
ಪ್ರೇಮಿಗಳ ದಿನದಂದೇ ಇಬ್ಬರು ಪ್ರೇಮಿಗಳ ಆತ್ಮಹತ್ಯೆ
Team Udayavani, Feb 15, 2019, 2:06 AM IST

ಬೆಳಗಾವಿ/ಚಿಕ್ಕಬಳ್ಳಾಪುರ: ತಮ್ಮ ಪ್ರೇಮಫಲಿಸದ ಕಾರಣ ಪ್ರೇಮಿಗಳ ದಿನದಂದು ಇಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಬೆಳಗಾವಿಯ ಯುವಕನೊಬ್ಬ ಎರಡನೇ ಮಹಡಿಯಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದರೆ, ಚಿಕ್ಕಬಳ್ಳಾಪುರದ ಯುವತಿ ಪ್ರಿಯಕರ ಕೈಕೊಟ್ಟ ಕಾರಣ ನೇಣಿಗೆ ಶರಣಾಗಿದ್ದಾಳೆ.
ಬೆಳಗಾವಿ ಜಿಲ್ಲೆ ನಿಪ್ಪಾಣಿ ತಾಲೂಕಿನ ಗಜಬರವಾಡಿ ಗ್ರಾಮದ ಶಿವಪ್ರಸಾದ ಪವಾರ(18) ನಗರದ ಸರಕಾರಿ ಪಾಲಿಟೆಕ್ನಿಕ್ ಕಾಲೇಜಿನ ಸಿವಿಲ್ ವಿಭಾಗದಲ್ಲಿ ಈತ ನಾಲ್ಕನೇ ಸೆಮಿಸ್ಟರ್‌ನಲ್ಲಿ ಓದುತ್ತಿದ್ದನು. ಗುರುವಾರ ಬೆಳಗ್ಗೆ ಎಂದಿನಂತೆ ಕಾಲೇಜಿಗೆ ಬಂದು ತಾನು ಪ್ರೀತಿಸುತ್ತಿದ್ದ ಯುವತಿಗೆ ಪ್ರೇಮ ನಿವೇದನೆ ಮಾಡಿದ್ದಾನೆ. ಇದನ್ನು ನಿರಾಕರಿಸಿದ ಯುವತಿ,ನಮ್ಮ ಮನೆಯಲ್ಲಿ ಒಪ್ಪುವುದಿಲ್ಲ ಎಂದು ಹೇಳಿದ್ದಕ್ಕೆ ಕಾಲೇಜಿನ ಮಹಡಿ ಮೇಲೇರಿ ಕೆಳಕ್ಕೆ ಹಾರಿದ್ದಾನೆ. ಕೂಡಲೇ ಸಹಪಾಠಿಗಳೆಲ್ಲಾ ಸೇರಿ ಯುವಕನನ್ನು ಜಿಲ್ಲಾಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಚಿಕಿತ್ಸೆ ಫಲಿಸದೇ ಶಿವಪ್ರಸಾದ ಮೃತಪಟ್ಟಿದ್ದಾನೆ ಎಂದು ಪೊಲೀಸ್ ಇನ್ಸಪೆಕ್ಟರ್ ತಿಳಿಸಿದ್ದಾರೆ.
ದೀಪ ಆರಿತು: ಅಪ್ಪ ಅಮ್ಮ ಇಲ್ಲದ ದೀಪಾ (22) ಕಳೆದ ಐದಾರು ವರ್ಷಗಳಿಂದಲೂ ಚಿಕ್ಕಬಳ್ಳಾಪುರ ಬಾಪೂಜಿನಗರದ ತನ್ನ ದೊಡ್ಡಮ್ಮನ ಮನೆಯಲ್ಲಿ ವಾಸವಾಗಿದ್ದಳು. ಬೆಂಗಳೂರಿನ ಮಹಾರಾಣಿ ಕಾಲೇಜಿನಲ್ಲಿ ಬಿಬಿಎ ವ್ಯಾಸಂಗ ಮಾಡುತ್ತಿದ್ದಳು.
ದೊಡ್ಡಮ್ಮನ ಮನೆಯ ಪಕ್ಕದÇÉೇ ಇದ್ದ ಯುವಕ ಸುರೇಶ್ ನೊಂದಿಗೆ ಸಲುಗೆಯಿಂದಿದ್ದಳು. ಅದು ಪ್ರೇಮಕ್ಕೆ ತಿರುಗಿ ಹಲವು ವರ್ಷಗಳಿಂದ ಪೋಷಕರಿಗೆ ತಿಳಿಯದಂತೆ ಪ್ರೇಮಿಸುತ್ತಿದ್ದರು. ನಾಲ್ಕುದಿನಗಳ ಹಿಂದೆ ಸುರೇಶ್ ಮತ್ತೂಂದು ಯುವತಿಯನ್ನು ಕರೆದುಕೊಂಡು ಮನೆ ಬಿಟ್ಟು ಪರಾರಿಯಾಗಿದ್ದಾನೆ. ಇದರಿಂದ ಮನನೊಂದ ದೀಪಾ ಬುಧವಾರ ತಡರಾತ್ರಿ ಸುರೇಶ್‌ನೊಂದಿಗೆ ಮೊಬೈಲ್‌ನಲ್ಲಿ ಸಾಕಷ್ಟು ವಾಗ್ವಾದ ನಡೆಸಿದ್ದಾರೆ. ಸುರೇಶ್ ನಿನ್ನನ್ನು ವಿವಾಹವಾಗುವುದಿಲ್ಲ. ಬೇರೆ ಯುವತಿಯನ್ನು
ವಿವಾಹವಾಗಿರುವುದಾಗಿ ತಿಳಿಸಿದ್ದಾನೆ. ನೊಂದ ಯುವತಿ ಫ್ಯಾನಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾಳೆ. ಗುರುವಾರ ಬೆಳಗ್ಗೆಪೋಷಕರಿಂದ ಪ್ರಕರಣ ಬೆಳಕಿಗೆ ಬಂದಿದೆ ಎಂದು ಪೊಲೀಸರು ತಿಳಿಸಿದರು.
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Davanagere; ಇಬ್ಬರು ಯುವ ರೈತರು ಸಿಡಿಲಿಗೆ ಬಲಿ

ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ: ರಾಜ್ಯಾದ್ಯಂತ ಏಕಕಾಲಕ್ಕೆ ‘ಶಕ್ತಿ’ಗೆ ಚಾಲನೆ

ಶಾಸಕ ಪ್ರದೀಪ್ ಈಶ್ವರ್ ಸಹಾಯವನ್ನು ಕೇಳಿ 500 ಕಿ.ಮೀ. ದೂರದಿಂದ ಬಂದವರು ಬರೀಗೈಲಿ ವಾಪಸ್

Drinking water ಸಮಸ್ಯೆ: ಅಧಿಕಾರಿಗಳೊಂದಿಗೆ ಸಿಎಂ ಸಿದ್ದರಾಮಯ್ಯ ಚರ್ಚೆ

ರಾಮನಗರ: ಟೋಲ್ ಸಿಬ್ಬಂದಿ ಹತ್ಯೆ ಪ್ರಕರಣ; ಇಬ್ಬರನ್ನು ಬಂಧಿಸಿದ ಪೊಲೀಸರು
MUST WATCH

ಪಾಕ್ ಆಕ್ರಮಿತ ಪ್ರದೇಶದಲ್ಲಿ ತಲೆಯೆತ್ತಿದ ಶಾರದಾ ಪೀಠ | ಏನಿದರ ಹಿನ್ನೆಲೆ ?

Balasore Train Tragedy; ಎರಡೂ ರೈಲುಗಳನ್ನು ದುರಸ್ತಿ ಮಾಡಲಾಗಿದೆ: ಅಶ್ವಿನಿ ವೈಷ್ಣವ್

ಶುಚಿ ರುಚಿಗೆ ಹೆಸರುವಾಸಿ ಅರ್ಚನಾ ಹೋಟೆಲ್ ಇನ್ನಂಜೆ

ಗ್ಯಾರಂಟಿ ಖಚಿತ, ಪ್ರಯಾಣ ಉಚಿತ, ಷರತ್ತು ನಿಯಮಿತ… | ಗ್ಯಾರಂಟಿ ಯೋಜನೆಗಳ ನಿಯಮಗಳು ಇಲ್ಲಿದೆ
