂದ ಅಲ್ಲ. ಉತ್ತರ ಕರ್ನಾಟಕ ಭಾಗದಲ್ಲಿ ಕೈಗಾರಿಕೆಗಳ ಆರಂಭಕ್ಕೆ ಬೇಕಾದ ಅಗತ್ಯ ಭೂಮಿ ಸೇರಿದಂತೆ ಮೂಲಸೌಲಭ್ಯ ನೀಡಲು ಸರ್ಕಾರ ಸಿದ್ಧವಿದೆ. ಯಾದಗಿರಿ ಕಡೆಚೂರಿನಲ್ಲಿ ಸುಮಾರು 2000 ಎಕರೆ ಭೂಮಿಯಿದ್ದು, ತೆಲಂಗಾಣ ಹಾಗೂ ಆಂಧ್ರ ಮೂಲದ ಕೈಗಾರಿಕೆಗಳು ತಮ್ಮ ಘಟಕ ವಿಸ್ತರಿಸಲು ಆಸಕ್ತಿ ತೋರಿವೆ ಎಂದರು.

ಹೊಸ ಕೈಗಾರಿಕೆ ನೀತಿ: ಉ.ಕ ಭಾಗದಲ್ಲಿ ಉದ್ದಿಮೆ ಆರಂಭಿಸಲು ಆಸಕ್ತಿ ತೋರುವ ಕೈಗಾರಿಕೋದ್ಯಮ ಗಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಹೊಸ ಕೈಗಾರಿಕೆ ನೀತಿಯಲ್ಲಿ ಸೌಲಭ್ಯ ಅಳವಡಿಸಲಾಗಿದೆ. ಅನು ಮೋದನೆಗಾಗಿ ಹಣಕಾಸು, ನಗರಾಭಿವೃದ್ಧಿ ಇಲಾಖೆಗೆ ಕಳುಹಿಸ ಲಾಗಿದೆ ಎಂದರು.

ಮೇಳಕ್ಕೆ ಮುಖ್ಯಮಂತ್ರಿ ಚಾಲನೆ: ಫೆ.14ರಂದು ಬೆಳಗ್ಗೆ 10ರಿಂದ 12ರವರೆಗೆ ಉತ್ತರ ಕರ್ನಾಟಕ ವಲಯದ ಶಕ್ತಿ ಸಾಮರ್ಥ್ಯ ಹಾಗೂ ಕೈಗಾರಿಕೆ ಕುರಿತು ಚರ್ಚೆ ನಡೆಯಲಿದೆ. ಮಧ್ಯಾಹ್ನ 12ಕ್ಕೆ ಸಿಎಂ ಯಡಿಯೂರಪ್ಪ ಮೇಳಕ್ಕೆ ಚಾಲನೆ ನೀಡುವರು. 2:30ಕ್ಕೆ ಎಫ್‌ಎಂಜಿಸಿ ಅಧಿವೇಶನ, 3:40ಕ್ಕೆ ಒಡಂಬಡಿಕೆ ಸಹಿ ಹಾಗೂ ಸಮಾರೋಪ ನಡೆಯಲಿದೆ. ಮೇಳಕ್ಕಾಗಿ ಸುಮಾರು 1,000 ಜನ ಕುಳಿತುಕೊಳ್ಳುವ ಸಾಮರ್ಥ್ಯದ ಜರ್ಮನ್‌ ಹ್ಯಾಂಗರ್‌ ಹವಾ ನಿಯಂತ್ರಿತ ಕೊಠಡಿ ವ್ಯವಸ್ಥೆ ಮಾಡಲಾಗಿದೆ.

ಕೇಂದ್ರ ಸಚಿವರಾದ ಪ್ರಹ್ಲಾದ ಜೋಶಿ, ಸದಾನಂದಗೌಡ ಹಾಗೂ ಸುರೇಶ ಅಂಗಡಿ ಪಾಲ್ಗೊಳ್ಳಲಿದ್ದಾರೆ. ಸಮಾರೋಪದಲ್ಲಿ ಉಪ ಮುಖ್ಯಮಂತ್ರಿಗಳಾದ ಗೋವಿಂದ ಕಾರ ಜೋಳ, ಡಾ| ಅಶ್ವಥ ನಾರಾಯಣ, ಲಕ್ಷ್ಮಣ ಸವದಿ, ಸಚಿವ ಸಿ.ಟಿ. ರವಿ ಹಾಗೂ ಸ್ಥಳೀಯ ಜನಪ್ರತಿನಿಧಿಗಳು ಆಗಮಿಸಲಿದ್ದಾರೆ. ಬೃಹತ್‌ ಮತ್ತು ಮಧ್ಯಮ ಕೈಗಾರಿಕಾ ಸಚಿವ ಜಗದೀಶ ಶೆಟ್ಟರ್‌ ಅಧ್ಯಕ್ಷತೆ ವಹಿಸಲಿದ್ದಾರೆ.

ರಾಜ್ಯದ ವಿವಿಧ ಕೈಗಾರಿಕೆ ಪ್ರದೇಶಗಳಿಂದ ಸುಮಾರು 72 ಕೋಟಿ ರೂ. ತೆರಿಗೆ ನೀಡುವುದು ಬಾಕಿ ಯಿದೆ ಎಂದು ಸ್ಥಳೀಯ ಸಂಸ್ಥೆಗಳ ವಾದ. ಆದರೆ ಕೆಐಡಿಬಿಯಿಂದ ಅಧಿಕೃತವಾಗಿ ಆಸ್ತಿ ಪರಭಾರೆ ಮಾಡದ ಹೊರತು ತೆರಿಗೆ ನಿರ್ಧರಿಸಲು ಬರುವುದಿಲ್ಲ. ಆದರೂ ತೆರಿಗೆ ವಿಧಿಸಿದ್ದು, 72 ಕೋಟಿ ರೂ. ಬಾಕಿ ಉಳಿದು ಕೊಂಡಿದೆ. ಪರಿಹಾರ ಕಂಡುಕೊಳ್ಳಲು ಸಿಎಂ ಜತೆ ಚರ್ಚೆ ನಡೆಸಿ ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು.
-ಜಗದೀಶ ಶೆಟ್ಟರ್‌, ಬೃಹತ್‌ ಕೈಗಾರಿಕೆ ಸಚಿವ

ಟಾಪ್ ನ್ಯೂಸ್

”ಮುತ್ಯಾ ಆರಾಮ ಅದಾನೂ…” ವಿಜಯೇಂದ್ರ ಬಳಿ ಬಿಎಸ್ ವೈ ಯೋಗಕ್ಷೇಮ ವಿಚಾರಿಸಿದ ಪೋರ

”ಮುತ್ಯಾ ಆರಾಮ ಅದಾನೂ…” ವಿಜಯೇಂದ್ರ ಬಳಿ ಬಿಎಸ್ ವೈ ಯೋಗಕ್ಷೇಮ ವಿಚಾರಿಸಿದ ಪೋರ

mamata

ಬಿಜೆಪಿ ಸೋಲಿಸಲು ಗೋವಾದ ಎಲ್ಲರೂ ಒಂದಾಗುವ : ಮಮತಾ ಬ್ಯಾನರ್ಜಿ

ಕಿತ್ತೂರಿನಲ್ಲಿ ಮನಸೂರೆಗೊಂಡ ಜನಪದ ಕಲಾವಾಹಿನಿ

ಕಿತ್ತೂರಿನಲ್ಲಿ ಮನಸೂರೆಗೊಂಡ ಜನಪದ ಕಲಾವಾಹಿನಿ

hardep-singh-puri

ಲಸಿಕೆ ನೀಡಿಲ್ಲವೇ?:ತೈಲ ಬೆಲೆ ಏರಿಕೆ ಸಮರ್ಥಿಸಿಕೊಂಡ ಪೆಟ್ರೋಲಿಯಂ ಸಚಿವ

ಕಿತ್ತೂರು ಉತ್ಸವ ಬೆಳ್ಳಿ ಹಬ್ಬ ಸಂಭ್ರಮ: ವೀರಜ್ಯೋತಿಗೆ ಸ್ವಾಗತ, ಉತ್ಸವಕ್ಕೆ ಅದ್ಧೂರಿ ಚಾಲನೆ

ಕಿತ್ತೂರು ಉತ್ಸವ ಬೆಳ್ಳಿ ಹಬ್ಬ ಸಂಭ್ರಮ: ವೀರಜ್ಯೋತಿಗೆ ಸ್ವಾಗತ, ಉತ್ಸವಕ್ಕೆ ಅದ್ಧೂರಿ ಚಾಲನೆ

Untitled-1

ರಸ್ತೆ ಅಪಘಾತ: ಕೊಳಲಗಿರಿ ಮೂಲದ ಯುವಕ ಮೃತ್ಯು

ಬಿ.ವೈ.ವಿಜಯೇಂದ್ರ

ಉಪ ಚುನಾವಣೆ ಬಳಿಕ ರಾಜ್ಯದಲ್ಲಿ ಕಾಂಗ್ರೆಸ್ ಅಸ್ತಿತ್ವ ಶೂನ್ಯ : ಬಿ.ವೈ.ವಿಜಯೇಂದ್ರ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಡೀಮ್ಡ್ ಫಾರೆಸ್ಟ್‌ ಸಮಸ್ಯೆ ಶೀಘ್ರ ಇತ್ಯರ್ಥ

ಡೀಮ್ಡ್ ಫಾರೆಸ್ಟ್‌ ಸಮಸ್ಯೆ ಶೀಘ್ರ ಇತ್ಯರ್ಥ

ಜಿಲ್ಲೆಗೊಂದು ಮಾದರಿ ಎಂಜಿನಿಯರಿಂಗ್‌ ಕಾಲೇಜು

ಜಿಲ್ಲೆಗೊಂದು ಮಾದರಿ ಎಂಜಿನಿಯರಿಂಗ್‌ ಕಾಲೇಜು

ಶೀಘ್ರ 5 ಸಾವಿರ ಶಿಕ್ಷಕರ ನೇಮಕಾತಿ: ಸಚಿವ ಬಿ.ಸಿ.ನಾಗೇಶ್‌

ಶೀಘ್ರ 5 ಸಾವಿರ ಶಿಕ್ಷಕರ ನೇಮಕಾತಿ: ಸಚಿವ ಬಿ.ಸಿ.ನಾಗೇಶ್‌

ಕೊವಿಡ್‌ 3ನೇ ಡೋಸ್‌ ಕೊಡುವ ಪ್ರಸ್ತಾಪ ಇಲ್ಲ : ಡಾ. ಅಶ್ವತ್ಥ್ ನಾರಾಯಣ

ಕೊವಿಡ್‌ 3ನೇ ಡೋಸ್‌ ಕೊಡುವ ಪ್ರಸ್ತಾಪ ಇಲ್ಲ : ಡಾ. ಅಶ್ವತ್ಥ್ ನಾರಾಯಣ

siddaramaiah

ಸಿದ್ದರಾಮಯ್ಯ, ನಿಮಗೂ 2 ಡೋಸ್ ಲಸಿಕೆ ಸಿಕ್ಕಿದೆಯಲ್ಲವೇ? : ಬಿಜೆಪಿ ಪ್ರಶ್ನೆ

MUST WATCH

udayavani youtube

ಆಟೋ ಚಾಲಕನ ನತದೃಷ್ಟ ಕಥೆಯಿದು

udayavani youtube

ನಮ್ಮ ದೇಶ ಕರ್ತವ್ಯ ಪಾಲಿಸಿದೆ : ಪ್ರಧಾನಿ ನರೇಂದ್ರ ಮೋದಿ

udayavani youtube

ಶೆಟ್ಟಿ ನೀನು ಹುಡುಗಿ ತರ ಮಾತಾಡ್ತೀಯ

udayavani youtube

POLYHOUSE ನಲ್ಲಿ ಸೌತೆಕಾಯಿ ತರಕಾರಿ ಕೃಷಿ; ಇಲ್ಲಿದೆ ಸಂಪೂರ್ಣ ಮಾಹಿತಿ…

udayavani youtube

ನೂರು ಕೋಟಿ ಡೋಸ್‌ ಲಸಿಕಾ ಗುರಿ ತಲುಪಿದ ಸಂಭ್ರಮ

ಹೊಸ ಸೇರ್ಪಡೆ

13former

ಕೃಷಿ ಅಧಿಕಾರಿ ವಿರುದ್ಧ ಕ್ರಮ ಕೈಗೊಳ್ಳಲು ಆಗ್ರಹ

ದೊಡ್ಡಬಳ್ಳಾಪುರ- ಶವಸಂಸ್ಕಾರ ಚಿತ್ರದ ಪೋಸ್ಟರ್‌ ಬಿಡುಗ

ದೊಡ್ಡಬಳ್ಳಾಪುರ: ಶವಸಂಸ್ಕಾರ ಚಿತ್ರದ ಪೋಸ್ಟರ್‌ ಬಿಡುಗಡೆ

”ಮುತ್ಯಾ ಆರಾಮ ಅದಾನೂ…” ವಿಜಯೇಂದ್ರ ಬಳಿ ಬಿಎಸ್ ವೈ ಯೋಗಕ್ಷೇಮ ವಿಚಾರಿಸಿದ ಪೋರ

”ಮುತ್ಯಾ ಆರಾಮ ಅದಾನೂ…” ವಿಜಯೇಂದ್ರ ಬಳಿ ಬಿಎಸ್ ವೈ ಯೋಗಕ್ಷೇಮ ವಿಚಾರಿಸಿದ ಪೋರ

12hindu

ಬಾಂಗ್ಲಾ ಹಿಂದೂಗಳ ರಕ್ಷಣೆಗೆ ಆಗ್ರಹ

mamata

ಬಿಜೆಪಿ ಸೋಲಿಸಲು ಗೋವಾದ ಎಲ್ಲರೂ ಒಂದಾಗುವ : ಮಮತಾ ಬ್ಯಾನರ್ಜಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.