ಮೂವರು ಮಕ್ಕಳನ್ನು ಹತ್ಯೆಗೈದು ಆತ್ಮಹತ್ಯೆ ಮಾಡಿಕೊಂಡ ತಾಯಿ

ಒಬ್ಬಳನ್ನು ಟ್ಯಾಂಕ್‌ನಲ್ಲಿ,ಇನ್ನೊಬ್ಬಳನ್ನು ಬಕೆಟ್‌ದಲ್ಲಿ, ಇನ್ನೊಂದು ಮಗುವನ್ನು ಹಂಡೆಯಲ್ಲಿ ಮುಳುಗಿಸಿ ಹತ್ಯೆ....

Team Udayavani, Jun 18, 2019, 9:09 AM IST

ಕೊಪ್ಪಳ: ಮೂವರು ಮಕ್ಕಳನ್ನು ನೀರಿನಲ್ಲಿ ಮುಳುಗಿಸಿ ತಾಯಿಯೊಬ್ಬಳು ಆತ್ಮಹತ್ಯೆಗೆ ಶರಣಾದಹೃದಯ ವಿದ್ರಾವಕ ಘಟನೆ ಕುಕನೂರು ತಾಲೂಕಿನ ಯರೇಹಂಚಿನಾಳ ಎಂಬಲ್ಲಿ ಸೋಮವಾರ ನಡೆದಿದೆ.

ಯಲ್ಲಮ್ಮ ಎಂಬಾಕೆ ಮಕ್ಕಳಾದ ಅಕ್ಷತಾ (7),ಕಾವ್ಯಾ(4)ಮತ್ತು ನಾಗರಾಜ್‌(2) ರನ್ನು ನೀರಿನಲ್ಲಿ ಮುಳುಗಿಸಿ ಹತ್ಯೆಗೈದು ಬಳಿಕ ನೇಣಿಗೆ ಶರಣಾಗಿದ್ದಾಳೆ.

ಅಕ್ಷತಾಳನ್ನು ನೀರಿನ ಹಂಡೆಯಲ್ಲಿ , ಕಾವ್ಯಾಳನ್ನು ಬಕೆಟ್‌ನಲ್ಲಿ ಮತ್ತು ನಾಗರಾಜ್‌ನನ್ನು ನೀರಿನ ಟ್ಯಾಂಕ್‌ನಲ್ಲಿ ಮುಳುಗಿಸಿ ಹತ್ಯೆಗೈದಿದ್ದಾಳೆ.

ಯಾವ ಕಾರಣಕ್ಕಾಗಿ ಯಲ್ಲಮ್ಮ ಕಠಿಣ ನಿರ್ಧಾರ ತಳೆದಿದ್ದಾಳೆ ಎನ್ನುವುದು ತನಿಖೆಯಿಂದ ತಿಳಿದು ಬರಬೇಕಿದೆ. ಕೆಲ ಗ್ರಾಮಸ್ಥರ ಪ್ರಕಾರ ಪತಿಯ ಕಿರುಕುಳದಿಂದಲಾಗಿಯೇ ಹೀಗೆ ಮಾಡಿಕೊಳ್ಳಲು ಕಾರಣವಾಗಿದೆ ಎನ್ನಲಾಗಿದೆ.

ಪತಿ ಕುಡಿದು ಬಂದು ಗಲಾಟೆಮಾಡುತ್ತಿದ್ದ ಎಂದು ಹೇಳಲಾಗಿದ್ದು, ಕೃತ್ಯ ನಡೆದಾಗ ಮನೆಯಲ್ಲಿ ಇರಲ್ಲಿಲ್ಲ ಎಂದು ಹೇಳಲಾಗಿದೆ.

ತನಿಖೆ ನಡೆಸುತ್ತಿದ್ದು ನಿಖರ ಕಾರಣವೇನೆಂದು ಇನ್ನಷ್ಟೇ ತಿಳಿದು ಬರಬೇಕಿದೆ ಎಂದು ಕೊಪ್ಪಳ ಎಸ್‌ಪಿ ರೇಣುಕಾ ಸುಕುಮಾರ್‌ ತಿಳಿಸಿದ್ದಾರೆ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ