ಕಲ್ಯಾಣ ಕರ್ನಾಟಕದ ಅನುದಾನ ಮೂರು ಸಾವಿರ ಕೋಟಿಗೆ ಹೆಚ್ಚಳ: ಸಿಎಂ ಘೋಷಣೆ

Team Udayavani, Nov 1, 2021, 10:30 AM IST

ಕಲ್ಯಾಣ ಕರ್ನಾಟಕದ ಅನುದಾನ ಮೂರು ಸಾವಿರ ಕೋಟಿಗೆ ಹೆಚ್ಚಳ: ಸಿಎಂ ಘೋಷಣೆ

ಬೆಂಗಳೂರು: ಕಲ್ಯಾಣ ಕರ್ನಾಟಕದ ಅಭಿವೃದ್ಧಿಗೆ ಮೀಸಲಿಡುವ ಅನುದಾನವನ್ನು ಮುಂದಿನ ಬಜೆಟ್ ನಲ್ಲಿ ಮೂರು ಸಾವಿರ ಕೋಟಿಗೆ ಏರಿಸಲಿದ್ದೇವೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಘೋಷಣೆ ಮಾಡಿದರು.

ಕಂಠೀರವ ಕ್ರೀಡಾಂಗಣದಲ್ಲಿ ನಡೆದ ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮ ಉದ್ಧಾಟಿಸಿ ಮಾತನಾಡಿದ ಅವರು, ಮುಂಬೈ ಕರ್ನಾಟಕ ಹೆಸರನ್ನು ಕಿತ್ತೂರು ಕರ್ನಾಟಕವಾಗಿ ಘೋಷಿಸಿದ್ದೇವೆ. ಮುಂದಿನ ಬಜೆಟ್ ನಲ್ಲೂ ಕಿತ್ತೂರು ಕರ್ನಾಟಕ ಅಭಿವೃದ್ಧಿಗೆ ವಿಶೇಷ ಅನುದಾನ ಮೀಸಲಿಡಲಿದ್ದೇವೆ. ಈ ಬಗ್ಗೆ ಮುಂದಿನ ಸಚಿವ ಸಂಪುಟದಲ್ಲಿ ತೀರ್ಮಾನ ಮಾಡಲಿದ್ದೇವೆ. ಕಲ್ಯಾಣ ಕರ್ನಾಟಕದ ಅಭಿವೃದ್ದಿ ನೀಡುವ ಅನುದಾನವನ್ನು 3 ಸಾವಿರ ಕೋಟಿಗೆ ಏರಿಸಲಿದ್ದೇವೆ ಎಂದರು.

ರಾಷ್ಟ್ರೀಯ ಶಿಕ್ಷಣ ನೀತಿ ಅನುಷ್ಠಾನದ ಜತೆಗೆ ಕನ್ನಡದ ಕಲಿಕೆಗೆ ಆದ್ಯತೆ ಹಾಗೂ ಉದ್ಯೋಗ ಹೆಚ್ಚಿಸಲು ಕ್ರಮ ತೆಗೆದುಕೊಳ್ಳುತ್ತಿದ್ದೇವೆ. ಉದ್ಯೋಗ ರೀತಿಯಲ್ಲೂ ಬದಲಾವಣೆ ತರಲಿದ್ದೇವೆ. ಕೌಶಲ್ಯ ಹಾಗೂ ಅರೆಕೌಶಲ್ಯ ವಲಯದಲ್ಲಿ ಶೇ.75ರಷ್ಟು ಕನ್ನಡಿಗರಿಗೆ ಉದ್ಯೋಗ ಸಿಗುವಂತೆ ಮಾಡುತ್ತಿದ್ದೇವೆ. ಖಾಸಗಿ, ಸರ್ಕಾರಿ ಹಾಗೂ ಅರೆ ಸರ್ಕಾರಿ ವಲಯದಲ್ಲಿ ಉದ್ಯೋಗ ನೀಡಲು ಕ್ರಮ ತೆಗೆದುಕೊಳ್ಳಲಿದ್ದೇವೆ.

ಗಡಿ ಕ್ಯಾತೆ ಇನ್ನು ಇದೆ: ಗಡಿ ವಿವಾದಗಳು ಇತ್ಯರ್ಥವಾಗಿದ್ದರೂ, ನ್ಯಾಯಾಲಯದಲ್ಲಿ ವಾಜ್ಯಗಳು ಇವೆ. ಇದರ ನಡುವೆಯೂ ಗಡಿ ಕ್ಯಾತೆ ಅಲ್ಲಲ್ಲಿ ನಡೆಯುತ್ತಿದೆ. ಕನ್ನಡ ಎಲ್ಲ ಆಯಾಮಗಳಲ್ಲೀ ವಿಸ್ತರಣೆಯಾಗಬೇಕು. ಈ ನಿಟ್ಟಿನಲ್ಲಿ ಹಲವು ಯೋಚನೆ ಹೊಂದಿದ್ದೇವೆ ಎಂದರು.

ಇದನ್ನೂ ಓದಿ:ಮುಂದಿನ ದಿನಗಳಲ್ಲಿ ಕರ್ನಾಟಕವು ಯಶಸ್ಸಿನ ಹೊಸ ಎತ್ತರವನ್ನು ಏರಲಿ: ಪ್ರಧಾನಿ ಮೋದಿ

ಸರ್ಕಾರದ 30 ಸೇವೆಗಳನ್ನು ಮನೆ ಮನೆಗೆ ತಲುಪಿಸುವ ಯೋಜನೆಯನ್ನು ನ.1ರಿಂದಲೇ ಜಾರಿಗೆ ತರುತ್ತಿದ್ದೇವೆ. ಕನ್ನಡಕ್ಕೆ ಎಲ್ಲದರಲ್ಲೂ ಅಗ್ರಸ್ಥಾನ ನೀಡಲಿದ್ದೇವೆ. ನಮ್ಮ ಭವ್ಯ ಭವಿಷ್ಯ ಕನ್ನಡದಲ್ಲೇ ಆಗಬೇಕು. ಕರ್ನಾಟಕ ರಾಜ್ಯೋತ್ಸವ ಮುಂದೆ ಕನ್ನಡಿಗರ ಜನೋತ್ಸವವ ಆಗಬೇಕು. ಇದಕ್ಕೆ ಕನ್ನಡಿಗರ ಬದುಕು ಇನ್ನಷ್ಟು ಸುಧಾರಿಸಬೇಕು ಎಂದರು.

ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಸಚಿವ ಬಿ.ಸಿ.ನಾಗೇಶ್, ಶಾಲೆಗಳಲ್ಲಿ ಕನ್ನಡ ಇನ್ನಷ್ಟು ವ್ಯಾಪಕವಾಗಿ ಬಳಕೆ ಮಾಡಲಿದ್ದೇವೆ. ಶಿಕ್ಷಕರು, ಆಡಳಿತಮಂಡಳಿ ಮಕ್ಕಳಲ್ಲಿ ಕನ್ನಡ ಜಾಗೃತಿ ಮೂಡಿಸಬೇಕು ಎಂದು ಹೇಳಿದರು.

ಶಾಸಕ ರಿಜ್ವಾನ್ ಅರ್ಹದ್ ಮಾತನಾಡಿ, ತ್ರಿಭಾಷ ಸೂತ್ರ ಅಡಿಯಲ್ಲಿ ಹಿಂದು ಭಾಷೆ ಕಲಿಕೆಗೆ ವಿರೋಧವಿಲ್ಲ. ಆದರೇ, ಹಿಂದಿ ಹೇರಿಕೆಯನ್ನು ಸಹಿಸುವುದಿಲ್ಲ ಎಂದು ಎಚ್ಚರಿಕೆ ನೀಡಿದರು.

ಟಾಪ್ ನ್ಯೂಸ್

ಅಪಘಾತದಲ್ಲಿ ಗಾಯಗೊಂಡಿದ್ದ ನಿವೃತ್ತ ಲೆಕ್ಕಪತ್ರ ಪರಿಶೋಧಕ ಸಾವು

ಅಪಘಾತದಲ್ಲಿ ಗಾಯಗೊಂಡಿದ್ದ ನಿವೃತ್ತ ಲೆಕ್ಕಪತ್ರ ಪರಿಶೋಧಕ ಸಾವು

ಗಾಂಜಾ ಸೇವನೆ ಪ್ರಕರಣ: ಆರು ಮಂದಿ ಪೊಲೀಸರ ವಶಕ್ಕೆ

ಗಾಂಜಾ ಸೇವನೆ ಪ್ರಕರಣ: ಆರು ಮಂದಿ ಪೊಲೀಸರ ವಶಕ್ಕೆ

ಚರಂಡಿಗೆ ವಾಲಿದ ಕಂಟೈನರ್‌ ವಾಹನ: 3 ತಾಸು ಸಂಚಾರ ತಡೆ

ಚರಂಡಿಗೆ ವಾಲಿದ ಕಂಟೈನರ್‌ ವಾಹನ: 3 ತಾಸು ಸಂಚಾರ ತಡೆ

ವರದಕ್ಷಿಣೆ ಕಿರುಕುಳ ಪ್ರಕರಣ: ದೂರು ರದ್ದುಗೊಳಿಸಿದ ಹೈಕೋರ್ಟ್‌

ವರದಕ್ಷಿಣೆ ಕಿರುಕುಳ ಪ್ರಕರಣ: ದೂರು ರದ್ದುಗೊಳಿಸಿದ ಹೈಕೋರ್ಟ್‌

arrested

ಶ್ರೀನಗರ : ಐವರು ಹೈಬ್ರಿಡ್‌ ಉಗ್ರರ ಬಂಧನ

ಅಹಿಂಸಾ ಮಾರ್ಗ ಅನುಸರಿಸಿ: ರಾಜ್ಯಪಾಲ ಗೆಹ್ಲೋಟ್

ಅಹಿಂಸಾ ಮಾರ್ಗ ಅನುಸರಿಸಿ: ರಾಜ್ಯಪಾಲ ಗೆಹ್ಲೋಟ್

ವನಿತಾ ಟಿ20 ಚಾಲೆಂಜರ್‌ ಸರಣಿ: ಸೂಪರ್‌ ನೋವಾ ಸೂಪರ್‌ ಬ್ಯಾಟಿಂಗ್‌

ವನಿತಾ ಟಿ20 ಚಾಲೆಂಜರ್‌ ಸರಣಿ: ಸೂಪರ್‌ ನೋವಾ ಸೂಪರ್‌ ಬ್ಯಾಟಿಂಗ್‌ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ವರದಕ್ಷಿಣೆ ಕಿರುಕುಳ ಪ್ರಕರಣ: ದೂರು ರದ್ದುಗೊಳಿಸಿದ ಹೈಕೋರ್ಟ್‌

ವರದಕ್ಷಿಣೆ ಕಿರುಕುಳ ಪ್ರಕರಣ: ದೂರು ರದ್ದುಗೊಳಿಸಿದ ಹೈಕೋರ್ಟ್‌

ಅಹಿಂಸಾ ಮಾರ್ಗ ಅನುಸರಿಸಿ: ರಾಜ್ಯಪಾಲ ಗೆಹ್ಲೋಟ್

ಅಹಿಂಸಾ ಮಾರ್ಗ ಅನುಸರಿಸಿ: ರಾಜ್ಯಪಾಲ ಗೆಹ್ಲೋಟ್

ಸರ್ವೆ ಇಲಾಖೆ ಕಚೇರಿಯಲ್ಲಿ ಅಧಿಕಾರಿಗಳ ಗೈರು : ರೈತರಿಂದ ಕಚೇರಿಗೆ ಮುತ್ತಿಗೆ

ಶ್ರೀರಂಗಪಟ್ಟಣ : ಸರ್ವೆ ಇಲಾಖೆ ಕಚೇರಿಯಲ್ಲಿ ಅಧಿಕಾರಿಗಳ ಗೈರು : ರೈತರಿಂದ ಕಚೇರಿಗೆ ಮುತ್ತಿಗೆ

heddari1

ರಾಗಿ ಖರೀದಿ ಟೋಕನ್ ನೀಡುವಲ್ಲಿ ತಾರತಮ್ಯ : ಆಕ್ರೋಶಿತ ರೈತರಿಂದ ಹೆದ್ದಾರಿ ತಡೆ

ಕೋವಿಡ್‌ ನಿಯಮ ಉಲ್ಲಂಘನೆ: ಸಿದ್ದರಾಮಯ್ಯ, ಡಿಕೆಶಿಗೆ ನೋಟಿಸ್‌ ಜಾರಿ

ಕೋವಿಡ್‌ ನಿಯಮ ಉಲ್ಲಂಘನೆ: ವಿಪಕ್ಷ ನಾಯಕ ಸಿದ್ದರಾಮಯ್ಯ, ಡಿಕೆಶಿ ಸೇರಿ 29 ಮಂದಿಗೆ ಸಮನ್ಸ್‌

MUST WATCH

udayavani youtube

ಶಿರೂರು ಆಳ ಸಮುದ್ರದಲ್ಲಿ‌ ಮುಳುಗಿದ ಮೀನುಗಾರಿಕಾ ದೋಣಿ

udayavani youtube

ಉಡುಪಿಯಲ್ಲಿ ‘ ಮಾವಿನ ಮೇಳ ‘ | ನಾಳೆ ( may 23) ಕೊನೇ ದಿನ

udayavani youtube

ಶಿರ್ವ : ನೂತನ ಹೈಟೆಕ್‌ ಬಸ್ಸು ನಿಲ್ದಾಣ ಲೋಕಾರ್ಪಣೆ

udayavani youtube

ಬೆಳ್ತಂಗಡಿಯಲ್ಲೊಂದು ಗೋಡಂಬಿಯಾಕಾರದ ಮೊಟ್ಟೆ ಇಡುವ ಕೋಳಿ..

udayavani youtube

ಆಗ ನಿಮ್ಮಲ್ಲಿ 2 ಆಯ್ಕೆಗಳಿರುತ್ತವೆ .. ಅದೇನಂದ್ರೆ..

ಹೊಸ ಸೇರ್ಪಡೆ

ಅಪಘಾತದಲ್ಲಿ ಗಾಯಗೊಂಡಿದ್ದ ನಿವೃತ್ತ ಲೆಕ್ಕಪತ್ರ ಪರಿಶೋಧಕ ಸಾವು

ಅಪಘಾತದಲ್ಲಿ ಗಾಯಗೊಂಡಿದ್ದ ನಿವೃತ್ತ ಲೆಕ್ಕಪತ್ರ ಪರಿಶೋಧಕ ಸಾವು

ಗಾಂಜಾ ಸೇವನೆ ಪ್ರಕರಣ: ಆರು ಮಂದಿ ಪೊಲೀಸರ ವಶಕ್ಕೆ

ಗಾಂಜಾ ಸೇವನೆ ಪ್ರಕರಣ: ಆರು ಮಂದಿ ಪೊಲೀಸರ ವಶಕ್ಕೆ

ಚರಂಡಿಗೆ ವಾಲಿದ ಕಂಟೈನರ್‌ ವಾಹನ: 3 ತಾಸು ಸಂಚಾರ ತಡೆ

ಚರಂಡಿಗೆ ವಾಲಿದ ಕಂಟೈನರ್‌ ವಾಹನ: 3 ತಾಸು ಸಂಚಾರ ತಡೆ

ವರದಕ್ಷಿಣೆ ಕಿರುಕುಳ ಪ್ರಕರಣ: ದೂರು ರದ್ದುಗೊಳಿಸಿದ ಹೈಕೋರ್ಟ್‌

ವರದಕ್ಷಿಣೆ ಕಿರುಕುಳ ಪ್ರಕರಣ: ದೂರು ರದ್ದುಗೊಳಿಸಿದ ಹೈಕೋರ್ಟ್‌

arrested

ಶ್ರೀನಗರ : ಐವರು ಹೈಬ್ರಿಡ್‌ ಉಗ್ರರ ಬಂಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.