
JD(S) ಜಾತ್ಯತೀತ ಪಕ್ಷ ಎಂದು ಹೇಳಿಕೊಳ್ಳಬಾರದು ಅಷ್ಟೇ : ಸಿಎಂ ಸಿದ್ದರಾಮಯ್ಯ
ಯಾರ ಜತೆ ಬೇಕಾದರೂ ಹೋಗಲಿ ನಮ್ಮ ಅಭ್ಯಂತರವಿಲ್ಲ ...
Team Udayavani, Sep 27, 2023, 6:32 PM IST

ಚಾಮರಾಜನಗರ : 2024 ರ ಲೋಕಸಭೆ ಚುನಾವಣೆಗೆ ಬಿಜೆಪಿಯೊಂದಿಗೆ ಚುನಾವಣ ಮೈತ್ರಿ ಮಾಡಿಕೊಂಡ ನಂತರ ಜೆಡಿ ಎಸ್ ಅನ್ನು ಜಾತ್ಯತೀತ ಪಕ್ಷ ಎಂದು ಕರೆಯಬಾರದು ಎಂದು ಸಿಎಂ ಸಿದ್ದರಾಮಯ್ಯ ಬುಧವಾರ ವಾಗ್ದಾಳಿ ನಡೆಸಿದ್ದಾರೆ.
ಕೋಣನಕೆರೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ, ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡ ಪಕ್ಷವನ್ನು ಜಾತ್ಯತೀತ ಎಂದು ಕರೆಯಬೇಕೆ ? ಹೆಸರು ಜಾತ್ಯತೀತ ಎಂದು ಹೇಳುತ್ತದೆ. ಈಗ ಅವರು ಸೆಕ್ಯುಲರ್ ಆಗಿದ್ದಾರೆಯೇ? ಅವರು ಹೇಳುವುದನ್ನು ನಾವು ಒಪ್ಪಿಕೊಳ್ಳಬೇಕೇ? ಕೋಮುವಾದಿ ಪಕ್ಷದೊಂದಿಗೆ ಹೋದ ನಂತರವೂ ಅವರು ಜಾತ್ಯತೀತರೇ? ಅವರು ಬಿಜೆಪಿ ಜತೆ ಹೋಗಲಿ ಅಥವಾ ಇನ್ಯಾರ ಜತೆ ಹೋಗಲಿ ನಮ್ಮ ಅಭ್ಯಂತರವಿಲ್ಲ. ಆದರೆ ಅವರು ಜಾತ್ಯತೀತರು ಎಂದು ಹೇಳಬಾರದು, ಅಷ್ಟೇ’ ಎಂದರು.
ಇದನ್ನೂ ಓದಿ: Cauvery Water; ಕಾಂಗ್ರೆಸ್ ಸರ್ಕಾರ ಅಸಮರ್ಥ: ಬಿಜೆಪಿ- ಜೆಡಿಎಸ್ ಜಂಟಿ ಪ್ರತಿಭಟನೆ
ಕಾಂಗ್ರೆಸ್ ನಾಯಕರ ಆರೋಪ, ಪ್ರತ್ಯಾರೋಪಗಳು ತೀವ್ರವಾಗಿದ್ದು ಇದೆ ವೇಳೆ ಬುಧವಾರ ಬಿಜೆಪಿ-ಜೆಡಿಎಸ್ ಜಂಟಿಯಾಗಿ ಕಾವೇರಿ ಹೋರಾಟಕ್ಕೆ ಇಳಿದಿದ್ದು ರಾಜ್ಯ ಸರಕಾರದ ವಿರುದ್ಧ ಅಸಮರ್ಥ ಆಡಳಿತ ಎಂದು ತೀವ್ರ ಆಕ್ರೋಶ ಹೊರ ಹಾಕಿವೆ.
ಟಾಪ್ ನ್ಯೂಸ್
