ಕಾಬೂಲ್‌ ಜೈಲು : ರಾಜ್ಯಕ್ಕೆ ಬೇಕಾದ ಉಗ್ರರು ಪರಾರಿ!

Team Udayavani, Aug 18, 2021, 7:10 AM IST

ಕಾಬೂಲ್‌ ಜೈಲು : ರಾಜ್ಯಕ್ಕೆ ಬೇಕಾದ ಉಗ್ರರು ಪರಾರಿ!

ಬೆಂಗಳೂರು: ರಾಜ್ಯದಲ್ಲಿ ನಡೆದ ಕೆಲವು ಉಗ್ರ ಪ್ರಕರಣಗಳಲ್ಲಿ ಬೇಕಾದ ಮತ್ತು ಭಾರತದ ಮಾಹಿತಿಯ ಅನ್ವಯ ಅಫ್ಘಾನ್‌ನಲ್ಲಿ ಬಂಧಿತರಾಗಿ ಜೈಲಿನಲ್ಲಿದ್ದ 10ಕ್ಕೂ ಅಧಿಕ ಶಂಕಿತ ಉಗ್ರರು ತಾಲಿಬಾನ್‌ ಆಕ್ರಮಣದ ವೇಳೆ ತಪ್ಪಿಸಿಕೊಂಡಿದ್ದಾರೆ!

ಈ ಆರೋಪಿಗಳು ತಾಲಿಬಾನ್‌ ಮತ್ತಿತರ ಉಗ್ರ ಸಂಘಟನೆಗಳ ಜತೆ ಸೇರಿಕೊಂಡಿರುವ ಸಾಧ್ಯತೆ ಇದೆ ಎನ್ನಲಾಗಿದೆ. ಸದ್ಯಕ್ಕೆ ರಾಜ್ಯ ಅಥವಾ ದೇಶಕ್ಕೆ ಅವರಿಂದ ತೊಂದರೆ ಇಲ್ಲವಾದರೂ ಮುಂದಿನ ದಿನಗಳಲ್ಲಿ ರಾಜ್ಯದ ಉಗ್ರ ಸ್ಲಿàಪರ್‌ ಸೆಲ್‌ಗ‌ಳ ಜತೆ ಸಂಪರ್ಕ ಸಾಧಿಸಿ ದುಷ್ಕೃತ್ಯಗಳನ್ನು ನಡೆಸುವ ಸಾಧ್ಯತೆ ಇದೆ ಎಂಬ ಆತಂಕ ಇದೆ.

ಈ ಹಿನ್ನೆಲೆಯಲ್ಲಿ ರಾಜ್ಯ ಗುಪ್ತಚರ ಇಲಾಖೆ ಮತ್ತು ಆಂತರಿಕ ಭದ್ರತ ವಿಭಾಗ (ಐಎಸ್‌ಡಿ)ಅಧಿಕಾರಿಗಳು ಕಾರ್ಯಾಚರಣೆ ಚುರುಕುಗೊಳಿಸಿದ್ದು, ರಾಜ್ಯದಲ್ಲಿರುವ ಶಂಕಿತರ ಮೇಲೆ ಹೆಚ್ಚಿನ ನಿಗಾ ಇರಿಸಿದ್ದಾರೆ.

ಅಫ್ಘಾನಿಸ್ಥಾನವನ್ನು ತಾಲಿಬಾನ್‌ ಉಗ್ರರು ವಶಪಡಿಸಿಕೊಳ್ಳುವ ಯತ್ನದಲ್ಲಿದ್ದಾಗಲೇ ಬೆಂಗಳೂರು ಸೇರಿ ಕರ್ನಾಟಕದಲ್ಲಿ ಅಫ್ಘಾನ್‌ ಮೂಲದ ಐಎಸ್‌-ಕೆಪಿ ಮತ್ತು ಐಸಿಸ್‌ ಉಗ್ರ ಸಂಘಟನೆಗಳ ಕೆಲವು ಸ್ಲಿàಪರ್‌ ಸೆಲ್‌ಗಳು ಮತ್ತೆ ಸಕ್ರಿಯವಾಗಿವೆ ಎಂಬುದು ತನಿಖೆಯಿಂದ ತಿಳಿದುಬಂದಿತ್ತು.

ಪರಾರಿಯಾದವರಲ್ಲಿ ಕೆಲವರು ಕಾಬೂಲ್‌ ನಲ್ಲಿದ್ದರೆ ಇನ್ನಷ್ಟು ಮಂದಿ ಪಾಕ್‌ ಸಹಿತ ಅಕ್ಕಪಕ್ಕದ ರಾಷ್ಟ್ರಗಳಲ್ಲಿ ತಲೆಮರೆಸಿಕೊಂಡಿರುವ ಸಾಧ್ಯತೆಗಳಿವೆ.

ಜೈಲು ತೆರವು ವೇಳೆ ಪರಾರಿ? :

ಕಾಬೂಲ್‌ನಿಂದ ದಿಲ್ಲಿಗೆ ಬರಲು ಯತ್ನಿಸಿದ ನೌಶಿದುಲ್‌É ಹಮ್ಜಫ‌ರ್‌ ಎಂಬಾತನನ್ನು ಅಫ್ಘಾನ್‌ ಭದ್ರತ ಪಡೆಗಳು 2017ರಲ್ಲಿ ಬಂಧಿಸಿದ್ದವು. ಈತ 2016ರಲ್ಲಿ ಕೇರಳದಲ್ಲಿ ದಾಖಲಾಗಿದ್ದ ಐಸಿಸ್‌ ಉಗ್ರ ಸಂಘಟನೆ ನೇಮಕಾತಿ ಪ್ರಕರಣದ ಆರೋಪಿ. ಈತ ತಪ್ಪಿಸಿಕೊಂಡಿರುವ ಸಾಧ್ಯತೆ ಇದೆ. 2020ರ ಮಾ. 20ರಂದು ಕಾಬೂಲ್‌ನಲ್ಲಿ ನಡೆದ ಶೋರ್‌ ಬಜಾರ್‌ಪ್ರದೇಶದ ಗುರುದ್ವಾರದ ದಾಳಿ ವೇಳೆ 27 ಮಂದಿಯ ಹತ್ಯೆಯಾಗಿತ್ತು. ಇದರ ಹೊಣೆಯನ್ನು ಐಎಸ್‌-ಕೆಪಿ ಹೊತ್ತಿತ್ತು. ಇದೇ ಪ್ರಕರಣದಲ್ಲಿ ಆಗ ತಾನೇ ಸಂಘಟನೆ ಸೇರಿಕೊಂಡಿದ್ದ ಕಾಸರಗೋಡಿನ ಮುಹ್ಸಿನ್‌ ಎಂಬಾತನ ಕೈವಾಡ ಪತ್ತೆಯಾಗಿತ್ತು. ಈತನಲ್ಲದೆ ಇತರ ಕೆಲವು ಉಗ್ರರೂ ಜೈಲಿನಿಂದ ತಪ್ಪಿಸಿಕೊಂಡಿದ್ದಾರೆ ಎನ್ನಲಾಗಿದೆ.

ಬೆಂಗಳೂರು ಸಂಪರ್ಕ :

2020ರ ಅಕ್ಟೋಬರ್‌ನಲ್ಲಿ ಬೆಂಗಳೂರಿನ ವೈದ್ಯ ಡಾ| ಅಬುರ್‌ ರೆಹಮಾನ್‌ ಅಲಿಯಾಸ್‌ ಬ್ರೇವ್‌ ಸಿರಿಯಾದಲ್ಲಿರುವ ಉಗ್ರ ಸಂಘಟನೆ ಸದಸ್ಯರಿಗೆ ವೈದ್ಯಕೀಯ ಸಹಾಯ ಮತ್ತು ಶಸ್ತ್ರಾಸ್ತ್ರಗಳ ಖರೀದಿ ಬಗ್ಗೆ ಮಾಹಿತಿ ನೀಡಿದ್ದ. ಐಸ್‌-ಕೆಪಿ ಸಂಘಟನೆ ಸದಸ್ಯರ ಜತೆಗೂ ನಿರಂತರ ಸಂಪರ್ಕ ಹೊಂದಿದ್ದು, ತಮಿಳುನಾಡು ಮೂಲದ ಅಹ್ಮದ್‌ ಅಬ್ದುಲ್‌, ಬೆಂಗಳೂರಿನ ಇರ್ಫಾನ್‌ ನಾಸೀರ್‌ ಜತೆ ಸೇರಿ ಬೆಂಗಳೂರು, ಮಂಗಳೂರಿನ ಕೆಲವು ಯುವಕರನ್ನು ಸಿರಿಯಾಕ್ಕೆ ಕಳುಹಿಸಿದ್ದ.

ಈ ಪ್ರಕರಣ ಬೆಳಕಿಗೆ ಬಂದ ಬೆನ್ನಲ್ಲೇ ತಾಂತ್ರಿಕ ತನಿಖೆ ವೇಳೆ ಬೆಂಗಳೂರು, ಮಂಗಳೂರಿನಲ್ಲಿ ಅಮರ್‌ ಅಬ್ದುಲ್‌ ರೆಹಮಾನ್‌, ಬೆಂಗಳೂರಿನ ಮಾದೇಶ್‌ ಪೆರುಮಾಳ್‌ ಅಲಿಯಾಸ್‌ ಅಬ್ದುಲ್‌ ಮತ್ತು ಅನಂತರ ಭಟ್ಕಳದ ಝಫ್ರಿ ಜವಾರ್‌ ದಾಮುದಿ ಎಂಬವರನ್ನು ಬಂಧಿಸಲಾಗಿತ್ತು. ಈ ಪೈಕಿ ಝಫ್ರಿ ಜವಾರ್‌ ದಾಮುದಿ, ಐಸಿಸ್‌ ಜತೆಗೆ ಅಫ್ಘಾನ್‌ ಮತ್ತು ಪಾಕಿಸ್ಥಾನದಲ್ಲಿ ಸಕ್ರಿಯವಾಗಿದ್ದ ಎಂಬುದು ಪತ್ತೆಯಾಗಿತ್ತು. ಬೆಂಗಳೂರಿನ ಮಾದೇಶ್‌ ಪೆರುಮಾಳ್‌, ಮಂಗಳೂರು ಮೂಲದ ಮಹಿಳೆಯ ಸಂದೇಶಗಳಿಂದ ಪ್ರೇರಣೆಗೊಂಡು ಮತಾಂತರಗೊಂಡಿದ್ದು, ಈತ ಅಘ್ಘಾನಿಸ್ಥಾನದ ಐಎಸ್‌-ಕೆಪಿ ಸಂಘಟನೆ ಸೇರಲು ಸಿದ್ಧತೆ ನಡೆಸಿದ್ದ ಎಂಬುದು ಎನ್‌ಐಎ ತನಿಖೆಯಲ್ಲಿ ಬೆಳಕಿಗೆ ಬಂದಿದೆ.

20ಕ್ಕೂ ಹೆಚ್ಚು ಮಂದಿ ಸಕ್ರಿಯ :

ಅಫ್ಘಾನ್‌ ಮೂಲದ ಐಸ್‌-ಕೆಪಿ, ಐಸಿಸ್‌ ಸಂಘಟನೆಯ ಸದಸ್ಯರ ಜತೆ ನಿರಂತರ ಸಂಪರ್ಕದಲ್ಲಿರುವ ಸುಮಾರು 20ಕ್ಕೂ ಅಧಿಕ ಮಂದಿ ರಾಜ್ಯದಲ್ಲಿ ಸಕ್ರಿಯವಾಗಿದ್ದಾರೆ ಎಂದು ರಾಜ್ಯ ಮತ್ತು ರಾಷ್ಟ್ರೀಯ ತನಿಖಾ ಸಂಸ್ಥೆಗಳ ಮೂಲಗಳು ತಿಳಿಸಿವೆ. ಈ ಶಂಕಿತರ ಚಲನವಲನಗಳು ಮತ್ತು ತಂತ್ರಜ್ಞಾನ, ತಾಂತ್ರಿಕ ಚಟುವಟಿಕೆಗಳ ಮೇಲೂ ನಿಗಾ ವಹಿಸಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.

- ಮೋಹನ್‌ ಭದ್ರಾವತಿ

ಟಾಪ್ ನ್ಯೂಸ್

1-wewqeqwe

Lok Sabha Polls: ಶಿಂಧೆ ಸೇನೆ ಸೇರ್ಪಡೆಯಾದ ಖ್ಯಾತ ನಟ ಗೋವಿಂದ

Lok Sabha Polls: ಚುನಾವಣೆಯಲ್ಲಿ 238 ಬಾರಿ ಸೋತರೂ ಛಲಬಿಡದ ಸರದಾರ.. ಈ ಬಾರಿ ಮತ್ತೆ ಕಣಕ್ಕೆ

Lok Sabha Polls: ಚುನಾವಣೆಯಲ್ಲಿ 238 ಬಾರಿ ಸೋತರೂ ಛಲಬಿಡದ ಸರದಾರ.. ಈ ಬಾರಿ ಮತ್ತೆ ಕಣಕ್ಕೆ

1—-wewqe

Punjab ಮುಖ್ಯಮಂತ್ರಿ ಭಗವಂತ್ ಮಾನ್ ಅವರಿಗೆ ಹೆಣ್ಣು ಮಗುವಿನ ಜನನ

8

ʼAadujeevithamʼ Twitter review: ಪೃಥ್ವಿರಾಜ್‌ ಅಭಿನಯಕ್ಕೆ ಬಹುಪರಾಕ್; ಹೇಗಿದೆ ಸಿನಿಮಾ?

12-baikampady

Fire; ಬೈಕಂಪಾಡಿ ಕೈಗಾರಿಕಾ ಪ್ರದೇಶದಲ್ಲಿ ಅಗ್ನಿ ಅವಘಡ

Delhi: ದುಬಾರಿ ಮರ್ಸಿಡೆಸ್‌ ಕಾರಿನಲ್ಲಿ ಡ್ರಗ್ಸ್‌ ಸಾಗಾಟ-ರಾಷ್ಟ್ರಮಟ್ಟದ ಕುಸ್ತಿಪಟು ಬಂಧನ!

Delhi: ದುಬಾರಿ ಮರ್ಸಿಡೆಸ್‌ ಕಾರಿನಲ್ಲಿ ಡ್ರಗ್ಸ್‌ ಸಾಗಾಟ-ರಾಷ್ಟ್ರಮಟ್ಟದ ಕುಸ್ತಿಪಟು ಬಂಧನ!

11-

Thirthahalli: ರಾಜ್ಯದ 28 ಕ್ಷೇತ್ರವನ್ನೂ ಗೆಲ್ಲಿಸಬೇಕೆಂದು ಜೆಡಿಎಸ್ ಪಕ್ಷದೊಂದಿಗೆ ಮೈತ್ರಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

11-

Thirthahalli: ರಾಜ್ಯದ 28 ಕ್ಷೇತ್ರವನ್ನೂ ಗೆಲ್ಲಿಸಬೇಕೆಂದು ಜೆಡಿಎಸ್ ಪಕ್ಷದೊಂದಿಗೆ ಮೈತ್ರಿ

Kalaburagi: ನನ್ನ ಹೆಣದ ಮೇಲೆ ಬಿಜೆಪಿ ಚುನಾವಣೆ ಮಾಡಲು ಹೊರಟಿದೆ: ಪ್ರಿಯಾಂಕ್

Kalaburagi: ನನ್ನ ಹೆಣದ ಮೇಲೆ ಬಿಜೆಪಿ ಚುನಾವಣೆ ಮಾಡಲು ಹೊರಟಿದೆ: ಪ್ರಿಯಾಂಕ್

9-joshi

ದಿಂಗಾಲೇಶ್ವರ ಸ್ವಾಮೀಜಿಗೆ ತಪ್ಪು ತಿಳಿವಳಿಕೆಯಾಗಿದ್ದರೆ ಸರಿಪಡಿಸುವೆ: ಸಚಿವ ಪ್ರಹ್ಲಾದ ಜೋಶಿ

ಲೋಕಸಭಾ ಚುನಾವಣೆ: ಈ ಬಾರಿ ತೆಲಂಗಾಣದಲ್ಲಿ 10ಕ್ಕೂ ಅಧಿಕ ಕ್ಷೇತ್ರಗಳಲ್ಲಿ ಗೆಲುವು; ಅಭಯ ಪಾಟೀಲ

ಲೋಕಸಭಾ ಚುನಾವಣೆ: ಈ ಬಾರಿ ತೆಲಂಗಾಣದಲ್ಲಿ 10ಕ್ಕೂ ಅಧಿಕ ಕ್ಷೇತ್ರಗಳಲ್ಲಿ ಗೆಲುವು; ಅಭಯ ಪಾಟೀಲ

ಕಾಂಗ್ರೆಸ್ ನವರು ಕೇಸರಿ ಶಾಲು ಹಾಕಿದಾಕ್ಷಣ ಮನಸ್ಥಿತಿ ಬದಲಾಗಲ್ಲ… ಶೆಟ್ಟರ್ ಆರೋಪ

ಕಾಂಗ್ರೆಸ್ ನವರು ಕೇಸರಿ ಶಾಲು ಹಾಕಿದಾಕ್ಷಣ ಮನಸ್ಥಿತಿ ಬದಲಾಗಲ್ಲ… ಶೆಟ್ಟರ್ ಆರೋಪ

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

1-wewqeqwe

Lok Sabha Polls: ಶಿಂಧೆ ಸೇನೆ ಸೇರ್ಪಡೆಯಾದ ಖ್ಯಾತ ನಟ ಗೋವಿಂದ

Lok Sabha Polls: ಚುನಾವಣೆಯಲ್ಲಿ 238 ಬಾರಿ ಸೋತರೂ ಛಲಬಿಡದ ಸರದಾರ.. ಈ ಬಾರಿ ಮತ್ತೆ ಕಣಕ್ಕೆ

Lok Sabha Polls: ಚುನಾವಣೆಯಲ್ಲಿ 238 ಬಾರಿ ಸೋತರೂ ಛಲಬಿಡದ ಸರದಾರ.. ಈ ಬಾರಿ ಮತ್ತೆ ಕಣಕ್ಕೆ

1—-wewqe

Punjab ಮುಖ್ಯಮಂತ್ರಿ ಭಗವಂತ್ ಮಾನ್ ಅವರಿಗೆ ಹೆಣ್ಣು ಮಗುವಿನ ಜನನ

8

ʼAadujeevithamʼ Twitter review: ಪೃಥ್ವಿರಾಜ್‌ ಅಭಿನಯಕ್ಕೆ ಬಹುಪರಾಕ್; ಹೇಗಿದೆ ಸಿನಿಮಾ?

12-baikampady

Fire; ಬೈಕಂಪಾಡಿ ಕೈಗಾರಿಕಾ ಪ್ರದೇಶದಲ್ಲಿ ಅಗ್ನಿ ಅವಘಡ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.