ದೇವರದಾಸಿಯರ ಮಕ್ಕಳಿಗೆ ಲಗ್ನಮಾಡಿಸಿದ ಜಡ್ಜ್ ಗಳು

Team Udayavani, Feb 24, 2019, 1:12 AM IST

ಬಾಗಲಕೋಟೆ: ಗ್ರಾಮೀಣ ಭಾಗದಲ್ಲಿ ದೇವರಿಗೆ ಬಿಟ್ಟ ಮಹಿಳೆ ಎಂದೇ ಕರೆಸಿಕೊಳ್ಳುವ ಮಹಿಳೆಯರ ಮಕ್ಕಳಿಗೆ ಹೈಕೋರ್ಟ್‌ ನ್ಯಾಯಮೂರ್ತಿ ಮತ್ತು ಜಿಲ್ಲಾ ನ್ಯಾಯಾಧೀಶರು ಸರಳ ವಿವಾಹ ಮಾಡಿಸಿದ್ದಾರೆ. ನವನಗರದ ಕಲಾ ಭವನದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಬೀಳಗಿ ತಾಲೂಕಿನ ಗಲಗಲಿಯ ರೇಖಾ ದೊಡಮನಿ ಅವರನ್ನು ಬಸವನಬಾಗೇವಾಡಿಯ ಗುಂಡಪ್ಪ ಹನಮಂತ ಹಡಪದ (ಅಂತರ್‌ಜಾತಿ ವಿವಾಹ) ಅವರೊಂದಿಗೆ ಹಾಗೂ ಗದಗ ಜಿಲ್ಲೆಯ ಮೇಗೂರ ಗ್ರಾಮದ ಲಲಿತಾ ಮಾದರ ಅವರನ್ನು ಬೀಳಗಿ ತಾಲೂಕಿನ ಅರಕೇರಿ ಗ್ರಾಮದ ರಾಜು ನಡಗೇರಿ ಅವರ ಜತೆ ವಿವಾಹ ನಡೆಯಿತು.

ಇದೇ ವೇಳೆ ಇಬ್ಬರೂ ಮಾಜಿ ದೇವದಾಸಿಯರ ಮಕ್ಕಳ ಮದುವೆಯ ವಿವಾಹ ನೋಂದಣಿ ಮಾಡಿಸಿ, ಶುಭ ಕೋರಲಾಯಿತು.ಗುಂಡಪ್ಪ ಹಡಪದ ಮತ್ತು ರೇಖಾ ದೊಡಮನಿ ಅವರು ಅಂತರ್‌ಜಾತಿ ವಿವಾಹವಾಗಿದ್ದು, ಸಮಾಜ ಕಲ್ಯಾಣ ಇಲಾಖೆಯಿಂದ 5 ಲಕ್ಷ ಪ್ರೋತ್ಸಾಹಧನ ಮತ್ತು ಒಂದು ನಿವೇಶನ ಮಂಜೂರಾತಿ ಪ್ರಮಾಣ ಪತ್ರ ಇದೇ ಸಂದರ್ಭದಲ್ಲಿ ನೀಡಲಾಯಿತು. ಇಬ್ಬರು ಮಾಜಿ ದೇವದಾಸಿಯರ ಮಕ್ಕಳ ಮದುವೆಗೆ ಹೈಕೋರ್ಟ್‌ನ ನ್ಯಾ| ಅರವಿಂದಕುಮಾರ ಹಾಗೂ ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಸಂಜೀವಕುಮಾರ ಹಂಚಾಟೆ, ಪ್ರಧಾನ ಜಿಲ್ಲಾ ಮತ್ತು ಸತ್ರನ್ಯಾಯಾಧೀಶ ಅನಿಲ ಕಟ್ಟಿ, ಹಾಗೂ ಇತರ ಅಧಿಕಾರಿಗಳು ಸಾಕ್ಷಿಯಾದರು.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ