ಗದ್ಗದಿತರಾದ ಕೆ.ಶಿವನ್‌, ಭಾವುಕರಾದ ಸಿಬ್ಬಂದಿ

Team Udayavani, Sep 8, 2019, 3:06 AM IST

gdgadi

ಬೆಂಗಳೂರು: “ವಿಕ್ರಂ’ ಲ್ಯಾಂಡರ್‌ ಯೋಜನೆಯಂತೆ ಪ್ರದರ್ಶನ ನೀಡಿತ್ತು. ಚಂದ್ರನಿಂದ 2.1 ಕಿ.ಮೀ. ದೂರದಲ್ಲಿದ್ದಾಗ ಭೂಮಿಯ ನಿಯಂತ್ರಣ ಕೊಠಡಿಯೊಂದಿಗಿನ ಸಂಪರ್ಕ ಕಳೆದುಕೊಂಡಿದೆ. ಇದಕ್ಕೆ ಸಂಬಂಧಿಸಿದ ದತ್ತಾಂಶಗಳ ಬಗ್ಗೆ ವಿಶ್ಲೇಷಣೆ ಮಾಡಬೇಕಾಗಿದೆ’. ಹೀಗೆ ಬರೆದಿಟ್ಟ ಎರಡು ಸಾಲುಗಳನ್ನು ಓದುವಾಗ ಇಸ್ರೋ ಅಧ್ಯಕ್ಷ ಕೆ.ಶಿವನ್‌ ಅವರ ಧ್ವನಿ ಗದ್ಗದಿತವಾಗಿತ್ತು. ಅಷ್ಟೇ ಅಲ್ಲ, ಇದನ್ನು ಕೇಳಿಸಿಕೊಳ್ಳುತ್ತಿದ್ದ ಸಿಬ್ಬಂದಿಯ ಕಣ್ಣುಗಳೂ ಒದ್ದೆ ಆಗಿದ್ದವು.

ಈ “ನಿರಾಶಾದಾಯಕ ಹೇಳಿಕೆ’ಯನ್ನು ನೀಡುವ ಮುನ್ನ ಶಿವನ್‌, ತಮ್ಮ ಸಹೋದ್ಯೋಗಿಗಳೊಂದಿಗೆ ಸಮಾಲೋಚನೆ ನಡೆಸಿದರು. ಮಾಜಿ ಅಧ್ಯಕ್ಷರಾದ ಡಾ.ಕೆ.ರಾಧಾಕೃಷ್ಣ, ಎ.ಎಸ್‌. ಕಿರಣ್‌ ಕುಮಾರ್‌, ವಿಜ್ಞಾನಿ ಕಸ್ತೂರಿ ರಂಗನ್‌ ಅವರಿಂದ ಸಲಹೆ ಪಡೆದರು. ಪ್ರಧಾನಿ ಗಮನಕ್ಕೂ ತಂದರು. ಒಲ್ಲದ ಮನಸ್ಸಿನಿಂದ ಧ್ವನಿವರ್ಧಕದತ್ತ ಹೆಜ್ಜೆ ಹಾಕಿದ ಅಧ್ಯಕ್ಷರು, ಸಂಪರ್ಕ ಕಳೆದುಕೊಂಡಿರುವುದಾಗಿ ಪ್ರಕಟಿಸಿದರು. ಆಗ ಅವರ ಕಣ್ಣಂಚಿನಲ್ಲಿ ನೀರು ಜಿನುಗುತ್ತಿತ್ತು.

15 ನಿಮಿಷಗಳ ಕಾಲ ನಡೆಯುವ ವೇಗ ನಿಯಂತ್ರಿಸುವ ಪ್ರಕ್ರಿಯೆ ಆರಂಭವಾಗುತ್ತಿದ್ದಂತೆ ಕ್ಷಣ, ಕ್ಷಣದ ಮಾಹಿತಿ ವೀಕ್ಷಕ ವಿವರಣೆಗಾರರಿಂದ ಇಂಗ್ಲಿಷ್‌ ಮತ್ತು ಹಿಂದಿಯಲ್ಲಿ ಬಿತ್ತರವಾಗುತ್ತಿತ್ತು. 13.48 ನಿಮಿಷಗಳವರೆಗೂ ಕ್ರಿಕೆಟ್‌ ಕಾಮೆಂಟ್ರಿ ರೀತಿಯಲ್ಲಿ ಅವರ ಧ್ವನಿ ಉತ್ಸಾಹದಿಂದ ಕೂಡಿತ್ತು. ಚಂದ್ರನಿಂದ ನೂರಾರು ಕಿ.ಮೀ.ದೂರದಲ್ಲಿದ್ದ ಲ್ಯಾಂಡರ್‌, ಅಂತಿಮವಾಗಿ ಕೇವಲ 4.43 ಕಿ.ಮೀ.ಅಂತರದಲ್ಲಿತ್ತು.

ಇನ್ನೇನು ಹಗುರ ಸ್ಪರ್ಶ ಆಗಿಯೇ ಬಿಟ್ಟಿತು ಎನ್ನುವಷ್ಟರಲ್ಲಿ ಎಲ್ಲ ವಿಜ್ಞಾನಿಗಳು, ವೀಕ್ಷಕ ವಿವರಣೆಗಾರರ ಎದೆಬಡಿತ ಜೋರಾಯಿತು. ಮಾಹಿತಿ ಲಭ್ಯವಾಗದಂತಾಯಿತು. ನಂತರ ಕೆಲವೇ ಸೆಕೆಂಡ್‌ಗಳಲ್ಲಿ ಲ್ಯಾಂಡರ್‌ ಮತ್ತು ಆರ್ಬಿಟರ್‌ ಸಂಪರ್ಕಕ್ಕೆ ಬಂತು. ಮತ್ತೆ ಹೋದ ಜೀವ ಬಂದಂತಾಯಿತು. ಕರತಾಡನ ಮೊಳಗಿದವು. ಆದರೆ, ಅದರ ಸದ್ದು ನಿಲ್ಲುವಷ್ಟರಲ್ಲಿ ಸಂಪರ್ಕ ಮತ್ತೆ ಕಡಿತಗೊಂಡಿತು. ಆಗ ಸಂಭ್ರಮದಲ್ಲಿದ್ದ ನಿಯಂತ್ರಣ ಕೊಠಡಿಯಲ್ಲಿ ಸೂತಕದ ಛಾಯೆ ಆವರಿಸಿತು.

ಟಾಪ್ ನ್ಯೂಸ್

ದೇಶ ಒಡೆಯುವ ಮಾನಸಿಕತೆ ಕಾಂಗ್ರೆಸ್‌ನದ್ದು: ಮೀನಾಕ್ಷಿ ಲೇಖಿ

Lok Sabha Elections; ಕಾಂಗ್ರೆಸ್‌ಗೆ ಉತ್ತಮ ಅವಕಾಶ: ದಿನೇಶ್‌ ಗುಂಡೂರಾವ್‌

Mangaluru ಪೆಟ್ರೋಲ್‌, ಡೀಸೆಲ್‌ ತುಟ್ಟಿ : ಪುಷ್ಪಾ ಅಮರನಾಥ್‌

Congress ಆಳ್ವಿಕೆಯಲ್ಲಿ ಹಿಂದುಗಳಿಗೆ ಉಳಿಗಾಲ ಇಲ್ಲ : ಯಶ್‌ಪಾಲ್‌

Lok Sabha Election ಫ‌ಲಿತಾಂಶದ ಬೆನ್ನಲ್ಲೇ ಮುಖ್ಯಮಂತ್ರಿ ಕುರ್ಚಿ ಅಲುಗಾಡಲಿದೆ: ಡಿ.ವಿ.

BJP ನಿರ್ದೇಶಿಸಿದರೆ ಮಂಡ್ಯದಲ್ಲೂ ಪ್ರಚಾರ: ಸುಮಲತಾ ಅಂಬರೀಷ್‌

ಕೋಟ್ಯಂತರ ರೂ. ಮೌಲ್ಯದ ಗೋಡಂಬಿ ಅಪಹರಣ; ಸೆರೆ

Brahmavar ಕೋಟ್ಯಂತರ ರೂ. ಮೌಲ್ಯದ ಗೋಡಂಬಿ ಅಪಹರಣ; ಸೆರೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ವೈಯಕ್ತಿಕ ಕಾರಣಗಳಿಂದ ರಾಜ್ಯದಲ್ಲಿ ಕೊಲೆ: ಸಿಎಂ ಸಿದ್ದರಾಮಯ್ಯ

Siddaramaiah ಸರಕಾರದಲ್ಲಿ ಹಿಂದೂಗಳ ರಕ್ತಕ್ಕೆ ಬೆಲೆ ಇಲ್ಲ: ಅಶೋಕ್‌

ಚೊಂಬಿನ ಮೂಲಕ ಮೋದಿ ಸ್ವಾಗತಕ್ಕೆ ಕಾಂಗ್ರೆಸ್‌ ಸಿದ್ಧತೆ

Congresss ಚೊಂಬು ಜಾಹೀರಾತು ವಿರುದ್ಧ ಬಿಜೆಪಿ ಚಾರ್ಜ್‌ಶೀಟ್‌

High Court ಎಚ್‌ಡಿಕೆಗೆ ಮಹಿಳಾ ಆಯೋಗ ನೀಡಿದ್ದ ನೋಟಿಸ್‌ಗೆ ಹೈಕೋರ್ಟ್‌ ತಡೆ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

ದೇಶ ಒಡೆಯುವ ಮಾನಸಿಕತೆ ಕಾಂಗ್ರೆಸ್‌ನದ್ದು: ಮೀನಾಕ್ಷಿ ಲೇಖಿ

ದೇಶ ಒಡೆಯುವ ಮಾನಸಿಕತೆ ಕಾಂಗ್ರೆಸ್‌ನದ್ದು: ಮೀನಾಕ್ಷಿ ಲೇಖಿ

Lok Sabha Elections; ಕಾಂಗ್ರೆಸ್‌ಗೆ ಉತ್ತಮ ಅವಕಾಶ: ದಿನೇಶ್‌ ಗುಂಡೂರಾವ್‌

Lok Sabha Elections; ಕಾಂಗ್ರೆಸ್‌ಗೆ ಉತ್ತಮ ಅವಕಾಶ: ದಿನೇಶ್‌ ಗುಂಡೂರಾವ್‌

Mangaluru ಪೆಟ್ರೋಲ್‌, ಡೀಸೆಲ್‌ ತುಟ್ಟಿ : ಪುಷ್ಪಾ ಅಮರನಾಥ್‌

Mangaluru ಪೆಟ್ರೋಲ್‌, ಡೀಸೆಲ್‌ ತುಟ್ಟಿ : ಪುಷ್ಪಾ ಅಮರನಾಥ್‌

Congress ಆಳ್ವಿಕೆಯಲ್ಲಿ ಹಿಂದುಗಳಿಗೆ ಉಳಿಗಾಲ ಇಲ್ಲ : ಯಶ್‌ಪಾಲ್‌

Congress ಆಳ್ವಿಕೆಯಲ್ಲಿ ಹಿಂದುಗಳಿಗೆ ಉಳಿಗಾಲ ಇಲ್ಲ : ಯಶ್‌ಪಾಲ್‌

Lok Sabha Election ಫ‌ಲಿತಾಂಶದ ಬೆನ್ನಲ್ಲೇ ಮುಖ್ಯಮಂತ್ರಿ ಕುರ್ಚಿ ಅಲುಗಾಡಲಿದೆ: ಡಿ.ವಿ.

Lok Sabha Election ಫ‌ಲಿತಾಂಶದ ಬೆನ್ನಲ್ಲೇ ಮುಖ್ಯಮಂತ್ರಿ ಕುರ್ಚಿ ಅಲುಗಾಡಲಿದೆ: ಡಿ.ವಿ.

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.