ಜೋಗ ಝಗಮಗ
Team Udayavani, Aug 5, 2019, 3:03 AM IST
ಸಾಗರ: ಜಗತ್ಪ್ರಸಿದ್ಧ ಜೋಗ ಜಲಪಾತಕ್ಕೆ ವಾರಾಂತ್ಯದ ದಿನವಾದ ಭಾನುವಾರ ಪ್ರವಾಸಿಗರ ದಂಡೇ ಆಗಮಿಸಿತ್ತು. ಮಳೆ ಹೆಚ್ಚಿದ್ದರಿಂದ ಜೋಗ ಜಲಪಾತಕ್ಕೆ ಜೀವಕಳೆ ಬಂದಿದ್ದು, ಐದು ಸಾವಿರಕ್ಕೂ ಅಧಿಕ ಪ್ರವಾಸಿಗರು ಜಲವೈಭವವನ್ನು ಕಣ್ತುಂಬಿಕೊಂಡರು.
ಹೈಕೋರ್ಟ್ನ ಜಡ್ಜ್ ಒಬ್ಬರು ಜೋಗದ ವೀಕ್ಷಣೆಗೆ ಬರುತ್ತಿದ್ದಾರೆ ಎಂಬ ಸುದ್ದಿ ಹಿನ್ನೆಲೆಯಲ್ಲಿ ಪೊಲೀಸರು ಟ್ರಾಫಿಕ್ ನಿಯಂತ್ರಣಕ್ಕೆ ಹರಸಾಹಸ ಪಡುತ್ತಿದ್ದುದು ಕಂಡು ಬಂತು. ಇದರಿಂದ ಇತರ ಪ್ರವಾಸಿಗರೂ ಪ್ರಯಾಸಪಡಬೇಕಾಯಿತು.