ಮಾಸ್ಕ್ ನಿರ್ಲಕ್ಷ್ಯ ಸಾಬೀತು; ಶೇ.35ರಷ್ಟು ಜನರಿಂದಷ್ಟೇ ಮಾಸ್ಕ್ ಧಾರಣೆ
ಬೆಂಗಳೂರು, ಮೈಸೂರು ಅತ್ಯಂತ ಕಳಪೆ
Team Udayavani, Jan 24, 2022, 7:05 AM IST
ಮಾಸ್ಕ್ ಧಾರಣೆ ಬಗ್ಗೆ ಆಯ್ದ ಕಾಲೇಜುಗಳ ವಿದ್ಯಾರ್ಥಿಗಳ ಸಹಯೋಗದೊಂದಿಗೆ “ಉದಯವಾಣಿ’ ವಿವಿಧ ಮಹಾನಗರಗಳಲ್ಲಿ ಕೈಗೊಂಡ ಮೆಗಾ ಸರ್ವೆಯಲ್ಲಿ ಹಲವು ಆತಂಕಕಾರಿ ಮಾಹಿತಿ ಹೊರಬಿದ್ದಿದ್ದು, ಕರಾವಳಿ ಸುದ್ದಿ ಸಮಾಧಾನ ತಂದಿದೆ.
ಬೆಂಗಳೂರು: ಕೊರೊನಾ ವಿರುದ್ಧ ಹೋರಾಡಲು ಮಾಸ್ಕ್ ಬ್ರಹ್ಮಾಸ್ತ್ರ ಎಂದು ಜಗತ್ತಿನ ತಜ್ಞರು ಮತ್ತೆ ಮತ್ತೆ ಸಾರುತ್ತಿ ದ್ದರೂ ರಾಜ್ಯದಲ್ಲಿ ನಿರ್ಲಕ್ಷ್ಯ ಇರುವುದು “ಉದಯವಾಣಿ’ ಕೈಗೊಂಡ ಸಹಾ ಸಮೀಕ್ಷೆಯಲ್ಲಿ ಬಹಿರಂಗವಾಗಿದೆ. ಮಾಸ್ಕ್ ಧಾರಣೆ ಯಲ್ಲಿ ಕರುನಾಡು ಜಸ್ಟ್‌ಪಾಸ್!
ಪ್ರಸ್ತುತ ರಾಜ್ಯದ ಶೇ.35.45ರಷ್ಟು ಜನರಷ್ಟೇ ಮಾಸ್ಕ್ ಧರಿಸುತ್ತಿದ್ದಾರೆ. “ಉದಯವಾಣಿ’ಯು ರಾಜ್ಯದ 12 ಮಹಾ ನಗರಗಳ 120ಕ್ಕೂ ಅಧಿಕ ತಾಣಗಳಲ್ಲಿ ಸಮೀಕ್ಷೆ ನಡೆಸಿದ್ದು, 7,128 ಮಂದಿ ಭಾಗಿಯಾಗಿದ್ದರು. 105 ವಿದ್ಯಾರ್ಥಿಗಳ ತಂಡ ಇಡೀ ದಿನ ಸಾರ್ವಜನಿಕ ಪ್ರದೇಶಗಳಲ್ಲಿದ್ದು ಈ ಸರ್ವೆ ಕೈಗೊಂಡಿದ್ದರು.
ಸರ್ವೆಯಲ್ಲಿ ಕಂಡಿದ್ದೇನು?
ಕೊರೊನಾ ನಿಯಮ ಉಲ್ಲಂ ಸಿದ ಮಹಾ ನಗರ ಪೈಕಿ ಬೆಂಗಳೂರು ಮುಂಚೂಣಿ. ಇಲ್ಲಿ ಮಾಸ್ಕ್ ಧರಿಸಿದವರು ಶೇ.18! ಅನಂತರದ ಸ್ಥಾನಗಳನ್ನು ಮೈಸೂರು (ಶೇ.29) ಮತ್ತು ಬಳ್ಳಾರಿ (ಶೇ.30) ಪಡೆದಿವೆ. ಮಾಸ್ಕ್ಗೆ ಹೆಚ್ಚು ಮರ್ಯಾದೆ ಕೊಟ್ಟಿದ್ದು ಮಲೆನಾಡು ಮತ್ತು ಕರಾವಳಿ ಭಾಗ. ಪರಿಪೂರ್ಣ ಮಾಸ್ಕ್ಧಾರಣೆ ಪೈಕಿ ಶಿವಮೊಗ್ಗ ಶೇ.48.57 ಅಂಕಗಳಿಂದ ಪ್ರಥಮ, ಉಡುಪಿ (ಶೇ.43) ದ್ವಿತೀಯ, ಮಂಗ ಳೂರು (ಶೇ.40) ತೃತೀಯ ಸ್ಥಾನದಲ್ಲಿದೆ.
ದಂಡನಾಯಕ ನಾನೇ…
ಹುಬ್ಬಳ್ಳಿಯ ಜನಸಂದಣಿ ತಾಣಗಳಲ್ಲಿ ದಂಡ ತೆತ್ತವರ ಸಂಖ್ಯೆ ಹೆಚ್ಚಿತ್ತು. ಮಾಸ್ಕ್ ಧರಿಸದವರಿಂದ ಇಲ್ಲಿ ನಿತ್ಯ ಸರಾಸರಿ 50 ಸಾ. ರೂ. ದಂಡ ಸಂಗ್ರಹಿಸ ಲಾ ಗುತ್ತಿತ್ತು. ಉಡುಪಿ, ಮಂಗಳೂರಿನ ವಿವಿಧೆಡೆ ದಂಡ ವಿಧಿಸುವ ಸಿಬಂದಿ ಎದುರೇ ಕೋವಿಡ್ ನಿಯಮಗಳು ಉಲ್ಲಂಘನೆಯಾಗುತ್ತಿದ್ದವು.
ಸುಶಿಕ್ಷಿತರಿಂದಲೇ ನಿರ್ಲಕ್ಷ್ಯ
ವಿಚಾರವಂತರ ನೆಲ ಎನ್ನಿಸಿಕೊಂಡ ಮೈಸೂರು, “ವಿದ್ಯಾಕಾಶಿ’ ಗರಿ ಮುಡಿದ ಧಾರವಾಡದಲ್ಲೂ ಮಾಸ್ಕ್ ಇಲ್ಲದ ಮುಖಗಳೇ ಹೆಚ್ಚು ಕಾಣುತ್ತಿದ್ದವು. ಕಲಿತವರು, ಯುವಕರು ಹೆಚ್ಚಿರುವ ಕೆಲವು ಕಾಲೇಜು ಆವರಣಗಳಲ್ಲಿ ಮಾಸ್ಕ್ ಸಂಸ್ಕೃತಿಯೇ ನಾಪತ್ತೆ ಆಗಿತ್ತು. ಕೊರೊನಾ ಮಾರ್ಗಸೂಚಿ ಪಾಲಿಸಿ ಆದರ್ಶವಾಗಬೇಕಿದ್ದ ಅಧಿಕಾರಿಗಳೇ ಬೇಜವಾಬ್ದಾರಿತನ ಪ್ರದರ್ಶಿಸುತ್ತಿದ್ದ ದೃಶ್ಯ ಎಲ್ಲೆಡೆ ಇತ್ತು.
ಇದೇನು ಭಂಡತನ!
ಸಮೀಕ್ಷೆಯಲ್ಲಿ ಅಸಹಜ ಸಂಗತಿಗಳೇ ರಾರಾಜಿಸಿದ್ದವು. ವಿಜಯಪುರ ಸಹಿತ ಹಲವೆಡೆ ಮಾಸ್ಕ್ನ್ನು ಗಲ್ಲ ಮತ್ತು ಕೊರಳಲ್ಲಿ ಧರಿಸಿಕೊಂಡದ್ದು ಹೆಚ್ಚಾಗಿ ಕಂಡು ಬಂತು. ಇಡೀ ರಾಜ್ಯದಲ್ಲಿ ಅರೆಬರೆ ಮಾಸ್ಕ್ನ ಟ್ರೆಂಡ್ ಶೇ.30.34ರಷ್ಟಿದೆ. ಶಿವಮೊಗ್ಗದ ಜನಸಂದಣಿ ಪ್ರದೇಶಗಳಲ್ಲಿ ಕೆಲವರ ಅಂಗಿ- ಪ್ಯಾಂಟ್ ಜೇಬಿನೊಳ ಗಿಂದ ಮಾಸ್ಕ್ ಇಣುಕುತ್ತಿತ್ತು. “ಮಾಸ್ಕ್ ಹಾಕ್ಕೊಳಿÅà’ ಎಂದು ಗದರಿಸುತ್ತಿದ್ದ ತುಮಕೂರಿನ ಪೊಲೀಸ್ ಸಿಬಂದಿಯೇ ಅರೆಬರೆ ಮಾಸ್ಕ್ನಲ್ಲಿದ್ದರು! ಕಲಬುರಗಿ, ಮಂಗಳೂರಿನ ಕೆಲವೆಡೆ ಸೀನುವಾಗ ಮಾಸ್ಕ್ ತೆಗೆಯುತ್ತಿದ್ದರು!
ಉದಯವಾಣಿ ಕಾಳಜಿ
1. ಸರಕಾರ ನಿಯಮ ಸಡಿಲಗೊಳಿಸುವುದು ಕೇವಲ ಆರ್ಥಿಕ ಚಟುವಟಿಕೆಯ ಉತ್ತೇಜನ ಕ್ಕಷ್ಟೇ. ಕೋವಿಡ್ ನಿಯಮ ಉಲ್ಲಂಘನೆಗಲ್ಲ.
2.ಕೊರೊನಾ ಅಲೆ ತಗ್ಗುವವರೆಗೂ ಮಾಸ್ಕ್ ಧರಿಸುವುದು ನಮಗೇ ಕ್ಷೇಮ.
3.ಮೂಗು, ಬಾಯಿ ಮುಚ್ಚುವಂತೆ ಮಾಸ್ಕ್ ಧರಿ ಸಿದರಷ್ಟೇ ಪ್ರಯೋ ಜನ.
4.ಜನದಟ್ಟಣೆ ಇರುವ ಕಡೆಗಳಲ್ಲಿ ಸಾಮಾಜಿಕ ಅಂತರ ಪಾಲನೆ ಮುಖ್ಯ.
5. “ನಮ್ಮಿಂದ ಇನ್ನೊಬ್ಬರಿಗೆ ತೊಂದರೆ ಆಗದಿರಲಿ’ ಎಂಬ ಕಾಳಜಿ ನಮ್ಮೊಳಗಿರಲಿ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಮಳೆಗೆ ಮತ್ತೆ ನಾಲ್ವರು ಸಾವು; ಸಿಎಂ ತವರು ಹಾವೇರಿಯಲ್ಲಿ ಒಂದೇ ದಿನ 87 ಮನೆ ಕುಸಿತ
28 ಸಾವಿರ ಕೋಟಿ ರೂ. ಅನುದಾನಕ್ಕೆ ಅನುಮೋದನೆ
ಬಿಬಿಎಂಪಿ ಚುನಾವಣೆಗೆ ಸುಪ್ರೀಂ ಸೂಚನೆ; ಸ್ಥಳೀಯ ಸಂಸ್ಥೆಗಳ ಆಡಳಿತವನ್ನು ಸರಕಾರ ನಡೆಸುವಂತಿಲ್ಲ
ಇಂದು, ನಾಳೆ ಎಸ್ಐ ಮತ್ತು ಸಹಾಯಕ ಪ್ರಾಧ್ಯಾಪಕರ ನೇಮಕಾತಿ ಪರೀಕ್ಷೆ: ತೀವ್ರ ನಿಗಾ
ಚಲಿಸುತ್ತಿದ್ದ ಕಾರಿನಲ್ಲಿ ಬೆಂಕಿ : ಐದು ಮಂದಿ ಪ್ರಾಣಾಪಾಯದಿಂದ ಪಾರು
MUST WATCH
ಹೊಸ ಸೇರ್ಪಡೆ
ಮಳೆಗೆ ಮತ್ತೆ ನಾಲ್ವರು ಸಾವು; ಸಿಎಂ ತವರು ಹಾವೇರಿಯಲ್ಲಿ ಒಂದೇ ದಿನ 87 ಮನೆ ಕುಸಿತ
28 ಸಾವಿರ ಕೋಟಿ ರೂ. ಅನುದಾನಕ್ಕೆ ಅನುಮೋದನೆ
ರಾಜ್ಯಸಭೆ, ಪರಿಷತ್ ಅಭ್ಯರ್ಥಿ ಆಯ್ಕೆಗೆ ಇಂದು ದಿಲ್ಲಿಗೆ: ಸಿದ್ದರಾಮಯ್ಯ
ಬಿಬಿಎಂಪಿ ಚುನಾವಣೆಗೆ ಸುಪ್ರೀಂ ಸೂಚನೆ; ಸ್ಥಳೀಯ ಸಂಸ್ಥೆಗಳ ಆಡಳಿತವನ್ನು ಸರಕಾರ ನಡೆಸುವಂತಿಲ್ಲ
ಇಂದು, ನಾಳೆ ಎಸ್ಐ ಮತ್ತು ಸಹಾಯಕ ಪ್ರಾಧ್ಯಾಪಕರ ನೇಮಕಾತಿ ಪರೀಕ್ಷೆ: ತೀವ್ರ ನಿಗಾ