ಶಾಸಕ ಎನ್‌.ವೈ .ಗೋಪಾಲಕೃಷ್ಣ ಮನೆಗೆ ಕನ್ನ

Team Udayavani, Apr 21, 2019, 3:00 AM IST

ಚಿತ್ರದುರ್ಗ: ಬಳ್ಳಾರಿ ಜಿಲ್ಲೆ ಕೂಡ್ಲಿಗಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ಎನ್‌.ವೈ. ಗೆೋಪಾಲಕೃಷ್ಣ ಅವರ ಚಿತ್ರದುರ್ಗದಲ್ಲಿನ ನಿವಾಸದಲ್ಲಿ ಕಳ್ಳತನ ನಡೆದಿದ್ದು ಶನಿವಾರ ಬೆಳಕಿಗೆ ಬಂದಿದೆ.

ನಗರದ ಧವಳಗಿರಿ ಬಡಾವಣೆಯಲ್ಲಿರುವ ಶಾಸಕರ ಮನೆಯ ಬೀಗ ಮುರಿದು ಒಳ ನುಗ್ಗಿದ ಕಳ್ಳರು ಬೀರುವಿನಲ್ಲಿದ್ದ ನಗದು ಮತ್ತು ಎರಡು ಬೆಳ್ಳಿ ದೀಪಗಳನ್ನು ಕದ್ದು ಪರಾರಿಯಾಗಿದ್ದಾರೆ. ಕೋಟೆ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಬಳ್ಳಾರಿ ಜಿಲ್ಲೆಯ ಕೂಡ್ಲಿಗಿ ಶಾಸಕರಾಗಿರುವ ಎನ್‌.ವೈ.ಗೋಪಾಲಕೃಷ್ಣ ಮೂಲತಃ ಮೊಳಕಾಲ್ಮೂರು ತಾಲೂಕಿನವರಾಗಿದ್ದು, ಚಿತ್ರದುರ್ಗಕ್ಕೆ ಬಂದಾಗ ಈ ಮನೆಯಲ್ಲಿ ತಂಗುತ್ತಿದ್ದರು. ಸದ್ಯ ಲೋಕಸಭಾ ಚುನಾವಣೆ ಪ್ರಚಾರಕ್ಕಾಗಿ ಬಳ್ಳಾರಿ ಜಿಲ್ಲೆಯಲ್ಲಿ ಓಡಾಡುತ್ತಿರುವುದರಿಂದ ಹಲವು ದಿನಗಳಿಂದ ಮನೆಗೆ ಬೀಗ ಹಾಕಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ