ಗೃಹಿಣಿಯೊಂದಿಗೆ ಬೆಂಗಳೂರಿನ ಐಪಿಎಸ್ ಅಧಿಕಾರಿಯ ರಾಸಲೀಲೆ ಬಯಲು!
Team Udayavani, Jul 15, 2018, 12:23 PM IST
ಬೆಂಗಳೂರು: ಬೆಂಗಳೂರು ಗ್ರಾಮಾಂತರ ಎಸ್‌ಪಿ ಡಾ.ಭೀಮಾಶಂಕರ್ ಗುಳೇದ್ ಅವರು ವಿವಾಹಿತ ಮಹಿಳೆಯೊಂದಿಗೆ ನಡೆಸಿರುವ ರಾಸಲೀಲೆ ಬಯಲಾಗಿದ್ದು ಮಾಧ್ಯಮಗಳಲ್ಲಿ ಪ್ರಸಾರವಾಗಿದೆ.
ದಾವಣಗರೆ ಮೂಲದ ಫೋಟೋ ಸ್ಟುಡಿಯೋ ಮಾಲಕನ ಪತ್ನಿಯೊಂದಿಗೆ ಪೊಲೀಸ್ ಸಮವಸ್ತ್ರದಲ್ಲೇ ರಾಸಲೀಲೆ ನಡೆಸಿರುವ ದೃಶ್ಯಗಳು ಬಯಲಾಗಿವೆ.
ದಾವಣಗೆರೆಯಲ್ಲಿ ಎಸ್‌ಪಿಯಾಗಿದ್ದ ವೇಳೆ ತನ್ನ ಅವಳಿ ಹೆಣ್ಣು ಮಕ್ಕಳ ಹುಟ್ಟು ಹಬ್ಬದ ಫೋಟೋ ತೆಗೆಸಲೆಂದು ಸ್ಟುಡಿಯೋಗೆ ತೆರಳಿದ ವೇಳೆ ಮಹಿಳೆಯ ಪರಿಚಯವಾಗಿ ಬಳಿಕ ಅನೈತಿಕ ಸಂಬಂಧ, ರಾಸಲೀಲೆಗೆ ತಿರುಗಿದೆ ಎಂದು ತಿಳಿದು ಬಂದಿದೆ.
ವಿಡಿಯೋದಲ್ಲಿರುವ ಮಹಿಳೆಯ ಪತಿ ನ್ಯಾಯಕ್ಕಾಗಿ ನ್ಯಾಯಲಯದ ಮೆಟ್ಟಿಲನ್ನೂ ಏರಿದ್ದು, ಹೈಕೋರ್ಟ್‌ನಲ್ಲಿ ಕೇಸು ದಾಖಲಿಸಿದ್ದಾರೆ.
ನನ್ನ ಪತ್ನಿಗೆ ಮಾನಸಿಕ ಒತ್ತಡ ಹಾಕಿ, ಅಧಿಕಾರದ ಬಲ ಪ್ರಯೋಗಿಸಿ ಮರಳು ಮಾಡಿ ದೌರ್ಜನ್ಯ ಎಸಗಿರುವುದಾಗಿ ದೂರಿನಲ್ಲಿ ಹೇಳಿಕೊಂಡಿರುವುದಾಗಿ ತಿಳಿದು ಬಂದಿದೆ.
ಡಿಸಿಎಂ, ಗೃಹ ಸಚಿವ ಡಾ.ಜಿ. ಪರಮೇಶ್ವರ್ ಅವರು ಮಾಧ್ಯಮಗಳ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ್ದು ‘ನನಗೆ ಈ ಬಗ್ಗೆ ಹೆಚ್ಚೇನು ತಿಳಿದು ಬಂದಿಲ್ಲ. ತಪ್ಪು ನಡೆದಿದ್ದರೆ ಕ್ರಮ ಕೈಗೊಳ್ಳರು ಡಿಜಿ, ಕಮಿಷನರ್ ಇದ್ದಾರೆ’ ಎಂದರು.