ಕೋವಿಡ್ ನಿಂದ ದೇಗುಲಗಳಿಗೂ ಆರ್ಥಿಕ ಸಂಕಷ್ಟ: ಶ್ರೀಮಂತ ದೇವಸ್ಥಾನ ಕುಕ್ಕೆಯಲ್ಲೂ ಕಡಿಮೆ ಆದಾಯ
Team Udayavani, Dec 21, 2020, 6:22 AM IST
ಸಾಂದರ್ಭಿಕ ಚಿತ್ರ
ಬೆಂಗಳೂರು: ವಿಶ್ವವನ್ನೇ ಆರ್ಥಿಕ ಸಂಕಷ್ಟಕ್ಕೆ ತಳ್ಳಿರುವ ಕೋವಿಡ್ ದೇವಾಲಯಗಳನ್ನೂ ಆರ್ಥಿಕ ಸಂಕಷ್ಟಕ್ಕೆ ಸಿಲುಕಿಸಿದೆ. ರಾಜ್ಯದ ಶ್ರೀಮಂತ ದೇವಸ್ಥಾನಗಳೂ ಕೋಟ್ಯಂತರ ರೂಪಾಯಿ ಆದಾಯ ಕೊರತೆ ಎದುರಿಸುವಂತಾಗಿದೆ.
ಮುಜರಾಯಿ ಇಲಾಖೆಯ ವ್ಯಾಪ್ತಿಯಲ್ಲಿ 34,556 ದೇವಸ್ಥಾನಗಳಿದ್ದು, ವಾರ್ಷಿಕ 25 ಲಕ್ಷ ರೂ.ಗಿಂತ ಹೆಚ್ಚು ಆದಾಯ ತರುವವುಗಳನ್ನು ಎ ಗ್ರೇಡ್ ಎಂದು ಗುರುತಿಸಲಾಗಿದೆ. ಈ ಬಾರಿ ಇವುಗಳಿಗೂ ಆದಾಯ ಖೋತಾ ಆಗಿದ್ದು, ಶೇ.25ರಷ್ಟು ಮಾತ್ರ ಸಂಗ್ರಹವಾಗಿದೆ.
ಮಾರ್ಚ್ ಕೊನೆಯ ವಾರದಲ್ಲಿ ಕೊರೊನಾ ಆರಂಭವಾದ ಬಳಿಕ ಬಾಗಿಲು ಮುಚ್ಚಿದ್ದ ದೇವಸ್ಥಾನಗಳನ್ನು ಆಗಸ್ಟ್‌ನಲ್ಲಿ ತೆರೆಯಲಾಗಿತ್ತು. ಕೊರೊನಾ ಹಾವಳಿ ಪೂರ್ತಿ ಕಡಿಮೆಯಾಗದ್ದರಿಂದ ಭಕ್ತರು ವಾಡಿಕೆಯ ಪ್ರಮಾಣದಲ್ಲಿ ಭೇಟಿ ನೀಡುತ್ತಿಲ್ಲ. ಇದರಿಂದ ಪ್ರಮುಖ ದೇವಸ್ಥಾನಗಳ ಆದಾಯದ ಮೇಲೆ ಹೊಡೆತ ಬಿದ್ದಿದೆ.
ಪ್ರತೀ ವರ್ಷ ಕೋಟ್ಯಂತರ ರೂ. ಆದಾಯ ಗಳಿಸುತ್ತಿದ್ದ ರಾಜ್ಯದ ಪ್ರಮುಖ 20 ದೇಗುಲಗಳ ಆದಾಯದಲ್ಲಿ ಭಾರೀ ಇಳಿಕೆಯಾಗಿದ್ದು, ಬಿ ಮತ್ತು ಸಿ ದರ್ಜೆಯ ದೇವಾಲಯಗಳ ನಿರ್ವಹಣೆಗೆ ಹಣ ಒದಗಿಸುವುದು ಇಲಾಖೆಗೆ ಕಷ್ಟವಾಗಿದೆ ಎಂದು ತಿಳಿದು ಬಂದಿದೆ. ವಾರ್ಷಿಕ 100 ಕೋ.ರೂ.ಗಿಂತ ಅಧಿಕ ಆದಾಯ ಸಂಗ್ರಹವಾಗುತ್ತಿದ್ದ ಕುಕ್ಕೆ ಸುಬ್ರಹ್ಮಣ್ಯ ದೇಗುಲ ಈ ಬಾರಿ ಇದುವರೆಗೆ ಕೇವಲ 4.28 ಕೋ.ರೂ. ಆದಾಯ ಗಳಿಸಿದೆ.
ಎಲ್ಲಿ ಎಷ್ಟು ಆದಾಯ ಸಂಗ್ರಹ?
ದೇವಾಲಯ ನಿರೀಕ್ಷೆ(ರೂ.ಈ ಬಾರಿ (ರೂ.)
1. ಕುಕ್ಕೆ ಸುಬ್ರಹ್ಮಣ್ಯ 100 ಕೋ. 4.28 ಕೋ.
2. ಕೊಲ್ಲೂರು ಮೂಕಾಂಬಿಕಾ 50 ಕೋ. 4. 51 ಕೋ.
3. ಮೈಸೂರು ಚಾಮುಂಡೇಶ್ವರಿ 35 ಕೋ. 74.05 ಲ.
4. ಕಟೀಲು ದುರ್ಗಾಪರಮೇಶ್ವರಿ 25 ಕೋ. 1.05 ಕೋ.
5. ನಂಜನಗೂಡಿನ ಶ್ರೀಕಂಠೇಶ್ವರ 20 ಕೋ. 12.06 ಲಕ್ಷ
6. ಸವದತ್ತಿಯ ರೇಣುಕಾ ಎಲ್ಲಮ್ಮ 16 ಕೋ. 1.64 ಕೋ.
7. ಮಂದಾರ್ತಿ ದುರ್ಗಾಪರಮೇಶ್ವರಿ 11.43 ಕೋ. 1.02 ಕೋ.
ಲಾಕ್‌ಡೌನ್‌ನಿಂದ ಬಾಗಿಲು ಮುಚ್ಚಿದ್ದ ದೇವಸ್ಥಾನಗಳು ಈಗ ಬಾಗಿಲು ತೆರೆದಿದ್ದರೂ ಶೇ. 40ರಷ್ಟು ಭಕ್ತರು ಮಾತ್ರ ಬರುತ್ತಿದ್ದಾರೆ. ಈ ವರ್ಷ ವಾಡಿಕೆಗಿಂತ ಶೇ. 40ರಷ್ಟು ಆದಾಯ ಕಡಿಮೆಯಾಗುವ ಸಾಧ್ಯತೆ ಇದೆ.
ಕೋಟ ಶ್ರೀನಿವಾಸ ಪೂಜಾರಿ, ಮುಜರಾಯಿ ಸಚಿವರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಪಾವಗಡ : ಮೀನು ಹಿಡಿಯಲು ಹೋಗಿ ನಾಪತ್ತೆಯಾಗಿದ್ದ ವ್ಯಕ್ತಿಯ ಶವ ಪತ್ತೆ
ವರ್ಷದೊಳಗೆ 3.55 ಕೋಟಿ ವೆಚ್ಚದ ರಾಜಕಾಲುವೆ ನಿರ್ಮಾಣ ಭರವಸೆ : ಎಸ್.ಜಯರಾಂ
ಶಿಕ್ಷಣವನ್ನು ಕೇಸರೀಕರಣಗೊಳಿಸಲು ಹೊರಟಿದೆ ಬಿಜೆಪಿ : ಪ್ರಿಯಾಂಕ್ ಖರ್ಗೆ ಆರೋಪ
ಬಿಜೆಪಿ ಕ್ಯಾನ್ಸರ್ ಇದ್ದಂತೆ ಮನುಕುಲ ನಾಶ ಮಾಡಲಿದೆ : ಸಿದ್ದರಾಮಯ್ಯ ವಾಗ್ದಾಳಿ
ಮುಂಗಾರು ಪೂರ್ವ ಬಿತ್ತನೆ ಚಟುವಟಿಕೆ ಆರಂಭ : ರೋಹಿಣಿ ಮಳೆಯ ನಿರೀಕ್ಷೆಯಲ್ಲಿ ರೈತ
MUST WATCH
ಹೊಸ ಸೇರ್ಪಡೆ
ಪಾವಗಡ : ಮೀನು ಹಿಡಿಯಲು ಹೋಗಿ ನಾಪತ್ತೆಯಾಗಿದ್ದ ವ್ಯಕ್ತಿಯ ಶವ ಪತ್ತೆ
ವರ್ಷದೊಳಗೆ 3.55 ಕೋಟಿ ವೆಚ್ಚದ ರಾಜಕಾಲುವೆ ನಿರ್ಮಾಣ ಭರವಸೆ : ಎಸ್.ಜಯರಾಂ
ಹಿಪ್ಹಾಪ್ ನೃತ್ಯದ ಜೊತೆ ಹೈಬ್ರಿಡ್ ಭರತನಾಟ್ಯ : ನೆಟ್ಟಿಗರಿಂದ ಭಾರಿ ಮೆಚ್ಚುಗೆ
ರೆನ್ಯೂ ಪವರ್ನಿಂದ 7 ವರ್ಷದಲ್ಲಿ 50 ಸಾವಿರ ಕೋಟಿ ರೂ. ಹೂಡಿಕೆಗೆ ಒಪ್ಪಂದ : ಸಿಎಂ ಬೊಮ್ಮಾಯಿ
ಶಿರಸಿ: ಚಾಲಿ ಅಡಿಕೆ ಕಳ್ಳತನ ಪ್ರಕರಣ; ಮತ್ತೋರ್ವ ಆರೋಪಿ ಬಂಧನ, ಆಟೋ ರಿಕ್ಷಾ ವಶಕ್ಕೆ