ಮಾಪ್ ಅಪ್ ಸುತ್ತಿನಲ್ಲಿ ವೈದ್ಯಕೀಯ ಸೀಟು ಹಂಚಿಕೆ
Team Udayavani, Aug 3, 2019, 3:00 AM IST
ಬೆಂಗಳೂರು: ವೈದ್ಯಕೀಯ ಮತ್ತು ದಂತ ವೈದ್ಯಕೀಯ ಕೋರ್ಸ್‌ಗಳ ಪ್ರವೇಶಕ್ಕಾಗಿ ಮಾಪ್ ಅಪ್ ಸುತ್ತಿನ ಸೀಟು ಹಂಚಿಕೆಯನ್ನು ಆ.7ರಿಂದ 9ರ ವರೆಗೆ ನಡೆಸಲಾಗುತ್ತದೆ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ತಿಳಿಸಿದೆ. ಈಗಾಗಲೇ ದಾಖಲಾತಿ ಪರಿಶೀಲನೆ ಮಾಡಿಸಿರುವ ಅಭ್ಯರ್ಥಿಗಳು ಮತ್ತೂಮ್ಮೆ ನೋಂದಣಿ ಮಾಡಿಕೊಳ್ಳುವ ಅವಶ್ಯಕತೆ ಇರುವುದಿಲ್ಲ. ಯುಜಿ ನೀಟ್-2019 ಪರೀಕ್ಷೆಯಲ್ಲಿ ಅರ್ಹತೆ ಹೊಂದಿದ ನಂತರ ಪೂರಕ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರುವ ಅಭ್ಯರ್ಥಿಗಳು ಮಾಪ್ ಅಪ್ ಸುತ್ತಿನಲ್ಲಿ ಭಾಗವಹಿಸಬಹುದು.
ಆನ್‌ಲೈನ್‌ನಲ್ಲಿ ನೋಂದಣಿ ಮಾಡಿಕೊಂಡು ದಾಖಲಾತಿ ಪರಿಶೀಲನೆಗೆ ವೇಳಾಪಟ್ಟಿ ಪ್ರಕಾರ ಹಾಜರಾಗುವಂತೆ ಪ್ರಕಟಣೆಯಲ್ಲಿ ತಿಳಿಸಿದೆ. ಮೊದಲನೇ ಸುತ್ತಿನಲ್ಲಿ (ಆಯ್ಕೆ 1 ಮತ್ತು 2) ಅಥವಾ ಎರಡನೇ ಸುತ್ತಿನಲ್ಲಿ ವೈದ್ಯಕೀಯ ಸೀಟು ಹಂಚಿಕೆಯಾಗಿರುವವರು, ಅಖೀಲ ಭಾರತ ಕೋಟ, ಡೀಮ್ಡ್ ವಿವಿ ಅಥವಾ ಯಾವುದೇ ಸಂಸ್ಥೆ, ಬೋರ್ಡ್‌ಗಳಿಂದ ಮೊದಲನೇ ಅಥವಾ ಎರಡನೇ ಸುತ್ತಿನಲ್ಲಿ ಯಾವುದೇ ಸೀಟು ಪಡೆದು ಪ್ರವೇಶ ಪಡೆದುಕೊಂಡಿದ್ದರೆ ಮಾಪ್ ಅಪ್ ಸುತ್ತಿನಲ್ಲಿ ಭಾಗವಹಿಸಲು ಅರ್ಹರಿರುವುದಿಲ್ಲ, ವೇಳಾಪಟ್ಟಿ ಸಹಿತವಾಗಿ ಹೆಚ್ಚಿನ ಮಾಹಿತಿಗೆ ವೆಬ್‌ಸೈಟ್ http://kea.kar.nic.in ನಿಂದ ಮಾಹಿತಿ ಪಡೆಯಬಹುದಾಗಿದೆ.