ಕೋವಿಡ್‌ ಪ್ಯಾಕೇಜ್‌ ಕೊಡಲು ಆಗಲ್ಲ ಎನ್ನುವುದು ಬಿಜೆಪಿಯ ಕೈಲಾಗದ ಮಾತುಗಳು : ಕುಮಾರಸ್ವಾಮಿ


Team Udayavani, May 14, 2021, 1:05 PM IST

ftfgggg

ಬೆಂಗಳೂರು : ನಾವೇನ್‌ ನೋಟ್‌ ಪ್ರಿಂಟ್‌ ಮಾಡ್ತೀವಾ? ಜಡ್ಜ್‌ಗಳು ಸರ್ವಜ್ಞರಲ್ಲ, ಕೊರೊನಾ ವೈರಸ್‌ ಗಾಗಿ ಚೀನಾವನ್ನು ದೂಷಿಸಬೇಕು ನೇಣು ಹಾಕಿಕೊಳ್ಳಲು ಆಗುತ್ತಾ? ಕೋವಿಡ್‌ ಪ್ಯಾಕೇಜ್‌ ಕೊಡಲು ಆಗಲ್ಲ, ದೇಶದ ದುಸ್ಥಿತಿಗೆ ವಿರೋಧ ಪಕ್ಷಗಳು ಕಾರಣ ಎನ್ನುತ್ತಿರುವುದು ಬಿಜೆಪಿಯ ಕೈಲಾಗದ ಮಾತುಗಳು ಎಂದು ಮಾಜಿ ಸಿಎಂ ಕುಮಾರಸ್ವಾಮಿ ಬಿಜೆಪಿ ವಿರುದ್ಧ ಗುಡುಗಿದ್ದಾರೆ.

ಅವರು ಅಷ್ಟು ವರ್ಷ ಅಧಿಕಾರ ಮಾಡಿದರು, ಇವರು ಅಷ್ಟು ವರ್ಷ ತಿಂದರು, ಎಂದು ದೂಷಿಸಿಕೊಂಡೇ ಅಧಿಕಾರಕ್ಕೆ ಬಂದ ಬಿಜೆಪಿ ಈಗ ಹೊಣೆಗೇಡಿತನ ಪ್ರದರ್ಶಿಸುತ್ತಿದೆ. ಪ್ರತಿಯೊಂದಕ್ಕೂ ವಿರೋಧ ಪಕ್ಷಗಳನ್ನು ದೂಷಿಸುವ ಬಿಜೆಪಿಗೆ ಅಧಿಕಾರವೇಕೆ? ‘ಕೊಟ್ಟ ಕುದುರೆಯನ್ನು ಏರಲಾಗದವನು ಧೀರನೂ ಅಲ್ಲ, ಶೂರನೂ ಅಲ್ಲ,’ ಎಂಬ ಮಾತು ಬಿಜೆಪಿಗೆ ಹೊಂದುವಂಥದ್ದು.

ಕೋವಿಡ್‌ ನಿಭಾಯಿಸುವಲ್ಲಿ ಕೇಂದ್ರ, ರಾಜ್ಯ ಸರ್ಕಾರಗಳೆರಡೂ ವಿಫಲವಾಗಿವೆ. ಅತಿ ಹೆಚ್ಚು ಕೋವಿಡ್‌ ಪ್ರಕರಣಗಳಿರುವ ರಾಷ್ಟ್ರಗಳ ಪಟ್ಟಿಯಲ್ಲಿ ಭಾರತ ಮುಂದಿದೆ. ಕೇಂದ್ರ ಕೋವಿಡ್‌ ಅನ್ನು ಅಸಮರ್ಪಕವಾಗಿ ನಿರ್ವಹಿಸಿದ್ದೇ ಇದಕ್ಕೆ ಕಾರಣ. ಅತಿ ಹೆಚ್ಚು ಸೋಂಕು ಪ್ರಕರಣಗಳಿರುವ ರಾಜ್ಯಗಳ ಪಟ್ಟಿಯಲ್ಲಿ ಕರ್ನಾಟಕ ಮುಂದಿದೆ. ಇದು ರಾಜ್ಯ ಸರ್ಕಾರದ ಅಸಮರ್ಥತೆ.

ಅಸಮರ್ಥತೆ ಮುಚ್ಚಿಕೊಳ್ಳಲು ಬಿಜೆಪಿ ನಾಯಕರು ಈಗ ಬೇಜವಾಬ್ದಾರಿ ಹೇಳಿಕೆ ನೀಡುತ್ತಿದ್ದಾರೆ. ಕೈಲಾಗದ ಮಾತಾಡುತ್ತಿದ್ದಾರೆ. ವಿರೋಧ ಪಕ್ಷಗಳನ್ನು ಟೀಕಿಸುತ್ತಿದ್ದಾರೆ. ಭೂ ಕೈಲಾಸ ಸೃಷ್ಟಿಸುವ ಬಿಜೆಪಿ ಮಾತು ನಂಬಿ ಜನ ಅಧಿಕಾರ ನೀಡಿದ್ದಾರೆ. ಜನರ ಆಶಯಕ್ಕೆ ತಕ್ಕಂತೆ ಬಿಜೆಪಿ ನಡೆದುಕೊಳ್ಳಬೇಕು. ಕೈಲಾಗದಿದ್ದರೆ ಅಧಿಕಾರ ಬಿಟ್ಟು ತೊಲಗಬೇಕು.

ಪರಸ್ಪರ ಗೂಬೆ ಕೂರಿಸುವುದು ಎರಡೂ ರಾಷ್ಟ್ರೀಯ ಪಕ್ಷಗಳಿಗೆ ಖಯಾಲಿ. ಇದನ್ನು ಅರಿತೇ ಜನ ಪ್ರಾದೇಶಿಕ ಪಕ್ಷಗಳಿಗೆ ಮಣೆ ಹಾಕುತ್ತಿದ್ದಾರೆ. ಕೋವಿಡ್‌ ನಿಭಾಯಿಸುವಲ್ಲಿ ಪ್ರಾದೇಶಿಕ ಪಕ್ಷಗಳ ಸರ್ಕಾರವಿರುವ ರಾಜ್ಯಗಳು ಯಶಸ್ವಿಯಾಗಿವೆ. ಜನರಿಗೆ ಸವಲತ್ತು ನೀಡುತ್ತಿವೆ. ಆದರೆ, ರಾಷ್ಟ್ರೀಯ ಪಕ್ಷಗಳ ಸರ್ಕಾರಗಳಿರುವೆಡೆ ಅಂಥ ಬದ್ಧತೆ ಕಾಣುತ್ತಿಲ್ಲ.

ಕೇರಳ, ಆಂಧ್ರ ಪ್ರದೇಶ, ತಮಿಳುನಾಡು, ಪಶ್ಚಿಮ ಬಂಗಾಳ, ದೆಹಲಿಯಲ್ಲಿ ಕೋವಿಡ್‌ ನಿಯಂತ್ರಣಕ್ಕೆ ಬರುತ್ತಿದೆ. ಕೋವಿಡ್‌ ಪರಿಸ್ಥಿತಿ ನಿಭಾಯಿಸುವ ವೇಳೆ ಜನರಿಗೆ ಆದ ತೊಂದರೆಗೆ ಈ ರಾಜ್ಯಗಳಲ್ಲಿ ಪರಿಹಾರಗಳನ್ನೂ ನೀಡಲಾಗಿದೆ. ಜನರಿಗೆ ಉಚಿತ ಆಹಾರ, ಆರೋಗ್ಯ ಸೇವೆ ನೀಡಲಾಗಿದೆ. ಜನರೆಡೆಗೆ ಪ್ರಾದೇಶಿಕ ಪಕ್ಷಗಳಿಗೆ ಇರುವ ಬದ್ಧತೆಗೆ ಇದು ಸಾಕ್ಷಿ.

ಬಿಜೆಪಿ ನಾಯಕರು ಕೈಲಾಗದ ಮಾತು ಬಿಡಿ. ಜನರನ್ನು ಮತ್ತಷ್ಟು ನಿರಾಶರನ್ನಾಗಿಸಬೇಡಿ. ಜನರ ಆರೋಗ್ಯ, ಜೀವ ಮುಖ್ಯ. ಅದಕ್ಕಾಗಿ ಸಕಲವನ್ನೂ ಮಾಡಿ. ಕೇಂದ್ರದಲ್ಲಿ ರಾಜ್ಯವನ್ನು ಪ್ರತಿನಿಧಿಸುತ್ತಿರುವ ಸಂಸದರು, ಸಚಿವರು ಶ್ರೀಕೃಷ್ಣನ ಮಾತುಗಳನ್ನು ನೆನಪಿಸಿಕೊಳ್ಳಿ. ‘ನಿಮ್ಮ ಕರ್ತ್ಯವ್ಯ ನೀವು ಮಾಡಿ.’ ಈ ಮೂಲಕ ರಾಜ್ಯಕ್ಕೆ ಬರಬೇಕಾದ್ದನ್ನು ತನ್ನಿ ಎಂದು ಕುಮಾರಸ್ವಾಮಿ ಟ್ವೀಟ್ ಮೂಲಕ ಕಿಡಿಕಾರಿದ್ದಾರೆ.

ಟಾಪ್ ನ್ಯೂಸ್

ಜಪಾನ್‌ಗೆ ಜಾಕ್‌ಪಾಟ್‌; ಜರ್ಮನಿ ಔಟ್‌: ಗೆದ್ದು ಹೊರಬಿದ್ದ ಜರ್ಮನಿ; ಸೋತರೂ ಮುನ್ನಡೆದ ಸ್ಪೇನ್‌!

ಜಪಾನ್‌ಗೆ ಜಾಕ್‌ಪಾಟ್‌; ಜರ್ಮನಿ ಔಟ್‌: ಗೆದ್ದು ಹೊರಬಿದ್ದ ಜರ್ಮನಿ; ಸೋತರೂ ಮುನ್ನಡೆದ ಸ್ಪೇನ್‌!

ವಿಶ್ವಕಪ್‌ ಫುಟ್ ಬಾಲ್‌: ಸ್ಪೇನ್‌ಗೆ ಒಲಿಯತು ಸ್ಪೆಶಲ್‌ ಲಕ್‌!

ವಿಶ್ವಕಪ್‌ ಫುಟ್ ಬಾಲ್‌: ಸ್ಪೇನ್‌ಗೆ ಒಲಿಯತು ಸ್ಪೆಶಲ್‌ ಲಕ್‌!

ಜಪಾನ್‌ಗೆ ಸಿಕ್ಕ ವಿವಾದಾತ್ಮಕ ಗೋಲು, ಜರ್ಮನಿಗೆ ನಷ್ಟ!

ಜಪಾನ್‌ಗೆ ಸಿಕ್ಕ ವಿವಾದಾತ್ಮಕ ಗೋಲು, ಜರ್ಮನಿಗೆ ನಷ್ಟ!

ವಿಶ್ವಕಪ್‌ ಪಂದ್ಯಾ ವಳಿ: ಜರ್ಮನಿಗೆ ಮರ್ಮಾಘಾತ

ವಿಶ್ವಕಪ್‌ ಪಂದ್ಯಾ ವಳಿ: ಜರ್ಮನಿಗೆ ಮರ್ಮಾಘಾತ

ರಾವಲ್ಪಿಂಡಿ ಟೆಸ್ಟ್‌ : ಇಂಗ್ಲೆಂಡ್‌ ತಂಡದ ಬೃಹತ್‌ ಮೊತ್ತಕ್ಕೆ ಪಾಕಿಸ್ಥಾನ ದಿಟ್ಟ ಜವಾಬು

ರಾವಲ್ಪಿಂಡಿ ಟೆಸ್ಟ್‌ : ಇಂಗ್ಲೆಂಡ್‌ ತಂಡದ ಬೃಹತ್‌ ಮೊತ್ತಕ್ಕೆ ಪಾಕಿಸ್ಥಾನ ದಿಟ್ಟ ಜವಾಬು

ಎದೆನೋವು: ಆಸ್ಟ್ರೇಲಿಯ ತಂಡದ ಮಾಜಿ ನಾಯಕ ರಿಕಿ ಪಾಂಟಿಂಗ್‌ ಆಸ್ಪತ್ರೆಗೆ ದಾಖಲು

ಎದೆನೋವು: ಆಸ್ಟ್ರೇಲಿಯ ತಂಡದ ಮಾಜಿ ನಾಯಕ ರಿಕಿ ಪಾಂಟಿಂಗ್‌ ಆಸ್ಪತ್ರೆಗೆ ದಾಖಲು

ವಿಶ್ವಕಪ್ 2022: ಪೋರ್ಚುಗಲ್‌ಗೆ ದಕ್ಷಿಣ ಕೊರಿಯಾಘಾತ!

ವಿಶ್ವಕಪ್ 2022: ಪೋರ್ಚುಗಲ್‌ಗೆ ದಕ್ಷಿಣ ಕೊರಿಯಾಘಾತ!



ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಏನು ಮಾಡಿದರೂ ವಿಪಕ್ಷ ಅಧಿಕಾರಕ್ಕೆ ಬರದು: ಸಿಎಂ ಬೊಮ್ಮಾಯಿ

ಏನು ಮಾಡಿದರೂ ವಿಪಕ್ಷ ಅಧಿಕಾರಕ್ಕೆ ಬರದು: ಸಿಎಂ ಬೊಮ್ಮಾಯಿ

ಮಹಾರಾಷ್ಟ್ರದ ಕನ್ನಡಿಗರಿಗೆ ಪಡಿತರ ರದ್ದು ಬೆದರಿಕೆ: ಎಂ.ಬಿ. ಪಾಟೀಲ್‌

ಮಹಾರಾಷ್ಟ್ರದ ಕನ್ನಡಿಗರಿಗೆ ಪಡಿತರ ರದ್ದು ಬೆದರಿಕೆ: ಎಂ.ಬಿ. ಪಾಟೀಲ್‌

ಫೈಟರ್‌ ರವಿ ಬಿಜೆಪಿ ಸೇರ್ಪಡೆ ನನ್ನ ಗಮನಕ್ಕೆ ಬಂದಿಲ್ಲ: ಸಚಿವ ಅಶೋಕ್‌

ಫೈಟರ್‌ ರವಿ ಬಿಜೆಪಿ ಸೇರ್ಪಡೆ ನನ್ನ ಗಮನಕ್ಕೆ ಬಂದಿಲ್ಲ: ಸಚಿವ ಅಶೋಕ್‌

ಕೆಜಿಎಫ್-2 ಹಾಡಿನ ವಿವಾದ: ರಾಹುಲ್‌ಗೆ ಹೈಕೋರ್ಟ್‌ ನೋಟಿಸ್‌

ಕೆಜಿಎಫ್-2 ಹಾಡಿನ ವಿವಾದ: ರಾಹುಲ್‌ಗೆ ಹೈಕೋರ್ಟ್‌ ನೋಟಿಸ್‌

ಭ್ರಷ್ಟಾಚಾರಿಯ ಅನುಭವ ಕೇಳುವುದೇ ಚೆಂದ: ಬಿಜೆಪಿ

ಭ್ರಷ್ಟಾಚಾರಿಯ ಅನುಭವ ಕೇಳುವುದೇ ಚೆಂದ: ಬಿಜೆಪಿ

MUST WATCH

udayavani youtube

ಫ್ಲಿಪ್ ಮಾಡಲು ಏನೆಲ್ಲಾ ತಯಾರಿ ಮಾಡಿಕೊಳ್ಳಬೇಕು

udayavani youtube

ಬಂಡೂರು ಕುರಿ ತಳಿ ಖರೀದಿಸುವ ಮುನ್ನ ಈ ವಿಷಯಗಳ ಬಗ್ಗೆ ನಿಮಗೆ ತಿಳಿದಿರಲಿ

udayavani youtube

ಆರೋಗ್ಯಕ್ಕೂ ರುಚಿಕ್ಕೂ ಉತ್ತಮ ಸಿದ್ದು ಹಲಸು

udayavani youtube

Oxygen Cylinder ಇಲ್ಲದಿದ್ದರೂ ಉಪಯೋಗಕ್ಕೆ ಬರುತ್ತದೆ ಈ machine ! | Girija Surgicals

udayavani youtube

ಶ್ರೀ ದುರ್ಗಾ ಆದಿಶಕ್ತಿ ಕ್ಷೇತ್ರ ದೊಡ್ಡಣಗುಡ್ಡೆ ಕ್ಷೇತ್ರದಲ್ಲಿ ‘ದೀಪೋತ್ಸವ’ ಸಂಭ್ರಮ

ಹೊಸ ಸೇರ್ಪಡೆ

ಜಪಾನ್‌ಗೆ ಜಾಕ್‌ಪಾಟ್‌; ಜರ್ಮನಿ ಔಟ್‌: ಗೆದ್ದು ಹೊರಬಿದ್ದ ಜರ್ಮನಿ; ಸೋತರೂ ಮುನ್ನಡೆದ ಸ್ಪೇನ್‌!

ಜಪಾನ್‌ಗೆ ಜಾಕ್‌ಪಾಟ್‌; ಜರ್ಮನಿ ಔಟ್‌: ಗೆದ್ದು ಹೊರಬಿದ್ದ ಜರ್ಮನಿ; ಸೋತರೂ ಮುನ್ನಡೆದ ಸ್ಪೇನ್‌!

ವಿಶ್ವಕಪ್‌ ಫುಟ್ ಬಾಲ್‌: ಸ್ಪೇನ್‌ಗೆ ಒಲಿಯತು ಸ್ಪೆಶಲ್‌ ಲಕ್‌!

ವಿಶ್ವಕಪ್‌ ಫುಟ್ ಬಾಲ್‌: ಸ್ಪೇನ್‌ಗೆ ಒಲಿಯತು ಸ್ಪೆಶಲ್‌ ಲಕ್‌!

ಜಪಾನ್‌ಗೆ ಸಿಕ್ಕ ವಿವಾದಾತ್ಮಕ ಗೋಲು, ಜರ್ಮನಿಗೆ ನಷ್ಟ!

ಜಪಾನ್‌ಗೆ ಸಿಕ್ಕ ವಿವಾದಾತ್ಮಕ ಗೋಲು, ಜರ್ಮನಿಗೆ ನಷ್ಟ!

ವಿಶ್ವಕಪ್‌ ಪಂದ್ಯಾ ವಳಿ: ಜರ್ಮನಿಗೆ ಮರ್ಮಾಘಾತ

ವಿಶ್ವಕಪ್‌ ಪಂದ್ಯಾ ವಳಿ: ಜರ್ಮನಿಗೆ ಮರ್ಮಾಘಾತ

ರಾವಲ್ಪಿಂಡಿ ಟೆಸ್ಟ್‌ : ಇಂಗ್ಲೆಂಡ್‌ ತಂಡದ ಬೃಹತ್‌ ಮೊತ್ತಕ್ಕೆ ಪಾಕಿಸ್ಥಾನ ದಿಟ್ಟ ಜವಾಬು

ರಾವಲ್ಪಿಂಡಿ ಟೆಸ್ಟ್‌ : ಇಂಗ್ಲೆಂಡ್‌ ತಂಡದ ಬೃಹತ್‌ ಮೊತ್ತಕ್ಕೆ ಪಾಕಿಸ್ಥಾನ ದಿಟ್ಟ ಜವಾಬು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.