
Lokayukta: ಆದಾಯಕ್ಕೂ ಮೀರಿ ಆಸ್ತಿ; ಶಿವಮೊಗ್ಗ, ಹನೂರು ಸೇರಿ ವಿವಿಧೆಡೆ ಲೋಕಾಯುಕ್ತ ದಾಳಿ
Team Udayavani, May 31, 2023, 10:28 AM IST

ಶಿವಮೊಗ್ಗ: ಆದಾಯಕ್ಕೂ ಮೀರಿ ಆಸ್ತಿ ಹೊಂದಿದ ಆರೋಪದಡಿಯಲ್ಲಿ ಬುಧವಾರ ಬೆಳ್ಳಂಬೆಳಗ್ಗೆ ರಾಜ್ಯದ ವಿವಿಧೆಡೆ ಲೋಕಾಯುಕ್ತ ರೇಡ್ ಮಾಡಿದೆ.
ಶಿವಮೊಗ್ಗ ಶರಾವತಿ ನಗರ, ಶೆಟ್ಟಿಹಳ್ಳಿ ಹಾಗೂ ಶಿಕಾರಿಪುರದಲ್ಲಿ ದಾಳಿ ನಡೆಸಿದೆ.
ತುಂಗಾ ಮೇಲ್ದಂಡೆ ಯೋಜನೆಯ ಮುಖ್ಯ ಇಂಜಿನಿಯರ್ ಪ್ರಶಾಂತ್ ಮನೆ ಹಾಗೂ ತೋಟದ ಮನೆ ಮೇಲೆ ರೇಡ್ ಮಾಡಿದೆ.
ಇತ್ತ ಶಿಕಾರಿಪುರದಲ್ಲೂ ಲೋಕಾಯುಕ್ತ ದಾಳಿ ನಡೆಸಿದ್ದು, ಜಿಲ್ಲಾ ಪಂಚಾಯಿತಿ ಇಂಜಿನಿಯರ್ ಶಂಕರ್ ನಾಯ್ಕ್ ಶಿಕಾರಿಪುರದ ಮನೆ ಮೇಲೆ ಲೋಕಾಯುಕ್ತ ದಾಳಿ ಮಾಡಿ ಪರಿಶೀಲನೆ ನಡೆಸಿದೆ.
ಹನೂರುನಲ್ಲಿ ಲೋಕಾ ದಾಳಿ:
ಹನೂರು: ತಾಲೂಕಿನ ಅಜ್ಜೀಪುರ ಗ್ರಾಮದ ಹೊರವಲಯದ ತೋಟದ ಜಮೀನೊಂದರ ಮೇಲೆ ಲೋಕಾಯುಕ್ತ ಅಧಿಕಾರಿಗಳು ಬುಧವಾರ ಬೆಳ್ಳಂ ಬೆಳಗ್ಗೆ ದಾಳಿ ನಡೆಸಿದ್ದಾರೆ.
ಅಜ್ಜೀಪುರ ಗ್ರಾಮದ ಶಿವಶಂಕರ್ ಮೂರ್ತಿ ಎಂಬುವವರು ಹಾಲಿ ನಂಜನಗೂಡು ಪಟ್ಟಣದಲ್ಲಿ ಹಿರಿಯ ಉಪನೋಂದಣಾಧಿಕಾರಿಗಳಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಲೋಕಾಯುಕ್ತ ಅಧಿಕಾರಿಗಳು ಇಂದು ಹಲವಾರು ಅಧಿಕಾರಿಗಳ ಮೇಲೆ ದಾಳಿ ನಡೆಸಿದ ಹಿನ್ನೆಲೆ ಶಿವಶಂಕರ್ ಮೂರ್ತಿ ಅವರಿಗೆ ಸೇರಿರುವ ಅಜ್ಜೀಪುರ ಗ್ರಾಮದ ತೋಟದ ಮನೆಯ ಮೇಲೂ ದಾಳಿ ನಡೆಸಲಾಗಿದೆ.
ಲೋಕಾಯುಕ್ತ ಅಧಿಕಾರಿಗಳ ತಂಡ ಒಂದು ಕಾರಿನಲ್ಲಿ ಆಗಮಿಸಿ ದಾಳಿ ನಡೆಸಿದ್ದು ಹೆಚ್ಚಿನ ಮಾಹಿತಿ ಇನ್ನಷ್ಟೇ ತಿಳಿದು ಬರಬೇಕಿದೆ.
ಕೊಪ್ಪಳದ KRIDL ಇಂಜಿನೀಯರ್ ಶರಣಪ್ಪ ಚಿಂಚೋಳಿಕರ್ ಮನೆ ಹಾಗೂ ಕಚೇರಿ ಮೇಲೆ ದಾಳಿ ಪರಿಶೀಲನೆ ನಡೆಸಿದ್ದಾರೆ.
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Cauvery issue; ಕೆಆರ್ ಎಸ್ ಮುತ್ತಿಗೆಗೆ ವಾಟಾಳ್ ನಾಗರಾಜ್ ಕರೆ

Rain;ಉಡುಪಿ, ಉ.ಕ ಜಿಲ್ಲೆಗೆ ಆರೆಂಜ್, ದ.ಕ ಜಿಲ್ಲೆಗೆ ಯೆಲ್ಲೊ ಅಲರ್ಟ್; ಭಾರಿ ಮಳೆ ಸಾಧ್ಯತೆ

Election: ಅನಂತಕುಮಾರ ಹೆಗಡೆ ಅವರೇ ಉತ್ತರ ಕನ್ನಡದ ಬಿಜೆಪಿ ಅಭ್ಯರ್ಥಿ: ಕಾಗೇರಿ

Sirsi: ಇಂಡಿಯಾದ ಮೈತ್ರಿಗಾಗಿ ರಾಜ್ಯದ ಹಿತ ಬಲಿ ಕೊಡಲಾಗುತ್ತಿದೆ…: ಮಾಜಿ ಸ್ಪೀಕರ್

Karnataka Bandh: ಕಾವೇರಿಗಾಗಿ ಕಾಫಿನಾಡಲ್ಲಿ ತೀವ್ರಗೊಂಡ ಹೋರಾಟ.. ಅರೆಬೆತ್ತಲೆ ಉರುಳು ಸೇವೆ
MUST WATCH
ಹೊಸ ಸೇರ್ಪಡೆ

ಉತ್ತಮ ಸಾರ್ವಜನಿಕ ಸೇವೆ,ಜನಸ್ನೇಹಿ ಆಡಳಿತ; ಜಾವಳಿ ಗ್ರಾ.ಪಂ.ಗೆ ಗಾಂಧಿ ಗ್ರಾಮ ಪುರಸ್ಕಾರದ ಗರಿ

Kollegala: ತಜ್ಞ ವೈದ್ಯೆಯ ಅನುಮಾನಸ್ಪದ ಸಾವು

Cauvery issue; ಕಾಂಗ್ರೆಸ್ ಗೆ ರಾಜ್ಯದ ಜನರ ಹಿತ ಮುಖ್ಯವಲ್ಲ: ಆರಗ ಟೀಕೆ

Couples: ಲಿವಿಂಗ್ ಟುಗೆದರ್‌ನಲ್ಲಿದ್ದ ಮುಸ್ಲಿಂ ಯುವಕನಿಂದ ಯುವತಿಗೆ ವಂಚನೆ

Belagavi: ಶೆಫರ್ಡ ಇಂಡಿಯಾ ಇಂಟರ್‌ನ್ಯಾಷನಲ್ ಸಮಾವೇಶಕ್ಕೆ 1.50 ಲಕ್ಷ ಜನ ಸೇರುವ ನಿರೀಕ್ಷೆ