ಪ್ರತಿ ಜಿಲ್ಲೆಯಲ್ಲಿ ಕನಿಷ್ಠ 30% ಅರಣ್ಯ ನಿರ್ಮಾಣಕ್ಕೆ ಸಚಿವ ಉಮೇಶ್ ಕತ್ತಿ ಆದೇಶ
Team Udayavani, Nov 27, 2021, 3:13 PM IST
ಬೆಂಗಳೂರು: ರಾಜ್ಯದ ಪ್ರತಿ ಜಿಲ್ಲೆಯಲ್ಲಿ ಕನಿಷ್ಠ 30% ಅರಣ್ಯ ನಿರ್ಮಾಣ ಮಾಡುವಂತೆ ಅರಣ್ಯ ಸಚಿವ ಉಮೇಶ್ ಕತ್ತಿಯವರು ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಆದೇಶ ಹೊರಡಿಸಿದ್ದಾರೆ.
ಯಾವ ಜಿಲ್ಲೆಯಲ್ಲಿ ಅರಣ್ಯ ನಿರ್ಮಾಣ ಮಾಡಲು ಭೂಮಿ ಇಲ್ಲವೋ, ಆ ಜಿಲ್ಲೆಯಲ್ಲಿನ ಕಂದಾಯ ಇಲಾಖೆ, ಜಲ ಸಂಪನ್ಮೂಲ ಇಲಾಖೆಗೆ ಸೇರಿದಂತೆ ಬೇರೆ ಇಲಾಖೆಗೆ ಒಳಪಡುವ ಭೂಮಿಯನ್ನು, ಅರಣ್ಯ ಇಲಾಖೆಗೆ ವಿಲೀನಕರಣ ಮಾಡದೆ, ಆ ಭೂಮಿಯಲ್ಲಿ ಅರಣ್ಯ ಇಲಾಖೆಯ ಸಹಯೋಗದಿಂದ ಗಿಡ ಮರಗಳನ್ನು ಬೆಳೆಸಿ ಎಂದು ಸಚಿವರು ರಾಜ್ಯದ ಎಲ್ಲ ಅರಣ್ಯ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ರಾಜ್ಯದ ಅರಣ್ಯ ಭೂಮಿಯನ್ನು ರಕ್ಷಿಸುವುದರ ಜೊತೆಗೆ, ವರ್ಷದಿಂದ ವರ್ಷಕ್ಕೆ ಉತ್ತಮ ಪರಿಸರ ನಿರ್ಮಾಣ ಮಾಡುವುದು ಅರಣ್ಯ ಇಲಾಖೆಯ ಕರ್ತವ್ಯ ಆಗಿದೆ. ದಕ್ಷಿಣ ಕರ್ನಾಟಕದ ಕೆಲವು ಜಿಲ್ಲೆಗಳಲ್ಲಿ ಶೇಕಡಾ 70% ಅರಣ್ಯ ಇದೆ. ಆದರೆ ವಿಜಯಪುರ, ಬೀದರ್, ಗುಲ್ಬರ್ಗಾ ಸೇರಿದಂತೆ ಅನೇಕ ಜಿಲ್ಲೆಯಲ್ಲಿ 10% ಕ್ಕಿಂತಲೂ ಕಡಿಮೆ ಅರಣ್ಯ ಭೂಮಿ ಇದೆ ಎಂದು ಕಳವಳ ವ್ಯಕ್ತಪಡಿಸಿದರು.
ಇದನ್ನೂ ಓದಿ:ಎತ್ತಿನ ಭುಜ: ಅಧಿಕಾರಿಗಳ ಖಡಕ್ ನಿರ್ಧಾರ; ಮ್ಯಾರಥಾನ್ ರದ್ದು
ಕಡಿಮೆ ಅರಣ್ಯ ಇರುವ ಜಿಲ್ಲೆಗಳಲ್ಲಿ ತಾಪಮಾನದ ಸಮಸ್ಯೆಯ ವೈಪರೀತ್ಯಗಳು ಎಲ್ಲರಿಗೂ ಗೊತ್ತಿರುವ ವಿಷಯ ಆಗಿದೆ, ಹಾಗಾಗಿ ಅರಣ್ಯ ಇಲಾಖೆಯವರು ಹೆಚ್ಚಿನ ಮುತುವರ್ಜಿ ವಹಿಸುವುದು ಅವಶ್ಯಕ ಆಗಿದೆ ಎಂದು ಸಚಿವರು ತಿಳಿಸಿದರು.
ಒಂದು ಕಡೆ ನಮಗೆ ಗೊತ್ತಿಲ್ಲದೆ ಮರ ಗಿಡಗಳ ಸಂಖ್ಯೆ ದಿನದಿಂದ ದಿನಕ್ಕೆ ಕಡಿಮೆ ಆಗುತ್ತಲೆ ಇದೆ. ಇದರಿಂದ ಆಮ್ಲಜನಕ ಪ್ರಮಾಣ ಕಡಿಮೆ ಆಗುತ್ತಿದೆ, ಈಗ ನಮ್ಮ ಯುವಕರು ನೋಡುತ್ತಿರುವ ಸುಂದರವಾದ ಅರಣ್ಯ ಗಿಡ ಮರಗಳನ್ನು, ನಮ್ಮ ಮುಂದಿನ ಪೀಳಿಗೆ ನೊಡುವಂತಾಗಬೇಕು, ಕೇವಲ ಇರುವ ಅರಣ್ಯ ಭೂಮಿ ರಕ್ಷಣೆ ಮಾಡಿದರೆ ಸಾಲದು, ಅರಣ್ಯ ಭೂಮಿ ವೃದ್ಧಿಸುವ ಕಡೆಗೂ ಗಮನ ಹರಿಸಬೆಕಾಗಿದೆ ಎಂದು ಉಮೇಶ್ ಕತ್ತಿಯವರು ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಬಾಲ ಯಕ್ಷಗಾನ ಕಲಾವಿದೆ ತುಳಸಿ ಹೆಗಡೆಗೆ ಬಾಲ ಗೌರವ ಪ್ರಶಸ್ತಿ
ಬಿಜೆಪಿ ರಾಜ್ಯದಲ್ಲಿ ಉದ್ಯೋಗ ಸೃಷ್ಟಿಸುವ ಬದಲು ನಿರುದ್ಯೋಗ ಸೃಷ್ಟಿಸಿದೆ: ಸಿದ್ದು ಟೀಕೆ
ದಾವಣಗೆರೆ: ಯುಗಾದಿಗೆ ಅತ್ತೆ ಮನೆಗೆ ಬಂದು ನಾಪತ್ತೆಯಾಗಿದ್ದ ಅಳಿಯನ ಭೀಕರ ಹತ್ಯೆ
ದನದ ಕುತ್ತಿಗೆ ಕಡಿದು ತುಂಗಾ ನದಿಗೆ ಎಸೆದು ವಿಕೃತಿ ಮೆರೆದ ದುಷ್ಕರ್ಮಿಗಳು !
ವೇತನ ಹೆಚ್ಚಳ ಬೇಡಿಕೆ; ಮಾರ್ಚ್ 24ರ ಸಾರಿಗೆ ನೌಕರರ ಮುಷ್ಕರಕ್ಕೆ ಹೈಕೋರ್ಟ್ ತಡೆ
MUST WATCH
ಹೊಸ ಸೇರ್ಪಡೆ
ಬಾಲ ಯಕ್ಷಗಾನ ಕಲಾವಿದೆ ತುಳಸಿ ಹೆಗಡೆಗೆ ಬಾಲ ಗೌರವ ಪ್ರಶಸ್ತಿ
ಬಿಜೆಪಿ ರಾಜ್ಯದಲ್ಲಿ ಉದ್ಯೋಗ ಸೃಷ್ಟಿಸುವ ಬದಲು ನಿರುದ್ಯೋಗ ಸೃಷ್ಟಿಸಿದೆ: ಸಿದ್ದು ಟೀಕೆ
ಎ. 2 ರಂದು ಸಿತಾರ್-ಬಾನ್ಸುರಿ ಜುಗಲ್ ಬಂದಿ “ಬಸಂತ್ ಉತ್ಸವ್’
ಹೊಸ ವರ್ಷದ ಆರಂಭದಲ್ಲಿ ಸ್ವಚ್ಛ ಭಾರತ ಸಂಕಲ್ಪ ಮಾಡಿ: ಗೋವಾ ಸಿಎಂ ಡಾ.ಪ್ರಮೋದ್ ಸಾವಂತ್ ಕರೆ
ದಾವಣಗೆರೆ: ಯುಗಾದಿಗೆ ಅತ್ತೆ ಮನೆಗೆ ಬಂದು ನಾಪತ್ತೆಯಾಗಿದ್ದ ಅಳಿಯನ ಭೀಕರ ಹತ್ಯೆ