Udayavni Special

ನೀನೇ…ಸಾಕಿದಾ ಗಿಣಿ..ಹದ್ದಾಗಿ ಕುಕ್ಕಿತಲ್ಲೋ…


Team Udayavani, Jul 24, 2019, 3:02 AM IST

nnenne

ವಿಧಾನಸಭೆ: “ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿ ಕೆಡಿಸಲೆಂದು ಮುಂಬೈಗೆ ತೆರಳಿರುವ ಶಾಸಕರಿಗೆ ನಾಚಿಕೆಯಾಗಬೇಕು’ ಎಂದು ಸಾ.ರಾ.ಮಹೇಶ್‌ ಹೇಳಿದರು. ವಿಧಾನಸಭೆಯಲ್ಲಿ ವಿಶ್ವಾಸ ಮತ ಯಾಚನೆಯ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, “ಒಂದು ಪಕ್ಷದ ಹೆಸರಿನಲ್ಲಿ ಚುನಾವಣೆಯಲ್ಲಿ ಟಿಕೆಟ್‌ ಪಡೆದು, ಆ ಪಕ್ಷದ ಹೆಸರು ಹೇಳಿ, ಜನರ ಮತ ಪಡೆದು ಗೆಲುವು ಸಾಧಿಸಿ ಬಂದಿದ್ದಾರೆ. ಈಗ ಅತೃಪ್ತಿ ಎಂದು ಮುಂಬೈ ಸೇರಿದ್ದಾರೆ. ಇವರನ್ನು ನೋಡಿದರೆ ನನಗೆ ಚಿಕ್ಕವನಿದ್ದಾಗ ನೋಡಿದ ಸಿನಿಮಾದ ಗೀತೆ “ನೀನೇ… ಸಾಕಿದಾ ಗಿಣಿ…, ಹದ್ದಾಗಿ ಕುಕ್ಕಿತಲ್ಲೋ…ಹಾಡು ನೆನಪಾಗುತ್ತದೆ’ ಎಂದು ವ್ಯಂಗ್ಯವಾಡಿದರು.

ಜಾತ್ಯತೀತತೆಯನ್ನು ರಾಜ್ಯದಲ್ಲಿ ಉಳಿಸಬೇಕು ಎಂಬ ನಿಟ್ಟಿನಲ್ಲಿ ಜೆಡಿಎಸ್‌ ಮತ್ತು ಕಾಂಗ್ರೆಸ್‌ ಮೈತ್ರಿ ಮಾಡಿಕೊಂಡೆವು. ಆರಂಭದಿಂದಲೂ ಈ ಮೈತ್ರಿಗೆ ಕಲ್ಲು ಹಾಕುವ ಪ್ರಯತ್ನ ನಡೆಯುತ್ತಲೇ ಇತ್ತು. ಇದರಿಂದಾಗಿ ನೊಂದು ಪ್ರವಾಸೋದ್ಯಮ ಸಚಿವನಾಗಿ ಅಧಿಕಾರ ಸ್ವೀಕರಿಸಿ 15 ದಿನಕ್ಕೆ ರಾಜೀನಾಮೆ ನೀಡುವುದಾಗಿ ಮಾಜಿ ಪ್ರಧಾನಿ ದೇವೇಗೌಡರ ಬಳಿ ಹೇಳಿದ್ದೆ. ರಾಜಕೀಯ ಜೀವನದಲ್ಲಿ ಸಾಕಷ್ಟು ಜನರ ಜತೆ ಕೆಲಸ ಮಾಡಿದ್ದೇನೆ. ಆದರೆ, ಇಂತಹ ಪರಿಸ್ಥಿತಿ ಬಂದಿರಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಕಲಾಪದಲ್ಲಿ ಹಾಜರಿರದ ಎಚ್‌.ವಿಶ್ವನಾಥ್‌ ಅವರ ಬಗ್ಗೆ ಕಲಾಪದಲ್ಲಿ ಮಾತನಾಡಿದ್ದು, ತಪ್ಪು ಎಂದು ಬಿಜೆಪಿ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದರು. ಎಚ್‌.ವಿಶ್ವನಾಥ್‌ ಅವರು ಹಿಂದೊಮ್ಮೆ “ಪ್ರಧಾನಿ ಬಡವರ ಖಾತೆಗೆ ಹಣ ಹಾಕದೆ, “ಆಪರೇಷನ್‌ ಕಮಲ’ಕ್ಕೆ ಅದನ್ನು ಬಳಸುತ್ತಾರೆ ಎಂದು ಪತ್ರಿಕಾ ಹೇಳಿಕೆ ನೀಡಿದ್ದರು. ಹೀಗಾಗಿ, ನಾನು ಮಾತನಾಡಿದೆ ಅಷ್ಟೇ ಎಂದರು.

ರಾಜ್ಯಪಾಲರಿಗೆ ಇಲ್ಲಿನ ರಾಜಕೀಯ ಸ್ಥಿತಿಗತಿ, “ಆಪರೇಷನ್‌ ಕಮಲ’ ಎಲ್ಲಾ ಗೊತ್ತಾದ ಮೇಲೂ ಸುಮ್ಮನಿದ್ದಾರೆ. ಈ ಕುರಿತು ಒಮ್ಮೆಯೂ ಅವರು ಕ್ರಮ ಕೈಗೊಳ್ಳಲಿಲ್ಲ. ರಾಷ್ಟ್ರಪತಿಗಳ ಗಮನಕ್ಕೆ ಅದನ್ನು ತರಲಿಲ್ಲ. ಈಗ ಕಲಾಪದ ಚಟುವಟಿಕೆಗೆ ಮಧ್ಯೆ ಪ್ರವೇಶಿಸಿ ಆದೇಶ ನೀಡುತ್ತಾರೆ. ಇದರಿಂದಾಗಿ ಜನರಿಗೆ ರಾಜ್ಯಪಾಲರ ನಡೆ ಬಗ್ಗೆ ಅನುಮಾನ ಬಂದಿದೆ. ಜತೆಗೆ, ಬಿಜೆಪಿ ಕಾರ್ಯಾಂಗ, ನ್ಯಾಯಾಂಗವನ್ನು ದುರುಪಯೋಗ ಪಡಿಸಿಕೊಳ್ಳುತ್ತಿದೆ ಎಂದು ಜನ ಮಾತನಾಡುತ್ತಿದ್ದಾರೆ ಎಂದು ಆರೋಪಿಸಿದರು.

ಅತೃಪ್ತರ ನಿಷ್ಠೆಯ ಪ್ರಶ್ನೆ: ಅತೃಪ್ತ ಶಾಸಕರಲ್ಲಿ ಬಹುತೇಕರು ಕಾಂಗ್ರೆಸ್‌, ಜೆಡಿಎಸ್‌ ಪಕ್ಷಗಳಲ್ಲಿ ದಶಕಗಳ ಕಾಲ ಇದ್ದವರು. ಪಕ್ಷದಿಂದ ಎಲ್ಲಾ ಸೌಲಭ್ಯ ಪಡೆದು ಆಶ್ರಯ ನೀಡಿದ್ದ ಪಕ್ಷವನ್ನೇ ಬಿಟ್ಟು ಹೋದರು. ಈಗ 15 ದಿನಕ್ಕೆ ಬಿಜೆಪಿ ಜತೆ ಕೈಜೋಡಿಸಿದ್ದಾರೆ ಎಂದರೆ ನಿಮ್ಮಲ್ಲಿ ಎಷ್ಟು ನಿಷ್ಠೆಯಿಂದ ಇರುತ್ತಾರೆ ನೋಡಿಕೊಳ್ಳಿ ಎಂದು ಬಿಜೆಪಿ ಸದಸ್ಯರಿಗೆ ಸಾ.ರಾ.ಮಹೇಶ್‌ ತಿರುಗೇಟು ನೀಡಿದರು. ಮುಂದಿನ ದಿನಗಳಲ್ಲಿ ಬಿಜೆಪಿ ಸರ್ಕಾರ ಮಾಡಿದರೂ ಅಲ್ಲಿಯೂ ಅತೃಪ್ತಿ ಇರುತ್ತದೆ. ಅದನ್ನು ನಿಭಾಯಿಸಲು ಬೋಪಯ್ಯನವರನ್ನೇ ಸಭಾಪತಿ ಮಾಡಬೇಕು ಎಂದು ಸಾರಾ ಮಹೇಶ್‌ ಸಲಹೆ ನೀಡಿದರು. ಈ ವೇಳೆ, ಮಧ್ಯ ಪ್ರವೇಶಿಸಿ ಮಾತನಾಡಿದ ಸಚಿವ ಎಚ್‌.ಡಿ.ರೇವಣ್ಣ “ಬೋಪಯ್ಯನವರನ್ನು ಬೈಯ್ಯಬೇಡಿ, ಅವರು ಒಳ್ಳೆಯವರು ಈ ಬಾರಿ ಸಭಾಪತಿ ಬೇಡ, ಮಂತ್ರಿಯಾಗಲಿ’ ಎಂದು ಲೇವಡಿ ಮಾಡಿದರು.

ಪ್ರಬಲ ಕಾನೂನು ಮಾಡಿ: ಒಮ್ಮೆ ಶಾಸನಸಭೆಗೆ ರಾಜೀನಾಮೆ ಕೊಟ್ಟ ಮೇಲೆ ಆ ಶಾಸಕರು ಮುಂದೆ ಯಾವ ಚುನಾವಣೆಗೂ ನಿಲ್ಲಬಾರದು ಎಂಬ ಕಾನೂನು ಮಾಡಿ. ಮುಂದೆ ಯಾವ ಸರ್ಕಾರಕ್ಕೂ ಈ ಪರಿಸ್ಥಿತಿ ಬರುವುದು ಬೇಡ. ತಪ್ಪು ಮಾಡಿದವರಿಗೆ ಶಿಕ್ಷೆಯಾಗಬೇಕು ಎಂದು ಸ್ಪೀಕರ್‌ಗೆ ಸಾ.ರಾ.ಮಹೇಶ್‌ ಮನವಿ ಮಾಡಿದರು. ಇದಕ್ಕೆ ಬಿಜೆಪಿ ಸದಸ್ಯರು ನಕ್ಕಾಗ, “ನಿಮ್ಮಲ್ಲೂ ಮುಂದಿನ ದಿನಗಳಲ್ಲಿ ಅತೃಪ್ತಿ ಎದುರಿಸುವ ಸಂದರ್ಭ ಬಂದಾಗ ಸಹಾಯವಾಗಲಿ ಎಂದು ಹೇಳಿದೆ’ ಎಂದರು.

ಉದಯವಾಣಿ ಸುದ್ದಿ ಈಗ ಟೆಲಿಗ್ರಾಂನಲ್ಲೂ ಲಭ್ಯ; ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್ ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

ಕರಾವಳಿಯಲ್ಲಿ ವಿಶ್ವ ಮಟ್ಟದ ಅಕ್ವೇರಿಯಂ

ಕರಾವಳಿಯಲ್ಲಿ ವಿಶ್ವ ಮಟ್ಟದ ಅಕ್ವೇರಿಯಂ

ಎಲ್ಲ ಜಿಲ್ಲೆಗಳಲ್ಲಿ ರಾಜ್ಯ ಕಾರ್ಯಕಾರಿಣಿ ಸಭೆಗೆ ತೀರ್ಮಾನ

ಎಲ್ಲ ಜಿಲ್ಲೆಗಳಲ್ಲಿ ರಾಜ್ಯ ಕಾರ್ಯಕಾರಿಣಿ ಸಭೆಗೆ ತೀರ್ಮಾನ

ಸೂರ್ಯನ ಬೆಳಕು ಬೀಳುವ ಚಂದ್ರನ ಮೇಲ್ಮೈನಲ್ಲೂ ಜಲಕಣ!

ಸೂರ್ಯನ ಬೆಳಕು ಬೀಳುವ ಚಂದ್ರನ ಮೇಲ್ಮೈನಲ್ಲೂ ಜಲಕಣ!

ಅಮಿತಾಭ್‌ಗೆ “ವಿಶ್ವಾಸಾರ್ಹ” ಪಟ್ಟ; “ನಂಬಿಕಸ್ಥ” ಬಾಲಿವುಡ್‌ ನಟಿ ದೀಪಿಕಾ ಪಡುಕೋಣೆ

ಅಮಿತಾಭ್‌ಗೆ “ವಿಶ್ವಾಸಾರ್ಹ” ಪಟ್ಟ; ಬಾಲಿವುಡ್‌ ನಟಿ ದೀಪಿಕಾ ಪಡುಕೋಣೆ “ನಂಬಿಕಸ್ಥ” ಪಟ್ಟ

ಅಪ್ಪ-ಮಗನಿಗೆ 7 ಗಂಟೆ ಪೊಲೀಸರಿಂದ ಚಿತ್ರಹಿಂಸೆ!

ಅಪ್ಪ-ಮಗನಿಗೆ 7 ಗಂಟೆ ಪೊಲೀಸರಿಂದ ಚಿತ್ರಹಿಂಸೆ!

IPL 2020‌ : ಹೈದರಾಬಾದ್‌, ಡೆಲ್ಲಿ ಮುಖಾಮುಖಿ: ವಾರ್ನರ್ ಪಡೆಗೆ 88 ರನ್ ಗಳ ಗೆಲುವು

IPL 2020‌ : ಹೈದರಾಬಾದ್‌, ಡೆಲ್ಲಿ ಮುಖಾಮುಖಿ: ಡೇವಿಡ್‌ ವಾರ್ನರ್‌ಗೆ ಗೆಲುವಿನ ಗಿಫ್ಟ್‌

ಉಪ್ಪಿನಂಗಡಿ: ಚೂರಿಯಿಂದ ತಿವಿದು 4 ಲ.ರೂ. ದರೋಡೆ

ಉಪ್ಪಿನಂಗಡಿ: ಚೂರಿಯಿಂದ ತಿವಿದು 4 ಲ.ರೂ. ದರೋಡೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಜಗಳಗಂಟ ಸರಕಾರಗಳಿಂದ ಅಭಿವೃದ್ಧಿಗೆ ಹಿನ್ನಡೆ: ಡಿಸಿಎಂ

ಜಗಳಗಂಟ ಸರಕಾರಗಳಿಂದ ಅಭಿವೃದ್ಧಿಗೆ ಹಿನ್ನಡೆ: ಡಿಸಿಎಂ

ನಿಮ್ಮ ಕಷ್ಟ , ಸುಖ ಹಂಚಿಕೊಳ್ಳಲು ಒಂದು ಅವಕಾಶ ನೀಡಿ: ಕುಸುಮಾ

ನಿಮ್ಮ ಕಷ್ಟ , ಸುಖ ಹಂಚಿಕೊಳ್ಳಲು ಒಂದು ಅವಕಾಶ ನೀಡಿ: ಕುಸುಮಾ

ಸಮ್ಮಿಶ್ರ ಸರ್ಕಾರಗಳಿಂದ ಜೆಡಿಎಸ್‍ಗೆ ಹೊಡೆತ: ವೈಎಸ್‍ವಿ ದತ್ತ

ಸಮ್ಮಿಶ್ರ ಸರ್ಕಾರಗಳಿಂದ ಜೆಡಿಎಸ್‍ಗೆ ಹೊಡೆತ: ವೈಎಸ್‍ವಿ ದತ್ತ

ಮಲೆ ಮಹದೇಶ್ವರ ಬೆಟ್ಟ: ಭಕ್ತಾದಿಗಳ ನಿಷೇಧದ ನಡುವೆಯೂ ಸರಳ ಮತ್ತು ಸಂಭ್ರಮದ ತೆಪ್ಪೋತ್ಸವ

ಮಲೆ ಮಹದೇಶ್ವರ ಬೆಟ್ಟ: ಭಕ್ತಾದಿಗಳ ನಿಷೇಧದ ನಡುವೆಯೂ ಸರಳ ಮತ್ತು ಸಂಭ್ರಮದ ತೆಪ್ಪೋತ್ಸವ

ಮತದಾರರ ಬೆನ್ನಿಗೆ ಚೂರಿ ಹಾಕಿದವರಿಗೆ ಪಾಠ ಕಲಿಸಿ: ಸಿದ್ದರಾಮಯ್ಯ

ಮತದಾರರ ಬೆನ್ನಿಗೆ ಚೂರಿ ಹಾಕಿದವರಿಗೆ ಪಾಠ ಕಲಿಸಿ: ಸಿದ್ದರಾಮಯ್ಯ

MUST WATCH

udayavani youtube

ಭಕ್ತಿ-ಸಂಭ್ರಮದ ಮಂಗಳೂರು ದಸರಾ -2020 ಸಂಪನ್ನ

udayavani youtube

ರಸ್ತೆಯಲ್ಲಿ ಉಂಟಾದ ಕೃತಕ ನೆರೆಯಲ್ಲೇ ಈಜಾಡಿದ ಯುವಕ

udayavani youtube

ಕೊರೋನಾ: ಶೋಚನೀಯವಾದ ತಿರುಗುವ ತೊಟ್ಟಿಲು ತಿರುಗಿಸುವ ಕೈಗಳ ಕಥೆ!

udayavani youtube

Story behind Vijayadashami celebration | ವಿಜಯದಶಮಿ ಆಚರಣೆಯ ಹಿಂದಿನ ಕಥೆ | Udayavani

udayavani youtube

450 ಕ್ಕೂ ಅಧಿಕ ಬೀದಿ ಬದಿ ಶ್ವಾನಗಳಿಗೆ ನಿತ್ಯ ಆಹಾರ ನೀಡುತ್ತಾರೆ ರಜನಿ ಶೆಟ್ಟಿ!ಹೊಸ ಸೇರ್ಪಡೆ

ಮುಂಗಾರು ಬೆಳೆ ಸಮೀಕ್ಷೆ: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶೇ. 100 ಸಾಧನೆ

ಮುಂಗಾರು ಬೆಳೆ ಸಮೀಕ್ಷೆ: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶೇ. 100 ಸಾಧನೆ

ಸ್ವೋದ್ಯೋಗಕ್ಕೆ ಜೀವಾಮೃತವಾದ ಕೃಷಿ ಕಾಯಕ

ಸ್ವೋದ್ಯೋಗಕ್ಕೆ ಜೀವಾಮೃತವಾದ ಕೃಷಿ ಕಾಯಕ

ಕಟಪಾಡಿ : ಶಿಥಿಲಾವಸ್ಥೆಯಲ್ಲಿ ಓವರ್‌ಹೆಡ್‌ ಟ್ಯಾಂಕ್‌

ಕಟಪಾಡಿ : ಶಿಥಿಲಾವಸ್ಥೆಯಲ್ಲಿ ಓವರ್‌ಹೆಡ್‌ ಟ್ಯಾಂಕ್‌

ಕರಾವಳಿಯಲ್ಲಿ ವಿಶ್ವ ಮಟ್ಟದ ಅಕ್ವೇರಿಯಂ

ಕರಾವಳಿಯಲ್ಲಿ ವಿಶ್ವ ಮಟ್ಟದ ಅಕ್ವೇರಿಯಂ

ಎಲ್ಲ ಜಿಲ್ಲೆಗಳಲ್ಲಿ ರಾಜ್ಯ ಕಾರ್ಯಕಾರಿಣಿ ಸಭೆಗೆ ತೀರ್ಮಾನ

ಎಲ್ಲ ಜಿಲ್ಲೆಗಳಲ್ಲಿ ರಾಜ್ಯ ಕಾರ್ಯಕಾರಿಣಿ ಸಭೆಗೆ ತೀರ್ಮಾನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.