ಸಂತೋಷ್ ವಿಚಾರದಲ್ಲಿ ಸುಳ್ಳು ಹೇಳಿಕೆ ನೀಡುವ ಡಿಕೆ ಶಿವಕುಮಾರ್ ಗೆ ನಾಚಿಕೆಯಾಗಬೇಕು: ಈಶ್ವರಪ್ಪ
Team Udayavani, Nov 28, 2020, 1:06 PM IST
ಬೆಳಗಾವಿ: ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎನ್.ಆರ್.ಸಂತೋಷ್ ಆತ್ಮಹತ್ಯೆ ಯತ್ನದ ಬಗ್ಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿಕೆ ಮೂರ್ಖತನದ್ದು ಎಂದು ಸಚಿವ ಕೆ.ಎಸ್.ಈಶ್ವರಪ್ಪ ಟೀಕಿಸಿದರು.
ಬೆಳಗಾವಿಯಲ್ಲಿ ಶನಿವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು ಈ ರೀತಿ ಹೇಳಿಕೆ ಕೊಡಲು ಡಿ.ಕೆ.ಶಿವಕುಮಾರ್ ಗೆ ನಾಚಿಕೆ ಆಗಬೇಕು ಎಂದು ಕಿಡಿಕಾರಿದರು.
ವಿಡಿಯೋ ಲೀಕ್ ಆಗಿದೆ ಅಂದರೆ ಈ ವಿಡಿಯೋ ಇವರ ಹತ್ತಿರ ಇರಬೇಕು. ಡಿಕೆ ಶಿವಕುಮಾರ್ ಕೆಪಿಸಿಸಿ ಅಧ್ಯಕ್ಷ ಇದ್ದು ಆರೋಪ ಮಾಡುವುದಕ್ಕೆ ಅವರಿಗೆ ಪೂರ್ಣ ಅಧಿಕಾರ ಇದೆ. ವಿಡಿಯೋ ಇದೆ ಅಂತಾ ಹೇಳಿ ರಾಜ್ಯದ ಜನರ ದಿಕ್ಕು ತಪ್ಪಿಸುವದು ಸರಿಯಲ್ಲ. ವಿಡಿಯೋ ಕಾಪಿ ನಿಮ್ಮಲ್ಲಿದ್ದರೆ ಬಿಡುಗಡೆ ಮಾಡಲಿ ಎಂದು ಈಶ್ವರಪ್ಪ ಸವಾಲು ಹಾಕಿದರು.
ಇದನ್ನೂ ಓದಿ:ಯೋಗೇಶ್ವರ್ ಗೆ ಸಚಿವ ಸ್ಥಾನ ಕೊಡಿಸುವ ರಮೇಶ್ ಜಾರಕಿಹೊಳಿ ಪ್ರಯತ್ನ ತಪ್ಪಲ್ಲ: ಈಶ್ವರಪ್ಪ
ಕಾಂಗ್ರೆಸ್ ನೆಲ ಕಚ್ಚಿ ಹೋಗಿದ್ದು ಈ ರೀತಿ ಸುಳ್ಳು ಆರೋಪ ಮಾಡುತ್ತಿದ್ದಾರೆ. ಎಂಎಲ್‌ಎ ಯಾರು, ಎಂಎಲ್‌ಸಿ ಯಾರು, ಮಂತ್ರಿ ಯಾರು ಅಂತಾ ಹೇಳಲಿ. ಪ್ರಚಾರಕ್ಕಾಗಿ ಈ ರೀತಿ ಹೇಳಿಕೆ ನೀಡುವದು ಖಂಡನೀಯ ಎಂದರು.
Ad
ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ, ಜಯನಗರ ಬೆಂಗಳೂರು, ಮೋ- 8884889444
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಹುಣಸೋಡು ದುರಂತ : ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ನಿಶ್ಚಿತ : ಸಿಎಂ
ಸರಕಾರದ ಕೆಲಸಗಳನ್ನು ಜನರಿಗೆ ಮುಟ್ಟಿಸುವುದು ‘ಡೊಡ್ಡ ಟಾಸ್ಕ್’: ಡಿಸಿಎಂ ಅಶ್ವತ್ಥನಾರಾಯಣ
ಯತ್ನಾಳ್ ವಿರುದ್ಧ ಶಿಸ್ತು ಕ್ರಮ ಜರುಗಿಸಲು ಕೇಂದ್ರಕ್ಕೆ ಶಿಫಾರಸ್ಸು : ಕಟೀಲ್ ಹೇಳಿಕೆ
ಮನುಷ್ಯತ್ವ ಇದ್ದರೆ ಶಿವಮೊಗ್ಗ ಪ್ರಕರಣದ ಹೊಣೆ ಹೊತ್ತು BSY ಮತ್ತು ಈಶ್ವರಪ್ಪ ರಾಜೀನಾಮೆ ನೀಡಲಿ
ಕಾಂಗ್ರೇಸ್ ನಲ್ಲಿ ಸಿದ್ದರಾಮಯ್ಯ ಮತ್ತು ಡಿಕೆಶಿ ನಡುವೆ ಸಿಎಂ ಸ್ಪರ್ಧೆ : ಈಶ್ವರಪ್ಪ ವ್ಯಂಗ್ಯ