ಶಾಸಕ ಜಮೀರ್ ಅಹಮದ್ ವಿದೇಶಿ ಹೂಡಿಕೆ ಕೆದಕುತ್ತಿರುವ ಎಸಿಬಿ
Team Udayavani, Aug 7, 2022, 9:59 PM IST
ಬೆಂಗಳೂರು: ಶಾಸಕ ಜಮೀರ್ ಅಹಮದ್ ಖಾನ್ ನಿವಾಸ ಮತ್ತು ಕಚೇರಿ ಮೇಲೆ ಈ ಹಿಂದೆ ದಾಳಿ ಮಾಡಿದ್ದ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಅಧಿಕಾರಿಗಳು, ಈಗ ಅವರ ವಿದೇಶಿ ಹೂಡಿಕೆ ಮೇಲೆ ಕಣ್ಣಿಟ್ಟಿದ್ದಾರೆ.
ಜಮೀರ್ ವಿದೇಶಗಳಲ್ಲಿ ಹೂಡಿಕೆ ಮಾಡಿರುವ ಬಗ್ಗೆ ಎಸಿಬಿಗೆ ಸುಳಿವು ಸಿಕ್ಕಿದ್ದು, ಇದರ ಬೆನ್ನಲ್ಲೇ ವಿದೇಶಿ ಪ್ರಯಾಣ, ವಿದೇಶದಲ್ಲಿ ಮಾಡಿರುವ ಖರ್ಚು, ಪಾಸ್ಪೋರ್ಟ್, ವಿದೇಶಕ್ಕೆ ಹೋಗುವ ಮುನ್ನ ಕರೆನ್ಸಿ ಕನ್ವರ್ಟ್ ಮಾಡಿರುವ ವರದಿ ನೀಡುವಂತೆ ಸೂಚಿಸಿದ್ದಾರೆ ಎಂದು ತಿಳಿದು ಬಂದಿದೆ.
ವಿದೇಶಕ್ಕೆ ಹೋದ ಸಂದರ್ಭದಲ್ಲಿ ಅಲ್ಲಿ ಬಳಕೆ ಮಾಡಿದ್ದ ಹಣದ ಮೂಲಗಳನ್ನು ತಿಳಿಸುವಂತೆ ಸೂಚಿಸಿದ್ದಾರೆ ಎಂದು ತಿಳಿದು ಬಂದಿದೆ.