ಪದವಿಯಲ್ಲಿ ಕನ್ನಡ ಕಡ್ಡಾಯ: ಸ್ವಾಗತಾರ್ಹ ಬೆಳವಣಿಗೆ ಎಂದ ನೆಟ್ಟಿಗರು

Team Udayavani, Nov 16, 2021, 2:09 PM IST

ಪದವಿಯಲ್ಲಿ ಕನ್ನಡ ಕಡ್ಡಾಯ: ಸ್ವಾಗತಾರ್ಹ ಬೆಳವಣಿಗೆ ಎಂದ ನೆಟ್ಟಿಗರು

ಬೆಂಗಳೂರು: ಪದವಿ ಕಾಲೇಜುಗಳಲ್ಲಿ ಕನ್ನಡ ಭಾಷೆ ಕಲಿಕೆ ಕಡ್ಡಾಯ ಮಾಡಿರುವ ರಾಜ್ಯ ಸರ್ಕಾರದ ಆದೇಶದ ಕುರಿತು ಮಾತನಾಡಿರುವ ನೆಟ್ಟಿಗರು ಇದೊಂದು ಸ್ವಾಗತಾರ್ಹ ಬೆಳವಣಿಗೆ ಎಂದು ಅಭಿಪ್ರಾಯ ಪಟ್ಟಿದ್ದಾರೆ.

‘ಕನ್ನಡ ಕಡ್ಡಾಯ ನಿಜಕ್ಕೂ ಸ್ವಾಗತಾರ್ಹ. ಕನ್ನಡ ನಶಿಸದಂತೆ ಉಳಿಸಿಕೊಳ್ಳಲು ಇರುವ ಮಾರ್ಗಗಳಲ್ಲಿ ಇದೂ ಒಂದು. ಕಾಲೇಜುಗಳಲ್ಲಿ ಕನ್ನಡ ಕಡ್ಡಾಯದಿಂದ ಭಾಷಾಸಕ್ತಿ ಬೆಳೆಸಲು ಸಹಕಾರಿ. ಇದರ ಜೊತೆಗೆ ಸರ್ಕಾರ ಹೆಚ್ಚು ಅಂಕ ಗಳಿಸಿದವರಿಗೆ ಪ್ರೋತ್ಸಾಹ ನೀಡಬೇಕು ಹಾಗೂ ಕೆಲಸಗಳಲ್ಲಿ ಮೀಸಲಾತಿ ಘೋಷಿಸಬೇಕು. ಇದರಿಂದಾಗಿ ಕನ್ನಡ ಭಾಷಾ ಅಭಿವೃದ್ಧಿಯ ಜೊತೆಗೆ ಭಾಷೆಯ ಉಳಿಸಲು, ಮಾತೃಭಾಷಾ ಪ್ರೇಮ ಮೂಡಿಸಲು ಸಾಧ್ಯ. ಹೊರ ರಾಜ್ಯದಿಂದ ಬರುವ ವಿದ್ಯಾರ್ಥಿಗಳಿಗೂ ಕನ್ನಡ ಕಡ್ಡಾಯ ಮಾಡಿದರೆ ಕನ್ನಡದ ಏಳಿಗೆಗೆ ಸಾಧ್ಯ’ ಎಂದು ಶ್ವೇತಾ ಎಂಬವರು ಕೂ ಮಾಡಿದ್ದಾರೆ.

ಇದನ್ನೂ ಓದಿ:ಶಿಕ್ಷಣ ಕ್ಷೇತ್ರದಲ್ಲಿ ಗೋವಾ ರಾಜ್ಯವನ್ನು ಅಗ್ರಸ್ಥಾನಕ್ಕೆ ತರಲು ಪ್ರಯತ್ನ: ಪ್ರಮೋದ ಸಾವಂತ್

Koo App

#ಕನ್ನಡಕಡ್ಡಾಯ ಕನ್ನಡ ಭಾಷೆ ಕ್ರಿಯಾತ್ಮಕ ಕನ್ನಡದ ಪಠ್ಯಕ್ರಮ ಕ್ಲಿಷ್ಟಕರವಾಗಿದೆ. ಭಾಷೆ ಆಯ್ಕೆಯಾಗಿ ಕಲಿಸಬೇಕು, ಕಡ್ಡಾಯಗೊಳಿಸಬಾರದು.ವ್ಯವಹಾರಿಕ ಕನ್ನಡ ಕಲಿಕೆ ಬೇಕು.ಉನ್ನತ ಶಿಕ್ಷಣದಲ್ಲಿ ಕನ್ನಡ ಕಲಿಕೆ ಕಷ್ಟ. ಪ್ರತ್ಯೇಕ ಶಿಕ್ಷಕರು, ಗ್ರಂಥಾಲಯ, ಪುಸ್ತಕ ಒದಗಿಸಬೇಕು. ಕನ್ನಡ ಒತ್ತಾಯಪೂರ್ವಕವಾಗಿ ಪ್ರೀತಿಸುವಂತೆ ಮಾಡುತ್ತಿದೆ.ಕರ್ನಾಟಕದಲ್ಲೇ ಬೇರೆ ಮಾಧ್ಯಮದ ವಿದ್ಯಾರ್ಥಿಗಳಿದ್ದಾರೆ. ಆ ವಿದ್ಯಾರ್ಥಿಗಳಿಗೆ ಸರ್ಕಾರದ ನೀತಿಯಿಂದ ತೊಂದ್ರೆ ಆಗುತ್ತಿದೆ.ಕನ್ನಡಕ್ಕೆ ಪ್ರೋತ್ಸಾಹದ ಮಾಡೋಣ.

ಆರತಿ. (@arathi.IPoS) 16 Nov 2021

Koo App

ಶಾಲೆಯಲ್ಲಿದ್ದಾಗ ಎಲ್ರಿಗೂ ಕನ್ನಡ ಅಂದ್ರೆ ತುಂಬಾ ತುಂಬಾ ಇಷ್ಟ, ಅದೊಂದು ಬೋರ್ ಆಗದಿರೋ ವಿಷಯ ನಮಗೆ.

ಆದ್ರೆ ಕಾಲೇಜು ಏರಿದ ತಕ್ಷಣ ಕನ್ನಡ ಅಂದ್ರೆ ತಾತ್ಸಾರ ಬೆಳೆದುಬಿಡತ್ತೆ, ಅದ್ಯಾಕೆ ಹಾಗೆ? ಕನ್ನಡ ಕಡ್ಡಾಯ ಮಾಡಿದ್ದು ಒಳ್ಳೆಯದೇ.

#ಕನ್ನಡಕಡ್ಡಾಯ

Raju Helawar (@Raju_Helawar) 16 Nov 2021

Koo App

#ಕನ್ನಡಕಡ್ಡಾಯ ಒಂದು ಹಣ್ಣನ್ನು ಕೆಮಿಕಲ್ ಹಾಕಿ ಹಣ್ಣು ಮಾಡುವದು
ಸುಂಸ್ಕೃತಿಯಲ್ಲ. ಪ್ರಕೃತಿ ವಿರೋಧವಾಗಿ ನಡೆದು ಕೊಳ್ಳು ವದು ವಿಕೃತಿ ಯಾಗುವದು ಹಾಗೆ ಒ ತ್ತಡದಿಂದ ಪಕ್ವತೆ ಯಾದರೆ ರುಚಿ ಸವಿಯಾಗಿರುವದಿಲ್ಲ .ಎಲ್ಲವೂ ಅಂದಾಗ ನೈಜವಾಗಿರಬೇಕು ಪಕ್ವತೆಯು ಪರಿಪೂರ್ಣತೆ ಯ ಪ್ರತೀಕ .ಅದೇ ರೀತಿಯಾಗಿ ಒಂದು ಭಾಷೆಯ ಬಗ್ಗೆ ಅಭಿಮಾನ ,ಹೆಮ್ಮೆ ನನ್ನದು , ಅನ್ನುವ ಭಾವನೆ ಪ್ರತಿಯೊಬ್ಬರಿಗೂ ಮುಖ್ಯವಾಗಿ ಇರಬೇಕು .ಇದು ಪ್ರತಿಯೊಬ್ಬ ಕನ್ನಡಿಗರ ಹೃದಯ ದ ಮಿಡಿತವಾದರೆ ಮಾತ್ರ ಸಾಧ್ಯ .❤❤.

Suvarna (@_kannadati) 16 Nov 2021

Koo App

#ಕನ್ನಡಕಡ್ಡಾಯ
ಕನ್ನಡ ಕಡ್ಡಾಯವಾಗಬೇಕು ಅನ್ನುವ ಹೇಳಿಕೆ ಸ್ವಾಗತಾರ್ಹ, ಸರ್ಕಾರಿ ಕಚೇರಿಗಳಲ್ಲಿ ಮೊದಲು ಆಡಳಿತ ಭಾಷೆಯಾಗಿ ಹೊರಹೊಮ್ಮಬೇಕು, ಆಯಾಯ ರಾಜ್ಯಗಳಲ್ಲಿ ಅವರವರ ಮಾತೃಭಾಷೆ ಚಾಲ್ತಿಯಲ್ಲಿರುವ ಹಾಗೆ ನಮ್ಮ ರಾಜ್ಯದಲ್ಲಿ ಕನ್ನಡ ಕಡ್ಡಾಯವಾಗಲೇಬೇಕು, ಅನ್ಯ ಭಾಷೆಯವರಿಗೆ ಇಲ್ಲಿ ಕೆಲಸ ಕೊಡಲು ಕನ್ನಡ ಕಲಿಕೆ ಕಡ್ಡಾಯ ಅನ್ನುವ ಆದೇಶ ಹೊರಡಿಸಬೇಕು, ಆಂಗ್ಲ ಮಾಧ್ಯಮದಲ್ಲಿ ಕನ್ನಡ ಒಂದು ವಿಷಯವಷ್ಟೇ ಅನ್ನುವ ಬದಲು, ಹಿಂದಿ ಇಂಗ್ಲೀಷ್ ಒಂದೊಂದು ವಿಷಯಗಳಷ್ಟೇ ಅನ್ನುವ ನಿರ್ಧಾರವಾದರೇ ಚೆನ್ನವಲ್ಲವೇ?

ದಾಕ್ಷಾಯಿಣಿ (@ಬರಹದವರಹL2CU3) 16 Nov 2021

Koo App

#ಕನ್ನಡಕಡ್ಡಾಯ
ನಮ್ಮದೇ ರಾಜ್ಯದಲ್ಲಿ ನಮ್ಮದೇ ಭಾಷೆಯನ್ನು ಕಡ್ಡಾಯ ಮಾಡೋ ಪರಿಸ್ಥಿತಿ ಅದಾಗಲೇ ಬಂದಿದ್ದಾಗಿದೆ ಅದನ್ನೂ ಕೂಡಾ ಚರ್ಚೆ ಮಾಡೋ ಮನಸ್ಥಿತಿಯನ್ನು ಹೊಂದಿರೋ ವಿಶಾಲ ಕನ್ನಡಿಗರು ನಾವು.
ಅದರಲ್ಲೂ ಕೆಲವು ಮಹಾನ್ ಪಂಡಿತರು ಮಹಾನ್ ತಿಳುವಳಿಕೆ ಉಳ್ಳ ನಾಗರೀಕರು ಕಡ್ಡಾಯ ಮಾಡಿದ್ದೇ ತಪ್ಪು ಅನ್ನೋ ವಾದದಲ್ಲಿ ಮಗ್ನರಾಗಿದ್ದಾರೆ. ಅಕ್ಕ ಪಕ್ಕದ ರಾಜ್ಯದವರನ್ನೂ ನೋಡಿ ಕಲಿಯಬೇಕಾದ್ದು ಕನ್ನಡಿಗರಿಗೆ ಸ್ವಲ್ಪ ಅತ್ಯವಶ್ಯಕ ಅನ್ನಿಸಿದರೇ ಅತಿಶಯೋಕ್ತಿಯಲ್ಲ .

ಸಿರಿ ಗುಬ್ಬಿ (@sirigubbi) 16 Nov 2021

ಟಾಪ್ ನ್ಯೂಸ್

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

1-asasas

Naxal ಬಾಧಿತ ಮತಗಟ್ಟೆಗಳ ಭದ್ರತೆಗೆ ಹೆಚ್ಚುವರಿ ಆದ್ಯತೆ: ಮುಲ್ಲೈ ಮುಗಿಲನ್‌

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

KPCC: ಮೋದಿ, ರಾಜನಾಥ್‌ಸಿಂಗ್‌ ವಿರುದ್ಧ ಕ್ರಮಕ್ಕೆ ಕೆಪಿಸಿಸಿ ದೂರು

KPCC: ಮೋದಿ, ರಾಜನಾಥ್‌ಸಿಂಗ್‌ ವಿರುದ್ಧ ಕ್ರಮಕ್ಕೆ ಕೆಪಿಸಿಸಿ ದೂರು

1-rerwer

IPL; ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಜಯದ ನಗು ಬೀರಿದ ಆರ್ ಸಿಬಿ

MONEY (2)

Mysuru: ದಾಖಲೆ ಇಲ್ಲದೆ ಸಾಗಿಸುತ್ತಿದ್ದ 89 ಲಕ್ಷ ರೂ. ವಶಕ್ಕೆ

Crime: ತಾಯಿ ಆತ್ಮಹತ್ಯೆಗೆ ಕಾರಣನಾದ ತಂದೆಯನ್ನು ಕೊಂದ ಮಗ

Crime: ತಾಯಿ ಆತ್ಮಹತ್ಯೆಗೆ ಕಾರಣನಾದ ತಂದೆಯನ್ನು ಕೊಂದ ಮಗ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

KPCC: ಮೋದಿ, ರಾಜನಾಥ್‌ಸಿಂಗ್‌ ವಿರುದ್ಧ ಕ್ರಮಕ್ಕೆ ಕೆಪಿಸಿಸಿ ದೂರು

KPCC: ಮೋದಿ, ರಾಜನಾಥ್‌ಸಿಂಗ್‌ ವಿರುದ್ಧ ಕ್ರಮಕ್ಕೆ ಕೆಪಿಸಿಸಿ ದೂರು

State government: ರಾಜ್ಯ ಸರಕಾರಕ್ಕೆ ಎನ್‌ಸಿಬಿ ನೋಟಿಸ್‌? 

State government: ರಾಜ್ಯ ಸರಕಾರಕ್ಕೆ ಎನ್‌ಸಿಬಿ ನೋಟಿಸ್‌? 

MONEY (2)

Mysuru: ದಾಖಲೆ ಇಲ್ಲದೆ ಸಾಗಿಸುತ್ತಿದ್ದ 89 ಲಕ್ಷ ರೂ. ವಶಕ್ಕೆ

Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ

Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

1-asasas

Naxal ಬಾಧಿತ ಮತಗಟ್ಟೆಗಳ ಭದ್ರತೆಗೆ ಹೆಚ್ಚುವರಿ ಆದ್ಯತೆ: ಮುಲ್ಲೈ ಮುಗಿಲನ್‌

1-MB

Note Ban ವೇಳೆ ಮಹಿಳೆಯರು ಮಂಗಳಸೂತ್ರ ಅಡವಿಟ್ಟಾಗ ಮೋದಿ ಮೌನ: ಭಂಡಾರಿ

Exam

Udupi; ಪಿಯುಸಿ ಪರೀಕ್ಷೆ-2 : ನಿಷೇಧಾಜ್ಞೆ ಜಾರಿ

IMD

Dakshina Kannada ಜಿಲ್ಲೆಯಲ್ಲಿ ಮುಂದುವರಿದ ಉರಿಬಿಸಿಲು:ಮಳೆಯ ಮುನ್ಸೂಚನೆ ಇಲ್ಲ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.