ಸತ್ಯ ಹೇಳಿದ್ದೇ ತಪ್ಪಾಯಿತಾ?: ರೋಷನ್ ಬೇಗ್
Team Udayavani, Jun 20, 2019, 3:06 AM IST
ಬೆಂಗಳೂರು: “ನಾನು ಸತ್ಯ ಹೇಳಿದ್ದಕ್ಕೆ ನನ್ನನ್ನು ಅಮಾನತು ಮಾಡಿದ್ದಾರೆ. ನಾನು ಕಾರ್ಯಕರ್ತರ ಅಭಿಪ್ರಾಯ ಹೇಳಿದ್ದೇನೆ. ಈಗಲೂ ಪಕ್ಷದ ಶಿಸ್ತಿನ ಶಿಪಾಯಿ. ನಾನು ರಾಹುಲ್ ಗಾಂಧಿ ವಿರುದ್ಧ ಮಾತನಾಡಿಲ್ಲ’ ಎಂದು ರೋಷನ್ ಬೇಗ್ ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ.
ತಮ್ಮನ್ನು ಅಮಾನತು ಮಾಡಿರುವುದಕ್ಕೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು, “ನಾನು ಭಾರತೀಯ ಕಾಂಗ್ರೆಸ್ನಲ್ಲಿದ್ದೇನೆ. ಸಿದ್ದರಾಮಯ್ಯ ಕಾಂಗ್ರೆಸ್ನಲ್ಲಿ ಇಲ್ಲ. ಈ ಬಗ್ಗೆ ಪಕ್ಷದ ಹಿರಿಯ ನಾಯಕರಾದ ಮಲ್ಲಿಕಾರ್ಜುನ ಖರ್ಗೆ, ಕೆ.ಎಚ್. ಮುನಿಯಪ್ಪ, ರಾಮಲಿಂಗಾ ರೆಡ್ಡಿ, ಎಚ್. ಕೆ.ಪಾಟೀಲ್ ಅವರೊಂದಿಗೆ ಮಾತನಾಡುತ್ತೇನೆ’ ಎಂದು ಹೇಳಿದ್ದಾರೆ.
ಲೋಕಸಭೆ ಚುನಾವಣೆಯಲ್ಲಿ ಸಿದ್ದರಾಮಯ್ಯ, ದಿನೇಶ್ ಗುಂಡೂರಾವ್ ಕ್ಷೇತ್ರದಲ್ಲಿಯೇ ಬಿಜೆಪಿ ಹೆಚ್ಚು ಮತ ಪಡೆದಿದೆ. ಈ ಬಗ್ಗೆ ಚರ್ಚೆ ಮಾಡಬೇಕಿತ್ತು. ನನ್ನನ್ನು ಅಮಾನತು ಮಾಡಿರುವ ಬಗ್ಗೆ ರಾಜ್ಯ ಹಿರಿಯ ನಾಯಕರ ಜೊತೆ ಚರ್ಚಿಸಿ ದೆಹಲಿಗೆ ಹೋಗಬೇಕಾ, ಬೇಡವಾ ಎನ್ನುವುದನ್ನು ನಿರ್ಧರಿಸುತ್ತೇನೆ ಎಂದು ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಲಿಂಗಾಯಿತರಿಗೆ ಓಬಿಸಿ ಮೀಸಲಾತಿ ನೀಡಿ, ಇಲ್ಲದಿದ್ರೆ ಆಕ್ರೋಶ ಎದುರಿಸಿ: ಜಯಮೃತ್ಯುಂಜಯಶ್ರೀ
ಆ.19 ರಿಂದ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಎಂಬಿ ಪಾಟೀಲ್ ರಾಜ್ಯ ಪ್ರವಾಸ
ಸಿದ್ದರಾಮಯ್ಯ ಸಿಎಂ ಆಗಲೆಂದು ಆಸೆ ಪಡುವವರಲ್ಲಿ ನಾನೂ ಒಬ್ಬ: ಸಚಿವ ರಾಮುಲು
ಕ್ರೀಡಾಪಟುಗಳಿಗೆ ರಾಜ್ಯ ಸರ್ಕಾರದ ಎಲ್ಲಾ ಇಲಾಖೆಯ ಉದ್ಯೋಗದಲ್ಲೂ ಶೇ.2 ಮೀಸಲು: ಸಿಎಂ ಬೊಮ್ಮಾಯಿ
ನಾಲೆಯಲ್ಲಿ ಈಜಲು ಹೋಗಿ ಇಬ್ಬರು ನೀರುಪಾಲು, ದೇವರ ಹರಕೆ ಪೂಜೆಗೆಂದು ಬಂದವರು ಮಸಣ ಸೇರಿದರು