ಜೆಇಇ: ರಾಜ್ಯದ ಗೌರಬ್ದಾಸ್ಗೆ ಮೊದಲ ರ್ಯಾಂಕ್ : 44 ಮಂದಿಗೆ ಪೂರ್ಣ ಅಂಕ
Team Udayavani, Sep 16, 2021, 8:40 AM IST
ಹೊಸದಿಲ್ಲಿ: ಎಂಜಿನಿಯರಿಂಗ್ ಕೋರ್ಸ್ ಪ್ರವೇಶಕ್ಕಾಗಿ ನಡೆದ ಜೆಇಇ-ಮೈನ್ ಪರೀಕ್ಷೆಯ ಫಲಿತಾಂಶ ಬುಧವಾರ ಪ್ರಕಟವಾಗಿದ್ದು, ಕರ್ನಾಟಕದ ಗೌರಬ್ ದಾಸ್ ಮೊದಲ ರ್ಯಾಂಕ್ ಗಳಿಸಿದ್ದಾರೆ.
ಈ ಬಾರಿಯ ಪರೀಕ್ಷೆಯಲ್ಲಿ ದಾಖಲೆಯ 44 ಅಭ್ಯರ್ಥಿಗಳು ಶೇ. 100ರಷ್ಟು ಅಂಕ ಗಳನ್ನು ಗಳಿಸಿದ್ದು, 18 ಮಂದಿಗೆ ರ್ಯಾಂಕ್ ಬಂದಿದೆ ಎಂದು ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್ಟಿಎ) ಹೇಳಿದೆ.
ದೇಶಕ್ಕೇ ಮೊದಲ ರ್ಯಾಂಕ್ ಗಳಿಸಿರುವ ಕರ್ನಾಟಕದ ಗೌರಬ್ ದಾಸ್ ಅವರು ಬೆಂಗಳೂರಿನ ಸಹಕಾರ ನಗರದಲ್ಲಿ ರುವ ನಾರಾಯಣ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿ. ಇದೇ ಮೊದಲ ಬಾರಿಗೆ ಜೆಇಇಯಲ್ಲಿ ಇಬ್ಬರು ಮಹಿಳಾ ಅಭ್ಯರ್ಥಿ ಗಳು ರ್ಯಾಂಕ್ ಗಳಿಸಿದ್ದಾರೆ. ಅವರೆಂದರೆ ದಿಲ್ಲಿಯ ಕಾವ್ಯಾ ಚೋಪ್ರಾ ಮತ್ತು ಗಾಜಿಯಾಬಾದ್ನ ಪಾಲ್ ಅಗರ್ವಾಲ್.
ಪ್ರಸಕ್ತ ವರ್ಷ ಕನ್ನಡ ಸೇರಿದಂತೆ 13 ಭಾಷೆಗಳಲ್ಲಿ ಪರೀಕ್ಷೆ ನಡೆದಿತ್ತು. ಕಳೆದ ವರ್ಷ 24 ಅಭ್ಯರ್ಥಿಗಳಷ್ಟೇ ಶೇ. 100 ಅಂಕಗಳನ್ನು ಗಳಿಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Kalaburagi; ಭಾರೀ ಮಳೆ: ಆಳಂದದಲ್ಲಿ ಸಿಡಿಲು ಬಡಿದು ಬಾಲಕ ಸಾವು
Udupi: ನಿಟ್ಟೂರಿನಲ್ಲಿ ಬಸ್ ಢಿಕ್ಕಿಯಾಗಿ ಬೈಕ್ ಸವಾರ ದಾರುಣ ಸಾವು
Congress ಟ್ಯಾಕ್ಸ್ ಸಿಟಿಯನ್ನು ಟ್ಯಾಂಕರ್ ಸಿಟಿ ಮಾಡಿದೆ: ಬೆಂಗಳೂರಿನಲ್ಲಿ ಮೋದಿ
Kollywood: 18 ವರ್ಷದ ಬಳಿಕ ಪತಿ ಸೂರ್ಯ ಜೊತೆ ನಟಿಸಲಿದ್ದಾರೆ ಜ್ಯೋತಿಕಾ
ಸರ್ವರಿಗೂ ಸಮಪಾಲು ಸಮಬಾಳು ನೀಡಿದ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ: ಗೀತಾ ಶಿವರಾಜ್ ಕುಮಾರ್