ಸಚಿವರಿಗೆ ಬ್ಲ್ಯಾಕ್ ಮೇಲ್… ನನ್ನ ಪುತ್ರಿಯ ಪಾತ್ರ ಇಲ್ಲ: ಶಾಸಕ ಯಶವಂತರಾಯಗೌಡ
ಸೋಮಶೇಖರ್, ನಾನು ಒಳ್ಳೆಯ ಸ್ನೇಹಿತರಾಗಿದ್ದೇವೆ
Team Udayavani, Jan 10, 2022, 4:10 PM IST
ಬೆಂಗಳೂರು:ಸಚಿವ ಎಸ್.ಟಿ.ಸೋಮಶೇಖರ್ ಪುತ್ರನಿಗೆ ಬ್ಲ್ಯಾಕ್ಮೇಲ್ ಮಾಡಿದ ಪ್ರಕರಣದಲ್ಲಿ ನನ್ನ ಪುತ್ರಿಯ ಪಾತ್ರ ಇಲ್ಲವೇ ಇಲ್ಲ ಎಂದು ಇಂಡಿ ಶಾಸಕ ಯಶವಂತರಾಯಗೌಡ ಪಾಟೀಲ್ ಸ್ಪಷ್ಟಪಡಿಸಿದ್ದಾರೆ.
ಸುದ್ದಿಗಾರರ ಜತೆ ಮಾತನಾಡಿದ ಅವರು, ಈ ಪ್ರಕರಣದಲ್ಲಿ ನನ್ನ ಪುತ್ರಿಯ ಮೇಲೆ ಆರೋಪ ಕೇಳಿಬಂದಿದೆ. ಡಿ.28ರಂದು ಸಿಸಿಬಿ ಅಧಿಕಾರಿಗಳು ನನ್ನ ಮನೆಗೆ ಬಂದಿದ್ದರು. ಡಿ.29ರಂದು ಮದುವೆ ಮುಗಿಸಿಕೊಂಡು ಬೆಂಗಳೂರಿಗೆ ಬಂದಿದ್ದೆ. ಸಚಿವ ಎಸ್.ಟಿ.ಸೋಮಶೇಖರ್ ಜತೆ ಚರ್ಚಿಸಿದ್ದೇನೆ ಎಂದು ಹೇಳಿದರು.
ಸೋಮಶೇಖರ್, ನಾನು ಒಳ್ಳೆಯ ಸ್ನೇಹಿತರಾಗಿದ್ದೇವೆ. ಈ ಬಗ್ಗೆ ತನಿಖೆಯಾಗಲಿ ಎಂದು ಚರ್ಚೆ ಮಾಡಿದೆವು. ತನಿಖೆಯಾಗಿ ತಪ್ಪಿತಸ್ಥರ ವಿರುದ್ಧ ಕ್ರಮ ಆಗಲಿ ಎಂದು ಹೇಳಿದರು.
ನನ್ನ ಪುತ್ರಿ ಯಾವುದೇ ರೀತಿಯ ತಪ್ಪು ಮಾಡಿಲ್ಲ. ಹಣಕ್ಕಾಗಿ ಇಂಥ ಕೆಲಸ ಮಾಡುವ ಅನಿವಾರ್ಯತೆ ನಮ್ಮಕುಟುಂಬಕ್ಕೆ ಇಲ್ಲ. ಅಷ್ಟಕ್ಕೂ ನನ್ನ ಮಗಳು ಭಾರತದಲ್ಲಿ ಇಲ್ಲ. ಅವಳು ಇಂಗ್ಲೆಂಡ್ ನಲ್ಲಿ ವ್ಯಾಸಂಗ ಮಾಡುತ್ತಿದ್ದಾಳೆ ಎಂದು ಸ್ಪಷ್ಟಪಡಿಸಿದರು.
ಸಿಮ್ ಹೇಗೆ ಬಂತು ? :
ಹಾಗಾದರೆ ಶಾಸಕರ ಪುತ್ರಿ ಹೆಸರಿನಲ್ಲಿರುವ ಸಿಮ್ ಆರೋಪಿ ರಾಹುಲ್ ಭಟ್ ಕೈಗೆ ಹೇಗೆ ಬಂತು ಎಂಬ ಸಿಸಿಬಿ ಪ್ರಶ್ನೆಗೆ ಪಾಟೀಲ್ ಸ್ಪಷ್ಟನೆ ನೀಡಿದ್ದಾರೆ. ತಮ್ಮ ಪುತ್ರಿ, ರಾಕೇಶ್ ಅಪ್ಪಣ್ಷ ಸ್ನೇಹಿತರಾಗಿದ್ದು ಆಕೆಯಿಂದ ಯುಕೆ ನೋಂದಾಯಿತ ಸಿಮ್ ಪಡೆದಿದ್ದ. ಆತ ರಾಹುಲ್ ಭಟ್ ಗೆ ಸ್ನೇಹಿತ ನಾಗಿದ್ದು ಪರಸ್ಪರ ಸಿಮ್ ವರ್ಗಾಯಿಸಿಕೊಂಡಿರಬಹುದು. ಈ ಬಗ್ಗೆ ತನಿಖೆ ನಡೆಸಿ.ನಾನು ಸಹಕರಿಸುತ್ತೇನೆ ಎಂದು ಸಿಸಿಬಿ ಪೊಲೀಸರಿಗೆ ಹೇಳಿಕೆ ನೀಡಿದ್ದಾರೆ ಎಂದು ತಿಳಿದು ಬಂದಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಕಾಮನ್ವೆಲ್ತ್ ಗೇಮ್ಸ್ : ಭಾರತೀಯ ಪುರುಷರ ಹಾಕಿ: ಫೈನಲಿಗೆ ಲಗ್ಗೆ
ಕಾಮನ್ವೆಲ್ತ್ ಗೇಮ್ಸ್ : 10,000 ಮೀ. ನಡಿಗೆ: ಸಂದೀಪ್ಗೆ ಕಂಚು
ಕೊರಟಗೆರೆ: ಅನಿಲ್ಕುಮಾರ್ ಸ್ಪರ್ಧಿಸದಂತೆ 2 ವರ್ಷ ನಿರ್ಬಂಧಕ್ಕೆ ಆಪ್ ಆಗ್ರಹ
ಒಕ್ಕೂಟ ವ್ಯವಸ್ಥೆಗೆ ಧಕ್ಕೆ ಆಗದಿರಲಿ; ನೀತಿ ಆಯೋಗದ ಸಭೆಯಲ್ಲಿ ಸಿಎಂಗಳ ಆಗ್ರಹ
ಕೇಂದ್ರ ಸಂಪುಟಕ್ಕೆ ಸೇರುವುದಿಲ್ಲ: ಜೆಡಿಯು ಅಧ್ಯಕ್ಷ ರಾಜೀವ್ ರಂಜನ್ ಸಿಂಗ್